ಅಂಬಾನಿಯನ್ನು ಜೈಲಿಗಾಕಿ’; ಸುಪ್ರಿಂ ಕೋರ್ಟ್‌ನಲ್ಲಿ ಪ್ರಖ್ಯಾತ ಮೊಬೈಲ್ ಕಂಪೆನಿ!

|

ಅನಿಲ್ ಅಂಬಾನಿ ಒಡೆತನದ ರಿಲಾಯನ್ಸ್ ಕಮ್ಯುನಿಕೇಷನ್ಸ್ ವಾಪಸ್ ಮಾಡಬೇಕಿರುವ ಸಾಲದ ಮರುಪಾವತಿ ವಿಷಯದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಒಂದು ಕಾಲದ ಭಾರತದ ಶ್ರೀಮಂತ ದೈತ್ಯ, ಧೀರೂಭಾಯಿ ಅಂಬಾನಿಯ ಪುತ್ರ ಅನಿಲ್‌ ಅಂಬಾನಿಯನ್ನು ಬಂಧಿಸುವಂತೆ ಸ್ವೀಡನ್‌ ಮೂಲದ ಎರಿಕ್ಸನ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಹೌದು, ತನಗೆ ಅನಿಲ್ ಅಂಬಾನಿ ಕೊಡಬೇಕಾಗಿದ್ದ ಹಣವನ್ನು ವಾಪಸ್ ಕೊಟ್ಟಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಎರಡೂ ಗಡುವುಗಳಿಗೂ ಸಹ ಅನಿಲ್ ಅಂಬಾನಿ ತಪ್ಪಿದ್ದಾರೆ. ಹೀಗಾಗಿ ಹಣ ವಾಪಸ್ ನೀಡುವವರೆಗೆ ಅವರನ್ನು ಜೈಲಿಗಟ್ಟಿ ಎಂದು ಸ್ವೀಡನ್‌ ಮೂಲದ ದೂರ ಸಂಪರ್ಕ ಉಪಕರಣಗಳ ನಿರ್ಮಾಣ ಕಂಪನಿ ಎರಿಕ್ಸನ್ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದೆ.

ಅಂಬಾನಿಯನ್ನು ಜೈಲಿಗಾಕಿ’; ಸುಪ್ರಿಂ ಕೋರ್ಟ್‌ನಲ್ಲಿ ಪ್ರಖ್ಯಾತ ಮೊಬೈಲ್ ಕಂಪೆನಿ!

ಯಾವುದೇ 'ಅಂಬಾನಿಗೆ ದೇಶ ಬಿಡಲು ಅವಕಾಶ ನೀಡಬಾರದು. ಈ ಕಾರಣಕ್ಕೆ ಅವರು ಹಣವನ್ನು ಪೂರ್ತಿಯಾಗಿ ನೀಡುವವರೆಗೆ ಅವರನ್ನು ಸಿವಿಲ್‌ ಜೈಲಿಗೆ ಹಾಕಬೇಕು' ಎಂದು ಎರಿಕ್ಸನ್ ಕೋರಿಕೊಂಡಿದ್ದು, ಹಾಗಾದರೆ, ಏನಿದು ಶಾಕಿಂಗ್ ಸುದ್ದಿ?, ಅಂಬಾನಿಗೂ ಮತ್ತು ಸ್ವೀಡನ್‌ ಮೂಲದ ಎರಿಕ್ಸನ್ ನಡುವಿನ ಸಮಸ್ಯೆ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

550 ಕೋಟಿ ರೂ. ಬಾಕಿ.

550 ಕೋಟಿ ರೂ. ಬಾಕಿ.

ಸ್ವೀಡನ್‌ ಮೂಲದ ದೂರ ಸಂಪರ್ಕ ಉಪಕರಣಗಳ ನಿರ್ಮಾಣ ಕಂಪನಿ ಎರಿಕ್ಸನ್‌ಗೆ ಅನಿಲ್‌ ಅಂಬಾನಿ ಅಧ್ಯಕ್ಷರಾಗಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಂ) ಒಟ್ಟು 550 ಕೋಟಿ ರೂಪಾಯಿಗಳನ್ನು ನೀಡಬೇಕಾಗಿತ್ತು. ಹಲವು ವರ್ಷಗಳ ಕಾಲ ಎರಿಕ್ಸನ್ ಕಂಪೆನಿಯಿಂದ ಸಾಕಷ್ಟು ಸರಕನ್ನು ಖರೀದಿಸಿದ ರಿಲಯನ್ಸ್ ಕಮ್ಯುನಿಕೇಷನ್ಸ್ ನಿಗದಿತ ಸಮಯದಲ್ಲಿ ಈ ಹಣವನ್ನು ಅನಿಲ್ ಅಂಬಾನಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಈ ಹಿಂದೆಯೇ ಕೋರ್ಟ್‌ ಮೆಟ್ಟಿಲೇರಿತ್ತು.

ಬಾಕಿ ಪಾವತಿಸದ ಅಂಬಾನಿ!

ಬಾಕಿ ಪಾವತಿಸದ ಅಂಬಾನಿ!

ಎರಿಕ್ಸನ್ ಕಂಪೆನಿ ಕೋರ್ಟ್ ಮೆಟ್ಟಿಲೇರಿದಾಗ, ಮೊದಲ ಬಾರಿ ಅಂಬಾನಿಗೆ ಸೆಪ್ಟೆಂಬರ್‌ 30ರ ಮೊದಲು ಬಾಕಿ ಹಣ ಪಾವತಿ ಮಾಡುವಂತೆ ನ್ಯಾಯಾಲಯ ಗಡುವು ನೀಡಿತ್ತು. ಆದರೆ ಅಂಬಾನಿ ಆದೇಶಕ್ಕೆ ತಪ್ಪಿದ್ದರಿಂದ ಎರಿಕ್ಸನ್ ಅಕ್ಟೋಬರ್‌ನಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗಿತ್ತು. ಈ ಸಂದರ್ಭದಲ್ಲಿ ಅಂಬಾನಿಗೆ ಎರಡನೇ ಬಾರಿಗೆ ಡಿಸೆಂಬರ್‌ 15ರ ಗಡುವನ್ನು ನೀಡಿತ್ತು. ಆದರೆ ಅಂಬಾನಿ ಆ ಬಾರಿಯೂ ಹಣ ನೀಡಿಲ್ಲ. ಹೀಗಾಗಿ ಮತ್ತೊಮ್ಮೆ ಎರಿಕ್ಸನ್ ನ್ಯಾಯಾಲಯದ ಮೆಟ್ಟಿಲೇರಿದೆ.

ಜೈಲಿಗೆ ಹಾಕುವಂತೆ ಮನವಿ!

ಜೈಲಿಗೆ ಹಾಕುವಂತೆ ಮನವಿ!

ಅಮಬಾನಿ ಎರಡು ಬಾರಿಯೂ ಗಡುವನ್ನು ಮೀರಿದ್ದರಿಂದ ಈ ಮೊದಲೇ ಅಂಬಾನಿಗೆ ದೇಶ ಬಿಡಲು ಅವಕಾಶ ನೀಡಬಾರದು ಎಂದು ಕೋರಿ ಕೋರ್ಟ್ಗೆ ಎರಿಕ್ಸನ್ ಕಂಪೆನಿ ಮನವಿ ಮಾಡಿತ್ತು. ಇದಾದ ನಂತರ ಅವರು ಹಣವನ್ನು ಪೂರ್ತಿಯಾಗಿ ನೀಡುವವರೆಗೆ ಅವರನ್ನು ಸಿವಿಲ್‌ ಜೈಲಿಗೆ ಹಾಕಬೇಕು ಎಂದು ಈಗ ಎರಿಕ್ಸನ್ ಕೋರಿಕೊಂಡಿದೆ. ಮತ್ತು ಬಾಕಿ ಹಣವನ್ನು ಬಡ್ಡಿ ಸಮೇತ ನೀಡುವಂತೆ ಆರ್‌ಕಾಂ ಮಾಲಿಕರಿಗೆ ನಿರ್ದೇಶನ ನೀಡುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ದಿವಾಳಿ?

ರಿಲಯನ್ಸ್ ಕಮ್ಯುನಿಕೇಷನ್ಸ್ ದಿವಾಳಿ?

46 ಸಾವಿರ ಕೋಟಿ ರುಪಾಯಿ ಸಾಲದ ಬಾಬ್ತು, ಆದಾಯ ಕುಸಿತ ಹಾಗೂ ಹೆಚ್ಚುತ್ತಿದ್ದ ನಷ್ಟದಿಂದ ಕಳೆದ ವರ್ಷ ಅನಿಲ್ ಅಂಬಾನಿ ಒಡೆತನದ ಕಂಪನಿ, ನಿಸ್ತಂತು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.ಅಮೆರಿಕನ್ ಟವರ್ ಕಾರ್ಪೊರೇಷನ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಾಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಹಾಗೂ ಅದರ ಘಟಕ ರಿಲಾಯನ್ಸ್ ಟೆಲಿಕಾಂ ಲಿಮಿಟೆಡ್ ಎರಡೂ ಸೇರಿ 144 ಬ್ಯಾಂಕ್ ಖಾತೆಗಳಲ್ಲಿ ಒಟ್ಟಾರೆ ಕೇವಲ 19.34 ಕೋಟಿ ರೂಪಾಯಿಗಳಿವೆ ಎಂದು ಕಂಪೆನಿ ಕೋರ್ಟ್‌ಗೆ ಹೇಳಿಕೊಂಡು ದಿವಾಳಿಯಾಗಿರುವ ಬಗ್ಗೆ ಸೂಚನೆ ನೀಡಿತ್ತು.

ಆರು ತಿಂಗಳು ಜೈಲು?

ಆರು ತಿಂಗಳು ಜೈಲು?

ಎರಡು ಬಾರಿ ನ್ಯಾಯಾಲಯದ ಗಡುವನ್ನು ಮೀರಿರುವ ಅಂಬಾನಿ ಒಂದೊಮ್ಮೆ ನ್ಯಾಯಾಂಗ ನಿಂದನೆ ಪ್ರಕರಣದ ಪ್ರಕಾರ ಅಪರಾಧಿ ಎಂದು ಸಾಬೀತಾದರೆ, ಅವರು ಆರು ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ,ಎಂದು ಆರ್‌ಕಾಂ ಪರ ವಕೀಲ ಅನಿಲ್‌ ಖೇರ್ ಅವರೇ ಹೇಳಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರಕ್ಕೆ ನಿಗದಿಪಡಿಸಿದೆ. ಇದರಿಂದ ಅಂಬಾನಿ ಜೈಲಿಗೆ ಹೋಗುವ ಸಂಭವ ಹೆಚ್ಚಿದೆ.

Most Read Articles
Best Mobiles in India

English summary
The Swedish company's petition asks for Anil Ambani to be prevented from leaving India and sought jail term for him unless all dues are cleared. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X