ಫೇಸ್‌ಬುಕ್ ಡೀಲ್:19 ಶತಕೋಟಿ ಡಾಲರ್‌ಗೆ ವಾಟ್ಸ್‌ಆಪ್ ಖರೀದಿ
ವಿಶ್ವದ ನಂಬರ್ ಒನ್ ಸೋಶಿಯಲ್ ನೆಟ್‌ವರ್ಕ್ ಫೇಸ್‌ಬುಕ್ ಈಗ ಮೊಬೈಲ್ ಮೆಸೇಜ್ ಸೇವೆ ನೀಡುತ್ತಿರುವ ವಾಟ್ಸ್‌ಆಪ್‌ನ್ನು 19 ಶತಕೋಟಿ ಡಾಲರ್ ನೀಡಿ ಖರೀದಿಸಿದೆ.
12 ಶತಕೋಟಿ ಡಾಲರ್ ಮೊತ್ತದ ಫೇಸ್‌ಬುಕ್ ಷೇರು,4 ಶತಕೋಟಿ ಡಾಲರ್ ನಗದು, 3 ಶತಕೋಟಿ ಡಾಲರ್ ಮೊತ್ತದ ನಿರ್ಬಂಧಿತ ಷೇರು ಯುನಿಟ್ ನೀಡುವಂತೆ ಈ ಒಪ್ಪಂದ ನಡೆದಿದೆ.
ವಾಟ್ಸ್ ಆಪ್ ಆರಂಭಗೊಂಡದ್ದು 2009ರಲ್ಲಿ,ಯಾಹೂ ಕಂಪೆನಿಯ ಮಾಜಿ ಉದ್ಯೋಗಿಗಳಾದ ಅಮೆರಿಕದ ಬ್ರಿಯಾನ್ ಆಕ್ಟನ್(Brian Acton)ಉಕ್ರೈನಿನ ಜನ್ ಕೌಮ್(Jan Koum) ಅಮೆರಿಕದಲ್ಲಿ ಆರಂಭಿಸಿದ ಈ ಕಂಪೆನಿಯಲ್ಲಿ ಒಟ್ಟು 55 ಮಂದಿ ಉದ್ಯೋಗಿಗಳಿದ್ದಾರೆ.
ಸ್ವಾಧೀನದಿಂದಾಗಿ ವಾಟ್ಸ್‌ಆಪ್ ಬ್ರಾಂಡ್ ವರ್ಚಸ್ಸಿನ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ. ವಾಟ್ಸ್ ಆಪ್ ಇನ್ನು ಮುಂದೆಯೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದ್ದು, ವಾಟ್ಸ್‌ಆ್ಯಪ್‌ನ ಕೇಂದ್ರ ಕಚೇರಿ ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂನಲ್ಲೇ ಇರಲಿದೆ ಎಂದು ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ಮೆಸೇಜ್,ವಿಡಿಯೋ,ಫೋಟೋ, ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಬಹುದಾದ ವಾಟ್ಸ್ ಆಪ್‌ನ್ನು ವಿಶ್ವದಲ್ಲಿ 45 ಕೋಟಿ ಜನರು ಬಳಸುತ್ತಿದ್ದು, ಈಗಾಗಲೇ ಆಂಡ್ರಾಯ್ಡ್,ವಿಂಡೋಸ್ ಫೋನ್,ಐಓಎಸ್,ಬ್ಲ್ಯಾಕ್‌ಬೆರಿ,ನೋಕಿಯಾ ಸಿರೀಸ್ 40,ಸಿಂಬಿಯನ್ ಓಎಸ್ ಫೋನ್‌ಗಳಲ್ಲಿ ವಾಟ್ಸ್ ಆಪ್ ಅಪ್ಲಿಕೇಶನ್ ಲಭ್ಯವಿದೆ.
ಮೆಸೇಜಿಂಗ್ ಆಪ್ ಬಂದ ಮೇಲೆ ಫೇಸ್‌ಬುಕ್‌ನ ಜನಪ್ರಿಯತೆ ನಿಧಾನವಾಗಿ ಕಡಿಮೆಯಾಗಲು ಆರಂಭಿಸಿತ್ತು.ವಾಟ್ಸ್‌ಆಪ್ ಐದೇ ವರ್ಷದಲ್ಲಿ 45 ಕೋಟಿ ಜನರನ್ನು ಸೆಳೆಯುವ ಮೂಲಕ ಫೇಸ್‌ಬುಕ್ ಬೆಳವಣಿಗೆ ಸಣ್ಣ ಹೊಡೆತ ನೀಡಿತ್ತು.
ಫೇಸ್‌ಬುಕ್ ಈ ಆಪ್ ಕಂಪೆನಿಯನ್ನು ಖರೀದಿಸಿದ ಹಿನ್ನಲೆಯಲ್ಲಿ ಈ ಆಪ್‌ನ ವಿಶೇಷತೆ ಏನು?ಫೇಸ್‌ಬುಕ್‌ಗಿಂತ ಇದು ಹೇಗೆ ಸುರಕ್ಷಿತವಾಗಿದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?
ಫೇಸ್‌ಬುಕ್‌ಗೆ ಹೋಲಿಸಿದರೆ ವ್ಯಾಟ್ಸ್ ಆಪ್‌ವನ್ನು ವೈಯಕ್ತಿಕ ಎಂದೇ ಹೇಳಬಹುದು. ನಿಮ್ಮ ಗ್ರೂಪ್‌ನಲ್ಲಿ ಅಪ್ಪಿ ತಪ್ಪಿ ಏನಾದ್ರೂ ಪೋಸ್ಟ್ ಆದ್ರೂ ಅದನ್ನು ಗ್ರೂಪಿನ ಸದಸ್ಯರು ಮಾತ್ರ ವೀಕ್ಷಿಸಬಹುದು.ವಾಟ್ಸ್‌ಆಪ್‌ನಲ್ಲಿ ಪೋಸ್ಟ್ ಸಾರ್ವಜನಿಕವಾಗಿ ಬಹಿರಂಗವಾಗುವುದಿಲ್ಲ.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?
ಫೇಸ್‌ಬುಕ್‌ಗೆ ಹೋಲಿಸಿದರೆ ವಾಟ್ಸ್‌ಆಪ್ ಹೆಚ್ಚು ಸುರಕ್ಷತೆಯನ್ನು ಹೊಂದಿದೆ. ಜೊತೆಗೆ ಬಳಕೆದಾರರ ತಪ್ಪಿನಿಂದಲೇ ವಾಟ್ಸ್‌ಆಪಲ್ ಅಕೌಂಟ್ ಹ್ಯಾಕ್ ಅಗುವ ಸಾಧ್ಯತೆ ಕಡಿಮೆ. ಆದರೆ ಫೇಸ್‌ಬುಕ್‌ನಲ್ಲಿ ನಮ್ಮ ತಪ್ಪಿನಿಂದಲೇ ಆಕೌಂಟ್ ಹ್ಯಾಕ್ ಅಗುವ ಸಾಧ್ಯತೆ ಹೆಚ್ಚು.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?
ಫೇಸ್‌ಬುಕ್‌ನಲ್ಲಿ ಯಾವುದೋ ಮೆಸೇಜ್‌ನ್ನು ಸ್ನೇಹಿತರಿಗೆ ಕಳುಹಿಸಿದರೆ ಅದನ್ನು ಸ್ನೇಹಿತರು ನೋಡಿದ್ದಾರೋ ಇಲ್ಲವೋ ಎನ್ನುವುದು ಕಳುಹಿಸಿದ ವ್ಯಕ್ತಿಗೆ ಗೊತ್ತೇ ಆಗುವುದಿಲ್ಲ.ಆದರೆ ವಾಟ್ಸ್ ಆಪ್‌ನಲ್ಲಿ ಈ ಸಮಸ್ಯೆಯೇ ಇಲ್ಲ.ಕಳುಹಿಸಬೇಕಾದ ವ್ಯಕ್ತಿಗೆ ನೇರವಾಗಿ ಹೋಗುತ್ತದೆ ಜೊತೆಗೆ ಅವರು ಆನ್‌ಲೈನ್‌ಲ್ಲಿ ಇದ್ದಾರೋ, ಕೊನೆ ಬಾರಿಗೆ ವಾಟ್ಸ್‌ಆಪ್‌ನ್ನು ಬಳಕೆ ಮಾಡಿದ ದಿನಾಂಕ/ಸಮಯವನ್ನು ಸ್ನೇಹಿತರು ಸುಲಭವಾಗಿ ತಿಳಿಯಬಹುದಾಗಿದೆ.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?
ಫೇಸ್‌ಬುಕ್‌ನಲ್ಲಿ ಒಂದೇ ವ್ಯಕ್ತಿಯ ಹೆಸರಿನಲ್ಲಿ ವಿವಿಧ ಅಕೌಂಟ್‌ಗಳನ್ನು ಕ್ರಿಯೆಟ್ ಮಾಡಿ ಮೋಸ ಮಾಡುವವರಿದ್ದಾರೆ. ಆದರೆ ವಾಟ್ಸ್ ಆಪ್ ಈ ರೀತಿಯ ಮೋಸ ಸಾಧ್ಯನೇ ಇಲ್ಲ.ನಿಮ್ಮ ಅಕೌಂಟ್ ನಿಮ್ಮದೇ ಆಗಿರುತ್ತದೆ. ಒಂದೇ ವೇಳೆ ಫೋಟೋ ಹಾಕಿ ಅಕೌಂಟ್ ಸೃಷ್ಟಿಸಿದ್ದರೂ ನಿಮ್ಮ ಫೋನಿನಲ್ಲಿ ಸೇವ್ ಆಗಿರುವ ಎಲ್ಲಾ ಸ್ನೇಹಿತರ ಜೊತೆ ಸಂಪರ್ಕಿಸಲು ಬೇರೆಯವರಿಗೆ ಸಾಧ್ಯವಿಲ್ಲ.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?
ಈ ಹಿಂದಿನ ಪುಟದಲ್ಲಿ ತಿಳಿಸಲಾದ ಕಾರಣದ ಜೊತೆಗೆ ಜಾಹೀರಾತು ಮೆಸೇಜ್‌ಗಳು ವಾಟ್ಸ್ ಆಪ್‌ನಲ್ಲಿ ಬರುವುದೇಇಲ್ಲ.ಆಪ್‌ನಲ್ಲಿ ಯಾವುದೇ ಕಾರಣಕ್ಕೆ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಕಂಪೆನಿ ಈಗಾಗಲೇ ಘೋಷಿಸಿದೆ. ತನ್ನ ಆದಾಯಕ್ಕಾಗಿ ವಾಟ್ಸ್ ಆಪ್
ಒಂದು ವರ್ಷ ಈ ಸೇವೆ ಉಚಿತವಾಗಿ ನೀಡುತ್ತಿದೆ. ಒಂದು ವರ್ಷದ ಬಳಿಕ ನಿಗದಿ ಪಡಿಸಿದ ಚಂದಾ ಶುಲ್ಕ ಪಾವತಿಸಿ ವಾಟ್ಸ್‌ಆಪ್‌ನಲ್ಲಿ ಮುಂದುವರಿಯಬೇಕಾಗುತ್ತದೆ.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?
ವಾಟ್ಸ್ ಆಪ್‌ನಲ್ಲಿ ಯಾವುದೇ ಇಮೇಲ್ ಐಡಿ,ಪಾಸ್‌ವರ್ಡ್ ಟೈಪ್ ಮಾಡಿ ಅಕೌಂಟ್ ಕ್ರಿಯೆಟ್ ಮಾಡಿ ಓಪನ್ ಮಾಡುವ ಅಗತ್ಯವಿಲ್ಲ.ಫೋನ್ ನಂಬರ್ ಒಂದು ಇದ್ದರೆ ಸಾಕು ಅಕೌಂಟ್ ಕ್ರಿಯೆಟ್ ಆಗುತ್ತದೆ.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?
ವಾಟ್ಸ್ ಆಪ್‌ನಲ್ಲಿ ಲಾಗಿನ್ ಲಾಗ್‌ಔಟ್ ಮಾಡುವ ಪ್ರಮೇಯವೇ ಬರುವುದಿಲ್ಲ. ಪುಶ್ ನೋಟಿಫಿಕೇಶನ್ ಯಾವಾಗಲೂ ಆನ್ ಅಗಿರುತ್ತದೆ.ಇಂಟರ್‌ನೆಟ್ ಸಂಪರ್ಕ ಆದ ಕೂಡಲೇ ಸ್ನೇಹಿತರ ಮೆಸೇಜ್ ನಿಮ್ಮ ವಾಟ್ಸ್ ಆಪ್ ಅಕೌಂಟ್ ಬರತೊಡಗುತ್ತದೆ.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?
ನಿಜವಾದ ಸ್ನೇಹಿತರು:
ಫೇಸ್‌ಬುಕ್‌ನ ನೂರಕ್ಕೂ ಅಧಿಕ ಸ್ನೇಹಿತರಿರಬಹುದು. ಆದರೆ ಅದರಲ್ಲಿ ನಾವು ಸಂಪರ್ಕ ಹೊಂದಿರುವುದು ಕೆಲವೇ ಕೆಲವು ಸ್ನೇಹಿತರಲ್ಲಿ ಮಾತ್ರ.ಆದರೆ ವಾಟ್ಸ್‌ಆಪ್ ಹಾಗಲ್ಲ. ನಿಮ್ಮ ಫೋನ್ contacts ನಲ್ಲಿರುವ ಸ್ನೇಹಿತರು ಯಾರೆಲ್ಲ ಇದ್ದರೋ ಅವರ ಜೊತೆ ಮಾತ್ರ ಸಂಪರ್ಕ ಮಾಡಬಹುದು.


Click it and Unblock the Notifications








