ವಾಟ್ಸ್‌ಆಪ್ ಪೇಮೆಂಟ್ ಸೇವೆಗಿಂತ ಸಂಪೂರ್ಣ ಭಿನ್ನವಾಗಿದೆ ''ಫೇಸ್‌ಬುಕ್ ಪೇಮೆಂಟ್'' ಸೇವೆ!!
ವಾಟ್ಸ್‌ಆಪ್ ಮೂಲಕ ಪೇಮೆಂಟ್ ಸೇವೆಯನ್ನು ನೀಡಲು ಮುಂದಾಗಿರುವ ಫೇಸ್‌ಬುಕ್, ಇದೀಗ ತನ್ನ ಮುಖ್ಯ ತಾಣ ಫೇಸ್‌ಬುಕ್ ಮೂಲಕವೂ ಪೇಮೆಂಟ್ ಸೇವೆಯನ್ನು ನೀಡಲಿದೆ ಎನ್ನುವ ಸುದ್ದಿ ಇದೀಗ ನಿಜವಾಗಿದೆ.
ವಾಟ್ಸ್‌ಆಪ್ ಮೂಲಕ ಪೇಮೆಂಟ್ ಸೇವೆಯನ್ನು ನೀಡಲು ಮುಂದಾಗಿರುವ ಫೇಸ್‌ಬುಕ್, ಇದೀಗ ತನ್ನ ಮುಖ್ಯ ತಾಣ ಫೇಸ್‌ಬುಕ್ ಮೂಲಕವೂ ಪೇಮೆಂಟ್ ಸೇವೆಯನ್ನು ನೀಡಲಿದೆ ಎನ್ನುವ ಸುದ್ದಿ ಇದೀಗ ನಿಜವಾಗಿದೆ. ವಾಟ್ಸ್‌ಆಪ್ ಪೇಮೆಂಟ್ ಸೇವೆಗಿಂತ ಸ್ವಲ್ಪ ಭಿನ್ನವಾಗಿ ಫೇಸ್‌ಬುಕ್ ಮೂಲಕ ಪೇಮೆಂಟ್ ಸೇವೆಯನ್ನು ಒದಗಿಸಲು ಫೇಸ್‌ಬುಕ್ ಸಂಸ್ಥೆ ಮುಂದಾಗಿದೆ.
ವಾಟ್ಸ್‌ಆಪ್ ಪೇಮೆಂಟ್ ವ್ಯವಸ್ಥೆಯಲ್ಲಿರುವಂತಹ ಯುಪಿಐ ಪೇಮೆಂಟ್ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ಆಯ್ಕೆಗಳ ಬದಲಾಗಿ 'ಒಟಿಪಿ' ಆಧಾರಿತ ಪೇಮೆಂಟ್ ಸೇವೆಯನ್ನು ಫೇಸ್‌ಬುಕ್ ಆಪ್ ಮೂಲಕ ಕಂಪೆನಿ ಪರಿಚಯಿಸುತ್ತಿದೆ. ಮೊಬೈಲ್ ಸಂಖ್ಯೆ ಮೂಲಕ ಪೇಮೆಂಟ್ ಮಾಡಬಹುದಾದ ಈ ಸೇವೆಯಲ್ಲಿ ಪ್ರತಿಬಾರಿ 'ಒಟಿಪಿ' ಗ್ರಾಹಕರಿಗೆ ದೊರೆಯಲಿದೆ ಎಂದು ತಿಳಿದುಬಂದಿದೆ.

ಫೇಸ್‌ಬುಕ್ ಮೂಲಕ ಯಾವುದೇ ಬಿಲ್ ಪಾವತಿ ಮತ್ತು ಹಣವರ್ಗಾವಣೆ ಸೇರಿದಂತೆ ಎಲ್ಲಾ ಸೇವೆಗಳಿಗೂ ಸಿಗುವ ಫೇಸ್‌ಬುಕ್‌ನಲ್ಲಿ ಪ್ರತಿಬಾರಿಯೂ ಒಟಿಪಿ ಮೂಲಕ ಹಣಪಾವತಿ ಮಾಡಬಹುದಾಗಿದೆ. ಹಾಗಾಗಿ, ಫೇಸ್‌ಬುಕ್ ಬಳಕೆದಾರರು ಪೇಸ್‌ಬುಕ್ ಮತ್ತು ಬ್ಯಾಂಕಿನ ಎರಡೂ ಸುರಕ್ಷತೆಯನ್ನು ಒಟ್ಟಿಗೆ ಪಡೆಯಲಿದ್ದಾರೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

ಹೊಸದಾಗಿ ಪೇಮೆಂಟ್ ಐಕಾನ್!!
ಫೇಸ್‌ಬುಕ್ ಬಳಕೆದಾರರು ಬಳಸುತ್ತಿರುವ ಫೇಸ್‌ಬುಕ್ ಆಪ್‌ನಲ್ಲಿಯೇ ಹೊಸ ಪೇಮೆಂಟ್ ಐಕಾನ್ ಅನ್ನು ಫೇಸ್‌ಬುಕ್ ತರಲಿದೆ ಎನ್ನಲಾಗಿದೆ. ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್ ಐಕಾನ್ ಪಕ್ಕದಲ್ಲಿಯೇ ಪೇಮೆಂಟ್ ಸೇವೆಯನ್ನು ನೀಡಲು ಫೇಸ್‌ಬುಕ್ ಯೋಜನೆಯೊಂದನ್ನು ರೂಪಿಸುತ್ತಿದ್ದು, ಇದು ಪಾವತಿಗೆ ಹೆಚ್ಚು ಸಹಾಯವಾಗಲಿದೆ.

ಪರೀಕ್ಷೆ ನಡೆದಿದೆ!!
ಈಗಾಗಲೇ ಫೇಸ್‌ಬುಕ್ ತನ್ನ ಆಪ್‌ನಲ್ಲಿ ಪೇಮೆಂಟ್ ಸೇವೆಯನ್ನು ನೀಡುವ ಸಲುವಾಗಿ ಪರೀಕ್ಷೆಯನ್ನು ಆರಂಭಿಸಿದೆ. ವಾಟ್ಸ್‌ಆಪ್ ನಲ್ಲಿ UPI ಪೇಮೆಂಟ್ ಆಯ್ಕೆಯನ್ನು ನೀಡುರುವ ಫೇಸ್‌ಬುಕ್ ಕಂಪೆನಿ, ತನ್ನ ಮುಖ್ಯ ಆಪ್‌ನಲ್ಲಿ ಬ್ಯಾಂಕ್‌ಗಳಿಂದ ಪ್ರತಿಬಾರಿಯೂ ಒಟಿಪಿ ಬದಲಾಗುವಂತಹ ಪೇಮೆಂಟ್ ಸೇವೆ ನೀಡಲು ಮುಂದಾಗಿದೆ.

ಪೇಮೆಂಟ್ ಮಾತ್ರವಲ್ಲ.!!
ಫೇಸ್‌ಬುಕ್ ಪೇಮೆಂಟ್ ಸೇವೆಯಲ್ಲಿ ಫೇಸ್‌ಬುಕ್ ಮೂಲಕ ಹಣ ವರ್ಗಾವಣೆ, ಹಾಣ ಪಾವತಿ, ಸೇರಿದಂತೆ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳುವ ಅವಕಾಶ, DTH, ಬ್ರಾಡ್ ಬ್ಯಾಂಡ್ ಸೇರಿದಂತೆ ಹಲವು ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಹಾಗಾಗಿ, ಯಾವುದೇ ದೇಶದಲ್ಲಿ ಯಾವುದೇ ಆನ್‌ಲೈನ್ ಪಾವತಿ ಫೇಎಸ್‌ಬುಕ್‌ನಿಂದ ಇನ್ನು ಸಾಧ್ಯವಾಗಲಿದೆ.


UPI ಜೊತೆ ಒಟಿಪಿ!!
ಫೇಸ್‌ಬುಕ್ ಆಪ್‌ನಲ್ಲಿ ಪೇಮೆಂಟ್ ಸೇವೆಯನ್ನು ನೀಡುವ ಮೂಲಕ UPI ಆಧಾರಿತ ಸೇವೆಯನ್ನು ನೀಡುತ್ತಿರುವ ಆಪ್‌ಗಳಿಗೆ ಸೆಡ್ಡು ಹೊಡೆದಿರುವ ಫೇಸ್‌ಬುಕ್ UPI ಜೊತೆ ಒಟಿಪಿ ಸೇವೆ ಅಳವಡಿಸಿಕೊಳ್ಳುತ್ತಿರುವುದು ಗ್ರಾಹಕರ ನಂಬಿಕೆ ಪಾತ್ರವಾಗಲಿದೆ. ಪ್ರತಿಬಾರಿ ಒಟಿಪಿ ನೀಡುವುದು ಗ್ರಾಹಕರ ಬ್ಯಾಂಕ್ ಖಾತೆಗೆ ಹೆಚ್ಚು ಸುರಕ್ಷತೆಯಾಗಿದೆ.

ತೇಜ್, ಫೋನ್‌ಪೇಗೆ ಹೊಡೆತ!!
ಫೇಸ್‌ಬುಕ್ ತರುತ್ತಿರುವ ವಾಟ್ಸ್‌ಆಪ್ ಮತ್ತು ಫೇಸ್‌ಬುಕ್ ಪೇಮೆಂಟ್ ಸೇವೆಗಳಿಂದ ಗೂಗಲ್ ತೇಜ್, ಪೇಟಿಎಂ, ಪೇನ್‌ಪೇ, ಭೀಮ್ ಸೇರಿದಂತೆ UPI ಆಧಾರಿತ ಸೇವೆಯನ್ನು ನೀಡುತ್ತಿರುವ ಆಪ್‌ಗಳಿಗೆ ಭಾರಿ ಹೊಡೆತವನ್ನು ನೀಡಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಅದರಲ್ಲಿಯೂ ಫೇಸ್‌ಬುಕ್ ಪೇಮೆಂಟ್ ಸೇವೆ ವಿಶಿಷ್ಟವಾಗಿ ಆಕರ್ಷಕವಾಗಿರಲಿದೆ.


Click it and Unblock the Notifications








