ಭಾರತದಲ್ಲಿ 5G ಸೇವೆಯನ್ನು ನೀಡಲು ಎರಿಕ್ಸನ್ ಆಸಕ್ತಿ..!

Written By: Lekhaka

ಈಗಾಗಲೇ ಭಾರತೀಯ ಟೆಲಿಕಾಂ ವಲಯದಲ್ಲಿ 5ಜಿ ಜಪ ಶುರುವಾಗಿದೆ. ಈಗಾಗಲೇ 4ಜಿ ರುಚಿ ನೋಡಿರುವ ಜನರು ಸಹ 5ಜಿ ಸೇವೆಯನ್ನು ಎದುರು ನೋಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸ್ವೀಡಿಷ್ ಮೂಲದ ಎರಿಸನ್ ಕಂಪನಿ ಮತ್ತು ಭಾರ್ತಿ ಏರಟೆಲ್ ಮಾತು ಕಥೆ ನಡೆಸಿದ್ದು, ಭಾರತೀಯ ಟೆಲಿಕಾಂ ನಲ್ಲಿ 5ಜಿ ಸೇವೆಯ ಮುಂಚುಣಿಯಲ್ಲಿ ಇರಲು ಯೋಜನೆ ರೂಪಿಸುತ್ತಿವೆ ಎನ್ನಲಾಗಿದೆ.

ಭಾರತದಲ್ಲಿ 5G ಸೇವೆಯನ್ನು ನೀಡಲು ಎರಿಕ್ಸನ್ ಆಸಕ್ತಿ..!

ಈಗಾಗಲೇ ಎರಿಕ್ಸನ್ ಕಂಪನಿಯೂ 5ಜಿ ಸೇವೆಯೂ ಹೇಗೆ ಇರಲಿದೆ ಎಂಬುದನ್ನು ಸಣ್ಣ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟಿದೆ. ಇದು 5.7GBPS ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ. ಇದಕ್ಕಾಗಿಯೇ ಭಾರತೀಯ ಟೆಲಿಕಾಂ ಕಂಪನಿಗಳೊಂದಿಗೆ ಮಾತುಕತೆಗೆ ಮುಂದಾಗಿದೆ.

ಶೀಘ್ರವೇ ಮಾರುಕಟ್ಟೆಯಲ್ಲಿ 5ಜಿ ಆಗಮಿಸಲಿದ್ದು, $27.3 ಬಿಲಿಯನ್ ಹೂಡಿಕೆ ಮಾಡಲು ಎರಿಕ್ಸನ್ ಕಂಪನಿಯು ಮುಂದಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ 5ಜಿ ಹಿಡಿತವನ್ನು ಸಾಧಿಸಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಇದಕ್ಕಾಗಿ 5ಜಿ ಟೆಕ್ನಾಲಜಿಯನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಾಟ್ಸ್‌ಆಪ್‌ನ ಹಲವು ಆಯ್ಕೆಗಳು ಬದಲಾಗಲಿದೆ...!

ಭಾರತೀಯ ಮಾರುಕಟ್ಟೆಯಲ್ಲಿ 5ಜಿ ಉತ್ತಮ ಬದಲಾವಣೆಯನ್ನು ಮಾಡಲಿದೆ. ಇದಕ್ಕಾಗಿ ದೊಡ್ಡ ಮಾರುಕಟ್ಟೆಯೇ ಸೃಷ್ಟಿಯಾಗಲಿದೆ. ಇದಕ್ಕಾಗಿ ಹಲವು ಕಂಪನಿಗಳು ಭಾರತದ ಕಡೆಗೆ ಮುಖ ಮಾಡಲಿವೆ ಎನ್ನಲಾಗಿದೆ.

4ಜಿ ಸೇವೆಯಲ್ಲಿಯೇ ವಿಶ್ವವನ್ನು ಬೆರಗು ಗೊಳಿಸಿರುವ ಭಾರತ, ಮುಂದಿನ ತಲೆ ಮಾರಿನ 5ಜಿ ಸೇವೆಯಲ್ಲಿ ಜಗತ್ತಿಗೆ ಮಾದರಿಯಾಗುವ ಸಂದರ್ಭ ಹತ್ತಿರದಲ್ಲಿಯೇ ಇದೆ ಎನ್ನಲಾಗಿದೆ.Read more about:
English summary
Ericsson is in talks with Indian telecom for 5G
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot