Home
ಸುದ್ದಿಜಾಲ

ನಿಜಕ್ಕೂ ಶಾಕಿಂಗ್ ಸುದ್ದಿ: ಆಕೌಂಟ್ ಇಲ್ಲದವರ ಮಾಹಿತಿಯನ್ನು ಸಂಗ್ರಹಿಸಿದೆ ಫೇಸ್‌ಬುಕ್ ...!

By Srinidhi

ಫೇಸ್‌ಬುಕ್ ಆಕೌಂಟ್ ಇಲ್ಲದವರ ಮಾಹಿತಿಯನ್ನು ಫೇಸ್‌ಬುಕ್ ಸಂಗ್ರಹಿಸುತ್ತಿದೆ ಎನ್ನುವ ಆಂತಕಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಈ ಹಿಂದೆ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಮಾತ್ರವೇ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದೆ ಎನ್ನಲಾಗಿತ್ತು. ಆದರೆ ಫೇಸ್ ಬುಕ್ ಬಳಿ ಬಳಕೆದಾರರಲ್ಲದವರ ಮಾಹಿತಿಯೂ ಲಭ್ಯವಿದೆ ಎನ್ನಲಾಗಿದೆ.

ಆಕೌಂಟ್ ಇಲ್ಲದವರ ಮಾಹಿತಿಯನ್ನು ಸಂಗ್ರಹಿಸಿದೆ ಫೇಸ್‌ಬುಕ್...!

ಫೇಸ್‌ಬುಕ್ ಹೊಂದಿದವರ ಮಾಹಿತಿಯನ್ನು ಮಾತ್ರವೇ ಸಂಗ್ರಹಿಸುತ್ತಿದೆ ಎನ್ನುವ ಮಾಹಿತಿಯನ್ನು ಹೊರ ಹಾಕಿದ ಸಂದರ್ಭದಲ್ಲಿ ಸಾಕಷ್ಟು ಕೋಲಾಹಲ ಬಳಕೆದಾರರಲ್ಲಿ ಉಂಟಾಗಿತ್ತು. ಸದ್ಯ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಫೇಸ್‌ಬುಕ್ ಬಳಕೆದಾರಲ್ಲದವರ ಮಾಹಿತಿಯನ್ನು ಸಂಗ್ರಹಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಳೆದಾರರಲ್ಲದವರ ಮಾಹಿತಿ:

ಬಳೆದಾರರಲ್ಲದವರ ಮಾಹಿತಿ:

ಸದ್ಯ ಫೇಸ್‌ಬುಕ್ ಬಳಿ ಬಳಕೆದಾರರಲ್ಲದವರ ಮಾಹಿತಿಯೂ ಇದೆ ಎನ್ನಲಾಗಿದೆ. ಆನ್‌ಲೈನ್‌ ಬಳಕೆ ಮಾಡುವ ಎಲ್ಲರ ಮಾಹಿತಿಯೂ ಫೇಸ್‌ಬುಕ್ ಬಳಿ ಇದೆ ಎನ್ನುವ ಮಾಹಿತಿಯ ಲಭ್ಯವಾಗಿದೆ. ಇದನ್ನು ಬಳಕೆದಾರರ ಗಮನಕ್ಕೆ ತರದೆ ಶೇಖರಿಸುತ್ತಿದೆ ಎನ್ನಲಾಗಿದೆ.

ತಡೆಯಲು ಸಾಧ್ಯವಿಲ್ಲ:

ತಡೆಯಲು ಸಾಧ್ಯವಿಲ್ಲ:

ಫೇಸ್‌ಬುಕ್ ತನ್ನ ಬಳಕೆದಾರರಲ್ಲದವರ ಮಾಹಿತಿಯನ್ನು ಸಂಗ್ರಹಿಸುವುದನ್ನು ತಡೆಯಲು ಸಾಧ್ಯವಿಲ್ಲ ಎನ್ನಲಾಗಿದೆ. ಏಕೆಂದರೆ ಫೇಸ್‌ಬುಕ್ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.

ಸ್ನೇಹಿತರ ಮೂಲಕ:

ಸ್ನೇಹಿತರ ಮೂಲಕ:

ಒಮ್ಮೆ ನಿಮ್ಮ ಸ್ನೇಹಿತರು ಫೇಸ್‌ಬುಕಿಗೆ ಲಾಗ್ ಇನ್ ಆದರೆ ಸಾಕು, ನಿಮ್ಮ ಮಾಹಿತಿಯೂ ಫೇಸ್‌ಬುಕ್ ಪಾಲಿಗೆ ದೊರೆಯಲಿದೆ. ಏಕೆಂದರೆ ನಿಮ್ಮ ಸ್ನೇಹಿತರು ನಿಮ್ಮ ಮೇಲ್ ಐಡಿ ಮತ್ತು ಫೋನ್ ನಂಬರ್ ಅನ್ನು ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡಿರುತ್ತಾರೆ. ಇದರಿಂದ ನಿಮ್ಮ ಮಾಹಿತಿಯೂ ಆ ಮೂಲಕ ಫೇಸ್‌ಬುಕ್ ಪಡೆದುಕೊಳ್ಳಲಿದೆ.

How to view all photos, pages, comments and posts you liked on Facebook (KANNADA)
ಇಂಟರನೆಟ್ ಬ್ರೌಸಿಂಗ್:

ಇಂಟರನೆಟ್ ಬ್ರೌಸಿಂಗ್:

ಇದಲ್ಲದೇ ಫೇಸ್‌ಬುಕ್ ಕೆಲವು ವೆಬ್‌ ಸೈಟುಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಅವುಗಳನ್ನು ಬ್ರೌಸ್ ಮಾಡಿ ಸಂದರ್ಭದಲ್ಲಿ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಸಂಗ್ರಹಿಸಲಿದೆ.

ಶಾಡೋ ಫ್ರೋಫೈಲ್:

ಶಾಡೋ ಫ್ರೋಫೈಲ್:

ತನ್ನ ಬಳೆಕೆದಾರರಲ್ಲದೇ ಇಂಟರ್ನೆಟ್ ಬಳಕೆ ಮಾಡುವವರ ಮಾಹಿತಿಯನ್ನು ಸಂಗ್ರಹಿಸಿ ಶಾಡೋ ಪ್ರೋಫೈಲ್‌ ಅನ್ನು ಫೇಸ್‌ಬುಕ್ ರಚನೆ ಮಾಡುತ್ತಿದೆ ಎನ್ನಲಾಗಿದೆ. ಈ ಮೂಲಕ ಬಳಕೆದಾರರ ಮಾಹಿತಿಯನ್ನು ತನ್ನದಾಗಿಸಿಕೊಳ್ಳುತ್ತಿದೆ.

ಸಂಖ್ಯೆ ವೃದ್ಧಿಸಿಕೊಳ್ಳಲು:

ಸಂಖ್ಯೆ ವೃದ್ಧಿಸಿಕೊಳ್ಳಲು:

ಫೇಸ್‌ಬುಕ್ ಈ ಮಾಹಿತಿಯನ್ನು ತನ್ನ ಬಳಕೆದಾದರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಳಕೆ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಇದರಿಂದಾಗಿ ಯಾರು ಬಳಕೆ ಮಾಡುತ್ತಿಲ್ಲವೋ ಅವರಿಗೆ ಬಳಕೆ ಮಾಡುವಂತೆ ಪ್ರೇರೆಪಿಸಲಿದೆ.

Best Mobiles in India

English summary
Facebook collects data on you even if you don’t have an account. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+