ಇವಿಂಎ ಕಂಪೆನಿಯಿಂದ ಮೂರು ಹೊಸ ಪವರ್‌ಬ್ಯಾಂಕ್ ಲಾಂಚ್!
ಪ್ರಸ್ತುತ ಜಗತ್ತಿನಲ್ಲಿ ಎಲ್ಲರೂ ಕೂಡ ಸ್ಮಾಟ್‌ಫೋನ್‌ಗಳನ್ನ ಬಳಕೆ ಮಾಡುತ್ತಿದ್ದಾರೆ. ಹೊಸ ಬಗೆಯ ಸ್ಮಾರ್ಟ್‌ಫೋನ್‌ಗಳ ಭರಾಟೆ ಹೆಚ್ಚಾದಷ್ಟು ಸ್ಮಾರ್ಟ್‌ಫೋನ್‌ಗಳ ಪವರ್ ದಾಹವನ್ನ ತಿರಿಸೋಕೆ ಮಾರುಕಟ್ಟೆಗ ಪವರ್‌ಬ್ಯಾಂಕ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಈಗಾಗ್ಲೆ ಹಲವಾರು ಜನಪ್ರೀಯ ಕಂಪೆನಿಗಳು ಪವರ್‌ಬ್ಯಾಂಕ್‌ಗಳನ್ನ ಹೊರತಂದಿವೆ. ಇದೀಗ ಜನಪ್ರಿಯ ಪವರ್‌ಬ್ಯಾಂಕ್‌ಗಳ ತಯಾರಕ ಕಂಪೆನಿ ಇವಿಎಂ ತನ್ನ ಹೊಸ ಆವೃತ್ತಿಯ ಮೂರು ಮಾದರಿಯ ಪವರ್‌ಬ್ಯಾಂಕ್‌ಗಳನ್ನ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೌದು, ಇವಿಎಂ ಕಂಪೆನಿ ಹೊಸ ಮಾದರಿಯ ಮೂರು ವಿದ್ಯುತ್ ಬ್ಯಾಂಕುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು. ಇವುಗಳನ್ನ ಕ್ರಮವಾಗಿ EnAble +, EnAble ಮತ್ತು EnCore ಎಂಧು ಹೆಸರಿಸಲಾಗಿದೆ. ಈ ಪವರ್ ಬ್ಯಾಂಕ್‌ಗಳು 5,000mAh ಮತ್ತು 10,000mAh ಬ್ಯಾಟರಿ ಸಾಮರ್ಥ್ಯವನ್ನ ಹೊಂದಿದ್ದು. ಪೋರ್ಟಬಲ್ ಚಾರ್ಜರ್ ಮಾದರಿಯನ್ನ ಹೊಂದಿವೆ. ಹಾಗಾದ್ರೆ ಇವಿಎಂ ಹೊರ ತಂದಿರುವ ಈ ಪವರ್‌ಬ್ಯಾಂಕ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಇವಿಎಂ ಪವರ್ ಬ್ಯಾಂಕ್ ಮಾಡಲ್ 1 ಮತ್ತು ಮಾಡಲ್ 2
EnAble + ಮತ್ತು EnAble ಪವರ್ ಬ್ಯಾಂಕುಗಳು ಡ್ಯುಯಲ್ ಯುಎಸ್‌ಬಿ-ಎ ಪೋರ್ಟ್‌ಗಳನ್ನು ಒಳಗೊಂಡಿದ್ದು, ಏಕಕಾಲದಲ್ಲಿ ಎರಡು ಸಾಧನಗಳನ್ನು ಚಾರ್ಜ್ ಮಾಡಲು ಅವಕಾಶ ನೀಡಿದೆ. ಇನ್ನು ಈ ಎರಡು ಪವರ್ ಬ್ಯಾಂಕುಗಳು 10,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 5.V-2.4A ಪವರ್ ಔಟ್‌ಪುಟ್ ಅನನ್ ನೀಡುತ್ತವೆ. ಯುಎಸ್‌ಬಿ ಟೈಪ್-ಸಿ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್‌ಗಳನ್ನ ಒಳಗೊಂಡಿವೆ. ಅಲ್ಲದೆ ಮುಂಭಾಗದಲ್ಲಿ ನಾಲ್ಕು ಎಲ್ಇಡಿ ಇಂಡಿಕೇಟರ್ ಇದ್ದು ಇದರ ಮೂಲಕ ಚಾರ್ಜಿಂಗ್ ಮಟ್ಟವನ್ನು ತಿಳಿಯಬಹುದಾಗಿದೆ.

ಇವಿಎಂ ಎನ್‌ಕೋರ್ ಪವರ್ ಬ್ಯಾಂಕ್
ಇವಿಎಂ ಎನ್‌ಕೋರ್ 5,000mAh ಪವರ್ ಬ್ಯಾಂಕ್ ಯುಎಸ್‌ಬಿ ಟೈಪ್-ಸಿ ಮತ್ತು ಮೈಕ್ರೋ-ಯುಎಸ್‌ಬಿ ಎರಡು ರೀತಿಯ ಇನ್ಪುಟ್ ಪೋರ್ಟ್‌ಗಳನ್ನು ಒಳಗೊಂಡಿದ್ದು, ಒಂದು ಯುಎಸ್‌ಬಿ-ಎ output ಪೋರ್ಟ್ ಅನ್ನು ಒಳಗೊಂಡಿದೆ. ಪ್ರತಿ ಪೋರ್ಟ್ 5.V-2.0A ಇನ್ಪುಟ್ ಸಾಮರ್ಥ್ಯವನ್ನು ಬೆಂಬಲಿಸಲಿದ್ದು, 5V-2.4Aಪವರ್ ಔಟ್‌ಪುಟ್ ನೀಡಲಿದೆ. ಇನ್ನು ಏಕಕಾಲದಲ್ಲಿ ಸಾಧನವನ್ನು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು ಇವಿಎಂ ಕಂಪೆನಿಯ ಈ ಪವರ್ ಬ್ಯಾಂಕುಗಳು ಶಾರ್ಟ್ ಸರ್ಕ್ಯೂಟ್, ಕರೆಂಟ್ ವೋಲ್ಟೇಜ್ ಓವರ್‌ಲೋಡ್‌ನಿಂದ ರಕ್ಷಣೆಯನ್ನು ಹೊಂದಿದೆ. ಅಲ್ಲದೆ ಚಾರ್ಜಿಂಗ್ ಆಘುವಾಗ ಯಾವುದೇ ರೀತಿಯಲ್ಲೂ ಬಿಸಿಯಾದ ಅನುಭವ ಇದರಲ್ಲಿ ಕಿಂಡುಬರುವುದಿಲ್ಲ, ಅಲ್ಲದೆ ಈ ಪವರ್ ಬ್ಯಾಂಕ್ಗಳ ಮೇಲೈ ನಯವಾದ ಎಬಿಎಸ್ ಪ್ಲಾಸ್ಟಿಕ್ನಿಂದ ವಿನ್ಯಾಸಮಾಡಿರುವುದರಿಂದ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ಸದ್ಯ ಇವಿಎಂ ಪವರ್ ಲಾಂಚ್ ಮಾಡಿರುವ ಹೊಸ ಪವರ್ ಬ್ಯಾಂಕ್‌ಗಳು ಎರಡು ವರ್ಷದ ವಾರೆಂಟಿಯನ್ನ ಹೊಂದಿದ್ದು, ಅಮೆಜಾನ್ ಇಂಡಿಯಾ ಮತ್ತು ಸ್ನ್ಯಾಪ್‌ಡೀಲ್ ಮಳೆಗೆಳಲ್ಲಿ ಮಾರಾಟವಾಗುತ್ತಿವೆ. ಇನ್ನು EVM EnAble+ ಪವರ್‌ಬ್ಯಾಂಕ್ ಬೆಲೆ 2,400 ರೂ ಆಗಿದ್ದರೆ, EnAble ಪವರ್ ಬ್ಯಾಂಕ್‌ನ ಬೆಲೆ 2,299 ಆಗಿದ್ದು , EnCore ಪವರ್ ಬ್ಯಾಂಕ್ 1,499 ರೂಗಳಿಗೆ ಲಭ್ಯವಿದೆ.


Click it and Unblock the Notifications








