ಮತ್ತೊಂದು ಸಾಹಸಕ್ಕೆ ಮುಂದಾದ ಫೇಸ್‌ಬುಕ್..!ಹೊಸ ಸ್ಯಾಟಲೈಟ್ ಲಾಂಚ್‌ಗೆ ಸಿದ್ಧತೆ..!
ಈಗಾಗಲೇ ಒಮ್ಮೆ ಇಡೀ ವಿಶ್ವಕ್ಕೆ ಇಂಟರ್ನೆಟ್ ಸೇವೆಯನ್ನು ಉಚಿತವಾಗಿ ನೀಡುವ ವಾದನ್ನು ಮಾಡಿದ್ದ ಫೇಸ್ಬುಕ್ ನೆಟ್ ನ್ಯೂಟ್ರಾಲಿಟಿಯನ್ನು ತರುವುದಾಗಿ ವಾದ ಮಾಡಿತ್ತು. ಆದರೆ ಇದು ಸಾಧ್ಯವಾಗಿರಲಿಲ್ಲ. ಆದರೆ ಹಟವನ್ನು ಬಿಡದ ಫೇಸ್ ಬುಕ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇಂಟರ್ನೆಟ್ ಸೇವೆಯನ್ನು ನೀಡುವ ಸಲುವಾಗಿ ಒಂದು ಸ್ಯಾಟಿಲೈಟ್ ಅನ್ನು ನಿರ್ಮಾಮಿಸಲು ಮುಂದಾಗಿದೆ. ಅಂಟೆನಾ ಎನ್ನುವ ಸ್ಯಾಟಲೆಟ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಈ ಕುರಿತು ಫೇಸ್ ಬುಕ್ ಹೆಚ್ಚಿನ ಮಾಹಿತಿಯನ್ನು ನೀಡಲಾಗಿಲ್ಲ ಎನ್ನಲಾಗಿದೆ. ಆದರೆ ಫೇಸ್ ಬುಕ್ ಮಾತ್ರ ಯಾರಿಗೂ ತಿಳಿಯದಂತೆ ಯೋಜನೆಗೆ ಕೈ ಹಾಕಿದೆ ಎನ್ನಲಾಗಿದ್ದು, ಈಗಾಗಲೇ ಈ ಸ್ಯಾಟಿಲೈಟ್ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಇದಕ್ಕಾಗಿ ಬೇಕಾಗಿರುವ ಎಲ್ಲಾ ಮಾದರಿಯ ತಯಾರಿಯನ್ನು ನಡೆಸಿದೆ.

ಇದರಿಂದಾಗಿ ಬಳಕೆದಾರರಿಗೆ ಉಚಿತವಾಗಿ ಇಂಟರ್ ನೆಟ್ ಸೇವೆಯನ್ನು ನೀಡುವ ಪ್ರಯತ್ನವನ್ನು ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ತನಗಳಿಗೆ ಸಾಕ್ಷಿಯಾಗಿರುವ ಫೇಸ್ ಬುಕ್ ಈ ಹೊಸ ಇಂಟರ್ನೆಟ್ ಸೇವೆಯ ಮೂಲಕ ಬಳಕೆದಾರರಿಗೆ ಇನ್ನು ದೊಡ್ಡ ಪ್ರಮಾಣದ ಮಾರುಕಟ್ಟೆಯನ್ನು ನಿರ್ಮಿಸಿಕೊಡಲಿದೆ. ಇದರಿಂದಾಗಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಈಗಾಗಲೆ ಹಲವು ಬಾರಿ ಈ ಮಾದರಿಯಲ್ಲಿ ಅನೇಕ ಸೇವೆಯನ್ನು ನೀಡಲು ಹಲವು ಬಾರಿ ಪ್ರಯತ್ನವನ್ನು ಮಾಡಿರುವ ಫೇಸ್ ಬುಕ್ ಈ ಬಾರಿ ಯಶಸ್ವಿಯಾಗುವ ಸಾಧ್ಯತೆಯೂ ಅಧಿಕಾವಾಗಿದೆ. ಇದರಿಂದಾಗಿಯೇ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟು ಕೊಡಲು ಮುಂದಾಗಿಲ್ಲ.. ಈ ಹೊಸ ಸೇವೆಯಿಂದಾಗಿ ವಿಶ್ವದ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆಯನ್ನು ತಲುಪಿಸುವ ಪ್ರಯತ್ನವನ್ನು ಫೇಸ್ ಬುಕ್ ಮಾಡುತ್ತಿದೆ.
ಇದು ಒಂದು ಮಾದರಿಯಲ್ಲಿ ಫೇಸ್ಬುಕ್ ಗೆ ಸಹಾಯವಾಗಲಿದೆ. ಇದಲ್ಲದೇ ಇಂಟರ್ನೆಟ್ ಇಲ್ಲದ ಕಡೆಗಳಲ್ಲಿಯೂ ಸೇವೆಯನ್ನು ನೀಡಲಿದೆ. ಫೇಸ್ ಬುಕ್ ಹೊಸದಾಗಿ ಲಾಂಚ್ ಮಾಡಲಿರುವ ಅಂಟೆನಾ ಸ್ಯಾಟಿಲೈಟ್ ಅನ್ನು 2019ರಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿದೆ. ಹೀಗೇ ಮಾಡಿದಲ್ಲಿ ಅನೇಕ ಮಂದಿಗೆ ಸಹಾಯ ಮಾಡಿದಲ್ಲದೇ ತಾನು ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳಲಿದೆ.
ಇದಲ್ಲದೇ ಇದಕ್ಕಾಗಿ ಸ್ಪೆಸ್ X ನೊಂದಿಗೆ ಫೇಸ್ ಬುಕ್ ಕೈ ಜೋಡಿಸಿದೆ ಎನ್ನುವ ಮಾತು ಸಹ ಕೇಳಿ ಬಂದಿದೆ. ಹೊಸ ಮಾದರಿಯ ಸ್ಯಾಟಿಲೈಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ಜಾಗತಿಕವಾಗಿ ಮತ್ತು ದೇಶಿಯವಾಗಿ ಸಾಕಷ್ಟು ದೊಡ್ಡ ಪ್ರಮಾಣದ ಬದಲಾವಣೆಗೆ ಕಾರಣವಾಗಲಿದೆ.


Click it and Unblock the Notifications








