ಫೇಸ್‌ಬುಕ್ ಬಳಕೆದಾರರಿಗೆ ಆಗುತ್ತಿರುವ ಮೋಸ ಅಂತಿಂತದ್ದಲ್ಲ!..ಇದು ಶಾಕಿಂಗ್ ರಿಪೋರ್ಟ್!!
ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾಕ್ಕೆ 8.7 ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂಬ ಆಪಾದನೆ ಎದುರಿಸಿತ್ತಿರುವ ಫೇಸ್‌ಬುಕ್ ಮತ್ತೆ ಮೋಸಮಾಡುತ್ತಿದೆ ಎನ್ನಲಾಗಿದೆ. ಈ ಘಟನೆ ನಡೆದ ನಂತರವೂ ಮಾಹಿತಿ ಹಂಚಿಕೆಯ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಹೌದು, ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಆಪಲ್ ಮತ್ತು ಮೈಕ್ರೊಸಾಫ್ಟ್‌ನಂತಹ ಕಂಪನಿಗಳ ಜತೆ ಫೇಸ್‌ಬುಕ್ ಒಪ್ಪಂದ ಮಾಡಿಕೊಂಡಿದೆ. ಫೇಸ್‌ಬುಕ್ ಖಾತೆದಾರರು ಮತ್ತು ಅವರ ಗೆಳೆಯರ ಬಳಗದ ಮಾಹಿತಿಯ ವರ್ಗಾವಣೆಯೂ ಇದರಲ್ಲಿ ಸೇರಿದೆ ಎಂದು ಪ್ರಖ್ಯಾತ ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವುದು ಈಗ ಮುನ್ನೆಲೆಗೆ ಬಂದಿದೆ.

ಕೇಂಬ್ರಿಜ್ ಅನಲಿಟಿಕಾವು ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದ, ಸಾಮಾಜಿಕ ಜಾಲತಾಣ ಕಂಪನಿಯು ಇತ್ತೀಚೆಗೆ ಭಾರಿ ಹಿನ್ನಡೆ ಅನುಭವಿಸಿತ್ತು. ಅದರ ಬೆನ್ನಿಗೇ ಈ ವರದಿ ಬಿಡುಗಡೆಯಾಗಿ ಮತ್ತೆ ಶಾಕ್ ನೀಡಿದೆ. ಹಾಗಾದರೆ, ಫೇಸ್‌ಬುಕ್ ಮೇಲಿರುವ ಏನಿದು ಮಾಹಿತಿ ಹಂಚಿಕೆಯ ಮತ್ತೊಂದು ಪ್ರಕರಣ ಎಂಬುದನ್ನು ಮುಂದೆ ತಿಳಿಯಿರಿ.

ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ!!
ಫೇಸ್‌ಬುಕ್ ಬಳಕೆದಾರರ ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ, ಸಂವಹನ ಸಾಧನಗಳನ್ನು ತಯಾರಿಸುವ ವಿವಿಧ ಕಂಪನಿಗಳ ಜತೆಗೆ ಫೇಸ್‌ಬುಕ್ ಬಳಕೆದಾರರ ದತ್ತಾಂಶವನ್ನು ಹಂಚಿಕೊಂಡಿದೆ ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದು ಫೇಸ್‌ಬುಕ್ ಮತ್ತು ಮೊಬೈಲ್ ತಯಾರಕರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ತಯಾರಕರು ನಂಬಿಕಸ್ಥರು ಅಲ್ಲವೇ ಅಲ್ಲ!!
ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ‘ಫೇಸ್‌ಬುಕ್ ಅಥವಾ ಸಂವಹನ ಸಾಧನ ತಯಾರಕರು ನಂಬಿಕಸ್ಥರು ಎಂದು ನೀವು ಭಾವಿಸಿರಬಹುದು. ಆದರೆ, ಆಪ್‌ಗಳ ಮೂಲಕ ದತ್ತಾಂಶವನ್ನು ಪಡೆದುಕೊಳ್ಳಲು ಅವಕಾಶ ಇದ್ದರೆ ಅದು ಖಾಸಗಿ ಮಾಹಿತಿಗಳಿಗೆ ಗಂಭೀರ ಅಪಾಯವನ್ನು ಒಡ್ಡುತ್ತದೆ ಎಂದು ಸಂಶೋಧಕ ಸರ್ಗೆ ಎಗೆಲ್‌ಮನ್ ಹೇಳಿದ್ದಾರೆ.

ದತ್ತಾಂಶ ಒಪ್ಪಂದದ ಉದ್ದೇಶ ಏನಿತ್ತು?
ಮೊಬೈಲ್ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್ ಆಪ್‌ಗಳು ಲಭ್ಯವಾಗುತ್ತಿರುವ ಮೊದಲಿನ ದಿನಗಳಲ್ಲಿ ಫೇಸ್‌ಬುಕ್ ಅಥವಾ ಸಂವಹನ ಸಾಧನ ತಯಾರಕರ ನಡುವೆ ದತ್ತಾಂಶ ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದಾಗಿ ಫೇಸ್‌ಬುಕ್‌ಗೆ ತನ್ನ ಜನಪ್ರಿಯತೆ ಮತ್ತು ವಿಸ್ತಾರವನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿದೆ.!

ನಮ್ಮ ಮಾಹಿತಿಗೆ ರಕ್ಷಣೆಯಿಲ್ಲ.!!
ಅಮೆರಿಕದ ಗ್ರಾಹಕ ಹಕ್ಕುಗಳ ರಕ್ಷಣಾ ಆಯೋಗ ಮಾಡಿರುವ ಘೋಷಣೆಯನ್ನು ಫೇಸ್‌ಬುಕ್ ಅನುಸರಿಸುತ್ತಿದೆಯೇ ಎಂಬ ಬಗ್ಗೆ ಅನುಮಾನ ಮೂಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಹೇಳಲಾಗಿದೆ. ಹಾಗಾಗಿ, ಫೇಸ್‌ಬುಕ್ ಅಳವಡಿಸಿಕೊಂಡಿರುವ ಖಾಸಗಿ ಮಾಹಿತಿ ರಕ್ಷಣೆ ನೀತಿಯ ಬಗ್ಗೆಯೇ ಗಂಭೀರ ಪ್ರಶ್ನೆಗಳು ಎದ್ದಿವೆ.

ನಿರಾಕರಿಸಿದವರ ಮಾಹಿತಿ ಸಹ ಬಿಟ್ಟಿಲ್ಲ!!
ವೈಯಕ್ತಿಕ ಮಾಹಿತಿಯನ್ನು ಬೇರೆಯವರಿಗೆ ನೀಡುವುದನ್ನು ನಿರಾಕರಿಸಿದವರ ಹಾಗೂ ಬಳಕೆದಾರರ ಗೆಳೆಯರ ಮಾಹಿತಿಯನ್ನು ಅವರ ಒಪ್ಪಿಗೆ ಪಡೆದುಕೊಳ್ಳದೆಯೇ ಮತ್ತು ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಮಾಹಿತಿಯನ್ನು ಬೇರೆಯವರ ಜತೆಗೆ ಹಂಚಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ನಂತರವೂ ಇದು ನಡೆದಿದೆ ಎನ್ನಲಾಗಿದೆ.


ಫೇಸ್‌ಬುಕ್ ಸಮರ್ಥನೆ
ಇತೆರೆ ಕಂಪನಿಗಳ ಜತೆಗೆ ದತ್ತಾಂಶ ಹಂಚಿಕೆ ಒಪ್ಪಂದ ಮಾಡಿಕೊಂಡಿರುವುದನ್ನು ಫೇಸ್‌ಬುಕ್ ಕಂಪನಿ ಸಮರ್ಥಿಸಿಕೊಂಡಿದೆ. ಖಾಸಗಿತನ ನೀತಿ ಮತ್ತು ಎಫ್‌ಟಿಸಿ ಒಪ್ಪಂದವನ್ನು ಉಲ್ಲಂಘಿಸಿಲ್ಲ ಎಂದು ಫೇಸ್‌ಬುಕ್ ಹೇಳಿದೆ. ಆದರೆ, ತಮ್ಮ ಮಾಹಿತಿ ಸುರಕ್ಷಿತ ಎಂದು ಖಾತೆದಾರರು ಭಾವಿಸಿಕೊಂಡಿರುತ್ತಾರೆ. ಆದರೆ ವಾಸ್ತವದಲ್ಲಿ ಹಾಗೆ ಇಲ್ಲ ಎಂದು ವರದಿ ಹೇಳಿದೆ.


Click it and Unblock the Notifications








