ಭಾರತದಲ್ಲಿ ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್ ಫೋನ್: ಶೀಘ್ರವೇ ಸಾಧ್ಯ.!

Written By: Lekhaka

ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಮಾರುಕಟ್ಟೆಯೂ ವಿಸ್ತಾರವನ್ನು ಹೊಂದುತ್ತಿದೆ. ಈ ಹಿನ್ನಲೆಯಲ್ಲಿ ಶೀಘ್ರವೇ ದೇಶದ ಪ್ರತಿಯೊಬ್ಬ ನಾಗರೀಕನ ಕೈನಲ್ಲಿಯೂ ಸ್ಮಾರ್ಟ್ ಫೋನ್ ಕಾಣುವ ದಿನಗಳು ಹತ್ತಿರ ಬರುತ್ತಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸುಮಾರು 400 ಮಿಲಿಯನ್ ಸ್ಮಾರ್ಟ್ ಫೋನ್ ಬಳಕೆದಾರರಿದ್ದು, ಶೀಘ್ರವೇ ಈ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ತಜ್ಞನರು ತಿಳಿಸಿದ್ದಾರೆ.

ಭಾರತದಲ್ಲಿ ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್ ಫೋನ್: ಶೀಘ್ರವೇ ಸಾಧ್ಯ.!

ಭಾರತೀಯರು ಈಗಾಗಲೇ ವಿಶ್ವದಲ್ಲದೇ ಅತ್ಯಧಿಕ ಡೇಟಾವನ್ನು ಬಳಕೆ ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎನ್ನಲಾಗಿದ್ದು, ಇದೇ ಮಾದರಿಯಲ್ಲಿ ಅತೀ ಹೆಚ್ಚಿನ ಸ್ಮಾರ್ಟಫೋನ್ ಬಳಕೆದಾರರನ್ನು ಹೊಂದಿರುವ ದೇಶ ಎನ್ನುವ ಖ್ಯಾತಿ ಸಹ ಭಾರತದ ಮುಡಿಗೆ ದೊರೆಯಲಿದೆ ಎನ್ನಲಾಗಿದೆ.

ಸದ್ಯ ದೇಶದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಗಳಲ್ಲಿ ಶೇ. 80 ಫೋನ್ ಗಳು ಇಂಟರ್ನೆಟ್ ಬಳಕೆಯನ್ನು ಮಾಡಿಕೊಳ್ಳುವ ಅವಕಾಶವನ್ನು ಹೊಂದಿಲ್ಲ. ಆದರೆ ಇನ್ನು ಕೇಲವೆ ದಿನಗಳಲ್ಲಿ ಈ ದಿಸೆಯೂ ಬದಲಾಗಲಿದೆ. ಎಲ್ಲಾ ಸ್ಮಾರ್ಟ ಫೋನ್ ಗಳನ್ನು ನಾವು ಇನ್ನು ಇಂಟೆನೆಟ್ ಸೇವೆಯನ್ನು ನೋಡಬಹುದಾಗಿದೆ.

How to Activate UAN Number? KANNADA
ದೇಶದಲ್ಲಿ ಇದಕ್ಕಾಗಿಯೇ ಹಲವು ಸ್ಟಾರ್ಟ್ ಆಪ್ ಗಳು ಇಂಟರ್ನೆಟ್ ಸೇವೆಯನ್ನು ನೀಡಲು ಮುಂದಾಗಿವೆ, ಅಲ್ಲದೇ ಕಡಿಮೆ ಬೆಲೆಯ ಸ್ಮಾರ್ಟ ಪೋನ್ ಅನ್ನು ಲಾಂಚ್ ಮಾಡಲು ಮುಂದಾಗಿವೆ. 2020ರಲ್ಲಿ ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಲಿದೆ ಎನ್ನಲಾಗಿದೆ.

ವಾಟ್ಸಾಪ್ನಲ್ಲಿ ಡಿಲೀಟ್ ಆಗಿರುವ ಮೆಸೇಜ್ಗಳನ್ನು ಓದುವುದು ಹೇಗೆ?

ಈಗಾಗಲೇ ದೇಶದಲ್ಲಿ ಟೆಕ್ ಇಂಡಸ್ಟ್ರಿ ಸದ್ದು ಮಾಡುತ್ತಿದೆ, ಇದರೊಂದಿಗೆ ಸ್ಮಾರ್ಟ್ ಫೋನ್ ವಿಭಾಗವು ಬೆಳೆಯೂತ್ತಿದೆ. ಇದು ಎರಡು ಒಂದಾಗಿ ದೇಶದ ಭವಿಷ್ಯವನ್ನು ಬದಲಾಯಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ. ಇದಲ್ಲದೇ ಸ್ಮಾರ್ಟ್ ಫೋನ್ ಟೆಕ್ನಾಲಜಿಯೂ ಹೆಚ್ಚು ಉತ್ತಮವಾಗಲಿದೆ ಎನ್ನಲಾಗಿದೆ.

Read more about:
English summary
With the cost of smartphone acquisition coming down to as low as $1 (Rs 65) per consumer, all Indians would have an access to smartphones in next four to five years.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot