Home
ಸುದ್ದಿಜಾಲ

ಫೇಸ್‌ಬುಕ್ ಸಂಸ್ಥೆಯ ಹೊಸ ಲೋಗೊ ಅನಾವರಣ!..ಬಳಕೆದಾರರಿಗೆ ಆಶ್ಚರ್ಯ!

ಫೇಸ್‌ಬುಕ್ ಸಂಸ್ಥೆಯು ಹೊಸದೊಂದು ಲೋಗೊವನ್ನು ಅನಾವರಣಗೊಳ್ಳುವ ಮೂಲಕ ವಿಶ್ವದಾದ್ಯಂತ ಇಂಟರ್‌ನೆಟ್ ಬಳಕೆದಾರರಿಗೆ ಆಶ್ಚರ್ಯ ಮೂಡಿಸಿದೆ. ಫೇಸ್‌ಬುಕ್‌ನ ಹೊಸ ಲೋಗೊ ಜಿಐಎಫ್ ರೂಪದಲ್ಲಿ ಇದೀಗ ಪರಿಚಯವಾಗಿದ್ದು, ಫೇಸ್‌ಬುಕ್ ಸಾಮಾಜಿಕ ಮಾಧ್ಯಮಕ್ಕೆ ನೀಲಿ, ಇನ್‌ಸ್ಟಾಗ್ರಾಮ್‌ಗೆ ಗುಲಾಬಿ ಮತ್ತು ವಾಟ್ಸಾಪ್‌ಗೆ ಹಸಿರು ಮುಂತಾದ ಅನೇಕ ಬಣ್ಣಗಳನ್ನು ತೋರಿಸುತ್ತದೆ. ಅಂದರೆ, ಈ ಹೊಸ ಲೋಗೊವು ಫೇಸ್‌ಬುಕ್‌ನ ಎಲ್ಲಾ ಅಂಗಸಂಸ್ಥೆ ಕಂಪನಿಗಳನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಫೇಸ್‌ಬುಕ್

ಹೌದು, ಈ ಮೊದಲೇ ಬಹಿರಂಗವಾದ ಸುದ್ದಿಯಂತೆ, ಫೇಸ್‌ಬುಕ್ ಒಡೆತನದಲ್ಲಿರುವ ವಾಟ್ಸಾಪ್, ಇನ್‌ಸ್ಟಾಗ್ರಾಮ್, ಮೆಸೆಂಜರ್ ಮತ್ತು ಕಂಪೆನಿಯ ಇತರೆ ಉತ್ಪನ್ನಗಳನ್ನು ಒಳಗೊಂಡಂತೆ ತನ್ನೆಲ್ಲಾ ಅಂಗಸಂಸ್ಥೆ ಕಂಪನಿಗಳನ್ನು ಪ್ರತಿನಿಧಿಸುವ ಒಂದು ಸಂಸ್ಥೆಯನ್ನು ಜನಪ್ರಿಯಗೊಳಿಸುವ ಗುರಿಯನ್ನು ಫೇಸ್‌ಬುಕ್ ಹೊಂದಿದೆ. ಅದಕ್ಕಾಗಿ ತನ್ನೆಲ್ಲಾ ಅಂಗಸಂಸ್ಥೆ ಕಂಪನಿಗಳನ್ನು ಪ್ರತಿನಿಧಿಸುವ ಫೇಸ್‌ಬುಕ್ ಬ್ರ್ಯಾಂಡ್ ಒಂದನ್ನು ನಿರ್ಮಿಸಲು ಫೇಸ್‌ಬುಕ್ ಹೊಸ ಲೋಗೊವನ್ನು ಪರಿಚಯಿಸಿದೆ. ಈ ಲೋಗೋ ವಿವಿಧ ಬಣ್ಣಗಳನ್ನು ಹೊತ್ತಿರುವ GIF ರೂಪದಲ್ಲಿದೆ.

 ನೂತನ ಲೋಗ

ಮುಂಬರುವ ವಾರಗಳಲ್ಲಿ ನೂತನ ಲೋಗವನ್ನು ಬಳಕೆಗೆ ತರಲಾಗುವುದು ಮತ್ತು ಫೇಸ್‌ಬುಕ್ ಉತ್ಪನ್ನಗಳು ಮತ್ತು ಮಾರ್ಕೆಟಿಂಗ್ ಸಾಮಗ್ರಿಗಳ ಮೇಲೆ ಪ್ರಸಾರ ಮಾಡಲಾಗುವುದು ಎಂದು ಫೇಸ್‌ಬುಕ್ ಹೇಳಿದೆ. ಹೊಸ ಲೋಗೊ ಮತ್ತು ಬ್ರ್ಯಾಂಡಿಂಗ್ ಅನ್ನು ಸ್ಪಷ್ಟತೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಫೇಸ್‌ಬುಕ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಆಂಟೋನಿಯೊ ಲೂಸಿಯೊ ಹೇಳಿದ್ದು, ನವೀಕರಿಸಿದ ಲೋಗೊ ಕಂಪನಿ ಮತ್ತು ಆಪ್‌ಗಳ ನಡುವೆ ದೃಶ್ಯ ವ್ಯತ್ಯಾಸವನ್ನು ರಚಿಸಲು ಕಸ್ಟಮ್ ಮುದ್ರಣಕಲೆ ಮತ್ತು ದೊಡ್ಡಕ್ಷರವನ್ನು ಬಳಸುತ್ತದೆ" ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ

ನಮಗೆ ಈಗಾಗಲೇ ತಿಳಿದಿರುವಂತೆ ರೀಬ್ರಾಂಡೆಡ್ ಫೇಸ್‌ಬುಕ್ ಲೋಗೊವು ಮೂಲ ಕಂಪನಿಯನ್ನು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನಿಂದ ಪ್ರತ್ಯೇಕಿಸುವ ಪ್ರಯತ್ನವಾಗಿದೆ ಎನ್ನಲಾಗಿದೆ. ಬಳಕೆದಾರರನ್ನು ಮರಳಿ ಗೆಲ್ಲುವ ಭರವಸೆಯಲ್ಲಿ ಫೇಸ್‌ಬುಕ್ ಮೂಲ ಕಂಪನಿ ಕುಖ್ಯಾತ ಫೇಸ್‌ಬುಕ್ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಭಿನ್ನವಾಗಿದೆ ಎಂದು ಜನರಿಗೆ ತೋರಿಸುವುದು ಇಲ್ಲಿನ ಆಲೋಚನೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ, ರಿಬ್ರಾಂಡೆಡ್ ಲೋಗೊವು ಕಂಪನಿಯನ್ನು ಸ್ವತಃ ಮರುಬ್ರಾಂಡ್ ಮಾಡುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಕೇಂಬ್ರಿಡ್ಜ್ ಅನಾಲಿಟಿಕಾ

ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದಿಂದ ಪ್ರಾರಂಭವಾಗಿರುವ ವಿವಾದಗಳು ಫೇಸ್‌ಬುಕ್ ಸಂಸ್ಥೆಯನ್ನು ಬಿಟ್ಟುಬಿಡದೇ ಕಾಡಿದೆ. ದತ್ತಾಂಶ ಹಗರಣಗಳೊಂದಿಗೆ ಕಂಪನಿಯು ಎದುರಿಸುತ್ತಿರುವ ತೀವ್ರ ಹಿಂಬಡಿತದ ನಂತರ ಹೊಸ ಫೇಸ್‌ಬುಕ್ ಲೋಗೊವು ಆಶಾವಾದದ ಭಾವವನ್ನು ತರಲು ಪ್ರಯತ್ನಿಸುತ್ತಿದೆ ಎಂದು ಫೇಸ್‌ಬುಕ್ ನಂಬದೆ. ಒಂದೇ ಬ್ರ್ಯಾಂಡ್ ಅಡಿಯಲ್ಲಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಮೆಸೆಂಜರ್ ಮತ್ತು ಕಂಪೆನಿಯ ಇತರೆ ಎಲ್ಲ ಉತ್ಪನ್ನಗಳು ಇರುವುದರಿಂದ ಅವುಗಳ ಮೇಲೆ ಸ್ಪಷ್ಟ ನಿಯಂತ್ರಣ ಕೂಡ ಸಾಧ್ಯ ಎಂದು ಹೇಳಲಾಗುತ್ತಿದೆ.

Best Mobiles in India

English summary
Facebook has unveiled a new logo, which aims to represent its subsidiary companies, including WhatsApp, Instagram, Messenger, Portal, and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+