2030ಕ್ಕೆ ಚಂದ್ರನಲ್ಲಿ ಹಳ್ಳಿ ನಿರ್ಮಾಣ: ಯುರೋಪ್‌ ಸ್ಪೇಸ್‌ ಏಜೆನ್ಸಿ

By Suneel
|

ವಿಜ್ಞಾನಿಗಳು ಯಾವುದಾದರೊಂದು ಆಶ್ಚರ್ಯಕರ ಸಾಧನೆಯ ಹಾದಿಯಲ್ಲಿ ನಿರತರಾಗಿರುತ್ತಾರೆ ಎಂಬುದಕ್ಕೆ ಈಗ ಸಾಕ್ಷಿಯೊಂದು ಎಲ್ಲರ ಕಣ್ಣ ಮುಂದೆ ಇದೆ. ಹೌದು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಚಂದ್ರನ ಮೇಲ್ಮೈನಲ್ಲಿ ಮನೆಯನ್ನು ಕಟ್ಟಲು ನಿರ್ಧರಿಸಿದೆ. ಗಗನಯಾತ್ರಿಗಳು ವಾಸಿಸಲು ಕಟ್ಟಲಿರುವ ಈ ಮನೆಯನ್ನು 2030 ರೊಳಗೆ ನಿರ್ಮಿಸುವ ಬಗ್ಗೆ ಮಾಹಿತಿಯನ್ನು ಹೊರಹಾಕಿದೆ.

ನಾಸಾ ನಂತರದಲ್ಲಿ ಚಂದ್ರನ ಮೇಲ್ಮೈನಲ್ಲಿ ಕಾರ್ಯಾಪ್ರವೃತ್ತವಾಗಿರುವ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ಈ ಸಾಧನೆಯ ಹಾದಿ ವಿಶೇಷವಾಗಿದ್ದು, ಅದು ಹೇಗಿದೆ ಎಂಬುದನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

 ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಗಗನಯಾತ್ರಿಗಳು ಚಂದ್ರನ ಮೇಲೆ 3D ಪ್ರಿಂಟೆಡ್‌ ಮನೆಯನ್ನು ನಿರ್ಮಿಸಿ ಅದರಲ್ಲಿ ವಾಸಿಸುತ್ತಾರಂತೆ. ಈ ಯೋಜನೆಯನ್ನು 2030 ರೊಳಗೆ ಪೂರ್ಣ ಗೊಳಿಸುವ ಬಗ್ಗೆ ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ಹೇಳಿದೆ.

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಇದೇ ಮೊದಲ ಬಾರಿಗೆ ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ಚಂದ್ರನ ಮೇಲೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ಬದಲು 3D ಪ್ರಿಂಟೆಡ್‌ ಮನೆ ನಿರ್ಮಾಣ ಮಾಡುವ ಬಗ್ಗೆ ಪ್ರಪಂಚದಾದ್ಯಂತ ಅಧಿಕೃತವಾಗಿ ಮಾಹಿತಿ ನೀಡಿದೆ ಹಾಗೂ ಪ್ರಸ್ತಾಪಿಸಿದೆ.

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಗಗನಯಾತ್ರಿಗಳು ವಾಸಿಸಲು ಚಂದ್ರನಲ್ಲಿ ಕಟ್ಟಲಿರುವ 3D ಪ್ರಿಂಟೆಡ್‌ ಮನೆಗೆ ಚಂದ್ರನಲ್ಲಿನ ಮಣ್ಣನ್ನು ಉಪಯೋಗಿಸಲಿದ್ದಾರಂತೆ. ಚಂದ್ರನನಲ್ಲಿನ ಮಣ್ಣು ಹೆಪ್ಪುಗಟ್ಟುವಿಕೆಗೆ ಪ್ರಸಿದ್ದವಾಗಿದೆ. ಆದ್ದರಿಂದ ಆ ಮಣ್ಣನ್ನೇ ಬಳಸಿಕೊಳ್ಳಲಾಗುತ್ತಿದೆ.

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ನಾಸಾ ನಂತರದಲ್ಲಿ ಚಂದ್ರನ ಮೇಲೆ ಪ್ರಮುಖ ಪಾತ್ರವನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ವಹಿಸಿದೆ. ಆದರೆ ಚಂದ್ರನ ಮೇಲೆ ಮಾನವ ಸಹಿತ ಕಾರ್ಯಚರಣೆಯನ್ನು ಮಾಡುವ ಉದ್ದೇಶದಿಂದಲ್ಲಾ ಎಂದು ಹೇಳಿದೆ.

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಅಮೇರಿಕ ಸ್ಪೇಸ್‌ ಏಜೆನ್ಸಿ ಮಂಗಳನಲ್ಲಿಗೆ ಮಾನವರನ್ನು ಕಳುಹಿಸುವ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ಆದರೆ ಯುರೋಪಿಯನ್‌ ಸ್ಪೇಸ್ ಏಜೆನ್ಸಿಯ ಮಹಾ ನಿರ್ದೇಶಕ ಜಾನ್‌ ವಾರ್ನರ್‌ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ತಜ್ಞರು ಚಂದ್ರನ ಮೇಲ್ಮೈನಲ್ಲಿ ನಿರ್ಮಿಸಬೇಕೆಂದು ಸಿದ್ದಪಡಿಸಿರುವ ಯೋಜನೆಯ ಔಟ್‌ಲೈನ್‌ ವಿನ್ಯಾಸವು ಇದಾಗಿದೆ.

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಈ ಚಿತ್ರದಲ್ಲಿ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯು ಚಂದ್ರನ ಮೇಲ್ಮೈನಲ್ಲಿ 3D ಪ್ರಿಂಟೆಡ್ ಟೆಕ್ನಾಲಜಿಯನ್ನು ಪ್ರಯೋಗ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇಎಸ್‌ಎ ಈ ಬಗ್ಗೆ ಅಂತರರಾಷ್ಟ್ರೀಯ ಸಮಾಲೋಚನಾ ಸಭೆಯನ್ನು ನಡೆಸಿತ್ತು.

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನಲ್ಲಿ ನಿರ್ಮಿಸಲು ರಚಿಸಿರುವ ಡಿ ವಿನ್ಯಾಸದ ರಚನೆಗಳು .

 ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನಲ್ಲಿ ನಿರ್ಮಿಸಲಿರುವ ಮನೆಗೆ 3D ಪ್ರಿಂಟರ್‌ನಿಂದ ಚಂದ್ರನನಲ್ಲಿನ ಮಣ್ಣನ್ನು ಬಳಸಿ ನಿರ್ಮಿಸಿರುವ ಟನ್‌ ಬಿಲ್ಡಿಂಗ್‌ ಬ್ಲಾಕ್‌ನ ಪ್ರದರ್ಶನ.

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನ ಮೇಲ್ಮೈನಲ್ಲಿ ಮನೆ

ಚಂದ್ರನಲ್ಲಿ 3D ಪ್ರಿಂಟಿಂಗ್ ಟೆಕ್ನಾಲಜಿ ಪ್ರಸ್ತುತದಲ್ಲಿ ಕೇವಲ ಒಂದು ವಾರದ ಅವಧಿಯಲ್ಲೂ ಪೂರ್ಣವಾಗಿ ಬಿಲ್ಡಿಂಗ್‌ ನಿರ್ಮಾಣ ಮಾಡಬಹುದಾಗಿದೆ ಎಂದು ತಂತ್ರಜ್ಞಾನ ತಜ್ಞರು ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಕ್ರಿಸ್‌ಮಸ್‌ ದಿನದಂದು ಆಕಾಶದಲ್ಲಿ ಮೂಡಲಿರುವ ಪೂರ್ಣ ಚಂದ್ರಕ್ರಿಸ್‌ಮಸ್‌ ದಿನದಂದು ಆಕಾಶದಲ್ಲಿ ಮೂಡಲಿರುವ ಪೂರ್ಣ ಚಂದ್ರ

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್‌ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್‌

ಅಚ್ಚರಿಗಳ ಸಮ್ಮಿಶ್ರಣ ಚಂದ್ರಲೋಕಅಚ್ಚರಿಗಳ ಸಮ್ಮಿಶ್ರಣ ಚಂದ್ರಲೋಕ

ಗಿಜ್‌ಬಾಟ್‌

ಗಿಜ್‌ಬಾಟ್‌

https://www.facebook.com/GizBotKannada/?fref=ts

Best Mobiles in India

English summary
European Space Agency announces plans to build a 'Moon village' by 2030. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X