Home
ಸುದ್ದಿಜಾಲ

ಲೈವ್‌ ಸ್ಟ್ರೀಮಿಂಗ್‌ ವೀಡಿಯೊ ನೋಡುವುದಕ್ಕೆ ಹೊಸ ಫೀಚರ್ಸ್‌ ಪರಿಚಯಿಸಿದ ಫೇಸ್‌ಬುಕ್‌!

ಇದು ಸೊಶೀಯಲ್‌ ಮೀಡಿಯಾ ಜಮಾನ. ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಇಂದಿನ ತಲೆಮಾರು ಹೆಚ್ಚಿನ ಪ್ರಮಾಣದಲ್ಲಿ ಸೊಶೀಯಲ್‌ ಮಿಡಿಯಾವನ್ನ ಬಳಸುತ್ತಾರೆ. ಸೊಶೀಯಲ್‌ ಮೀಡಿಯಾಗಳಲ್ಲಿ ತಮ್ಮ ಅನಿಸಿಕೆ ಅನುಭವಗಳನ್ನ ಹೇಳಿಕೊಳ್ಳುತ್ತಾರೆ. ಕ್ಯಾಂಪೆನ್‌ ಶುರುಮಾಡುತ್ತಾರೆ. ಅಷ್ಟೇ ಯಾಕೆ ದೇಶದ ಜನಾಭಿಪ್ರಾಯ ರೂಪಿಸುವಷ್ಟರ ಮಟ್ಟಿಗೆ ಸೊಶೀಯಲ್‌ ಮೀಡಿಯಾ ಆಪ್‌ಗಳು ಇಂದು ಬೆಳೆದು ನಿಂತಿವೆ. ಸದ್ಯ ಲಭ್ಯವಿರುವ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಫೇಸ್‌ಬುಕ್‌ ಆಪ್ಲಿಕೇಶನ್‌ ಕೂಡ ಒಂದಾಗಿದ್ದು, ಬಹುಪಾಲು ಜನರ ನೆಚ್ಚಿನ ಆಪ್‌ಗಳಲ್ಲಿ ಇದು ಕೂಡ ಒಂದು

ಕೊರೊನಾ

ಇದೀಗ ಕೊರೊನಾ ವೈರಸ್‌ ಬೀತಿಯಿಂದ ಎಲ್ಲರೂ ಮನೆಯಲ್ಲಿ ಲಾಕ್‌ಡೌನ್‌ ಆಗಿದ್ದರೆ ಇದರ ಪರಿಣಾಮ ಫೇಸ್‌ಬುಕ್‌ ಲೈವ್‌ ವೀಕ್ಷಕರ ಸಂಖ್ಯೆಯು ಅಧಿಕವಾಗಿದೆ. ಫೇಸ್‌ಬುಕ್‌ನಲ್ಲಿ ಲೈವ್ ವೀಡಿಯೊ ನೋಡುವ ಯುಎಸ್ ಬಳಕೆದಾರರ ಸಂಖ್ಯೆ ಜನವರಿಯಿಂದ 50% ಹೆಚ್ಚಾಗಿದೆ ಎಂದು ಬ್ಲೂಮ್‌ಬರ್ಗ್ ಕೂಡ ವರದಿ ಮಾಡಿದೆ. ಈ ನಿಟ್ಟಿನಲ್ಲಿ ಫೇಸ್‌ಬುಕ್‌ ಲೈವ್ ಸ್ಟ್ರೀಮಿಂಗ್ ವೀಡಿಯೊವನ್ನು ಹೆಚ್ಚಿನ ಜನರಿಗೆ ಪ್ರವೇಶಿಸಲು ಯೋಜಿಸಿದೆ. ಇದರಿಂದ ವೀಡಿಯೊ ಪ್ರಸಾರ ಮಾಡುವವರಿಗೆ ಹೆಚ್ಚು ಲಾಭದಾಯಕವಾಗಿದೆ ಎನ್ನಾಲಾಗ್ತಿದೆ.

ಇದಕ್ಕಾಗಿ

ಸದ್ಯ ಇದಕ್ಕಾಗಿ ಫೇಸ್‌ಬುಕ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು ಇದರಿಂದಾಗಿ ಇನ್ಮುಂದೆ ಫೇಸ್‌ಬುಕ್‌ ಖಾತೆ ಇಲ್ಲದೆ ಫೇಸ್‌ಬುಕ್‌ ಲೈವ್ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ. ವಿಡಿಯೋ ಮುಗಿದ ನಂತರ ಆಟೋಮ್ಯಾಟಿಕ್‌ ಫೇಸ್‌ಬುಕ್‌ ಕ್ಲೋಸ್‌ ಆಗಲಿದೆ. ಈ ಅವಕಾಶ ನೀಡಿರುವುದರಿಂದ ಹೆಚ್ಚಿನ ಸ್ಟ್ರೀಮರ್‌ಗಳಿಗೆ ಡಿಜಿಟಲ್ ಟಿಪ್ಪಿಂಗ್ ಸಾಮರ್ಥ್ಯಗಳ ವಿಸ್ತರಣೆ ಸಾಧ್ಯವಾಗಲಿದೆ. ಜೊತೆಗೆ ಲೈವ್ ಕರೆ ಮಾಡುವವರನ್ನು ತೆಗೆದುಕೊಳ್ಳಲು ಚಾರಿಟಿ ಸ್ಟ್ರೀಮ್‌ಗಳಿಗೆ ಟೋಲ್-ಫ್ರೀ ಫೋನ್ ಸಂಖ್ಯೆಗಳನ್ನು ಸಹ ನೀಡಲಾಗಿದೆ. ಇದಲ್ಲದೆ ಲೈವ್ ಸ್ಟ್ರೀಮಿಂಗ್‌ಅನ್ನು ನಿರ್ವಹಣೆ ಮಾಡುವುದಕ್ಕಾಗಿಯೇ ಫೇಸ್‌ಬುಕ್ ಸಂಪೂರ್ಣ ಹೊಸ ಡ್ಯಾಶ್‌ಬೋರ್ಡ್ ಅನ್ನು ಹೊರತರುತ್ತಿದೆ.

ಫ್ಲ್ಯಾನ್‌

ಸದ್ಯ ಈ ಫ್ಲ್ಯಾನ್‌ ನಿಂದಾಗಿ ಲೈವ್ ಸ್ಟ್ರೀಮಿಂಗ್‌ನಲ್ಲಿ ಫೇಸ್‌ಬುಕ್ ತನ್ನ ಪ್ರಯತ್ನಗಳನ್ನು ಕೇಂದ್ರೀಕರಿಸುವ ಮೂಲಕ ಹೆಚ್ಚಿನದನ್ನು ಗಳಿಸಲು ಯೋಜಿಸಿದೆ. ಅದರಲ್ಲೂ ಮುಖ್ಯವಾಗಿ ಜಾಹೀರಾತು ಆಧಾರಿತ ವ್ಯವಹಾರ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೇಸ್‌ಬುಕ್ ಲೈವ್ ಅನ್ನು ಯೂಟ್ಯೂಬ್ ಮತ್ತು ಟ್ವಿಚ್‌ನಂತಹ ಹಣ ಸಂಪಾದಿಸುವ ಉತ್ಪನ್ನವಾಗಿ ಇನ್ನಷ್ಟು ಅಭಿವೃದ್ಧಿಪಡಿಸುವ ತುರ್ತು ಅವಶ್ಯಕತೆಯಿದೆ. ಈಗಾಗಲೇ ಫೇಸ್‌ಬುಕ್‌ನ ಜಾಹೀರಾತು ವ್ಯವಹಾರಗಳು ಇತ್ತೀಚೆಗೆ ಯಶಸ್ವಿಯಾಗುತ್ತಿದ್ದು, ಇದೀಗ ಇನ್ನು ಒಂದು ಹೆಚ್ಚೆ ಮುಂದೆ ಹೊಗುವ ಪ್ರಯತ್ನ ಮಾಡಿದೆ. ಜೊತೆಗೆ ಬಳಕೆದಾರರ ಹಿತದೃಷ್ಟಿಯು ಸಹ ಇದರಲ್ಲಿ ಸೇರಿದೆ.

Best Mobiles in India

English summary
Facebook is abruptly shifting the focus of product development toward live streaming as COVID-19 lockdowns lead to increased demand.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+