ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ 1 ಕೋಟಿ ಹಣ ಕಳೆದುಕೊಂಡ ಮಾಜಿ ಸೈನಿಕ!
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳ ಪ್ರಕರಣ ಹೆಚ್ಚುತ್ತಲೇ ಇದೆ. ಆದರೆ ಈ ಪ್ರಕರಣದಲ್ಲಿ ಮಾಜಿ ಸೈನಿಕನಿಗೆ ಆನ್‌ಲೈನ್ ವಂಚಕರು ಒಂದು ಕೋಟಿ ರೂ ವಂಚಿಸಿದ್ದಾರೆ. ಪುಣೆಯಲ್ಲಿರುವ 64 ವರ್ಷದ ಮಾಜಿ ಸೈನಿಕರೊಬ್ಬರಿಗೆ ಸ್ಕ್ಯಾಮರ್‌ಗಳು ಆನ್‌ಲೈನ್ ಕೆಲಸ ನೀಡುವ ನೆಪದಲ್ಲಿ ವಂಚಿಸಿದ್ದಾರೆ.
ಹೌದು, ಪುಣೆಯಲ್ಲಿರುವ ಮಾಜಿ ಸೈನಿಕರೊಬ್ಬರಿಗೆ ವಂಚಕರು ಒಂದು ಕೋಟಿ ಹಣವನ್ನು ವಂಚಿಸಿರುವ ಘಟನೆ ನಡೆದಿದೆ. ಆನ್‌ಲೈನ್ ಹೆಚ್ಚುವರಿ ಹಣಗಳಿಸುವುದಕ್ಕೆ ಮುಂದಾಗಿದ್ದ ಮಾಜಿ ಸೈನಿಕ ಇದೀಗ ಹಣ ಕಳೆದುಕೊಂಡಿದ್ದಾರೆ. ಹಾಗಾದ್ರೆ ಸ್ಕ್ಯಾಮರ್‌ಗಳು ಮಾಜಿ ಸೈನಿಕನಿಗೆ ವಂಚಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಕೆಲಸ ಮಾಡಿ ಹಣಗಳಿಸಿ ಎಂಬ ಆನ್‌ಲೈನ್ ಸಂದೇಶಗಳಿಗೆ ಮಾರು ಹೋಗಿ ಎಷ್ಟೋ ಮಂದಿ ಹಣ ಕಳೆದುಕೊಂಡಿದ್ದಾರೆ. ವಂಚಕರ ಈ ಸುಲಭ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡುವರು ಇಂದಿಗೂ ಪರಿತಪಿಸುತ್ತಿದ್ದಾರೆ. ಇದೀಗ ಅಂತಹದ್ದೇ ಮಾದರಿಯ ವಂಚನೆಯ ಜಾಲಕ್ಕೆ ಪುಣೆಯಲ್ಲಿರುವ ಮಾಜಿ ಸೈನಿಕ ಕೂಡ ಬಲಿಯಾಗಿದ್ದಾನೆ. ಅಷ್ಟೇ ಅಲ್ಲ ತನ್ನ ಎಲ್ಲಾ ಉಳಿತಾಯ ಹಾಗೂ ನಿವೃತ್ತಿ ನಂತರ ಬಂದ ಹಣ ಎಲ್ಲವನ್ನು ಕಳೆದುಕೊಂಡಿದ್ದಾರೆ. ಅಂದರೆ ಒಂದು ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಫೆಬ್ರವರಿ 13 ಮತ್ತು 26 ರ ನಡುವೆ ಈ ವಂಚನೆಯ ಪ್ರಕರಣ ನಡೆದಿದೆ. ವಂಚಕರು ಆನ್‌ಲೈನ್‌ನಲ್ಲಿ ವೀಡಿಯೋ ಶೇರ್ ಮಾಡಿದರೆ ಹಣ ಗಳಿಸುವ ಅವಕಾಶವಿದೆ ಎಂದು ಸಂತ್ರಸ್ಥನನ್ನು ವಂಚಿಸಿದ್ದಾರೆ. ವಂಚಕರ ದಾಳಕ್ಕೆ ಸಿಲುಕಿದ ಸಂತ್ರಸ್ಥ ಪ್ರಾರಂಭದಲ್ಲಿ ವೀಡಿಯೋ ಶೇರ್ ಮಾಡಿ ಹಣವನ್ನು ಕೂಡ ಗಳಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಪ್ರೀಪೇಯ್ಡ್ ಟಾಸ್ಕ್‌ಗಾಗಿ 1,000ರೂ ಪಾವತಿಸುವಂತೆ ಕೇಳಲಾಗಿದೆ. ಹೀಗೆ ಹಂತ ಹಂತವಾಗಿ ಹೆಚ್ಚಿನ ಆದಾಯದ ಆಸೆ ನೀಡುವ ಮೂಲಕ ಅವರ ಹಣವನ್ನು ವಂಚಿಸಿದ್ದಾರೆ.

ಪ್ರಾರಂಭದಲ್ಲಿ ಸಿಕ್ಕಿದ ಲಾಭವನ್ನು ನಂಬಿದ ಸಂತ್ರಸ್ಥ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಹೆಚ್ಚಿನ ಹಣವನ್ನು ಠೇವಣಿ ಇಟ್ಟಿದ್ದಾರೆ. ಆದರೆ ವಂಚಕರು ಕ್ಷಣಾರ್ಧದಲ್ಲಿ ಹಣವನ್ನು ಎಗರಿಸಿದ್ದಾರೆ. ಅದರಂತೆ 60 ಲಕ್ಷ ರೂಪಾಯಿ ಮೌಲ್ಯದ ಉಳಿತಾಯ ಮತ್ತು ಪೆನ್ಯನ್ ಹಣವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ತಮ್ಮ ಮಗನಿಂದ ಸಾಲಪಡೆದಿದ್ದ 40 ಲಕ್ಷ ರೂಪಾಯಿಗಳನ್ನು ಕೂಡ ಕಳೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ, ಸಂತ್ರಸ್ತ ಠೇವಣಿ ಮಾಡಿದ ಹಣವು ಐದು ಬ್ಯಾಂಕ್‌ಗಳ 12 ಖಾತೆಗಳಿಗೆ ಹೋಗಿದೆ.
ಇದಿಷ್ಟೇ ಅಲ್ಲ ಇತ್ತಿಚಿಗೆ ಮುಂಬೈನಲ್ಲಿ ಹಿರಿಯ ನಾಗರಿಕರೊಬ್ಬರು ಆನ್‌ಲೈನ್‌ನಲ್ಲಿ ಟವೆಲ್ ಖರೀದಿಸುವಾಗ 8.30 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಪಿಟಿಐ ನೀಡಿರುವ ವರದಿಯ ಪ್ರಕಾರ, ಮೀರಾ ರೋಡ್‌ನ 70 ವರ್ಷದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಇ-ಕಾಮರ್ಸ್ ಸೈಟ್‌ನಿಂದ ಆರು ಟವೆಲ್‌ಗಳನ್ನು 1,160 ರೂ. ಬೆಲೆಗೆ ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿದ ಟವೆಲ್‌ಗಳಿಗೆ ಆನ್‌ಲೈನ್ ಪಾವತಿ ಮಾಡುವಾಗ ಆಕೆ 1,169 ರೂ. ಬದಲಿಗೆ 19,005 ರೂ. ವಹಿವಾಟು ನಡೆಸಿದ್ದಾರೆ.

ತಪ್ಪು ವಹಿವಾಟು ನಡೆಸಿರುವುದರಿಂದ ಅವರು ರಿಪೋರ್ಟ್ ಮಾಡಿದ್ದಾರೆ. ನಂತರ ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಅಪರಿಚಿತ ವ್ಯಕ್ತಿಗಳು ಅವರಿಗೆ ನಾವು ಬ್ಯಾಂಕ್ ಸಿಬ್ಬಂದಿಯಾಗಿದ್ದು, ನಿಮಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಅವರ ಮಾತನ್ನು ನಂಬಿದ ಮಹಿಳೆ ಅವರು ಹೇಳಿದಂತೆ ಕೇಳಿದ್ದಾರೆ. ಆನ್‌ಲೈನ್ ವಹಿವಾಟಿನ ವಿವರವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications








