Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಒಳಗೊಂಡಿರುವ ಈ ಅಂಶಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ಅನೇಕ ಅಂಶಗಳು ಪ್ರಮುಖವಾಗುತ್ತವೆ. ಇದರಲ್ಲಿ ಡಿಸ್‌ಪ್ಲೇಯಲ್ಲಿನ ಅಂಶಗಳು ಕೂಡ ಮುಖ್ಯವಾಗುತ್ತದೆ. ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ಮಾದರಿಯ ಡಿಸ್‌ಪ್ಲೇ ವಿಶೇಷತೆಗಳನ್ನು ಹೊಂದಿವೆ. ಇದೇ ಕಾರಣಕ್ಕೆ ಗ್ರಾಹಕರು ವಿವಿಧ ಮಾದರಿಯ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳತ್ತ ಸುಲಭವಾಗಿ ಆಕರ್ಷಿತರಾಗುತ್ತಿದ್ದಾರೆ. ಡಿಸ್‌ಪ್ಲೇ ಉತ್ತಮವಾಗಿದ್ದರೆ ನೀವು ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೋ ವೀಕ್ಷಣೆಯ ಅನುಭವ ಉತ್ತಮವಾಗಿರಲಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯಲ್ಲಿ ಹಲವು ಅಂಶಗಳು ಗಮನಸೆಳೆಯುತ್ತವೆ. ಇದರಲ್ಲಿ ಡಿಸ್‌ಪ್ಲೇ PPI, ರಿಫ್ರೆಶ್ ರೇಟ್‌ ಮತ್ತು ಅಮೋಲೆಡ್‌ ಸ್ಕ್ರೀನ್‌, ಟಚ್‌ ಸ್ಯಾಂಪ್ಲಿಂಗ್‌ ರೇಟ್‌, ಸ್ಕ್ರೀನ್‌ ರಿಫ್ರೆಶ್‌ ರೇಟ್‌ ನಂತಹ ವಿಷಯಗಳು ಪ್ರಮುಖವಾಗಿವೆ. ಆದರೆ ಕೆಲವರಿಗೆ ಡಿಸ್‌ಪ್ಲೇಯಲ್ಲಿ ಪಿಪಿಐ, ರಿಪ್ರೆಶ್‌ ರೇಟ್‌, ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಎಂದರೇನು ಅನ್ನೊದು ತಿಳಿದೆ ಇಲ್ಲ. ಹಾಗಾದ್ರೆ ಡಿಸ್‌ಪ್ಲೇಯಲ್ಲಿರುವ ಪ್ರಮುಖ ವಿಷಯಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

PPI ಎಂದರೇನು?

PPI ಎಂದರೇನು?

ಪಿಪಿಐ ಎಂದರೆ ಪಿಕ್ಸೆಲ್‌ ಪರ್ ಇಂಚ್ ಎಂದರ್ಥ. ಇದನ್ನು ಮೊಬೈಲ್ ಡಿಸ್‌ಪ್ಲೇಯಲ್ಲಿ ಪಿಕ್ಸೆಲ್‌ಗಳನ್ನು ಅಳೆಯಲು ಬಳಸಲಾಗುತ್ತದೆ. ಡಿಸ್‌ಪ್ಲೇಯಲ್ಲಿನ ವರ್ಥ್‌ ಪಾಯಿಂಟಿಂಗ್‌ ಅನ್ನು ಪಡೆದರೆ ಪ್ರತಿ ಪಿಕ್ಸೆಲ್ ಅನ್ನು ಚೌಕವಾಗಿ ನೋಡಲಾಗುತ್ತದೆ. ಅಂದರೆ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ 300 PPI ಹೊಂದಿದ್ದರೆ, ಪ್ರತಿ ಇಂಚಿಗೆ 300 ಡಾಟ್‌ಗಳಿವೆ ಎಂದರ್ಥ. ಡಿಸ್‌ಪ್ಲೇಯಲ್ಲಿ ಪಿಪಿಐ ಇಮೇಜ್‌ಗಳು ಮತ್ತು ಕಂಟೆಂಟ್‌ ಅನ್ನು ವೀಕ್ಷಣೆ ಮಾಡುವವರಿಗೆ ತೀಕ್ಷ್ಣವಾಗಿ ಕಾಣಿಸಲು ಅನುವು ಮಾಡಿಕೊಡುತ್ತದೆ.

ಟಚ್ ಸ್ಯಾಂಪ್ಲಿಂಗ್ ರೇಟ್‌ ಎಂದರೇನು?

ಟಚ್ ಸ್ಯಾಂಪ್ಲಿಂಗ್ ರೇಟ್‌ ಎಂದರೇನು?

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಟಚ್‌ ಸ್ಯಾಪ್ಲಿಂಗ್‌ ರೇಟ್‌ ಸಾಕಷ್ಟು ಜನಪ್ರಿಯತೆ ಪಡೆದಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಟಚ್ ಸ್ಯಾಂಪ್ಲಿಂಗ್ ರೇಟ್‌ ವಿಚಾರ ಪ್ರಮುಖವಾಗಲಿದೆ. ಟಚ್ ಸ್ಯಾಂಪ್ಲಿಂಗ್ ರೇಟ್‌ ಎಂದರೆ ಸೆಕೆಂಡಿನಲ್ಲಿ ನಿಮ್ಮ ಟಚ್ ಇನ್‌ಪುಟ್ ಅನ್ನು ಸ್ಕ್ರೀನ್‌ನಲ್ಲಿ ಎಷ್ಟು ಬಾರಿ ನೋಂದಾಯಿಸಬಹುದು ಅನ್ನೊದನ್ನ ಸೂಚಿಸುತ್ತದೆ. ಇದನ್ನು ವಿಶೇಷವಾಗಿ Hzನಲ್ಲಿ ಅಳೆಯಲಾಗುತ್ತದೆ. ಪ್ರತಿ ಬಾರಿ ನೀವು ಡಿಸ್‌ಪ್ಲೇಯನ್ನು ಟಚ್‌ ಮಾಡಿದಾಗ ಮತ್ತು ಮುಂದಿನ ಫ್ರೇಮ್ ಅನ್ನು ರೆಂಡರ್‌ ಮಾಡಲು ಡಿಸ್ಪ್ಲೇ ತೆಗೆದುಕೊಳ್ಳುವ ಸಮಯವನ್ನು ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಎಂದು ಹೇಳಬಹುದಾಗಿದೆ. ಪ್ರಸ್ತುತ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ 180 Hz ಅಥವಾ 240 Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಕಾಣಬಹುದು. ಅಂದರೆ ಡಿಸ್‌ಪ್ಲೇ ಪ್ರತಿ 180 ಅಥವಾ 240 ಸೆಕೆಂಡ್‌ಗಳಿಗೆ ಟಚ್‌ ಇನ್‌ಪುಟ್‌ಗಾಗಿ ಸರ್ಚ್‌ ಮಾಡಲಿದೆ.

ಸ್ಕ್ರೀನ್ ರಿಫ್ರೆಶ್ ರೇಟ್ ಎಂದರೇನು?

ಸ್ಕ್ರೀನ್ ರಿಫ್ರೆಶ್ ರೇಟ್ ಎಂದರೇನು?

ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯಲ್ಲಿ ಪ್ರಮುಖವಾದ ಮತ್ತೊಂದು ಅಂಶ ಎಂದರೆ ಸ್ಕ್ರೀನ್ ರಿಫ್ರೆಶ್ ರೇಟ್‌ ಆಗಿದೆ. ಸ್ಕ್ರೀನ್ ರಿಫ್ರೆಶ್ ರೇಟ್‌ ಡಿಸ್‌ಪ್ಲೇ ಪ್ರತಿ ಸೆಕೆಂಡಿಗೆ ಎಷ್ಟು ಬಾರಿ ರಿಫ್ರೆಶ್ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ನೀವು ಅಪ್ಲಿಕೇಶನ್‌ಗಳ ಮೂಲಕ ಸ್ಕ್ರಾಲ್ ಮಾಡುವಾಗ ಇದು ಪ್ರಮುಖವಾಗಲಿದೆ. ಇದರಿಂದ ಸ್ಮಾರ್ಟ್‌ಫೋನ್‌ನಲ್ಲಿ ನಿಯಮಿತ ನ್ಯಾವಿಗೇಷನ್ ಕೂಡ ಸುಗಮವಾಗುತ್ತದೆ.

TFT ಪ್ಯಾನೆಲ್

TFT ಪ್ಯಾನೆಲ್

ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯಲ್ಲಿ ಟಿಎಫ್‌ಟಿ ಪ್ಯಾನಲ್‌ ಕೂಡ ಪ್ರಮುಖವಾಗಿದೆ. ಟಿಎಫ್‌ಟಿ ಎಂದರೆ ಥಿನ್ ಫಿಲ್ಮ್ ಟ್ರಾನ್ಸಿಸ್ಟರ್ ಪ್ಯಾನೆಲ್ ಎಂದರ್ಥ. ಈ ತಂತ್ರಜ್ಞಾನವು ಉತ್ತಮ ಚಿತ್ರದ ಗುಣಮಟ್ಟವನ್ನು ನೀಡುತ್ತದೆ ಮತ್ತು ಹೆಚ್ಚಿನ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ.

IPS ಡಿಸ್‌ಪ್ಲೇ

IPS ಡಿಸ್‌ಪ್ಲೇ

ಐಪಿಎಸ್‌ ಡಿಸ್‌ಪ್ಲೇ ಎಂದರೆ ಇನ್-ಪ್ಲೇಸ್ ಸ್ವಿಚಿಂಗ್ ಡಿಸ್‌ಪ್ಲೇ ಎಂದರ್ಥ. ಇದು ಸ್ಮಾರ್ಟ್‌ಫೋನ್‌ನ ಬ್ಯಾಟರಿ ಅವಧಿಯನ್ನು ಸ್ವಯಂಚಾಲಿತವಾಗಿ ಸುಧಾರಿಸುವ ಕಡಿಮೆ ವಿದ್ಯುತ್ ಬಳಕೆಯ ಮೇಲೆ ಕೇಂದ್ರೀಕರಿಸುತ್ತದೆ. ಇವುಗಳು TFT ಡಿಸ್‌ಪ್ಲೇ ಗಿಂತ ಹೆಚ್ಚು ದುಬಾರಿಯಾಗಿದೆ.

ಅಮೋಲೆಡ್‌ ಡಿಸ್‌ಪ್ಲೇ

ಅಮೋಲೆಡ್‌ ಡಿಸ್‌ಪ್ಲೇ

ಅಮೋಲೆಡ್‌ ಎಂದರೆ ಆಕ್ಟಿವ್‌-ಮ್ಯಾಟ್ರಿಕ್ಸ್ ಆರ್ಗ್ಯಾನಿಕ್ ಲೈಟ್-ಎಮಿಟಿಂಗ್ ಡಯೋಡ್ ಎಂದರ್ಥ. ಇದು ಸ್ಕ್ರೀನ್‌ನ ಉನ್ನತ ದರ್ಜೆಯ ಕಲರ್ ಪ್ರೊಡಕ್ಷನ್‌ಗೆ ಹೆಸರುವಾಸಿಯಾಗಿದೆ. ಇದು ಫೋನ್ ತಯಾರಕರು ಹಗುರವಾದ ಡಿವೈಸ್‌ಗಳನ್ನು ವಿನ್ಯಾಸಗೊಳಿಸಲು ಅನುಮತಿಸುತ್ತದೆ.

ಹೆಚ್‌ಡಿ ಡಿಸ್‌ಪ್ಲೇ

ಹೆಚ್‌ಡಿ ಡಿಸ್‌ಪ್ಲೇ

ಹೆಚ್‌ಡಿ ಡಿಸ್‌ಪ್ಲೇ ಎಂದರೆ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಅತ್ಯಂತ ಪ್ರಮಾಣಿತ ರೆಸಲ್ಯೂಶನ್ HD ಅಥವಾ ಹೈ ಡೆಫಿನಿಷನ್ ಎಂದರ್ಥ. ಈ ರೆಸಲ್ಯೂಶನ್ ಹೊಂದಿರುವ ಸ್ಕ್ರೀನ್‌ 1280×720 ಪಿಕ್ಸೆಲ್‌ಗಳ ಗುಣಮಟ್ಟವನ್ನು ಉತ್ಪಾದಿಸುತ್ತದೆ. ಇದರಿಂದ ನಿಮ್ಮ ವೀಡಿಯೋ ವೀಕ್ಷಣೆ ಉತ್ತಮವಾಗಿರಲಿದೆ.

ಫುಲ್‌ ಹೆಚ್‌ಡಿ ಡಿಸ್‌ಪ್ಲೇ

ಫುಲ್‌ ಹೆಚ್‌ಡಿ ಡಿಸ್‌ಪ್ಲೇ

ಫುಲ್‌ HD ರೆಸಲ್ಯೂಶನ್ ಹೊಂದಿರುವ ಡಿಸ್‌ಪ್ಲೇ ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರಲಿದೆ. ಸ್ಮಾರ್ಟ್‌ಫೋನ್‌ ಕಂಪೆನಿಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಡಿಸ್‌ಪ್ಲೇ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಇದನ್ನು ಪರಿಚಯಿಸಿದೆ. ಫುಲ್‌ಹೆಚ್‌ಡಿ ಡಿಸಸ್‌ಪ್ಲೇ ಸಾಮಾನ್ಯವಾಗಿ 1920×1080 ಪಿಕ್ಸೆಲ್‌ಗಳ ಗುಣಮಟ್ಟ ಹೊಂದಿರುತ್ತದೆ.

2K ಅಥವಾ ಕ್ವಾಡ್ HD

2K ಅಥವಾ ಕ್ವಾಡ್ HD

ಮುಂದಿನ ದಿನಗಳಲ್ಲಿ 2K ಅಥವಾ ಕ್ವಾಡ್ HD ರೆಸಲ್ಯೂಶನ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದು. ಈಗಾಗಲೇ ಸ್ಯಾಮ್‌ಸಂಗ್‌, ಒನ್‌ಪ್ಲಸ್‌ ಮತ್ತು ಶಿಯೋಮಿ ಡಿವೈಸ್‌ಗಳು ತಂತ್ರಜ್ಞಾನವನ್ನು ಕ್ವಾಡ್ HD ಅಳವಡಿಸಿಕೊಂಡಿವೆ. ಈ ರೆಸಲ್ಯೂಶನ್ ಹೊಂದಿರುವ ಡಿಸ್‌ಪ್ಲೇ 2560×1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಗುಣಮಟ್ಟದೊಂದಿಗೆ ಬರುತ್ತವೆ.

ಆಸ್ಪೆಕ್ಟ್ ರೇಶಿಯೋ ಎಂದರೇನು?

ಆಸ್ಪೆಕ್ಟ್ ರೇಶಿಯೋ ಎಂದರೇನು?

ಡಿಸ್‌ಪ್ಲೇ ಸಂಬಂಧಿಸಿದಂತೆ ರಚನೆಯ ಅನುಪಾತದ ಬಗ್ಗೆ ಎಲ್ಲರಿಗೂ ತಿಳದೆ ಇರುತ್ತದೆ. ಆಸ್ಪೆಕ್ಟ್‌ ರೇಶಿಯೋ ಎಂದರೆ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಅಗಲ ಮತ್ತು ಎತ್ತರವಾಗಿದೆ. ಸ್ಮಾರ್ಟ್‌ಫೋನ್‌ಗಳ ಸಾಮಾನ್ಯ ರಚನೆಯ ಅನುಪಾತ 18:9 ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ಟ್ರೆಂಡ್‌ಗಳಿಂದಾಗಿ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಗಳು 19:9 ಮತ್ತು 20:9 ರಚನೆಯ ಅನುಪಾತವನ್ನು ಪಡೆದುಕೊಳ್ಳುತ್ತಿವೆ.

HDR ಎಂದರೇನು?

HDR ಎಂದರೇನು?

HDR ಎಂದರೆ ಹೈ ಡೈನಾಮಿಕ್ ರೇಂಜ್ ಎಂದರ್ಥ. HDR ಅನ್ನು ಬೆಂಬಲಿಸುವ ಯಾವುದೇ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಸಾಮಾನ್ಯ ಡಿಸ್‌ಪ್ಲೇ ಸ್ಕ್ರೀನ್‌ಗಿಂತ ಹೆಚ್ಚಿನ ಕಾಂಟ್ರಾಸ್ಟ್ ಮಟ್ಟವನ್ನು ನೀಡುತ್ತದೆ. ಇದರಿಂದ ಚಲನಚಿತ್ರಗಳು ಅಥವಾ ಯಾವುದೇ HDR-ಕಾಂಪ್ಲೈಂಟ್ ವಿಷಯವನ್ನು ವೀಕ್ಷಿಸುವಾಗ ಡಿಸ್‌ಪ್ಲೇಯಲ್ಲಿ ಹೆಚ್ಚಿನ ಬಣ್ಣಗಳನ್ನು ಪಡೆಯಬಹುದಾಗಿದೆ. ಯೂಟ್ಯೂಬ್‌, ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ವೀಡಿಯೊಗಳಂತಹ ಪ್ಲಾಟ್‌ಫಾರ್ಮ್‌ಗಳು HDR ನಲ್ಲಿ ತಮ್ಮ ಕಂಟೆಂಟ್‌ ಅನ್ನು ನೀಡಲು ಪ್ರಾರಂಭಿಸಿವೆ. ಇವುಗಳನ್ನು ವೀಕ್ಷಿಸಲು HDR ಬೆಂಬಲಿಸುವ ಡಿಸ್‌ಪ್ಲೇ ಒಳಗೊಂಡ ಸ್ಮಾರ್ಟ್‌ಫೋನ್‌ಗಳು ಸೂಕ್ತವಾಗಿರಲಿವೆ.

Best Mobiles in India

English summary
Everything you need to know about smartphone display technology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+