Home
ಸುದ್ದಿಜಾಲ

ವಿಶ್ವದಾದ್ಯಂತ ಫೇಸ್‌ಬುಕ್ ಸೇವೆಗಳು ಡೌನ್!..ಕಾರಣ ಏನು?

ಒಂದೇ ಕಂಪೆನಿಯ ಸೇವೆಗಳಿಗೆ ಹೆಚ್ಚು ಅಡಿಕ್ಟ್ ಆದರೆ ಏನಾಗಬಹುದು ಎಂಬುದಕ್ಕೆ ನೆನ್ನೆ ನಡೆದ ಘಟನೆ ಉದಾಹರಣೆಯಾಗಿದೆ. ಖ್ಯಾತ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಮತ್ತು ಇನ್‌ಸ್ಟಾಗ್ರಾಂ ಸೇವೆಗಳೆಲ್ಲವೂ ಕೆಲ ಕಾಲ ತಾಂತ್ರಿಕ ದೋಷವನ್ನು ಎದುರಿಸಿದರಿಂದ ಸಾಮಾಜಿಕ ಜಾಲತಾಣ ಪ್ರಿಯರಿಗೆ ಸಂಕಟ ಬಂದೊದಗಿದೆ.

ವಿಶ್ವದಾದ್ಯಂತ ಫೇಸ್‌ಬುಕ್ ಸೇವೆಗಳು ಡೌನ್!..ಕಾರಣ ಏನು?

ಹೌದು, ಭಾರತ ಸೇರಿದಂತೆ ಅಮೆರಿಕ, ಲಂಡನ್, ಫ್ಲೋರಿಡಾ, ಬರ್ಲಿನ್, ದಕ್ಷಿಣ ಅಮೆರಿಕ ಮುಂತಾದ ಪ್ರದೇಶಗಳಲ್ಲಿ ಫೇಸ್‌ಬುಕ್, ವಾಟ್ಸ್ಆಪ್, ಇನ್ ಸ್ಟಾಗ್ರಾಮ್ ಸೇವೆಗಳು ಡೌನ್ ಆಗಿದೆ. ಭಾರತದಲ್ಲಿ ಗುರುವಾರ ಸಂಜೆ 7.30ರ ಬಳಿಕ ಮೂರು ಸಾಮಾಜಿಕ ಜಾಲತಾಣಗಳು ಡೌನ್ ಆಗಿದ್ದು, ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ವಿಶ್ವದಾದ್ಯಂತ ಹಲವು ದೂರುಗಳು ಕೇಳಿಬಂದಿವೆ.

ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್‌ ಸೇವೆಗಳ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಚಿತ್ರಗಳನ್ನು ಲೋಡ್ ಮಾಡಲು ಮತ್ತು ಡೌನ್‌ಲೋಡ್ ಮಾಡಲು ವಿಫಲವಾಗಿವೆ ಎಂದು ಹೇಳಲಾಗಿದ್ದು, ಫೇಸ್‌ಬುಕ್ ಒಡೆತನದ ಎಲ್ಲಾ ಮೂರು ಪ್ರಮುಖ ಆನ್‌ಲೈನ್ ಸೇವೆಗಳು ಕೆಲವು ತಾಂತ್ರಿಕ ತೊಂದರೆಗಳನ್ನು ಎದುರಿಸಿರುವುದನ್ನು ಫೇಸ್‌ಬುಕ್ ಸಂಸ್ಥೆ ಕೂಡ ಖಚಿತಪಡಿಸಿದೆ.

ನಮ್ಮ ಅಪ್ಲಿಕೇಶನ್‌ಗಳಲ್ಲಿ ಚಿತ್ರಗಳು, ವೀಡಿಯೊಗಳು ಮತ್ತು ಇತರ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಅಥವಾ ಕಳುಹಿಸಲು ಕೆಲವು ಜನರಿಗೆ ತೊಂದರೆಯಾಗಿದೆ ಎಂದು ನಮಗೆ ತಿಳಿದಿದೆ. ಈ ತೊಂದರೆಗಾಗಿ ನಾವು ವಿಷಾದಿಸುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಕೆಲಸ ಮಾಡುತ್ತಿದ್ದೇವೆ ಎಂದು ಫೇಸ್‌ಬುಕ್ ಕ್ಷಮೆ ಕೇಳಿದೆ.

ಇನ್ನು ಈ ಸಮಸ್ಯೆಗಳು ಅಂತಿಮವಾಗಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಪರಿಹರಿಸಲಾಗಿದೆ. ಸಮಸ್ಯೆಗಳನ್ನು ಪರಿಹರಿಸಿರುವ ಬಗ್ಗೆ ಫೇಸ್‌ಬುಕ್ ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದ್ದು, ಬಳಕೆದಾರರು ಯಾವುದೇ ಸಮಸ್ಯೆಗಳಿಲ್ಲದೆ ತನ್ನ ಸೇವೆಗಳನ್ನು ಆನಂದಿಸುವುದನ್ನು ಮುಂದುವರಿಸಬಹುದು ಎಂದು ಹೇಳಿದೆ. ಆದರೂ ಫೇಸ್‌ಬುಕ್ ಬಳಕೆದಾರರ ಆಕ್ರೋಶ ಈಗಲೂ ಕಡಿಮೆಯಾಗಿಲ್ಲ.

Best Mobiles in India

English summary
It looks like all three major online services owned by Facebook have faced some technical glitches, as services like Facebook, WhatsApp, Instagram, And Messenger failed to load and download some of the images on the platform.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+