Home
ಸುದ್ದಿಜಾಲ

EPFO ಐತಿಹಾಸಿಕ ನಿರ್ಧಾರ: 100% PF ಹಣ ವಿತ್‌ಡ್ರಾಗೆ ಅವಕಾಶ!..ಫುಲ್ ಡೀಟೇಲ್ಸ್!

ಇಲ್ಲಿಯವರೆಗೂ ನೀವು ಕೇವಲ ನಿವೃತ್ತಿ ಅಥವಾ ಸಂಪೂರ್ಣ ಉದ್ಯೋಗ ಕಳೆದುಕೊಂಡಿರುವ ಸಂದರ್ಭಗಳಲ್ಲಿ ಮಾತ್ರ ನಿಮ್ಮ ಸಂಪೂರ್ಣ PF ಹಣವನ್ನು ಪಡೆಯಲು ಸಾಧ್ಯವಿತ್ತು. ಆದರೆ, ಇನ್ಮುಂದೆ ಹೀಗಿರುವುದಿಲ್ಲ. ಈಗ ನೌಕರರು ತಮ್ಮ ಸಂಪೂರ್ಣ ಅಥವಾ ಶೇಕಡಾ 100 ರಷ್ಟು ಅರ್ಹ PF ಬಾಕಿಯನ್ನು ಹಿಂಪಡೆಯಲು ಸದಸ್ಯರಿಗೆ ಅನುಮತಿ ನೀಡಲಾಗಿದೆ. ಕೇಂದ್ರ ಟ್ರಸ್ಟಿಗಳ ಮಂಡಳಿ (CBT) ಯ 238ನೇ ಸಭೆಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಈ ಒಂದು ಒಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಹಾಗಾದರೆ, ಏನಿದು ಭರ್ಜರಿ ಸಿಹಿಸುದ್ದಿ ಎಂಬುದನ್ನು ನೋಡೋಣ ಬನ್ನಿ.

ಶೇಕಡಾ 100 ರಷ್ಟು PF ಹಣ ಹಿಂಪಡೆಯಲು ಅವಕಾಶ
PF ಸದಸ್ಯರಿಗೆ ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳ ಮತ್ತು ಸುಲಭ ಮಾಡಲು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಮೊದಲೇ ಹೇಳಿದಂತೆ, ಈ ಹಿಂದೆ ಸಂಪೂರ್ಣ PF ಹಣವನ್ನು ಹಿಂಪಡೆಯಲು ಕೇವಲ ನಿವೃತ್ತಿ ಅಥವಾ ಉದ್ಯೋಗ ಕಳೆದುಕೊಂಡಿರುವ ಸಂದರ್ಭಗಳಲ್ಲಿ ಮಾತ್ರ ಅವಕಾಶವಿತ್ತು. ಆದರೆ, ಈಗ, ನೌಕರ ಮತ್ತು ಉದ್ಯೋಗದಾತರ ಕೊಡುಗೆ ಸೇರಿದಂತೆ ಶೇಕಡಾ 100 ರಷ್ಟು ಅರ್ಹ PF ಬಾಕಿಯನ್ನು ಹಿಂಪಡೆಯಲು ಸದಸ್ಯರಿಗೆ ಅನುಮತಿ ನೀಡಲಾಗಿದೆ. ಅಂದರೆ, ನೀವು ನಿಮ್ಮ ತುರ್ತು ಅಗತ್ಯಗಳಿಗಾಗಿ ಸಂಪೂರ್ಣ PF ಉಳಿತಾಯವನ್ನು (ಕನಿಷ್ಠ ಮೊತ್ತವನ್ನು ಕಾಯ್ದಿರಿಸಿದ ನಂತರ) ಬಳಸಿಕೊಳ್ಳಬಹುದು. ಇದಕ್ಕಾಗಿ ಭಾಗಶಃ ವಿತ್‌ಡ್ರಾ ನಿಯಮಗಳನ್ನು ತರಲಾಗಿದೆ. ಸರಳವಾಗಿರುವ ಈ ನಿರ್ಧಾರವು ಉದ್ಯೋಗಿಗಳಿಗೆ ಒಂದು ದೊಡ್ಡ ಸಮಾದಾನವನ್ನು ತಂದಿದೆ.

13 ಷರತ್ತುಗಳಿಂದ ಈಗ ಮೂರು ಸರಳ ವಿಭಾಗಗಳು.
ಮೊದಲು ಭಾಗಶಃ PF ಹಣವನ್ನು ಹಿಂಪಡೆಯಲು 13 ಕ್ಲಿಷ್ಟಕರವಾದ ಷರತ್ತುಗಳು ಇದ್ದವು. ಇವುಗಳನ್ನು ಈಗ ಮೂರು ಸರಳ ವಿಭಾಗಗಳಾಗಿ ವಿಲೀನಗೊಳಿಸಲಾಗಿದೆ. ಅಗತ್ಯದ ಅವಶ್ಯಕತೆಗಳು (ಅನಾರೋಗ್ಯ, ಶಿಕ್ಷಣ, ಮದುವೆ), ವಸತಿ ಅಗತ್ಯಗಳು (ಮನೆ ಖರೀದಿ ಅಥವಾ ನಿರ್ಮಾಣ) ಮತ್ತು ವಿಶೇಷ ಸಂದರ್ಭಗಳನ್ನು ನೀಡಿ PF ಚಂದಾದಾರರು ಹಣವನ್ನು ಹಿಂಪಡೆಯಬಹುದು. ಶಿಕ್ಷಣಕ್ಕಾಗಿ ಇದುವರೆಗೆ ಇದ್ದ ಮಿತಿಯನ್ನು 10 ಪಟ್ಟು ಮತ್ತು ಮದುವೆಗಾಗಿ 5 ಪಟ್ಟು ಹೆಚ್ಚಿಸಲಾಗಿದೆ. ಜೊತೆಗೆ, ಎಲ್ಲಾ ರೀತಿಯ ಭಾಗಶಃ ಹಿಂಪಡೆಯುವಿಕೆಗಾಗಿ ಅಗತ್ಯವಿದ್ದ ಕನಿಷ್ಠ ಸೇವಾ ಅವಧಿಯನ್ನು 12 ತಿಂಗಳುಗಳಿಗೆ ಇಳಿಸಲಾಗಿದೆ.

ಈ ಮೊದಲು ಶಿಕ್ಷಣ ಮತ್ತು ಮದುವೆ ಎರಡಕ್ಕೂ ಸೇರಿ ಕೇವಲ ಮೂರು ಬಾರಿ ಮಾತ್ರ PF ಹಣವನ್ನು ಹಿಂಪಡೆಯಲು ಅವಕಾಶವಿತ್ತು. ಜೊತೆಗೆ ಹೊಸದಾಗಿ ಉದ್ಯೋಗಕ್ಕೆ ಸೇರಿದವರಿಗೆ PF ಹಣವನ್ನು ಶೀಘ್ರವಾಗಿ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಈ ಎರಡೂ ಸಮಸ್ಯೆಗಳಿಗೆ ಮುಕ್ತಿ ದೊರೆತಿದೆ. ಈ ಸರಳೀಕರಣದಿಂದಾಗಿ, PF ಸದಸ್ಯರು ಯಾವ ಉದ್ದೇಶಕ್ಕಾಗಿ ಹಣವನ್ನು ಪಡೆಯಬೇಕೆಂದು ನಿರ್ಧರಿಸಲು ಸುಲಭವಾಗುತ್ತದೆ. ಇನ್ನು 'ವಿಶೇಷ ಸಂದರ್ಭಗಳು' ವಿಭಾಗದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ. ಇದು ಉದ್ಯೋಗಿಗಳಿಗೆ ದೊಡ್ಡ ರಿಲೀಫ್ ಆಗಿದೆ.

ಕಾರಣ ನೀಡದೆಯೇ ಹಣ ಹಿಂಪಡೆಯಲು ಅವಕಾಶ!
ಈ ಮೊದಲು EPFO ಸದಸ್ಯರು ಪ್ರಕೃತಿ ವಿಕೋಪ, ಕಂಪೆನಿ ಮುಚ್ಚಿದ ಅಥವಾ ಸಾಂಕ್ರಾಮಿಕ ರೋಗಗಳಂತಹ ಸಂದರ್ಭಗಳಲ್ಲಿ ಹಣ ಹಿಂಪಡೆಯಲು ಸೂಕ್ತ ಕಾರಣ ಮತ್ತು ದಾಖಲೆಗಳನ್ನು ನೀಡಬೇಕಿತ್ತು. ಅನೇಕ ಬಾರಿ ಸರಿಯಾದ ದಾಖಲೆಗಳಿಲ್ಲದೆ ಕ್ಲೈಮ್‌ಗಳು ತಿರಸ್ಕೃತಗೊಳ್ಳುತ್ತಿದ್ದವು. ಆದರೆ, ಈಗ ಈ ವಿಭಾಗದ ಅಡಿಯಲ್ಲಿ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡದೆಯೇ ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ, ಅನಿರೀಕ್ಷಿತ ತುರ್ತು ಪರಿಸ್ಥಿತಿಗಳಲ್ಲಿ ಸುಲಭವಾಗಿ ಹಣ ಪಡೆಯಲು ಸಾಧ್ಯವಾಗುತ್ತದೆ, ಇದು ಉದ್ಯೋಗಿಗಳಿಗೆ ದೊಡ್ಡ ರಿಲೀಫ್ ಆಗಿದೆ. ಇದನ್ನು ನಾವು ಖಂಡಿತವಾಗಿಯೂ ಸ್ವಾಗತಿಸಬೇಕಿದೆ.

EPFO ಐತಿಹಾಸಿಕ ನಿರ್ಧಾರ: 100% PF ಹಣ ವಿತ್‌ಡ್ರಾಗೆ ಅವಕಾಶ!..ಫುಲ್ ಡೀಟೇಲ್ಸ್!

ನಿವೃತ್ತಿ ಉಳಿತಾಯಕ್ಕೆ ಧಕ್ಕೆಯಾಗದಂತೆ ಹೊಸ ನಿಯಮ
ಇನ್ನು EPFO ಸದಸ್ಯರ ನಿವೃತ್ತಿ ಉಳಿತಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು, ಇಪಿಎಫ್‌ಒ ಒಂದು ಪ್ರಮುಖ ನಿಯಮವನ್ನು ಪರಿಚಯಿಸಿದೆ. ಸದಸ್ಯರ ಕೊಡುಗೆಯ ಶೇಕಡಾ 25 ರಷ್ಟು ಮೊತ್ತವು ಖಾತೆಯಲ್ಲಿ ಕಡ್ಡಾಯವಾಗಿ ಉಳಿಯಬೇಕು ಮತ್ತು ಕನಿಷ್ಠ ಸಮತೋಲನ ಕಾಯ್ದುಕೊಳ್ಳಬೇಕು. ಈ ಮೊತ್ತವು ಪ್ರಸ್ತುತ ಇರುವ ವಾರ್ಷಿಕ 8.25% ಬಡ್ಡಿಯನ್ನು ಗಳಿಸುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಲಾಗಿದೆ. ನೌಕರರು ತಮ್ಮ ಹಣವನ್ನು ಹಣವನ್ನು ಸುಲಭವಾಗಿ ಬಳಸಲು ಅವಕಾಶ ಒದಗಿಸುವುದು ಸೇರಿದಂತೆ, ಅವರ ಮೂಲಭೂತ ನಿವೃತ್ತಿ ನಿಧಿಯನ್ನು ಸುರಕ್ಷಿತಗೊಳಿಸುವುದು ಇದರ ಉದ್ದೇಶವಾಗಿದೆ.

ಇದರ ಜೊತೆಗೆ, EPFO ಪಿಂಚಣಿ ಹಿಂಪಡೆಯುವಿಕೆಯ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈಗ ಅಂತಿಮ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಲು ಕಾಯುವ ಅವಧಿ 2 ತಿಂಗಳಿಗಿಂತ 12 ತಿಂಗಳವರೆಗೆ ಹೆಚ್ಚಿಸಲಾಗಿದೆ. ಇದೇ ರೀತಿ, ಪಿಂಚಣಿ ವಾಪಸು ಪಡೆಯಲು ಗಡುವು 2 ತಿಂಗಳಿಂದ 36 ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಬದಲಾವಣೆಗಳ ಗುರಿ ತಕ್ಷಣದ ಅಗತ್ಯಗಳನ್ನು ಹಾಗೂ ದೀರ್ಘಕಾಲದ ಹಣಕಾಸಿನ ಸುರಕ್ಷತೆಯನ್ನು ಸಮತೋಲನದಲ್ಲಿರಿಸುವುದು ಎಂದು ತಿಳಿಸಲಾಗಿದೆ.

ಯಾವುದೇ ಕಾಗದಪತ್ರಗಳಿಲ್ಲ!
ಇದಲ್ಲದೆ, ಈ ಹೊಸ ಬದಲಾವಣೆಯಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಭಾಗಶಃ ಹಣ ಹಿಂಪಡೆಯುವಿಕೆಯ ಕ್ಲೈಮ್‌ಗಳನ್ನು ಈಗ ಯಾವುದೇ ಕಾಗದಪತ್ರಗಳಿಲ್ಲದೆ ಸ್ವಯಂಚಾಲಿತವಾಗಿ ಇತ್ಯರ್ಥಗೊಳಿಸಲಾಗುತ್ತದೆ ಎಂದು EPFO ಹೇಳಿದೆ. ಈ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯಿಂದಾಗಿ ಕ್ಲೈಮ್‌ಗಳ ವಿಳಂಬ ಕಡಿಮೆಯಾಗಲಿದೆ. ಒಟ್ಟಾರೆಯಾಗಿ, ಈ ಹೊಸ ಬದಲಾವಣೆಗಳು ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಹಣ ಪಡೆಯುವ ಮೂಲಕ ನೌಕರರು ತಮ್ಮ ಹಣಕಾಸನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂಬುದು ನನ್ನ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಮತ್ತು ಈ ಅತ್ಯಂತ ಉಪಯುಕ್ತವಾದ ಮಾಹಿತಿಯನ್ನು ಶೇರ್ ಮಾಡಿ. ಎಲ್ಲರಿಗೂ ತಲುಪಲು ಸಹಾಯ ಮಾಡಿ.

Best Mobiles in India

English summary
EPFO now allows 100% PF withdrawal, introducing major changes that employees must know to claim their full provident fund. check here for more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+