ಸ್ಮಾರ್ಟ್‌ಫೋನ್ ಏನು ನಿನ್ನ ಲೀಲೆ
ಇಂದಿನ ಆಧುನಿಕ ತಂತ್ರಜ್ಞಾನ ನಾವು ಬಳಸುವ ದಿನಬಳಕೆಯ ವಸ್ತುಗಳ ಪಾತ್ರವನ್ನು ಆದಷ್ಟು ಕಡಿಮೆ ಮಾಡಿದೆ. ಅಂದರೆ ಹಲವುಗಳ ಬಳಕೆಯನ್ನು ಒಂದರಲ್ಲೇ ಬಳಸುವ ಸೂಪರ್ ಯೋಜನೆಗಳನ್ನು ನಮ್ಮ ಮುಂದಿಟ್ಟಿದೆ. ಉದಾಹರಣೆಗೆ ನಮ್ಮ ಸ್ಮಾರ್ಟ್‌ಫೋನ್ ಅನ್ನೇ ತೆಗೆದುಕೊಳ್ಳುವುದಾದರೆ ಟಾರ್ಚ್‌ನಿಂದ ಹಿಡಿದು ಅಲರಾಮ್, ನಕ್ಷೆಗಾಗಿ, ಆರೋಗ್ಯ ತಪಾಸಿಸಲು ಹೀಗೆ ವಿಧವಿಧವಾಗಿ ಬಳಸಿಕೊಳ್ಳಬಹುದಾಗಿದೆ.
ಓದಿರಿ:ಶೀಘ್ರದಲ್ಲೇ ಲಭ್ಯವಾಗಲಿರುವ ಹೈಟೆಕ್ ಆವಿಷ್ಕಾರಗಳು
ಒಂದರಲ್ಲೇ ಬಹುಕೆಲಸಗಳನ್ನು ನಿರ್ವಹಿಸಬಲ್ಲ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ನಾವು ಹ್ಯಾಟ್ಸಫ್ ಹೇಳಲೇಬೇಕು. ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನ ಬಹುಪಯೋಗಿ ಕೆಲಸಗಳನ್ನು ಕುರಿತು ಅರಿತುಕೊಳ್ಳೋಣ.

ಟಾರ್ಚ್ ಮಾಡುವ ಕೆಲಸವನ್ನು ಇದುವೇ ಮಾಡುತ್ತದೆ
ಮೊದಲೆಲ್ಲಾ ಟಾರ್ಚ್ ಬಳಸಿ ರಾತ್ರಿ ವೇಳೆಯ ಅಪಾಯಗಳನ್ನು ಎದುರಿಸಬೇಕಾಗಿತ್ತು. ಟಾರ್ಚ್ ಅನ್ನು ನಮ್ಮೊಂದಿಗೆ ಎಕ್ಟ್ರಾ ಆಗಿ ಕೊಂಡೊಯ್ಯಬೇಕಾಗಿತ್ತು. ಆದರೆ ಈಗ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫ್ಲ್ಯಾಶ್‌ಲೈಟ್ ಡೌನ್‌ಲೋಡ್ ಮಾಡಿದರೆ ಸಾಕು ಟಾರ್ಚ್ ಮಾಡುವ ಕೆಲಸವನ್ನು ಇದುವೇ ಮಾಡುತ್ತದೆ.

ಅಲರಾಮ್ ಹೊಂದಿಸಿದರೆ ಸಾಕು
ಟ್ರಿಂಗ್ ಟ್ರಿಂಗ್ ಶಬ್ಧದ ಮೂಲಕ ಬೆಳಗ್ಗಿನ ನಮ್ಮ ಸಕ್ಕರೆ ನಿದ್ದೆಗೆ ಕಹಿಯನ್ನುಂಟು ಮಾಡುವ ಅಲರಾಮ್ ಸಮಯದ ಅರಿವನ್ನು ನಮಗೆ ಮೂಡಿಸುತ್ತಿತ್ತು. ಆದರೀಗ ಅಲರಾಮ್‌ನ ಕೆಲಸವನ್ನು ಸ್ಮಾರ್ಟ್‌ಫೋನ್‌ಗಳೇ ಮಾಡುತ್ತಿವೆ. ನೀವು ಇದರಲ್ಲಿ ಅಲರಾಮ್ ಹೊಂದಿಸಿದರೆ ಸಾಕು ನೀವು ಸೆಟ್ ಮಾಡಿದ ಟೈಮ್‌ನಲ್ಲೇ ನಿಮ್ಮನ್ನು ಎಚ್ಚರಿಸುತ್ತದೆ.

ಸಮರ್ಪಕ ವಿಧಾನ
ಮ್ಯಾಪ್ಸ್ ಅಷ್ಟು ಬೇಗ ಯಾರಿಗೂ ಅರ್ಥವಾಗದು. ಆದರೆ ಸ್ಮಾರ್ಟ್‌ಫೋನ್‌ಗಳು ಒದಗಿಸುತ್ತಿರುವ ಕೆಲವೊಂದು ಅಪ್ಲಿಕೇಶನ್‌ಗಳ ಮೂಲಕ ನಾವು ಹೋಗಬೇಕಾದ ದಾರಿಯ ಸಮರ್ಪಕ ವಿಧಾನ ನಮಗೆ ತಿಳಿಯುತ್ತದೆ.

ವೆಮ್ಮೊ ಅಪ್ಲಿಕೇಶನ್
ವೆಮ್ಮೊನಂತಹ ಅಪ್ಲಿಕೇಶನ್‌ಗಳು ಇ ಚಾಲನ್ಸ್ ಅಥವಾ ಇ ಬಿಲ್ಸ್ ವಹಿವಾಟುಗಳನ್ನು ನೋಡಿಕೊಳ್ಳುತ್ತದೆ. ಟಿಕೇಟ್ ಬುಕ್ಕಿಂಗ್ ಕೆಲಸವನ್ನು ಸುಲಭವಾಗಿಸಿರುವ ಸ್ಮಾರ್ಟ್‌ಫೋನ್‌ಗಳು ಟಿಕೇಟ್ ಬಂದ ಸುದ್ದಿಯನ್ನು ಸುಲಭವಾಗಿ ತೋರಿಸುತ್ತವೆ.

ಬಿಲ್ಟ್ ಇನ್ ವಾಯ್ಸ್ ಮೆಮೊಸ್ ಅಪ್ಲಿಕೇಶನ್
ರೆಕಾರ್ಡ್ ಬಟನ್ ಮೇಲೆ ನೀವು ಕೈ ಇರಿಸಿದರೆ ಸಾಕು ಟಕ್ಕನೆ ಇದು ಆಡಿಯೊವನ್ನು ರೆಕಾರ್ಡ್ ಮಾಡುತ್ತದೆ. ಬಿಲ್ಟ್ ಇನ್ ವಾಯ್ಸ್ ಮೆಮೊಸ್ ಅಪ್ಲಿಕೇಶನ್ ಹೆಚ್ಚು ಗುಣಮಟ್ಟದ ಆಡಿಯೊವನ್ನು ರೆಕಾರ್ಡ್ ಮಾಡುತ್ತದೆ.

ಕ್ಯಾಮೆರಾ
ಇನ್ನು ಕನ್ನಡಿಯಂತೆ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳಲ್ಲಿರುವ ಕ್ಯಾಮೆರಾವನ್ನು ಆನ್ ಮಾಡಿದರೆ ಸಾಕು ನಿಮ್ಮ ಮುಖ ಇದರಲ್ಲಿ ಗೋಚರಿಸುತ್ತದೆ.

ಹೆಚ್ಚು ಗುಣಮಟ್ಟದ ಕ್ಯಾಮೆರಾ
ಇಂದು ಮಾರುಕಟ್ಟೆಗೆ ಆಗಮಿಸುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಗುಣಮಟ್ಟದ ಕ್ಯಾಮೆರಾಗಳನ್ನು ಒಳಗೊಂಡು ಬಂದಿವೆ. ಇದರಿಂದ ಅತ್ಯುತ್ತಮವಾಗಿ ವೀಡಿಯೊ ರೆಕಾರ್ಡ್ ಅನ್ನು ನಿಮಗೆ ನಡೆಸಬಹುದಾಗಿದೆ.

ಹಾಡುಗಳ ಅತ್ಯುತ್ತಮ ಸಂಗ್ರಹ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಹಾಡುಗಳ ಅತ್ಯುತ್ತಮ ಸಂಗ್ರಹವನ್ನು ಹೊಂದಿದ್ದು ಇನ್ನು ನಿಮ್ಮ ಬೇಸರ ಹಾರಿಹೋಗುವುದು ಖಂಡಿತ. ಇನ್ನು ರೇಡಿಯೊವನ್ನು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಒಳಗೊಂಡಿರುವುದರಿಂದ ಹೆಚ್ಚಿನ ರೇಡಿಯೊ ಸ್ಟೇಶನ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ನಿಮಗೆ ಆನಂದಿಸಬಹುದಾಗಿದೆ.

ಅತ್ಯಾಧುನಿಕ ಫೋನ್ ಅಪ್ಲಿಕೇಶನ್
ವಿದೇಶದಲ್ಲಿ ನೆಲೆಸಿರುವ ನಿಮ್ಮ ಸಂಬಂಧಿಕರಿಗೆ ಫೋನ್ ಕರೆಮಾಡುವುದು ಈಗ ಮೊದಲಿನಷ್ಟು ಕಷ್ಟವೇನಲ್ಲ. ಇತ್ತೀಚಿನ ಅತ್ಯಾಧುನಿಕ ಫೋನ್ ಅಪ್ಲಿಕೇಶನ್‌ಗಳು ನಿಮ್ಮ ಕರೆ ಅಥವಾ ಸಂದೇಶ ರವಾನೆಯಂತಹ ತೊಂದರೆಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸುತ್ತದೆ.

ಸ್ಟ್ಯಾಂಡ್‌ಲೋನ್ ಡಿವೈಸ್
ಅನ್ನು ಹೊಂದಿದ್ದ ಫೋನ್‌ಗಳು ಅಂದಿನ ಕಾಲದಲ್ಲಿ ಹೆಚ್ಚು ತಲೆನೋವನ್ನು ಉಂಟುಮಾಡುತ್ತಿದ್ದವು. ಇದನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸಬೇಕಾಗುತ್ತಿತ್ತು. ಆದರೆ ಇಂದಿನ ಸ್ಮಾರ್ಟ್‌ಫೋನ್‌ಗಳನ್ನು ನಿಮಗೆ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು ಮತ್ತು ಸಂವಾದವನ್ನು ನಡೆಸಬಹುದು.


Click it and Unblock the Notifications








