ಗಣಿತದ ಫೇಸ್ ಬುಕ್ ಬರಲಿದೆ

By Varun
|
ಗಣಿತದ ಫೇಸ್ ಬುಕ್ ಬರಲಿದೆ

ಇನ್ನು ಮೂರು ತಿಂಗಳಲ್ಲಿ ಚೆನ್ನೈ ಮೂಲದ ದಂಪತಿಗಳು ಗಣಿತಕ್ಕೆ ಮೀಸಲಾದ ಫೇಸ್ ಬುಕ್ ಥರದ ಸಾಮಾಜಿಕ ಜಾಲ ತಾಣ ಒಂದನ್ನು ಶುರು ಮಾಡಲಿದ್ದಾರೆಂಬ ಸುದ್ದಿ ಬಂದಿದೆ.

ಟೀಚಿಂಗ್ ಟುಮಾರೋ ಎಂಬ ಹೆಸರಿನ ಈ ತಾಣದಲ್ಲಿ ಅಂದಾಜು 3000 ಶಿಕ್ಷಕರನ್ನು ಒಟ್ಟುಗೂಡಿಸಿ ಗಣಿತದ ಬಗ್ಗೆ ಜ್ಞಾನದ ಪರಸ್ಪರ ಹಂಚಿಕೆ ಹಾಗು ಕ್ಲಿಷ್ಟ ಸಮಸ್ಯೆಗಳ ಪರಿಹಾರ ಸೂಚಿಸುವ, ಪ್ರಶ್ನೆ ಪತ್ರಿಕೆ ಸಿದ್ಧ ಪಡಿಸಲು ಹಾಗು ವೀಡಿಯೊ ಮೂಲಕ ಪಾಠ ಹೇಳಿಕೊಡುವ ತಾಣವನ್ನಾಗಿ ಮಾಡುವ ಕನಸನ್ನು ಆ ದಂಪತಿಗಳು ಹೊಂದಿದ್ದು ಮುಂಬರುವ ದಿನಗಳಲ್ಲಿ ಪಾಲಕರನ್ನೂ ಸೇರಿಸಿಕೊಳ್ಳುವ ಯೋಜನೆ ಹೊಂದಿದ್ದಾರೆ.

2012 ಗಣಿತದ ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ತರಹದ ಪ್ರಯತ್ನ ಮಾಡುತ್ತಿರುವ ನಿರ್ಮಲಾ ಹಾಗು ಹರ್ಷಾ ದಂಪತಿಗಳ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X