2022 ರಲ್ಲಿ ಡಾಲ್ಬಿ ವಿಷನ್ ಟೆಕ್ನಾಲಜಿ ಪಡೆಯಲಿವೆ ಶಿಯೋಮಿ ಸ್ಮಾರ್ಟ್‌ಟಿವಿಗಳು!

|

ಇತ್ತೀಚಿನ ದಿನಗಳಲ್ಲಿ ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಭಾರತದಲ್ಲಿ ಸ್ಮಾರ್ಟ್‌ಟಿವಿಗಳ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಉತ್ತಮವಾಗಿದೆ. ಇದಕ್ಕಾಗಿ ಸಂಬಂಧಪಟ್ಟಂತೆ ಶಿಯೋಮಿ ಪ್ಯಾಚ್‌ವಾಲ್ ವರದಿ 2022 ಸಾಕಷ್ಟು ವಿವರಗಳನ್ನು ಬಹಿರಂಗಪಡಿಸಿದೆ. ಸ್ಮಾರ್ಟ್ ಟಿವಿಗಳು, ವಿಷಯ ಬಳಕೆ ಮತ್ತು ಗ್ರಾಹಕರ ನಡವಳಿಕೆಯನ್ನು ಬದಲಾಯಿಸುವ ಬಗ್ಗೆ ಕೆಲವು ಆಸಕ್ತಿದಾಯಕ ಅಂಶಗಳನ್ನು ವರದಿ ಮಾಡಿದೆ.

ಸ್ಮಾರ್ಟ್‌ಟಿವಿ

ಹೌದು, ಭಾರತದಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆ ಬೆಳವಣಿಗೆಯ ಬಗ್ಗೆ ಶಿಯೋಮಿ ಪ್ಯಾಚ್‌ವಾಲ್‌ ವರದಿಯಲ್ಲಿ ಅನೇಕ ಅಂಶಗಳು ಬಹಿರಂಗವಾಗಿವೆ. ಈ ವರದಿಯಲ್ಲಿ ಸಾಕಷ್ಟು ಆಸಕ್ತಿಕರ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲೂ 2020ರ ನಂತರ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಕೋವಿಡ್‌ ದಾಳಿ ಶುರುವಾದ ನಂತರ ಹೆಚ್ಚಿನ ಜನರು ಮನೆಯಲ್ಲಿಯೇ ಕಾಲ ಕಳೆಯುವುದಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದರಿಂದ ಆಂಡ್ರಾಯ್ಡ್ ಟಿವಿಗಳು, ಡಾಲ್ಬಿ ಟೆಕ್ನಾಲಜಿಯಂತಹ ಡಾಲ್ಬಿ ಅಟ್ಮಾಸ್ ಹೊಂದಿರುವ ಸ್ಮಾರ್ಟ್‌ಟಿವಿಗಳ ಕಡೆಗೆ ಹೆಚ್ಚಿನ ಜನ ಆಸಕ್ತಿ ತೋರಿದ್ದಾರೆ. ಹಾಗಾದ್ರೆ ಭಾರತದಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆಯ ಬೆಳವಣಿಗೆ ಬಗ್ಗೆ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತದಲ್ಲಿ ಸ್ಮಾರ್ಟ್ ಟಿವಿ ಬಳಕೆ

ಭಾರತೀಯ ಸ್ಮಾರ್ಟ್ ಟಿವಿ ಮಾರುಕಟ್ಟೆಲ್ಲಿ ಚೀನಾ ಬ್ರ್ಯಾಂಡ್‌ಗಳ ಪೈಪೋಟಿ ಸಾಖಷ್ಟಿದೆ. ಇದರಲ್ಲಿ ಶಿಯೋಮಿ ಕಂಪೆನಿಯ ಸ್ಮಾರ್ಟ್‌ಟಿವಿಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್‌ಟಿವಿಗಳು ಭಾರತದಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದುಕೊಂಡಿವೆ. ಇವುಗಳಲ್ಲಿ ಕೆಲವು ಸ್ಮಾರ್ಟ್‌ಟಿವಿಗಳು ಇತ್ತೀಚಿನ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಆಕರ್ಷಕ ಬೆಲೆಯಲ್ಲಿ ಲಭ್ಯವಾಗುತ್ತಿವೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಟಿವಿ ತಂತ್ರಜ್ಞಾನ ಮತ್ತು 2022 ರಲ್ಲಿ ಭಾರತೀಯ ಮಾರುಕಟ್ಟೆ ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ಶಿಯೋಮಿ ಮತ್ತು ಡಾಲ್ಬಿ ಸಂಸ್ಥೆಯ ವಕ್ತಾರರೊಂದಿಗೆ ಗಿಜ್‌ಬಾಟ್‌ ಸಂಬಾದ ನಡೆಸಿದೆ. ಈ ಸಂವಾದದಲ್ಲಿ ತಿಳಿದು ಬಂದ ವಿಚಾರ ಏನು ಅನ್ನೊದು ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಗಿಜ್‌ಬಾಟ್‌

ಗಿಜ್‌ಬಾಟ್‌ ಜೊತೆಗೆ ಭಾರತದಲ್ಲಿ ಸ್ಮಾರ್ಟ್ ಟಿವಿ ಮಾರುಕಟ್ಟೆ ಬೆಳವಣಿಗೆ ಬಗ್ಗೆ ಮಾತನಾಡಿದ ಶಿಯೋಮಿ ಸಂಸ್ಥೆಯ ವಕ್ತಾರ ಅನಿಸಾ ಮೆಹ್ತಾ, ಭಾರತದ ಟಿವಿ ಮಾರುಕಟ್ಟೆ ಎಲ್ಲಿ ನಿಂತಿದೆ ಎಂಬುದನ್ನು ನೋಡಲು ಒಂದು ಹೆಜ್ಜೆ ಹಿಂತಿರುಗಿ ನೋಡೋಣ. ಶಿಯೋಮಿ ಟಿವಿಗಳನ್ನು ಬಳಸುವ ಗ್ರಾಹಕರೊಂದಿಗೆ ನಾವು ಅರ್ಥಮಾಡಿಕೊಳ್ಳಬಹುದಾದ ಒಂದು ನಿರ್ದಿಷ್ಟ ಪ್ರವೃತ್ತಿಯಿದೆ. ಜನರು ಯಾವ ರೀತಿಯ ವಿಷಯವನ್ನು ಇಷ್ಟಪಡುತ್ತಾರೆ, ಯಾವ ಪ್ರಕಾರ ಹೆಚ್ಚು ಜನಪ್ರಿಯವಾಗಿದೆ, ಯಾವ ಭಾಷೆಗಳಲ್ಲಿ ವಿಷಯವನ್ನು ವೀಕ್ಷಿಸುತ್ತಾರೆ ಅನ್ನೊದನ್ನ ಗಮನಿಸುತ್ತೇವೆ ಎಂದು ಹೇಳಿದ್ದಾರೆ.

ಡಾಲ್ಬಿ ಅಟ್ಮಾಸ್ ಎಂದರೇನು ಮತ್ತು ಅದು ಏಕೆ ಮುಖ್ಯವಾಗಿದೆ?

ಡಾಲ್ಬಿ ಅಟ್ಮಾಸ್ ಎಂದರೇನು ಮತ್ತು ಅದು ಏಕೆ ಮುಖ್ಯವಾಗಿದೆ?

ಹೊಸ ಯುಗದ ಸ್ಮಾರ್ಟ್ ಟಿವಿಗಳು ವೀಕ್ಷಣಾ ಅನುಭವವನ್ನು ಹೆಚ್ಚಿಸುವ ಡಾಲ್ಬಿ ವಿಷನ್‌ನಂತಹ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಂಡಿವೆ. ಇದೇ ಸಮಯದಲ್ಲಿ, ಸ್ಮಾರ್ಟ್ ಟಿವಿಗಳಲ್ಲಿನ ಆಡಿಯೊ ಅನುಭವಗಳು ಕೂಡ ಅಷ್ಟೇ ಮುಖ್ಯವಾಗುತ್ತದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಟಿವಿಗಳಲ್ಲಿ ಡಾಲ್ಬಿ ಅಟ್ಮಾಸ್‌ ಮುಖ್ಯವಾಗುತ್ತದೆ.

ಅಟ್ಮಾಸ್

ಇನ್ನು ಡಾಲ್ಬಿ ಅಟ್ಮಾಸ್ ಎಂಬುದು ಡಾಲ್ಬಿ ಲ್ಯಾಬೋರೇಟರೀಸ್ ಅಭಿವೃದ್ಧಿಪಡಿಸಿದ ಆಡಿಯೊ ಟೆಕ್ನಾಲಜಿಯಾಗಿದೆ. ಇದು ಸರೌಂಡ್ ಸೌಂಡ್ ಟೆಕ್ನಾಲಜಿಯಾಗಿದ್ದು, ಇದು ವರ್ಧಿತ ಸಿನಿಮೀಯ ಅನುಭವವನ್ನು ನೀಡುವುದಕ್ಕಾಗಿ ಚಿತ್ರಮಂದಿರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇನ್ನು ಡಾಲ್ಬಿ ಅಟ್ಮೋಸ್‌ ಎತ್ತರದ ಚಾನಲ್‌ಗಳನ್ನು ಸೇರಿಸುವ ಮೂಲಕ ಅಸ್ತಿತ್ವದಲ್ಲಿರುವ ಸರೌಂಡ್ ಸೌಂಡ್ ಸಿಸ್ಟಮ್‌ಗಳನ್ನು ಟ್ಯಾಪ್ ಮಾಡುತ್ತದೆ. ಇದು ಸೌಂಡ್‌ ಸ್ಪೇಸ್‌ ಅನ್ನು ಆವರಿಸಲು ಅನುವು ಮಾಡಿಕೊಡಲಿದ್ದು, ಸರೌಂಡ್ ಸೌಂಡ್ ಟೆಕ್ನಾಲಜಿಯೊಂದಿಗೆ ತಲ್ಲೀನಗೊಳಿಸುವ ವಾತಾವರಣವನ್ನು ಸೃಷ್ಟಿಸುತ್ತದೆ.

ಅಟ್ಮೋಸ್‌

ಡಾಲ್ಬಿ ಅಟ್ಮೋಸ್‌ ಮ್ಯೂಸಿಕ್‌ ಮತ್ತು ಎಂಟರ್‌ಟೈನ್‌ಮೆಂಟ್‌ ಅನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ. ಏಕೆಂದರೆ ಇದು ಕ್ರಾಂತಿಕಾರಿ ಪ್ರಾದೇಶಿಕ ಆಡಿಯೊ ಟಕ್ನಾಲಜಿಯಾಗಿದ್ದು ಅತ್ಯುತ್ತಮ ಅನುಭವ ನೀಡಲಿದೆ. ಥಿಯೇಟರ್‌ನಲ್ಲಿನ ಸರೌಂಡ್ ಸೌಂಡ್ ಮಾದರಿಯಲ್ಲಿ ನಿಮಗೆ ಅನುಭವ ನೀಡಲಿದೆ. ಆದಾಗ್ಯೂ, ಟಿವಿಯಲ್ಲಿ ಕೇವಲ ಎರಡು ಸ್ಪೀಕರ್‌ಗಳು ಇರುವುದರಿಂದ ಸ್ಮಾರ್ಟ್ ಟಿವಿಗೆ ಡಾಲ್ಬಿ ಅಟ್ಮಾಸ್ ಅನುಭವವನ್ನು ತರುವುದು ಸವಾಲಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಡಾಲ್ಬಿ ತಂತ್ರಜ್ಞಾನ ಏಕೆ ಮುಖ್ಯ?

ಡಾಲ್ಬಿ ತಂತ್ರಜ್ಞಾನ ಏಕೆ ಮುಖ್ಯ?

ಇಂದು, ಮಾರುಕಟ್ಟೆಯಲ್ಲಿ ಹೊಸ ಟೆಕ್ನಾಲಜಿ ಸಾಕಷ್ಟು ಆವರಿಸಿಕೊಂಡಿದೆ. ಆದರೆ ಆಡಿಯೋ ಮತ್ತು ವಿಶ್ಯುಯಲ್‌ ಟೆಕ್ನಾಲಜಿ ವಿಚಾರಕ್ಕೆ ಬಂದಾಗ, ಡಾಲ್ಬಿ ಟೆಕ್ನಾಲಜಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ವಿಶೇಷವಾಗಿ ಡಾಲ್ಬಿ ಅಟ್ಮಾಸ್ ತನ್ನ ಸರೌಂಡ್ ಸೌಂಡ್ ಅನುಭವದ ಕಾರಣಕ್ಕಾಗಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಇದರಿಂದ ಸಹಜವಾಗಿ, ಡಿಜಿಟಲ್ ಥಿಯೇಟರ್ ಸಿಸ್ಟಮ್ ಅಥವಾ ಡಿಟಿಎಸ್, ಮೈಕ್ರೋಸಾಫ್ಟ್ ಸೌಂಡ್ ಸಿಸ್ಟಮ್, ಇತ್ಯಾದಿಗಳಂತಹ ಪ್ರತಿಸ್ಫರ್ಧಿಗಳನ್ನು ಕೂಡ ಹೊಂದಿದೆ.

ಕಂಟೆಂಟ್‌

ಇನ್ನು ಕಂಟೆಂಟ್‌ ಕ್ರಿಯೆಟ್‌ ಮತ್ತು ಕಂಟೆಂಟ್‌ ಬಳಕೆಯಲ್ಲಿ ಡಾಲ್ಬಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಕಂಟೆಂಟ್‌ ಕ್ರಿಯೆಟರ್ಸ್‌ ಜೊತೆಗೆ ಪ್ರಾರಂಭಿಸುತ್ತೇವೆ ಇದರಿಂದ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್‌ನಂತಹ ನಮ್ಮ ತಂತ್ರಜ್ಞಾನಗಳು ವಿಷಯದೊಂದಿಗೆ ಸಂಯೋಜಿಸಲ್ಪಟ್ಟಿವೆ. ಇದು ಅಂತಿಮವಾಗಿ ಗ್ರಾಹಕರಿಗೆ ಸಂಪೂರ್ಣ ಆಡಿಯೋ-ದೃಶ್ಯ ಅನುಭವವನ್ನು ನೀಡುತ್ತದೆ ಎಂದು ಜಪಾನ್ & ಎಮರ್ಜಿಂಗ್ ಮಾರ್ಕೆಟ್ಸ್ ಫಾರ್ ಡಾಲ್ಬಿ ಲ್ಯಾಬೊರೇಟರೀಸ್ ಸೀನಿಯರ್ ರೀಜನಲ್ ಡೈರೆಕ್ಟರ್ ಆಶಿಮ್ ಮಾಥುರ್ ವಿವರಿಸಿದ್ದಾರೆ.

2022 ರಲ್ಲಿ ಶಿಯೋಮಿ ಟಿವಿಗಳಿಗಾಗಿ ಡಾಲ್ಬಿ ಅಟ್ಮಾಸ್

2022 ರಲ್ಲಿ ಶಿಯೋಮಿ ಟಿವಿಗಳಿಗಾಗಿ ಡಾಲ್ಬಿ ಅಟ್ಮಾಸ್

ಶಿಯೋಮಿ ಕಂಪೆನಿ 2022ರಲ್ಲಿ ಶಿಯೋಮಿ ಟಿವಿಗಳಿಗಾಗಿ ಡಾಲ್ಬಿ ಅಟ್ಮಾಸ್ ಪರಿಚಯಿಸುವ ಗುರಿ ಹೊಂದಿದೆ. ಶಿಯೋಮಿ TV 5X ಮೂಲಕ ನಾವು ಡಾಲ್ಬಿ ಅಟ್ಮಾಸ್‌ ಅನ್ನು ತರಲು ಪ್ರಾರಂಭಿಸಿದ್ದೇವೆ. ಇದು ಆಡಿಯೊದಲ್ಲಿನ ಪ್ರೀಮಿಯಂ ತಂತ್ರಜ್ಞಾನವಾಗಿದ್ದು, ನಿಮ್ಮನ್ನು ವರ್ಚುವಲ್ ಸರೌಂಡ್ ಸೌಂಡ್ ಸಿಸ್ಟಮ್‌ನೊಂದಿಗೆ ಒಳಗೊಳ್ಳುತ್ತದೆ ಎಂದು ಶಿಯೋಮಿ ಟಿವಿ ವಿಭಾಗದ Sr ಪ್ರಾಡಕ್ಟ್‌ ಮ್ಯಾನೇಜರ್‌ ಸುದೀಪ್ ಸಾಹು ಹೇಳಿದ್ದಾರೆ.

ನಾವು ಇದನ್ನು ಶಿಯೋಮಿ ಟಿವಿಯಲ್ಲಿ ಎರಡು-ಸ್ಪೀಕರ್ ಸಿಸ್ಟಮ್‌ನೊಂದಿಗೆ ಡೇಡಿಕೇಟೆಡ್‌ ಚಾನೆಲ್‌ಗಳ ಅಗತ್ಯವಿಲ್ಲದೇ ಮಾಡಿದ್ದೇವೆ. ಡಾಲ್ಬಿ ಅಟ್ಮಾಸ್‌ನೊಂದಿಗೆ ಟಿವಿಯಲ್ಲಿ ಕೇವಲ ಎರಡು ಸ್ಪೀಕರ್‌ಗಳೊಂದಿಗೆ ನಾವು ಗುಮ್ಮಟದಂತಹ ರಚನೆಯನ್ನು ರಚಿಸಲು ಸಮರ್ಥರಾಗಿದ್ದೇವೆ. ಏಕೆಂದರೆ ಡಾಲ್ಬಿ ಅಟ್ಮಾಸ್ ಟೆಕ್ನಾಲಜಿ ಶಿಯೋಮಿ ಸಂಸ್ಥೆಗೆ ಗೇಮ್ ಚೇಂಜರ್ ಆಗಲಿದೆ ಎನ್ನುವ ಮಾತು ಅವರದ್ದಾಗಿದೆ.

ಶಿಯೋಮಿ

ಶಿಯೋಮಿ TV 5X ಅನ್ನು 2021 ರಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಾರಂಬಿಸಲಾಗಿತ್ತು. ಭವಿಷ್ಯದ ಶ್ರೇಣಿಗಳಲ್ಲಿ ಈ ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ಶಿಯೋಮಿ ಹೊಂದಿದೆ ಎಂದು ಸಾಹು ವಿವರಿಸುತ್ತಾರೆ. ಇವುಗಳು (ಡಾಲ್ಬಿ ಅಟ್ಮಾಸ್) ನಮ್ಮ ಟಿವಿ ಲೈನ್‌ಅಪ್‌ಗಳಲ್ಲಿ ರೆಡ್ಮಿ ಮತ್ತು ಶಿಯೋಮಿ ಎರಡನ್ನೂ ಹೆಚ್ಚು ಜನಪ್ರಿಯತೆಗೆ ತಳ್ಳುವುದಕ್ಕೆ ಅವಕಾಶ ನೀಡಲಿದೆ ಎಂದು ಸಾಹು ಹೇಳಿದ್ದಾರೆ.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿ ಮುಂಚೂಣಿ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು IoT ಗ್ಯಾಜೆಟ್‌ಗಳವರೆಗೆ. ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್ ಟಿವಿಗಳಿಗೆ ಡಾಲ್ಬಿ ಅಟ್ಮೊಸ್‌ ಅನ್ನು ಪರಿಚಯಿಸುವುದು ಖಂಡಿತವಾಗಿಯೂ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಟೆಕ್ ಕಂಪನಿಯಾಗಿ ಭದ್ರವಾಗಿ ನಿಲ್ಲಲು ಸಹಾಯ ಮಾಡುತ್ತದೆ ಎಂದು ಶೀಯೋಮಿ ವಕ್ತಾರರು ಹೇಳಿದ್ದಾರೆ.

Best Mobiles in India

English summary
Xiaomi PatchWall Report 2022 has revealed some interesting factors regarding smart TVs, content consumption, and changing consumer behavior.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X