ಈಗ 'ಡಿಟಿಹೆಚ್'ಗೆ ಬಿತ್ತು ಗೂಟ!..ಬೆಚ್ಚಿಬಿದ್ದ ಏರ್‌ಟೆಲ್, ಟಾಟಾ ಸ್ಕೈ, ಬಿಗ್‌ಟಿವಿ!!

|

ಮೊನ್ನೆ ಮೊನ್ನೆಯಷ್ಟೇ ಕೇಬಲ್ ಟಿವಿ ನಿಯಮಗಳನ್ನು ತಿಳಿಸಿದ್ದ ಟ್ರಾಯ್ ಡಿಟಿಹೆಚ್ ಸೇವಾ ಕಂಪನಿಗಳಿಗೆ ಬಿಗ್ ಶಾಕ್ ನೀಡಿದೆ.ದೇಶದ ಟಿವಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆಲ್ಲಾ ಬ್ರೇಕ್ ಹಾಕುವ ಹೆಜ್ಜೆಯನ್ನಿಟ್ಟಿರುವ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು ಡಿಟಿಹೆಚ್ ಸೇವೆ ಒದಗಿಸುವ ಕಂಪೆನಿಗಳಿಗೆ ಹಲವು ರೀತಿಯಲ್ಲಿ ಕಡಿವಾಣ ಹಾಕಲು ಮುಂದಾಗಿದೆ.

ದೇಶದಾಧ್ಯಂತ ಗ್ರಾಹಕರು ತಾವು ನೋಡುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಿದರೆ ಸಾಕು ಎಂಬ ನೂತನ ನೀತಿ ಫೆಬ್ರವರಿ 1 ರಿಂದ ಜಾರಿಯಾಗಲಿದ್ದು, ಇದೇ ವೇಳೆಯಲ್ಲಿ ಡಿಟಿಹೆಚ್ ಕಂಪೆನಿಗಳಿಗೆ ಹಲವು ಹೊಸ ನಿಯಮಗಳನ್ನು ಟ್ರಾಯ್ ಜಾರಿಮಾಡಿದೆ. ಟ್ರಾಯ್‌ನ ನೂತನ ಆದೇಶವನ್ನು ನೋಡಿದ ಏರ್‌ಟೆಲ್, ಟಾಟಾ ಸ್ಕೈ, ಬಿಗ್‌ಟಿವಿ ಕಂಪೆನಿಗಳೆಲ್ಲವೂ ಒಮ್ಮೆ ಬೆಚ್ಚಿಬಿದ್ದಿವೆ.

ಈಗ 'ಡಿಟಿಹೆಚ್'ಗೆ ಬಿತ್ತು ಗೂಟ!..ಬೆಚ್ಚಿಬಿದ್ದ ಏರ್‌ಟೆಲ್, ಬಿಗ್‌ಟಿವಿ!!

ಹಾಗಾದರೆ, ಕೇಬಲ್ ಮತ್ತು ಡಿಟಿಹೆಚ್ ಆಪರೇಟರ್‌ಗಳು ಗ್ರಾಹಕರು ಕೇಳಿದ ಮತ್ತು ಅವರು ಆಯ್ಕೆ ಮಾಡಿಕೊಂಡ ಚಾನೆಲ್‌ಗಳನ್ನು ಮಾತ್ರ ಪ್ರಸಾರ ಮಾಡಬೇಕು ಎಂಬ ನಿಯಮದ ಜೊತೆಗೆ, ಡಿಟಿಹೆಚ್ ಕಂಪೆನಿಗಳಿಗೆ ಟ್ರಾಯ್ ವಿಧಿಸಿರುವ ನೂತನ ನಿಯಮಗಳು ಯಾವುವು?, ಡಿಟಿಹೆಚ್ ಗ್ರಾಹಕರಿಗೆ ಇದರಿಂದ ಏನೆಲ್ಲಾ ಲಾಭ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

500 ರೂ. ಮೀರದಂತೆ ಅನುಷ್ಠಾನ ಶುಲ್ಕ

500 ರೂ. ಮೀರದಂತೆ ಅನುಷ್ಠಾನ ಶುಲ್ಕ

ಡಿಟಿಹೆಚ್ ಸೇವಾದಾರ ಕಂಪೆನಿಗಳು ಡಿಟಿಹೆಚ್‌ಗಾಗಿಸಿ ಒಟ್ಟು 500 ರೂ. ಮೀರದಂತೆ ದರ ನಿಗದಿಪಡಿಸುವಂತೆ' ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಆದೇಶಿಸಿದೆ. ಅನುಷ್ಠಾನ ಶುಲ್ಕ ಗರಿಷ್ಠ ₹ 350 ಹಾಗೂ ಆಕ್ಟಿವೇಷನ್ (ಕ್ರಿಯಾಶೀಲ) ಶುಲ್ಕ ₹ 150 ರಷ್ಟು ವಿಧಿಸಿ, ಒಟ್ಟು 500 ರೂ. ಮೀರದಂತೆ ನೋಡಿಕೊಳ್ಳಬೇಕು ಎಂಬುದಾಗಿ ನಿರ್ದೇಶನ ನೀಡಿದೆ.

ಬೆಚ್ಚಿಬಿದ್ದ ಡಿಟಿಹೆಚ್ ಕಂಪೆನಿಗಳು!

ಬೆಚ್ಚಿಬಿದ್ದ ಡಿಟಿಹೆಚ್ ಕಂಪೆನಿಗಳು!

ಆಕ್ಟಿವೇಷನ್ ಶುಲ್ಕ ಒಟ್ಟು 500 ರೂ. ಮೀರದಂತೆ ಇರಬೇಕು ಎಂದು ನಿಯಮ ಜಾರಿಯಾದ ನಂತರ ಡಿಟಿಹೆಚ್ ಕಂಪೆನಿಗಳು ಬೆಚ್ಚಿಬಿದ್ದಿವೆ. ಪ್ರಸ್ತುತ ಟಾಟಾ ಸ್ಕೈ ಪ್ರತಿ ಡಿಟಿಎಚ್ ಅನುಷ್ಠಾನ ಮತ್ತು ಆಕ್ಟಿವೇಷನ್‌ಗೆ ₹ 1,500 ದರ ನಿಗದಿಪಡಿಸಿದೆ. ಏರ್ಟೆಲ್ ಸೇರಿದಂತೆ ಇತರೆ ಪೂರೈಕೆದಾರರು ₹ 1,200 ಸೇವಾ ಶುಲ್ಕ ಪಡೆಯುತ್ತಿವೆ. ಇನ್ನು ಮುಂದೆ ಇದಕ್ಕೆ ಕಡಿವಾಣ ಬೀಳಲಿದೆ.

ಟಿವಿ ನೋಡದೇ ಇದ್ದರೆ ಶುಲ್ಕವಿಲ್ಲ!

ಟಿವಿ ನೋಡದೇ ಇದ್ದರೆ ಶುಲ್ಕವಿಲ್ಲ!

ಗ್ರಾಹಕರು ಮೂರು ತಿಂಗಳು ಟಿ.ವಿ ನೋಡದೇ ಇದ್ದರೆ, ನಿರ್ವಹಣಾ ಶುಲ್ಕವೆಂದು ಕೇವಲ 25 ರೂ. ಪಾವತಿಸಬೇಕು. ಮೂರು ತಿಂಗಳಿಗಿಂತ ಹೆಚ್ಚು ಅಂದರೆ 9 ತಿಂಗಳ ವರೆಗೂ ಟಿವಿ ನೋಡದಿದ್ದರೆ 100 ರೂ.ಶುಲ್ಕ ಪಾವತಿಸಬೇಕು. 9 ತಿಂಗಳ ನಂತರ ಯಾವುದೇ ಡಿಟಿಹೆಚ್ ಆಪರೇಟರ್ ಕಂಪೆನಿ ಸಂಪರ್ಕ ಶುಲ್ಕವೆಂದು ಹೆಚ್ಚಿನ ಮೊತ್ತ ಕೇಳವಂತಿಲ್ಲ ಎಂದು ಹೇಳಿದೆ.

ಸೇವಾ ಶುಲ್ಕ ಮರು ಪಾವತಿ

ಸೇವಾ ಶುಲ್ಕ ಮರು ಪಾವತಿ

ಟ್ರಾಯ್‌ನ ನೂತನ ಆದೇಶದ ಅನ್ವಯ, ಗ್ರಾಹಕರು ತಮ್ಮ ಡಿಟಿಎಚ್ ಸೇವೆ ಕಡಿತಗೊಳಿಸುತ್ತೇವೆ ಎಂದು 15 ದಿನ ಮುಂಚಿತವಾಗಿ ಪೂರೈಕೆದಾರರಿಗೆ ತಿಳಿಸಿದರೆ ಡಿಟಿಹೆಚ್ ಕಂಪೆನಿಗಳು ಸೇವಾ ಶುಲ್ಕವನ್ನು ಗ್ರಾಹಕರಿಗೆ ಮರು ಪಾವತಿ ಮಾಡಬೇಕಿದೆ. ಇದಕ್ಕಾಗಿ ಗ್ರಾಹಕರು ತಮ್ಮ ಡಿಟಿಎಚ್ ಸೆಟ್-ಟಾಪ್- ಬಾಕ್ಸ್ ಮತ್ತು ಅದರ ಇತರ ಸಲಕರಣೆಗಳನ್ನು ಮರಳಿಸಬೇಕಿದೆ.

72 ಗಂಟೆಯೊಳಗೆ ಪರಿಹಾರ!

72 ಗಂಟೆಯೊಳಗೆ ಪರಿಹಾರ!

ಹೊಸ ನಿಯಮಗಳ ಅನುಸಾರ ಯಾವುದೇ ಡಿಟಿಹೆಚ್ ಕಂಪೆನಿಯಾಗಲಿ ಟೋಲ್ ಫ್ರೀ ಸಂಖ್ಯೆಯನ್ನು ಕಡ್ಡಾಯವಾಗಿ ಗ್ರಾಹಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಗ್ರಾಹಕರ ಯಾವುದೇ ದೂರನ್ನು 72 ಗಂಟೆಯಲ್ಲಿ ಪರಿಹರಿಸಬೇಕು. ಒಂದು ವೇಳೆ ಈ 72 ಗಂಟೆ ಸಮಯದಲ್ಲಿ ಆ ಸಂಸ್ಥೆ ಪರಿಹಾರವನ್ನು ನೀಡದಿದ್ದರೆ, ಶುಲ್ಕವನ್ನು ಕೇಳುವಂತಿಲ್ಲ ಎಂದು ಟ್ರಾಯ್ ಹೇಳಿದೆ.

130 ರೂ.ಗೆ 100 ಉಚಿತ ಚಾನಲ್

130 ರೂ.ಗೆ 100 ಉಚಿತ ಚಾನಲ್

ಕೇಬಲ್ ಟಿವಿ ಸೇರಿದಂತೆ ಡಿಟಿಹೆಚ್ ಕಂಪೆನಿಗಳು ಕೂಡ 130 ರೂ.ಗೆ 100 ಉಚಿತ ಚಾನಲ್‌ಗಳು ಒದಗಿಸಬೇಕು. ಉಚಿತವಾಗಿ ಲಭ್ಯವಿರುವ ಯಾವುದಾದರೂ 100 ಚಾನಲ್‌ಗಳನ್ನು ಆಯ್ದುಕೊಳ್ಳಲು ಗ್ರಾಹಕರೇ ಆಯ್ಕೆ ಮಾಡಿಕೊಳ್ಳಬಹುದು. ನಂತರ ಹಣ ಪಾವತಿ ಮಾಡಿ ಯಾವುದೇ ಚಾನಲ್ ಅನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವನ್ನು ಗ್ರಾಹಕರಿಗೆ ನೀಡಬೇಕು.

ಗುಚ್ಚಕ್ಕೆ ಹಣ ಪಾವತಿಸಬಹುದು!

ಗುಚ್ಚಕ್ಕೆ ಹಣ ಪಾವತಿಸಬಹುದು!

ಡಿಟಿಎಚ್ ಆಪರೇಟರ್‌ಗಳು ಗ್ರಾಹಕರು ಆಯ್ಕೆ ಮಾಡಿಕೊಂಡ ಚಾನೆಲ್‌ಗಳನ್ನು ಮಾತ್ರ ಪ್ರಸಾರ ಮಾಡಬೇಕು.ಗ್ರಾಹಕರು ತಾವು ನೋಡುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಿದರೆ ಸಾಕು. ಗ್ರಾಹಕರು ಒಂದೊಂದು ಚಾನೆಲ್‌ಗೆ ಹಣಪಾವತಿಸುವ ಬದಲು, ಚಾನೆಲ್‌ಗಳ ಗುಚ್ಚಕ್ಕೆ ಹಣ ಪಾವತಿ ಮಾಡಬಹುದು.ಉದಾಹರಣೆಗೆ ಕಲರ್ಸ್ ಗ್ರೂಪ್ 30 ರೂ. ನಿಗದಿಪಡಿಸಿದೆ.

ಗ್ರಾಹಕರ ಮೇಲೆ ಒತ್ತಡ ಹಾಕಬಾರದು.

ಗ್ರಾಹಕರ ಮೇಲೆ ಒತ್ತಡ ಹಾಕಬಾರದು.

ಡಿಟಿಹೆಚ್ ಕಂಪೆನಿಗಳು ನಮ್ಮ ಕಂಪನಿಯ ಸೆಟ್‌ಆಪ್ ಬಾಕ್ಸ್ ಅನ್ನು ಖರೀದಿಸಿ ಎಂದು ಡಿಟಿಎಚ್ ಗ್ರಾಹಕರ ಮೇಲೆ ಒತ್ತಡ ಹಾಕಬಾರದು. ಸೆಟ್ ಆಪ್‌ ಬಾಕ್ಸ್ ಗುಣಮಟ್ಟ ಉತ್ತಮವಾಗಿದ್ದರೆ ಅದನ್ನೇ ಬಳಸಿಕೊಳ್ಳುವುದು ಗ್ರಾಹಕರ ವಿವೇಚನೆಗೆ ಬಿಟ್ಟದ್ದು. ಒಂದೊಮ್ಮೆ ಒತ್ತಡ ಹಾಕಿರುವ ಬಗ್ಗೆ ಕಂಡುಬಂದರೆ ಅಂತಹ ಕಂಪೆನಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದೆ.

Best Mobiles in India

English summary
Everything about new TRAI rules for DTH. New Rules Truth For All DTH. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X