ಭಾರತದಲ್ಲಿ ಫೇಸ್‌ಬುಕ್ ಅವತಾರ್ ಫೀಚರ್ಸ್ ಬಿಡುಗಡೆ!
ಸೊಶೀಯಲ್ ಮೀಡಿಯಾ ದೈತ್ಯ ಎಂದೆನಿಸಿಕೊಂಡಿರುವ ಫೇಸ್‌ಬುಕ್, ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈಗಾಗಲೇ ಬಳಕೆದಾರರಿಗೆ ಹಲವಾರು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿರುವ ಫೇಸ್‌ಬುಕ್ ಇದೀಗ ತನ್ನ ಮತ್ತೊಂದು ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಜನಪ್ರಿಯ ಸೊಶೀಯಲ್ ಮೀಡಿಯಾ ಆಪ್ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಚಾಟ್ ಮತ್ತು ಕಾಮೆಂಟ್‌ಗಳಲ್ಲಿ ಸ್ಟಿಕ್ಕರ್‌ಳನ್ನ ಬಳಸಲು, ತಾವು ವರ್ಚುವಲ್ ಲುಕ್‌ಲೈಕ್ ಅನ್ನು ಕಸ್ಟಮೈಸ್ ಮಾಡಲು ಅನುಮತಿಸುವ ಫೇಸ್‌ಬುಕ್ ಅವತಾರ್‌ಗಳನ್ನ ಭಾರತದಲ್ಲಿ ಪರಿಚಯಿಸಿದೆ. ಸದ್ಯ ಇದು ಬಳಕೆದಾರರ ಖಾತೆಗಳ ಸಾಮಾಜಿಕ ಜಗ್ಗರ್‌ನ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಫೇಸ್‌ಬುಕ್ ಪರಿಚಯಿಸಿರುವ ಫೇಸ್‌ಬುಕ್ ಅವತಾರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇತ್ತೀಚಿನ ದಿನಗಳಲ್ಲಿ ಸೊಶೀಯಲ್ ಮೀಡಿಯಾ ಕಮ್ಯೂನಿಕೇಶನ್ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಫೇಸ್‌ಬುಕ್ ಅವತಾರ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಭಾರತದಲ್ಲಿ ಬಳಕೆದಾರರಿಗಾಗಿ ಕಸ್ಟಮೈಸ್ ಮಾಡಲಾದ ವಿವಿಧ ಮುಖಗಳು, ಕೇಶವಿನ್ಯಾಸ ಮತ್ತು ಬಟ್ಟೆಗಳನ್ನು ಅವತಾರ್‌ಗಳು ಬೆಂಬಲಿಸುತ್ತವೆ ಎಂದು ಫೇಸ್‌ಬುಕ್ ಹೇಳಿದೆ. ಸದ್ಯ ದೇಶದಲ್ಲಿ ಚೀನಿ ಆಪ್‌ಗಳನ್ನ ಬ್ಯಾನ್ ಮಾಡಿರುವುದರಿಂದ ಅಲ್ಲದೆ ಚೀನಾ ಪ್ರಾಡಕ್ಟ್‌ಗಳ ವಿರುದ್ದ ಜಾಗೃತಿ ನಡೆಯುತ್ತಿರುವುದರಿಮದ ಇದು ಫೇಸ್‌ಬುಕ್‌ಗೆ ಅನುಕೂಲವಾಗಲಿದೆ ಎನ್ನಲಾಗ್ತಿದೆ.

ಈಗಾಗಲೇ ಸ್ನ್ಯಾಪ್‌ಚಾಟ್‌ನ ಜನಪ್ರಿಯ ಬಿಟ್‌ಮೊಜಿಯ ವಿರುದ್ದ ಸ್ಫರ್ಧಿಸಲು ಫೇಸ್‌ಬುಕ್ ತನ್ನ ಅವತಾರ್‌ಗಳನ್ನ ಪರಿಚಯಿಸಲಾಗಿತ್ತು. ಇದೀಗ ಸ್ನಾಪ್‌ಚಾಟ್ ಭಾರತದಲ್ಲಿ ಬ್ಯಾನ್ ಆಗಿರುವುದರಿಂದ ಫೇಸ್‌ಬುಕ್ ಅವತಾರ್ ಜನಪ್ರಿಯತೆಯನ್ನ ಪಡೆದುಕೊಳ್ಳಲು ಅವಕಾಶ ಸಿಗಲಿದೆ ಎನ್ನಲಾಗ್ತಿದೆ. ಫೇಸ್‌ಬುಕ್‌ನ ಈ ಫೀಚರ್ಸ್ ಸಾಮಾಜಿಕ ಸೇವೆ, ಹಾಸ್ಯ, ದೃಷ್ಟಿ ಸಂವಹನ ಹೆಚ್ಚಿಸುವ ಗುರಿಯನ್ನ ಹೊಂದಿದೆ. ಇನ್ನು ಬಳಕೆದಾರರು ತಮ್ಮ ಅವತಾರವನ್ನು ಸ್ಟಿಕ್ಕರ್ ಟ್ರೇನಿಂದ ನ್ಯೂಸ್ ಫೀಡ್ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಅಥವಾ ಮೆಸೆಂಜರ್‌ನಲ್ಲಿ ರಚಿಸಬಹುದಾಗಿದೆ.

ಇನ್ನು ಸ್ನ್ಯಾಪ್‌ಚಾಟ್ ತನ್ನ ಬಿಟ್‌ಮೊಜಿ ಮೂಲಕ ಭಾರತದಲ್ಲಿ ಜನಪ್ರಿಯತೆಯನ್ನ ಗಳಿಸಿಕೊಂಡಿತ್ತು. ಅಷ್ಟೆ ಅಲ್ಲ ತನ್ನ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಸುಮಾರು 70%, ಅಥವಾ ಅದರ 210 ಮಿಲಿಯನ್ ಬಳಕೆದಾರರಲ್ಲಿ 147 ಮಿಲಿಯನ್ ಜನರು ತಮ್ಮದೇ ಆದ ಬಿಟ್‌ಮೊಜಿಗಳನ್ನು ರಚಿಸಿಕೊಂಡಿದ್ದರು ಎಂದು ಹೇಳಿತ್ತು. ಸದ್ಯ ಇದೀಗ ಫೇಸ್‌ಬುಕ್ ತನ್ನ ಅವತಾರ್‌ಗಳನ್ನ ಬಿಡುಗಡೆ ಮಾಡಿರುವುದಿಂದ ಇನ್ನು ಹೆಚ್ಚಿನ ಬಳಕೆದಾರರಿಗೆ ಅನುಕೂಲಕರವಾಗಿರಲಿದೆ ಎಂದು ಹೇಳಲಾಗ್ತಿದೆ. ಈ ಅವತಾರ್‌ಗಳಿಂದ ಸಂದೇಶಗಳಿಗೆ ಅನುಗುಣವಾಗಿ ಸ್ಟಿಕರ್‌ಗಳನ್ನ ಕಳುಹಿಸುವುದು ಸುಲಭವಾಗಲಿದೆ.


Click it and Unblock the Notifications








