Subscribe to Gizbot

ಫೇಸ್ ಬುಕ್ ಮಾರ್ಕ್ > ಮೈಕ್ರೋಸಾಫ್ಟ್ ಬಾಮರ್

Posted By: Varun
ಫೇಸ್ ಬುಕ್ ಮಾರ್ಕ್ > ಮೈಕ್ರೋಸಾಫ್ಟ್ ಬಾಮರ್

ವಿಶ್ವದ ನಂ.1 ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಶೇರು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ ಎಂಬ ಸುದ್ದಿ ಇಂಟರ್ನೆಟ್ ನಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಸುಮಾರು 11.8 ಬಿಲಿಯನ್ ಡಾಲರ್ ಮೊತ್ತದ ಪ್ರಾಥಮಿಕ ಶೇರುಗಳ ಬಿಡುಗಡೆ ಮಾಡುತ್ತಿರುವ ಫೇಸ್ ಬುಕ್, ಮಾರುಕಟ್ಟೆಯಲ್ಲಿ ಏನು ಮೋಡಿ ಮಾಡುತ್ತದೋ ಇಲ್ಲವೋ, ಆದರೆ ಫೇಸ್ ಬುಕ್ ಒಡೆಯ ಮಾರ್ಕ್ ಜುಕರ್ ಬರ್ಗ್ ನಂತೂ ಮೈಕ್ರೋಸಾಫ್ಟ್ ನ CEO ಸ್ಟೀವ್ ಬಾಮರ್ ಗಿಂತಾ ಶ್ರೀಮಂತವಾಗಿಸಲಿದೆ! (17.6ಬಿಲಿಯನ್ ಡಾಲರ್ ), ಈ ಶೇರು ಬಿಡುಗಡೆಯ ನಂತರ. ಮತ್ತೊಂದು ಮುಖ್ಯವಾದ ಅಂಶವೇನೆಂದರೆ ಸ್ಟೀವ್ ಬಾಮರ್ ವಯಸ್ಸಿನಲ್ಲಿ ಮಾರ್ಕ್ ಜುಕರ್ ಬರ್ಗ್ ಗಿಂತಾ ದುಪ್ಪಟ್ಟು ದೊಡ್ಡವರು.

ಖ್ಯಾತ ವಿವಿ ಹಾರ್ವರ್ಡ್ ನಲ್ಲಿ ಓದುತ್ತಿದ್ದಾಗ ಬಂದ ಐಡಿಯಾದಿಂದ ಫೇಸ್ ಬುಕ್ ಶುರು ಮಾಡಿದಾಗ ಜುಕರ್ ಬರ್ಗ್ ಗೆ ಕೇವಲ 19 ವರ್ಷ ವಯಸ್ಸು. 2004 ರಲ್ಲಿ ಪ್ರಾರಂಭವಾದಾಗ ತನ್ನ ಕಾಲೇಜ್ ಗೆಳೆಯರನ್ನು ಮಾತ್ರ ಫೇಸ್ ಬುಕ್ ನಲ್ಲಿ ಖಾತೆ ತೆರೆಯಲು ಅನುಮತಿ ಕೊಟ್ಟಿದ್ದ ಮಾರ್ಕ್, 2006 ರಲ್ಲಿ ಹೊರ ಜಗತ್ತಿನ ಎಲ್ಲರಿಗೂ ಫೇಸ್ ಬುಕ್ ಸೇರಲು ಅವಕಾಶ ಮಾಡಿಕೊಟ್ಟ. ಅದಾದ ಮೇಲೆ ಶರವೇಗದಲ್ಲಿ ಖ್ಯಾತಿ ಪಡೆದ ಫೇಸ್ ಬುಕ್ ಈಗ ಹೆಚ್ಚು ಕಡಿಮೆ 900 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ, ಇಂಟರ್ನೆಟ್ ಜಗತ್ತಿನಲ್ಲಿ ಬಹುಬೇಗ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಾರ್ಕ್ ಜುಕೆರ್ ಬರ್ಗ್ ಒಂದು ಒಳ್ಳೆಯ ನಿದರ್ಶನ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot