Home
ಸುದ್ದಿಜಾಲ

ಕೇವಲ 999ರೂ. ಕೊಟ್ರೆ ಸಿಗುತ್ತೆ 32 ಇಂಚಿನ ಸ್ಮಾರ್ಟ್‌ಟಿವಿ! ಯಾರಿಗುಂಟು ಈ ಆಫರ್‌!

ನೀವು ಈ ರೀತಿಯ ಆಫರ್‌ ಅನ್ನು ಹಿಂದೆಂದೂ ಕೇಳಿರಲು ಸಾಧ್ಯವೆ ಇಲ್ಲ. ಕೇವಲ ಒಂದು ವೈಫೈ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಜೊತೆಗೆ ಸ್ಮಾರ್ಟ್‌ಟಿವಿ ಖರೀದಿಸಬಹುದು ಎಂದರೆ ನಿಮಗೆ ಅಚ್ಚರಿಯಾಗೋದು ಖಚಿತ. ಆದರೆ ಇಂತಹದೊಂದು ಆಫರ್‌ ಅನ್ನು ಎಕ್ಸಿಟೆಲ್‌ ಕಂಪೆನಿ ನೀಡಿದೆ. ಕೇವಲ ತಿಂಗಳಿಗೆ 999ರೂ. ಬೆಲೆಯಲ್ಲಿ ಹೊಸ ಸ್ಮಾರ್ಟ್‌ಟಿವಿಯನ್ನು ನೀಡುತ್ತಿದೆ.

ಹೌದು, ಎಕ್ಸಿಟೆಲ್‌ ಕಂಪೆನಿಯ 999ರೂ. ಬೆಲೆಯ ಮಾಸಿಕ ಅವಧಿಯ ಬ್ರಾಡ್‌ಬ್ಯಾಂಡ್‌ ಪ್ಲಾನ್ ಖರೀದಿಸಿದರೆ ಹೊಸ ಸ್ಮಾರ್ಟ್‌ಟಿವಿ ಸಿಗಲಿದೆ. 32-ಇಂಚಿನ LED ಟಿವಿಯನ್ನು ನೀವು 300Mbps ಬ್ರಾಡ್‌ಬ್ಯಾಂಡ್‌ ಪ್ಲಾನ್‌ನೊಂದಿಗೆ ಪಡೆದುಕೊಳ್ಳಬಹುದಾಗಿದೆ. ಇದು ಕೈಗೆಟಕುವ ಬೆಲೆಯ ಮಾಸಿಕ ಶುಲ್ಕದೊಂದಿಗೆ ಬರಲಿದೆ. ಹಾಗಾದ್ರೆ ಎಕ್ಸಿಟೆಲ್‌ ಕಂಪೆನಿಯ ಹೊಸ ಆಫರ್‌ ಪಡೆದುಕೊಳ್ಳುವುದು ಹೇಗೆ? ಇದರ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೇವಲ 999ರೂ. ಕೊಟ್ರೆ ಸಿಗುತ್ತೆ 32 ಇಂಚಿನ ಸ್ಮಾರ್ಟ್‌ಟಿವಿ! ಯಾರಿಗುಂಟು ಈ ಆಫರ್‌!

ಜನಪ್ರಿಯ ಬ್ರಾಡ್‌ಬ್ಯಾಂಡ್‌ ಪೂರೈಕೆದಾರ ಎನಿಸಿಕೊಂಡಿರುವ ಎಕ್ಸಿಟೆಲ್‌ ಗ್ರಾಹಕರನ್ನು ಸೆಳೆಯಲು ಹೊಸ ಹೆಜ್ಜೆ ಇಟ್ಟಿದೆ. ಇದಕ್ಕಾಗಿ 32 ಇಂಚಿನ LED ಟಿವಿಯನ್ನು 300Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ನೊಂದಿಗೆ ನೀಡಲು ಮುಂದಾಗಿದೆ. ಈ ಪ್ಲಾನ್‌ ತಿಂಗಳಿಗೆ 999 ರೂ. ಬೆಲೆಯನ್ನು ಹೊಂದಿದೆ. ಅಂದರೆ ಈ ಪ್ಲಾನ್‌ನಲ್ಲಿ ನಿಮಗೆ 300 Mbps ವರೆಗಿನ ಹೈ-ಸ್ಪೀಡ್ ಇಂಟರ್‌ನೆಟ್ ಮಾತ್ರವಲ್ಲದೆ, 32 ಇಂಚಿನ ಫ್ರೇಮ್‌ಲೆಸ್ ಸ್ಮಾರ್ಟ್ LED ಟಿವಿಯನ್ನು ಸಹ ನೀಡಲಿದೆ. ಜೊತೆಗೆ 6ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಮತ್ತು 300 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ ಪ್ರಯೋಜನ ದೊರೆಯಲಿದೆ.

ಸ್ಮಾರ್ಟ್‌ ವೈಫೈ ಪ್ಲಾನ್‌ ಜೊತೆಗೆ ಎಕ್ಸಿಟೆಲ್‌ ಸ್ಮಾರ್ಟ್‌ಟಿವಿ

ಎಕ್ಸಿಟೆಲ್‌ ಕಂಪೆನಿ ತನ್ನ ಸ್ಮಾರ್ಟ್‌ ವೈ ಫೈ ಪ್ಲಾನ್‌ ಜೊತೆಗೆ ಸ್ಮಾರ್ಟ್‌ಟಿವಿಯ ವಿವಿಧ ಮನರಂಜಜನಾ ಆಯ್ಕೆಗಳೊಂದಿಗೆ ಗ್ರಾಹಕರನ್ನು ಸೆಳೆಯುವ ಉದ್ದೇಶ ಇಟ್ಟುಕೊಂಡಿದೆ. ಇದಕ್ಕಾಗಿ ಈ ಹೊಸ ಪ್ಲಾನ್‌ ಮಾಡಿದೆ. ಅದರಂತೆ ಬಳಕೆದಾರರು ಸ್ಮಾರ್ಟ್ ಟಿವಿ ಮತ್ತು OTT ಅಪ್ಲಿಕೇಶನ್‌ಗಳು ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಪಡೆಯಲು ವಾರ್ಷಿಕ ಚಂದಾದಾರಿಕೆಯನ್ನು ಪಡದುಕೊಳ್ಳಬೇಕಾಗುತ್ತದೆ. ಈ ಪ್ಲಾನ್‌ ತಿಂಗಳಿಗೆ 999 ರೂ. ಮತ್ತು ವಾರ್ಷಿಕವಾಗಿ 11,988 ರೂ. ಬೆಲೆ ಹೊಂದಿದೆ.

ಕೇವಲ 999ರೂ. ಕೊಟ್ರೆ ಸಿಗುತ್ತೆ 32 ಇಂಚಿನ ಸ್ಮಾರ್ಟ್‌ಟಿವಿ! ಯಾರಿಗುಂಟು ಈ ಆಫರ್‌!

ಹೇಗಿದೆ ಎಕ್ಸಿಟೆಲ್‌ ಸ್ಮಾರ್ಟ್‌ಟಿವಿ

ಈ ಪ್ಲಾನ್‌ನಲ್ಲಿ ನಿಮಗೆ ಲಭ್ಯವಾಗುವ 32 ಇಂಚಿನ ಫ್ರೇಮ್‌ಲೆಸ್ ಸ್ಮಾರ್ಟ್‌ಟಿವಿ LED ಡಿಸ್‌ಪ್ಲೇಯನ್ನು ಹೊಂದಿದೆ. ಇದು 512MB RAM ಮತ್ತು 4GB ಆನ್‌ಬೋರ್ಡ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ 20W ಸ್ಪೀಕರ್‌ಗಳನ್ನು ಕೂಡ ಹೊಂದಿದೆ. ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್‌ TV OS 9.0ನಲ್ಲಿ ಕಾರ್ಯನಿರ್ವಹಿಸಲಿದೆ. ಇದು HDMI, USB, AV ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ ಎಕ್ಸಿಟೆಲ್‌ ಕಂಪೆನಿ ಈ ಸ್ಮಾರ್ಟ್ ಟಿವಿಗೆ 1 ವರ್ಷದ ಆನ್-ಸೈಟ್ ವಾರಂಟಿಯನ್ನು ಸಹ ನೀಡುತ್ತಿದೆ.

ಕೇವಲ 999ರೂ. ಕೊಟ್ರೆ ಸಿಗುತ್ತೆ 32 ಇಂಚಿನ ಸ್ಮಾರ್ಟ್‌ಟಿವಿ! ಯಾರಿಗುಂಟು ಈ ಆಫರ್‌!

ಇನ್ನು ಈ ಸ್ಮಾರ್ಟ್ ಟಿವಿಯು 6 OTT ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಅಲ್ಟ್‌ ಬಾಲಾಜಿ, ಹಂಗಾಮಾ ಪ್ಲೇ, ಹಂಗಾಮಾ ಮ್ಯೂಸಿಕ್‌, ಶೆಮಾರೋ, ಎಪಿಕ್‌ ಆನ್‌ ಮತ್ತು ಪ್ಲೇಬಾಕ್ಸ್‌ ಟಿವಿ ಸೇರಿವೆ. ಇವುಗಳ ಜೊತೆಗೆ ಬಳಕೆದಾರರು 300 ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ಪಡೆದುಕೊಳ್ಳಲು ಅವಕಾಶ ಸಿಗಲಿದೆ. ಆದರೆ ಈ ಪ್ಲಾನ್‌ ಕೇವಲ ದೆಹಲಿಯಲ್ಲಿ ಮಾತ್ರ ಲಭ್ಯವಾಗಲಿದೆ. ಐಪಿಎಲ್‌ ಕ್ರಿಕೆಟ್‌ ಪ್ರಿಯರನ್ನು ಗುರಿಯಾಗಿಸಿಕೊಂಡು ಈ ಪ್ಲಾನ್‌ ಅನ್ನು ಪರಿಚಯಿಸಲಾಗಿದೆ ಎಂದು ವರದಿಯಾಗಿದೆ. ಉಚಿತ ಸ್ಮಾರ್ಟ್ ಟಿವಿ ಮತ್ತು ಲೈವ್ ಚಾನೆಲ್‌ಗಳೊಂದಿಗೆ, ಈ ಪ್ಲಾನ್‌ ಮೂಲಕ ಐಪಿಎಲ್‌ ಕ್ರಿಕೆಟ್‌ ಪಂದ್ಯವನ್ನು ವೀಕ್ಷಿಸುವುದಕ್ಕೆ ಅವಕಾಶ ಸಿಗಲಿದೆ.

Best Mobiles in India

English summary
This is the first time a broadband and home internet provider offers a smart TV with a Wi-Fi plan in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+