Home
ಸುದ್ದಿಜಾಲ

Excitel: ಎಕ್ಸಿಟೆಲ್‌ನಿಂದ ಹೊಸ ಪ್ಲಾನ್‌ ಲಾಂಚ್‌: ಸಿಂಗಲ್‌ ಪ್ಯಾಕ್‌ನಲ್ಲಿ 17 OTT ಪ್ರಯೋಜನ!

ಇತ್ತೀಚಿಗೆ ಭಾರತದಲ್ಲಿ ಇಂಟರ್‌ನೆಟ್‌ ಸೇವಾ ಪೂರೈಕೆದಾರರ ಕಂಪೆನಿಗಳು ಸಾಕಷ್ಟು ಸದ್ದು ಮಾಡುತ್ತಿವೆ. ಇದರಲ್ಲಿ ಸಾಕಷ್ಟು ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಎಕ್ಸಿಟೆಲ್‌ ಕಂಪೆನಿ ಸಾಕಷ್ಟು ಸಂಚಲನ ಮೂಡಿಸುತ್ತಿದೆ. ತನ್ನ ವಿಭಿನ್ನ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ಮೂಲಕ ಗ್ರಾಹಕರ ಗಮನಸೆಳೆದಿದೆ. ಇದೀಗ ದಕ್ಷಿಣ ಭಾರತದ ಗ್ರಾಹಕರಿಗಾಗಿ ಹೊಸ ಪ್ಲಾನ್‌ ಪರಿಚಯಿಸಿದೆ.

ಹೌದು, ಎಕ್ಸಿಟೆಲ್‌ ಕಂಪೆನಿ ದಕ್ಷಿಣ ಭಾರತದ ಗ್ರಾಹಕರಿಗಾಗಿ 'ಸದರ್ನ್ OTT ಪ್ಯಾಕ್' (Excitel Southern OTT Pack) ಅನ್ನು ಪರಿಚಯಿಸಿದೆ. ವೇಗದ ಬ್ರಾಡ್‌ಬ್ಯಾಂಡ್‌ ಕನೆಕ್ಟಿವಿಟಿಯೊಂದಿಗೆ ಗ್ರಾಹಕರ ಮನರಂಜನೆಯ ಆಸಕ್ತಿಯನ್ನು ತಣಿಸುವುದಕ್ಕಾಗಿ ಈ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ ನೀವು 17 ಪ್ರೀಮಿಯಂ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ 400 Mbps ವೇಗದ ಇಂಟರ್‌ನೆಟ್‌ ಪ್ರಯೋಜನವನ್ನು ನೀಡಲಿದೆ. ಹಾಗಾದ್ರೆ ಈ ಪ್ಲಾನ್‌ ಬೆಲೆ ಎಷ್ಟಿದೆ? ಮಾಸಿಕ ಪ್ಲಾನ್‌ ಲಭ್ಯವಿದೆಯಾ? ಇದೆಲ್ಲದರ ಡಿಟೇಲ್ಸ್‌ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಕ್ಸಿಟೆಲ್‌ನಿಂದ ಹೊಸ ಪ್ಲಾನ್‌ ಲಾಂಚ್‌: ಸಿಂಗಲ್‌ ಪ್ಯಾಕ್‌ನಲ್ಲಿ 17 OTT ಪ್ರಯೋಜನ

ಏನಿದು 'ಸದರ್ನ್ OTT ಪ್ಯಾಕ್'?
ಬ್ರಾಡ್‌ಬ್ಯಾಂಡ್‌ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಎಕ್ಸಿಟೆಲ್‌ ಹೊಸ ಕಂಪನವನ್ನೆ ಎಬ್ಬಿಸಿದೆ. ಒಂದೇ ಒಂದು ಬ್ರಾಡ್‌ಬ್ಯಾಂಡ್‌ ಪ್ಲಾನ್‌ನಲ್ಲಿ 400 Mbps ವೇಗ ಹಾಗೂ 17 ಪ್ರೀಮಿಯಂ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡಲಿದೆ. ಇದು ಗ್ರಾಹಕರ ಮನರಂಜನೆಯನ್ನು ಹೆಚ್ಚಿಸಲಿದ್ದು, Aha, SunNXT, ಡಿಸ್ನಿ+ ಹಾಟ್‌ಸ್ಟಾರ್, Sony LIV, RAJ ಡಿಜಿಟಲ್ ಟಿವಿ, ETV, NammaFlix ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 300+ ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶ ನೀಡಲಿದೆ.

ಈ ಪ್ಲಾನ್‌ ದಕ್ಷಿಣ ಭಾರತದ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಅದರಂತೆ ಈ ಹೊಸ ಪ್ಲಾನ್‌ 12 ತಿಂಗಳವರೆಗೆ ತಿಂಗಳಿಗೆ 599 ರೂ.ಗಳಾಗಿರುತ್ತದೆ. ಅಂದರೆ ಒಟ್ಟು ಪಾವತಿಯು ಸುಮಾರು 7,188ರೂ + ತೆರಿಗೆಯು ಸೇರಿರುತ್ತದೆ. ಒಂದು ವೇಳೆ ನೀವು 6 ತಿಂಗಳವರೆಗೆ ಮಾತ್ರ ಪಾವತಿಸಿದರೆ ತಿಂಗಳಿಗೆ 677ರೂ ಗಳಂತೆ ಈ ಪ್ಲಾನ್‌ ಲಭ್ಯವಾಗಲಿದೆ. ಅಲ್ಲದೆ ನೀವು 3 ತಿಂಗಳವರೆಗೆ ಮಾತ್ರ ಪಾವತಿಸಿದರೆ 847 ರೂ.ಬೆಲೆಯಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಇದಲ್ಲದೆ, ನೀವು ಒಂದು ತಿಂಗಳ ಪ್ಲಾನ್‌ ಆಯ್ಕೆ ಮಾಡಲು ಬಯಸಿದರೆ 599 ರೂ.ಗಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಯೋಜನೆಯು ತಿಂಗಳ ಆಧಾರದ ಮೇಲೆ ಲಭ್ಯವಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಎಕ್ಸಿಟೆಲ್‌ನಿಂದ ಹೊಸ ಪ್ಲಾನ್‌ ಲಾಂಚ್‌: ಸಿಂಗಲ್‌ ಪ್ಯಾಕ್‌ನಲ್ಲಿ 17 OTT ಪ್ರಯೋಜನ

ಈ ಪ್ಲಾನ್‌ ಎಲ್ಲೆಲ್ಲಿ ಲಭ್ಯ?
ಪ್ರಸ್ತುತ ಎಕ್ಸಿಟೆಲ್ ಪರಿಚಯಿಸಿರುವ ಈ ಹೊಸ ಯೋಜನೆಯು ಬೆಂಗಳೂರು, ಹೈದರಾಬಾದ್, ಮಂಗಳೂರು, ಗುಂಟೂರು, ವಿಜಯವಾಡ ಮುಂತಾದ ಅನೇಕ ನಗರಗಳಲ್ಲಿ ಲಭ್ಯವಿದೆ. ಈ ಯೋಜನೆಯಲ್ಲಿ ನೀಡಲಾಗುವ ಇಂಟರ್‌ನೆಟ್‌ ವೇಗವು 400 Mbps ಆಗಿದೆ. ಇದರಿಂದ ದಕ್ಷಿಣ ಭಾರತದಲ್ಲಿರುವ ಗ್ರಾಹಕರು ಈ ಯೋಜನೆಯಲ್ಲಿ ಆಹಾ, SunNXT, ETV, NammaFlix ಸೇರಿದಂತೆ ಒಟ್ಟು 17 ಪ್ಲಾಟ್‌ಫಾರ್ಮ್‌ಗಳ ಪ್ರಯೋಜನ ಪಡೆದುಕೊಳ್ಳಬಹುದು. ಜೊತೆಗೆ ಬಳಕೆದಾರರು 300+ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು.

ಇನ್ನು ಈ ಹೊಸ ಯೋಜನೆಯನ್ನು ಖರೀದಿಸಲು ಬಯಸುವವರು ಎಕ್ಸಿಟೆಲ್‌ ಕಂಪೆನಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಮೂಲಕವೇ ಆರ್ಡರ್‌ ಮಾಡಬಹುದು. ಕೈಗೆಟಕುವ ಬೆಲೆಯಲ್ಲಿ ಹಲವು ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡುವ ಈ ಪ್ಲಾನ್‌ ಗ್ರಾಹಕರ ಮೆಚ್ಚುಗೆ ಪಡೆಯುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಬಜೆಟ್‌ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಇದು ಸೂಕ್ತವಾದ ಆಯ್ಕೆಯಾಗಿರಲಿದೆ. ಸದ್ಯ ದಕ್ಷಿಣ ಭಾರತದ ಗ್ರಾಹಕರಿಗೆ OTT ಪ್ರಯೋಜನಗಳು ಮತ್ತು ಲೈವ್ ಟಿವಿ ಪ್ರಯೋಜನಗಳನ್ನು ನೀಡುವುದಕ್ಕಾಗಿ Excitel OTT Play ನೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಹೇಳಲಾಗಿದೆ.

Best Mobiles in India

English summary
Excitel Launches Southern OTT Pack With 17 OTT Unlimited Data Benefits: Speeds up to 400 Mbps
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+