ಭವಿಷ್ಯದ ಪತ್ರಕರ್ತರಿಗೆ ಫೇಸ್‌ಬುಕ್‌ನಿಂದ ಸ್ಕಾಲರ್‌ಶಿಪ್

By GizBot Bureau
|

ಸಾಮಾಜಿಕ ಜಾಲತಾಣದ ದೈತ್ಯ ಎಂದು ಕರೆಸಿಕೊಳ್ಳುವ ಫೇಸ್ ಬುಕ್ ಭಾರತದಲ್ಲಿ ಏಷ್ಯಿಯನ್ ಕಾಲೇಜ್ ಆಫ್ ಜರ್ನಲಿಸಂ(ACJ) ಸಹಯೋಹದೊಂದಿಗೆ ಫೇಸ್ ಬುಕ್ ಜರ್ನಲಿಸಂ ಪ್ರೊಜೆಕ್ಟ್ ಸ್ಕಾಲರ್ ಶಿಪ್ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ, ಫೇಸ್ ಬುಕ್ ಐದು ಜನ ವಿದ್ಯಾರ್ಥಿಗಳಿಗೆ ಮಾಧ್ಯಮ ಶಾಲೆಯ ಮುದ್ರಣ, ಸುದ್ದಿ ಮಾಧ್ಯಮ, ರೇಡಿಯೋ, ಟೆಲಿವಿಷನ್ ವಿಭಾಗದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತದೆ. ಯಾವ ವಿದ್ಯಾರ್ಥಿಯು ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿರುತ್ತಾರೋ ಅವರು ಈ ಕಾರ್ಯಕ್ರಮಕ್ಕೆ ಅರ್ಹರಾಗಿರುತ್ತಾರೆ.

ಭವಿಷ್ಯದ ಪತ್ರಕರ್ತರಿಗೆ ಫೇಸ್‌ಬುಕ್‌ನಿಂದ ಸ್ಕಾಲರ್‌ಶಿಪ್

ಮುಂದಿನ ಪೀಳಿಗೆಯ ಪತ್ರಕರ್ತರನ್ನು ಬೆಂಬಲಿಸುವ ನಿಟ್ಟಿನಲ್ಲಿ ಫೇಸ್ ಬುಕ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಏಷಿಯನ್ ಕಾಲೇಜಿನ ಸಹಯೋಗದ ಕಾರಣದಿಂದಾಗಿ ನಿಜವಾದ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಮತ್ತು ಉನ್ನತ ಮಟ್ಟದಲ್ಲಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಹಕಾರಿಯಾಗಿದೆ.

ಏಷಿಯನ್ ಕಾಲೇಜಿನ ಅಧ್ಯಕ್ಷರಾಗಿರುವ ಶಶಿಕುಮಾರ್ ಅವರು” ಫೇಸ್ ಬುಕ್ ಜೊತೆ ಫೇಸ್ ಬುಕ್ ಜರ್ನಲಿಸಂ ಪ್ರೊಜೆಕ್ಟ್ ಗೆ ಕೈಜೋಡಿಸಲು ನಮಗೆ ಖುಷಿಯಾಗಿದೆ. ಈ ಕಾರ್ಯಕ್ರಮದಿಂದ ನಮ್ಮ ವಿದ್ಯಾರ್ಥಿಗಳು ಲಾಭವನ್ನು ಪಡೆಯುತ್ತಾರೆ ಎಂದು ಭಾವಿಸಿದ್ದೇವೆ. ಇದು ಅನುಭವ ಮತ್ತು ಸತ್ಯ ಆಧಾರಿತ ಸುದ್ದಿಗಳ ಬಗೆಗಿನ ಅರಿವನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡಲಿದೆ ಎಂದು ಭಾವಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಫೇಸ್ ಬುಕ್ ಭೂಮ್ ಲೈವ್ (BOOM Live) ಅನ್ನೋ ಡಿಜಿಟಲ್ ಫ್ಯಾಕ್ಟರಿ ಪರೀಕ್ಷಣಾ ಸಂಸ್ಥೆಯೊಂದಿಗೂ ಕೂಡ ಇದಕ್ಕಾಗಿ ಕೈಜೋಡಿಸಿದೆ. ಸದ್ಯ ಇದು ವಾಸ್ತವಿಕತೆಯ ತಪಾಸಣೆಯನ್ನು ಹಿಂದಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ನಡೆಸುತ್ತದೆ. ಫೋಟೋಸ್, ವೀಡಿಯೋ ಮತ್ತು ಲೇಖನಗಳ ಲಿಂಕ್ ಗಳ ಸತ್ಯಾಸತ್ಯತೆಯ ಪರಿವೀಕ್ಷಣೆಯನ್ನು ಈ ಸಂಸ್ಥೆ ನಡೆಸುತ್ತಿದೆ. ಈ ಹಿಂದೆ ಈ ಸಂಸ್ಥೆ ವಾಸ್ತವ ತಪಾಸಣೆಯನ್ನು ಕರ್ನಾಟಕದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ನಡೆಸುತ್ತಿತ್ತು.

“ಸುದ್ದಿಯ ವ್ಯವಹಾರ ನಿರಂತರವಾಗಿ ಬದಲಾಗುತ್ತಿರುವಂತೆಯೇ, ನಮ್ಮ ಭವಿಷ್ಯದ ಪತ್ರಕರ್ತರ ಕೌಶಲ್ಯಗಳು ಮತ್ತು ಸಾಮರ್ಥ್ಯಗಳು ಸಹ ವಿಕಸನಗೊಳ್ಳಬೇಕು. ACJ ಯೊಂದಿಗಿನ ನಮ್ಮ ಸಹಯೋಗವು ಪತ್ರಿಕೋದ್ಯಮದ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ನಮ್ಮ ಬದ್ಧತೆಯನ್ನು ಭವಿಷ್ಯದ ಪತ್ರಕರ್ತರಿಗೆ ತರಬೇತಿ ನೀಡುವ ಮೂಲಕ ಪ್ರತಿಬಿಂಬಿಸುತ್ತದೆ. BOOM ಲೈವ್ ನೊಂದಿಗೆ ನಮ್ಮ ಪಾಲುದಾರಿಕೆಯು ನಾವು ಎಲ್ಲಾ ಫ್ಯಾಟ್ ಫಾರ್ಮ್ ಗಳಲ್ಲಿ ತಪಾಸಣಾ ವ್ಯವಸ್ಥೆಯ ಬೆಳವಣಿಗೆಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತೇವೆ.

ಒಟ್ಟಾರೆಯಾಗಿ ಎಲ್ಲರೂ ವಿಶ್ವದಾದ್ಯಂತ ವಿಶ್ವಾಸಾರ್ಹ ಪತ್ರಿಕೋದ್ಯಮದ ಭವಿಷ್ಯವನ್ನು ಬೆಂಬಲಿಸುವ ಕಡೆಗೆ ಒಂದು ಹೆಜ್ಜೆಯನ್ನು ಇಡುತ್ತಿದ್ದೇವೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ ಫೇಸ್ ಬುಕ್ ನ ವಿಶ್ವ ಸುದ್ದಿ ಪಾಲುದಾರಿಕೆಗಳ ಮುಖ್ಯಸ್ಥರಾಗಿರುವ ಕ್ಯಾಮ್ಪೆಲ್ ಬ್ರೌನ್ .

“ನಾವು ಫೇಸ್ ಬುಕ್ ನೊಂದಿಗೆ ಕೈ ಜೋಡಿಸಲು ಉತ್ಸುಕರಾಗಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ಆನ್ ಲೈನ್ ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ ಎಂದು ಭಾವಿಸುತ್ತೇವೆ “ ಎಂದು ಭೂಮ್ ಲೈವ್ ನ ಸಂಸ್ಥಾಪಕರಾಗಿರುವ ಗೋವಿಂದರಾಜ್ ಎತಿರಾಜ್ ಅವರ ಅಭಿಪ್ರಾಯ. ಒಟ್ಟಾರೆ ಫೇಸ್ ಬುಕ್ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಇದರ ಸದುಪಯೋಗ ಯಾರು ಪಡೆದುಕೊಳ್ಳುತ್ತಾರೆ ಕಾದು ನೋಡಬೇಕು.

Best Mobiles in India

English summary
Facebook announces scholarship programme to support upcoming journalists. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X