Home
ಸುದ್ದಿಜಾಲ

ಅಮೆಜಾನ್ ಪ್ರೈಮ್ ಡೇ ಸೇಲ್‌ಗೆ ಫ್ಲಿಪ್‌ಕಾರ್ಟ್‌ನಿಂದ ಸವಾಲು..!

By Gizbot Bureau

ಶಾಪಿಂಗ್ ವೆಬ್ ಸೈಟ್ ಗಳಲ್ಲಿ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಗೆ ಯಾವಾಗಾಲೂ ಒಂದು ಸ್ಪರ್ಧೆ ಇರುವುದು ಎಲ್ಲಾ ಗ್ರಾಹಕರಿಗೂ ಗೊತ್ತಿರುವ ವಿಷಯವೇ ಆಗಿದೆ. ಯಾವುದರಲ್ಲಿ ಬೆಸ್ಟ್ ಆಫರ್ ಇದಿಯೋ ಅದನ್ನು ಗ್ರಾಹಕ ಪಡೆದುಕೊಳ್ಳುತ್ತಾನೆ.

ಅಮೆಜಾನ್ ಪ್ರೈಮ್ ಡೇ ಸೇಲ್‌ಗೆ ಫ್ಲಿಪ್‌ಕಾರ್ಟ್‌ನಿಂದ ಸವಾಲು..!

ಆದರೆ ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಅನ್ನೋ ಹಾಗೆ ಅಮೇಜಾನ್ ಮತ್ತು ಫ್ಲಿಫ್ ಕಾರ್ಟ್ ಗಳ ನಡುವಿನ ಮಾರ್ಕೆಟಿಂಗ್ ಜಿದ್ದಾಜಿದ್ದಿನಲ್ಲಿ ಗ್ರಾಹಕನಿಗೆ ಬಂಪರ್ ಆಫರ್ ಗಳ ಕೊಡುಗೆ ಸಿಗುವುದಂತೂ ಗ್ಯಾರೆಂಟಿ.

ಪ್ರೈಮ್ ಡೇ ಸೇಲ್ ಗೆ ಸವಾಲು ಹಾಕುತ್ತಿರುವ ಫ್ಲಿಪ್ ಕಾರ್ಟ್

ಪ್ರೈಮ್ ಡೇ ಸೇಲ್ ಗೆ ಸವಾಲು ಹಾಕುತ್ತಿರುವ ಫ್ಲಿಪ್ ಕಾರ್ಟ್

ಹೌದು ಎಲ್ಲರಿಗೂ ತಿಳಿದಿರುವಂತೆ ಇದೇ ಜುಲೈ 16 ರಿಂದ ಅಮೇಜಾನ್ ಪ್ರೈಮ್ ಡೇ ಸೇಲ್ ಆರಂಭವಾಗುತ್ತಿದೆ ಮತ್ತು ಹಲವಾರು ವಸ್ತುಗಳ ಮೇಲೆ ಅಮೇಜಾನ್ ರಿಯಾಯಿತಿ ದರವನ್ನು ನೀಡುತ್ತಿದೆ. ಅದಕ್ಕೆ ಸ್ಪರ್ಧೆ ಒಡ್ಡುವ ಕಾರಣದಿಂದಲೋ ಏನೋ ಗೊತ್ತಿಲ್ಲ, ಅದೇ ದಿನದಿಂದ ಫ್ಲಿಪ್ ಕಾರ್ಟ್ ನಲ್ಲೂ ಬಿಗ್ ಶಾಪಿಂಗ್ ಡೇ ಸೇಲ್ ಆರಂಭವಾಗುತ್ತಿದೆ.

ಅಮೇಜಾನ್ ಗಿಂತ ಫ್ಲಿಪ್ ಕಾರ್ಟ್ ಸೇಲ್ ದೀರ್ಘಾವಧಿ ಇರಲಿದೆ

ಅಮೇಜಾನ್ ಗಿಂತ ಫ್ಲಿಪ್ ಕಾರ್ಟ್ ಸೇಲ್ ದೀರ್ಘಾವಧಿ ಇರಲಿದೆ

ಜುಲೈ 16 ರ ಸಂಜೆ 4 ಗಂಟೆಯಿಂದ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಶಾಪಿಂಗ್ ಡೇ ಸೇಲ್ ಆರಂಭವಾಗುತ್ತಿದೆ.ಜುಲೈ 19 ರ ವರೆಗೆ ಈ ಸೇಲ್ ಮುಂದುವರೆಯಲಿದೆ. ಅಮೇಜಾನ್ ಪ್ರೈಮ್ ಡೇ ಸೇಲ್ ಕೂಡ ಜುಲೈ 16 ರ ಮಧ್ಯಾಹ್ನ 12 ಗಂಟೆಯಿಂದ ಜುಲೈ 17 ರ ರಾತ್ರಿವರೆಗೆ ಇರುತ್ತದೆ.

ಎಸ್ ಬಿಐ ಜೊತೆ ಕೈಜೋಡಿಸಿರುವ ಫ್ಲಿಫ್ ಕಾರ್ಟ್

ಎಸ್ ಬಿಐ ಜೊತೆ ಕೈಜೋಡಿಸಿರುವ ಫ್ಲಿಫ್ ಕಾರ್ಟ್

ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ ಹಲವಾರು ಪ್ರೊಡಕ್ಟ್ ಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ ಮತ್ತು ಬ್ಯಾಂಕ್ ಗಳಿಂದಲೂ ಕೆಲವು ಅತ್ಯುತ್ತಮ ಆಫರ್ ಗಳನ್ನು ಕೊಡುತ್ತಿದೆ ಅದರಲ್ಲಿ ಸ್ಮಾರ್ಟ್ ಫೋನ್ ಗಳಿಗೂ ಕೂಡ ಆಫರ್ ಗಳು ಲಭ್ಯವಿರುತ್ತದೆ. ಫ್ಲಿಪ್ ಕಾರ್ಟ್ ನ ಈ ಸೇಲ್ ಗೆ ಸಂಬಂಧಿಸಿದಂತೆ ಎಸ್ ಬಿ ಐ ಬ್ಯಾಂಕ್ ಜೊತೆ ಕೈ ಜೋಡಿಸಿದೆ. ಆ ಮೂಲಕ ಕೆಲವು ವಸ್ತುಗಳ ಖರೀದಿಯ ಮೇಲೆ ಶೇಕಡಾ 10 ರ ರಿಯಾಯಿತಿಯನ್ನು ಗ್ರಾಹಕ ಪಡೆದುಕೊಳ್ಳಬಹುದು. ಈ ಆಫರ್ ಪಡೆಯಲು ಗ್ರಾಹಕರು ಎಸ್ ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಬೇಕಾಗುತ್ತದೆ. ಇನ್ನು ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಫ್ಲಿಪ್ ಕಾರ್ಡ್ ನೀಡಲಿದ್ದು ಅದನ್ನು ಇನ್ನೂ ಬಹಿರಂಗಪಡಿಸಿಲ್ಲ.

ಫ್ಲಿಪ್ ಕಾರ್ಟ್ ಆಫರ್ ಗಳು 8 ಗಂಟೆಗಳಿಗೊಮ್ಮೆ ಭಿನ್ನವಾಗುತ್ತದೆ

ಫ್ಲಿಪ್ ಕಾರ್ಟ್ ಆಫರ್ ಗಳು 8 ಗಂಟೆಗಳಿಗೊಮ್ಮೆ ಭಿನ್ನವಾಗುತ್ತದೆ

ಈ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ "ಬ್ಲಾಕ್ ಬಸ್ಟರ್ ಡೀಲ್ಸ್" ಗಳನ್ನು ತನ್ನೆಲ್ಲಾ ವಿಭಾಗದ ವಸ್ತುಗಳ ಮೇಲೂ ನೀಡುತ್ತಿದೆ. ಈ "ಬ್ಲಾಕ್ ಬಸ್ಟರ್ ಡೀಲ್ಸ್" ಆಫರ್ ಗಳು ಪ್ರತಿ 8 ಗಂಟೆಗಳಿಗೊಮ್ಮೆ ಬದಲಾಗುತ್ತವೆಯಂತೆ. ಇದು ಫ್ಲಿಪ್ ಕಾರ್ಟ್ ನ ವೆಬ್ ಸೈಟ್ ನಲ್ಲಿ ಸಂಕ್ಷಿಪ್ತವಾಗಿ ಕಾಣುತ್ತದೆ. ಅಂದರೆ 8 ಗಂಟೆಗಳಿಗೊಮ್ಮೆ ಕೆಲವು ವಸ್ತುಗಳ ಬೆಲೆಯು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯನ್ನು ಗ್ರಾಹಕರು ಇಟ್ಟುಕೊಳ್ಳಬಹುದು.

ರಶ್ ಅವರ್ ಡೀಲ್ಸ್

ರಶ್ ಅವರ್ ಡೀಲ್ಸ್

ಜುಲೈ 16 ರಂದು 4 ಗಂಟೆಯಿಂದ 6 ಗಂಟೆವರೆಗೆ ಫ್ಲಿಪ್ ಕಾರ್ಟ್ ನಲ್ಲಿ " ರಶ್ ಅವರ್ ಡೀಲ್ಸ್" ಗಳು ಇರುತ್ತವೆ. ಫ್ಲಿಪ್ ಕಾರ್ಟ್ ಹೇಳುವಂತೆ ಕೆಲವು ವಸ್ತುಗಳ ಬೆಲೆಯು ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಈ ಮಟ್ಟಕ್ಕೆ ಇಳಿಕೆ ಕಾಣುತ್ತದೆ. ಅಂತಹ ಅತ್ಯುತ್ತಮ ಆಫರ್ ಗಳು ಈ ಬಾರಿಯ ಸೇಲ್ ನಲ್ಲಿ ಲಭ್ಯವಿರಲಿದೆ ಎಂದು ಹೇಳಿಕೊಳ್ಳುತ್ತಿದೆ. ಅದನ್ನು ಫ್ಲಿಪ್ ಕಾರ್ಟ್ " ಪ್ರೈಸ್ ಡ್ರಾಪ್ಸ್ ಲೈಕ್ ನೆವರ್ ಬಿಫೋರ್" ಎಂದು ತಿಳಿಸುತ್ತದೆಯಂತೆ ಮತ್ತು ಈ ಆಫರ್ ಗಳ ಖರೀದಿಗೆ ಇಎಂಐ ಆಯ್ಕೆಯೂ ಇರಲಿದೆ. ಆಸಕ್ತ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಪ್ರೈಮ್ ಡೇ ಸೇಲ್ 36 ತಾಸುಗಳಿಗೆ ವಿಸ್ತರಣೆ

ಪ್ರೈಮ್ ಡೇ ಸೇಲ್ 36 ತಾಸುಗಳಿಗೆ ವಿಸ್ತರಣೆ

ಇನ್ನೊಂದೆಡೆ ಅಮೇಜಾನ್ ಇಂಡಿಯಾ ಕೂಡ ಪ್ರೈಮ್ ಡೇ ಸೇಲ್ ನಲ್ಲಿ ಹಲವು ಆಫರ್ ಗಳನ್ನು ನೀಡುತ್ತಿದ್ದು, ಕಳೆದ ಬಾರಿ ಕೇವಲ 24 ಗಂಟೆ ನಡೆಸಿದ್ದ ಸೇಲ್ ನ್ನು ಈ ಬಾರಿ 36 ತಾಸುಗಳಿಗೆ ವಿಸ್ತರಿಸಿದೆ. ಈ ಬಾರಿಯ ಸೇಲ್ ನಲ್ಲಿ ಸುಮಾರು 200 ಹೊಸ ವಸ್ತುಗಳು ಮಾರಾಟಕ್ಕೆ ಹೊಸದಾಗಿ ಬಿಡುಗಡೆಗೊಳ್ಳುತ್ತಿದ್ದು, ಅತ್ಯುತ್ತಮ ಆಫರ್ ಗಳು ಲಭ್ಯವಿರಲಿದೆ. ಅದರಲ್ಲಿ ಒನ್ ಪ್ಲಸ್, ಬಾಸ್,ಇಂಟೆಲ್, ಹೆಚ್ ಪಿ, ಆಕ್ಸೆರ್ ಸೇರಿದಂತೆ ಹಲವು ಕಂಪೆನಿಯ ವಸ್ತುಗಳು ಇರಲಿದೆ. ಅಷ್ಟೇ ಅಲ್ಲ, ಅಮೇಜಾನ್ ಎಕೋ ಫ್ಯಾಮಿಲಿ ಡಿವೈಸ್, ಫೈರ್ ಟಿವಿ ಸ್ಟಿಕ್, ಆಲ್ ನ್ಯೂ ಕಿಂಡಲ್, ಕಿಂಡಲ್ ಓಯಾಸಿಸ್ ಮತ್ತು ಕಿಂಡಲ್ ಪೆಪ್ಪರ್ ವೈಟ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಇರಲಿದೆ.

ಅಮೇಜಾನ್ ಮಾರಾಟ ಕೇವಲ ಪ್ರೈಮ್ ಸದಸ್ಯರಿಗೆ, ಫ್ಲಿಪ್ ಕಾರ್ಟ್ ಮಾರಾಟ ಎಲ್ಲಾ ಗ್ರಾಹಕರಿಗೂ ಲಭ್ಯ

ಅಮೇಜಾನ್ ಮಾರಾಟ ಕೇವಲ ಪ್ರೈಮ್ ಸದಸ್ಯರಿಗೆ, ಫ್ಲಿಪ್ ಕಾರ್ಟ್ ಮಾರಾಟ ಎಲ್ಲಾ ಗ್ರಾಹಕರಿಗೂ ಲಭ್ಯ

ಪ್ರೈಮ್ ಡೇ ಸೇಲ್ ಗಾಗಿ ಅಮೇಜಾನ್ ಹೆಚ್ ಡಿಎಫ್ ಸಿ ಬ್ಯಾಂಕ್ ಜೊತೆ ಕೈಜೋಡಿಸಿದೆ ಮತ್ತು ಶೇಕಡಾ 10 ರ ಇನ್ಸ್ ಟೆಂಟ್ ಡಿಸ್ಕೌಂಟ್ ನ್ನು ನೀಡುತ್ತಿದೆ. ಅದಕ್ಕಾಗಿ ಗ್ರಾಹಕರು ಹೆಚ್ ಡಿಎಫ್ ಸಿ ಬ್ಯಾಂಕ್ ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನ್ನು ಬಳಕೆ ಮಾಡಬೇಕು. ಆದರೆ ಫ್ರೈಮ್ ಡೇ ಸೇಲ್ ಕೇವಲ ಅಮೇಜಾನ್ ನ ಪ್ರೈಮ್ ಸದಸ್ಯರಿಗೆ ಮಾತ್ರವೇ ಲಭ್ಯವಿರುತ್ತದೆ ಆದರೆ ಫ್ಲಿಪ್ ಕಾರ್ಟ್ ನ ಸೇಲ್ ಪ್ರತಿಯೊಬ್ಬ ಗ್ರಾಹಕನಿಗೂ ಲಭ್ಯವಿರುತ್ತದೆ.

Best Mobiles in India

English summary
Exclusive: Flipkart to host Big Shopping Days sale starting July 16 to counter Amazon Prime Day sale. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+