ಆಪಲ್ ಕಂಪೆನಿ ಮೋಸಕ್ಕೆ ಬೆಚ್ಚಿಬಿತ್ತು ಮೊಬೈಲ್ ಜಗತ್ತು!!.ಹೆಸರಾಂತ ಕಂಪೆನಿ ಹೇಗೆಲ್ಲಾ ಮೋಸ ಮಾಡಿದೆ ಗೊತ್ತಾ?

ಆಪಲ್ ಕಂಪೆನಿ ನಮಗೆ ಮೋಸ ಮಾಡಿದೆ ಎಂದು ಅಮೆರಿಕದಲ್ಲಿ ಹಲವು ಗ್ರಾಹಕರು ಆಪಲ್ ಕಂಪೆನಿಯ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದಾರೆ.!

|

ಒಮ್ಮೊಮ್ಮೆ ಹೆಸರಾಂತ ಕಂಪೆನಿಗಳು ಗ್ರಾಹಕರನ್ನು ಹೇಗೆಲ್ಲಾ ಮೋಸಗೊಳಿಸುತ್ತವೆ ಎನ್ನುವುದಕ್ಕೆ ಆಪಲ್ ಕಂಪೆನಿ ಉದಾಹರಣೆಯಾಗಬಹುದು.! ತನ್ನ ಗ್ರಾಹಕರಿಗೆ ಸುಳ್ಳು ಹೇಳಿ ಮೋಸ ಮಾಡಿ ಹಣಗಳಿಸುವ ಕಂಪೆನಿಗಳ ಸಾಲಿಗೆ ಆಪಲ್ ಸೇರಿದೆ ಎನ್ನುವ ಸುದ್ದಿಯೊಂದು ನಿಜವಾಗಿರುವ ಸಂಭವ ಹೆಚ್ಚಾಗಿದೆ.!!

ಹೌದು, ಆಪಲ್ ಕಂಪೆನಿ ನಮಗೆ ಮೋಸ ಮಾಡಿದೆ ಎಂದು ಅಮೆರಿಕದಲ್ಲಿ ಹಲವು ಗ್ರಾಹಕರು ಆಪಲ್ ಕಂಪೆನಿಯ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದಾರೆ.! ಹಳೆಯ ಆಪಲ್ ಐಫೋನ್‌ಗಳು ನಿಧಾನವಾಗಲು ಆಪಲ್‌ ಕಂಪೆನಿಯೇ ಕಾರಣ ಎಂದು ಆರೋಪಿಸಿದ್ದಾರೆ.! ಹಾಗಾದರೆ, ಆಪಲ್ ಮೋಸ ಮಾಡುತ್ತಿದೆಯೇ ಎಂಬುದನ್ನು ಮುಂದೆ ತಿಳಿಯಿರಿ.!!

ಹಳೆಯ ಐಫೋನ್‌ಗಳ ವೇಗ ಕಡಿಮೆ!!

ಹಳೆಯ ಐಫೋನ್‌ಗಳ ವೇಗ ಕಡಿಮೆ!!

ಹೊಸ ಐಫೋನ್ ಮಾರುಕಟ್ಟೆಗೆ ಬಂದಾಗ ಹಳೆಯ ಐಫೋನ್‌ಗಳ ವೇಗ ಕಡಿಮೆಯಾಗುವ ಅನುಭವ ಐಫೋನ್ ಬಳಕೆದಾರರಿಗೆ ಆಗಿದೆ.! ಹೊಸ ಐಫೋನ್ ಖರೀದಿಸಲು ಪ್ರೇರೇಪಣೆ ನೀಡಲು ಆಪಲ್ ಇಂತಹ ಕೆಲಸ ಮಾಡುತ್ತಿದೆ ಎಂದು ಈ ಮೊದಲು ಊಹಿಸಲಾಗಿತ್ತು.! ಆದರೆ, ಈ ಆರೋಪವಲ್ಲದೆ ಮತ್ತೊಂದು ಆರೋಪ ಆಪಲ್‌ ಕಂಪೆನಿ ಮೇಲೆ ಬಂದಿದೆ.!!

ಈ ಬಗ್ಗೆ ಆಪಲ್ ಹೇಳಿದ್ದೇನು?

ಈ ಬಗ್ಗೆ ಆಪಲ್ ಹೇಳಿದ್ದೇನು?

ನೂತನ ಸಾಫ್ಟ್‌ವೇರ್‌ಗೆ ಅಪ್‌ಡೇಟ್ ಆದರೆ ಐಫೋನ್ ಸ್ಲೋ ಆಗುತ್ತದೆ ಎಂದು ಹೇಳಿದ್ದ ಆಪಲ್, ಇದೀಗ ಹಳೆಯ ಐಫೋನ್‌ಗಳ ಬ್ಯಾಟರಿ ತನ್ನ ಶಕ್ತಿ ಕಳೆದುಕೊಂಡಿರುತ್ತದೆ ಆದುದರಿಂದ ಫೋನ್ ನಿಧಾನವಾಗಿ ಕೆಲಸ ಮಾಡುವಂತೆ ಮಾಡುತ್ತಿದ್ದೇವೆ ಎಂದು ಹೇಳಿದೆ.! ಹಾಗಾಗಿ, ಇದು ಎಲ್ಲರ ಸಂಶಯಕ್ಕೆ ಕಾರಣವಾಗಿದೆ.!!

ಮೋಸ ಮಾಡಿದೆ ಎನ್ನಲು ಪ್ರೂಫ್!!

ಮೋಸ ಮಾಡಿದೆ ಎನ್ನಲು ಪ್ರೂಫ್!!

ಬ್ಯಾಟರಿ ತನ್ನ ಶಕ್ತಿ ಕಳೆದುಕೊಂಡಿರುವುದರಿಂದ ಫೋನ್ ನಿಧಾನವಾಗಿ ಕೆಲಸ ಮಾಡುವಂತೆ ಮಾಡುತ್ತಿದ್ದೇವೆ ಎಂದು ಆಪಲ್ ಹೇಳಿತ್ತು. ಆದರೆ, ಕಡಿಮೆ ಬೆಲೆಯಲ್ಲಿ ಬೇರೊಂದು ಬ್ಯಾಟರಿ ಕೊಂಡುಕೊಂಡು ಬದಲಿಸಿದರೆ ಆಗ ಫೋನ್ ಸರಿಯಾಗುವುದಿಲ್ಲ. ನಿಧಾನವಾಗಿಯೇ ಕೆಲಸ ಮಾಡುತ್ತಿರುತ್ತದೆ ಎಂದು ಹೇಳಲಾಗಿದೆ.!!

ತಂತ್ರಾಂಶದಲ್ಲಿಯೇ ಮೋಸ.!!

ತಂತ್ರಾಂಶದಲ್ಲಿಯೇ ಮೋಸ.!!

ಹೊಸ ಐಫೋನ್ ಬಂದಾಗ ಹಳೆಯ ಐಫೋನ್‌ಗಳಲ್ಲಿ ಸದ್ದಿಲ್ಲದೆ ತಂತ್ರಾಂಶ ನವೀಕರಣದ ಹೆಸರಿನಲ್ಲಿ ಒಂದು ಕುತಂತ್ರಾಂಶವನ್ನು ಸೇರಿಸಿ ಹಳೆಯ ಐಫೋನ್‌ಗಳನ್ನು ನಿಧಾನವಾಗಿ ಕೆಲಸ ಮಾಡುವಂತೆ ಮಾಡುತ್ತಿದೆ ಎನ್ನಲಾಗಿದೆ.! ಬ್ಯಾಟರಿ ಬದಲಾಯಿಸುವಾಗ ಈ ಕುತಂತ್ರಾಂಶವನ್ನೂ ತೆಗೆದು ಹಾಕುತ್ತಿದ್ದಾರೆ ಎನ್ನಲಾಗಿದೆ.!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ತಲೆಬಾಗಿದೆ ಆಪಲ್ ಕಂಪೆನಿ!!

ತಲೆಬಾಗಿದೆ ಆಪಲ್ ಕಂಪೆನಿ!!

ಸತ್ಯ ಆಚೆಗೆ ಬಂದ ನಂತರ ಕೊನೆಗೂ ಆಪಲ್ ಗ್ರಾಹಕರಿಗೆ ತಲೆಬಾಗಿದೆ.! ತನ್ನ ಬ್ಯಾಟರಿ ಬೆಲೆಯನ್ನು 79 ಡಾಲರಿನಿಂದ 29 ಡಾಲರಿಗೆ ಇಳಿಸಿ ತನ್ನ ತಂತ್ರಾಂಶದಲ್ಲೂ ಬದಲಾವಣೆ ಮಾಡಿ ಗ್ರಾಹಕರಿಗೆ ತಮ್ಮ ಬ್ಯಾಟರಿಯ ಆರೋಗ್ಯವನ್ನು ತೋರಿಸುವ ವ್ಯವಸ್ಥೆ ಮಾಡಿದೆ. ಆದರೆ, ಆಪಲ್‌ಗೆ ಶಿಕ್ಷೆಯಾಗುತ್ತದೆಯೇ? ಕಾದು ನೋಡಬೇಕು.!!

2018ರಲ್ಲಿ ಜಿಯೋ ಮಣಿಸಲಿದೆ ಏರ್‌ಟೆಲ್!!..3G/4G ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ಸ್!!2018ರಲ್ಲಿ ಜಿಯೋ ಮಣಿಸಲಿದೆ ಏರ್‌ಟೆಲ್!!..3G/4G ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ಸ್!!

Best Mobiles in India

English summary
Apple recently acknowledged that it slows the performance of some iPhones because their older batteries are unable to properly power devices raises a lot of questions for iPhone owners. to know more visit tp kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X