Home
ಸುದ್ದಿಜಾಲ

ಫೇಸ್‌ಬುಕ್‌ನಲ್ಲಿರುವ ನಕಲಿ ಖಾತೆಗಳ ಸಂಖ್ಯೆ ಎಷ್ಟು ಗೊತ್ತಾ?..ನಿಖರ ಮಾಹಿತಿ!!

ವಿಶ್ವದಲ್ಲೇ ಅತ್ಯಂತ ಹೆಚ್ಚು ಬಳಕೆಯ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಫೇಕ್ ಅಕೌಂಟ್ಸ್‌ಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿರುವುದನ್ನು ಸ್ವತಃ ಕಂಪೆನಿಯೇ ತಿಳಿಸಿದೆ. ಫೇಸ್‌ಬುಕ್ ಈ ವರ್ಷದ ತನ್ನ ಮಾಸಿಕ ಸಕ್ರಿಯ ಬಳಕೆದಾರರ (MAU) ಅಂಕಿಅಂಶಗಳನ್ನು ಹೊರತಂದಿದ್ದು, ಫೇಸ್‌ಬುಕ್‌ನಲ್ಲಿ ಸುಮಾರು 20 ಕೋಟಿಗಳಿಗೂ ಹೆಚ್ಚು ನಕಲಿ ಖಾತೆಗಳಿರುವ ಸಾಧ್ಯತೆಯಿದೆ ಎಂದು ಹೇಳಿದೆ.

ಹೌದು, ಈಗಾಗಲೇ 230 ಕೋಟಿ ಖಾತೆದಾರರನ್ನು ಹೊಂದಿರುವ ಫೇಸ್​ಬುಕ್​​ನಲ್ಲಿ ನಕಲಿ ಖಾತೆಗಳ ಸಂಖ್ಯೆಯಲ್ಲೂ ಏರಿಕೆ ಕಾಣುದ್ದು, 2015ರಲ್ಲಿ ಶೇ. 5ರಷ್ಟಿದ್ದ ಫೇಕ್​ ಖಾತೆ​ಗಳು, 2018ರಲ್ಲಿ ಶೇ. 11 ರಷ್ಟಕ್ಕೆ ಏರಿಕೆಯಾಗಿದೆ ಎಂದು ಕಂಪೆನಿ ಹೇಳಿದೆ. 2015 ರಲ್ಲಿ ಡಿಸೆಂಬರ್​ನಲ್ಲಿ ಫೇಸ್​ಬುಕ್ MAU ಸಂಖ್ಯೆಯು 1.59 ಶತಕೋಟಿಯಾದ್ದರೆ, 2018 ರಲ್ಲಿ 2.32 ಶತಕೋಟಿಗಳಿಗೆ ಏರಿಕೆ ಕಂಡಿದೆ.

ಫೇಸ್‌ಬುಕ್‌ನಲ್ಲಿರುವ ನಕಲಿ ಖಾತೆಗಳ ಸಂಖ್ಯೆ ಎಷ್ಟು ಗೊತ್ತಾ?..ನಿಖರ ಮಾಹಿತಿ!!

ಫೇಸ್‌ಬುಕ್ ವರದಿಯ ಪ್ರಕಾರ, ಫೇಸ್‌ಬುಕ್‌ಗೆ ಲಾಗಿನ್ ಆದ ಖಾತೆಗಳ ರಿಂಟರ್ನಲ್​ ರಿವ್ಯೂಗಳನ್ನು ಗುರುತಿಸಲಾಗಿದ್ದು, ಈ ವೇಳೆ ನಕಲಿ ಖಾತೆಗಳು ಹೆಚ್ಚು ಸಕ್ರಿಯವಾಗಿರುವುದು ಕಂಡು ಬಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.ಎರಡು ಖಾತೆಗಳನ್ನು ಹೊಂದಿರುವವರು ಸೇರಿದಂತೆ ಇನ್ನಿತರ ಕಾರಣಗಳಿಗೆ ಹೆಚ್ಚು ನಕಲಿ ಫೇಸ್‌ಬುಕ್‌ ಖಾತೆಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದೆ.

ಫೇಸ್‌ಬುಕ್‌ ಬಳಕೆದಾರರಲ್ಲಿ ಕೆಲವರು ತಮ್ಮ ಹಳೆಯ ಖಾತೆಗಳನ್ನು ಬಳಸದೇ ಹಾಗೆಯೇ ಬಿಟ್ಟಿದ್ದರೆ, ಇನ್ನು ಹಲವರು ಫೇಸ್​ಬುಕ್​ ಪೇಜ್​ಗಾಗಿ ಹೆಚ್ಚುವರಿ ಖಾತೆಗಳನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ತಪ್ಪಾಗಿ ಕ್ರಿಯೇಟ್​ ಮಾಡಿದ ಖಾತೆ, ಬಿಸಿನೆಸ್ ಖಾತೆಗಳೂ ಸೇರಿದಂತೆ ಹಲವು ಖಾತೆಗಳಿವೆ. ಈ ಎಲ್ಲವನ್ನು ಕೂಡ ಫೇಕ್​ ಪಟ್ಟಿಯಲ್ಲಿ ಸೇರಿಸಲಾಗಿರುವ ಬಗ್ಗೆ ಫೇಸ್‌ಬುಕ್ ಕಂಪೆನಿ ತಿಳಿಸಿದೆ.

ಫೇಸ್‌ಬುಕ್‌ನಲ್ಲಿರುವ ನಕಲಿ ಖಾತೆಗಳ ಸಂಖ್ಯೆ ಎಷ್ಟು ಗೊತ್ತಾ?..ನಿಖರ ಮಾಹಿತಿ!!

ಇನ್ನು ಫೇಸ್​ಬುಕ್​ ನಿಮಯ ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಫೇಕ್​ ಅಕೌಂಟ್​ಗಳನ್ನು ತೆರೆಯುವುದು ತಪ್ಪು ಎಂದು ಫೇಸ್​ಬುಕ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ಕಂಪೆನಿಯ ಸಕ್ರಿಯ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಭಾರತ, ಇಂಡೋನೇಷ್ಯಾ ಮತ್ತು ಫಿಲಿಫೈನ್ಸ್ ದೇಶಗಳ ಬಳಕೆದಾರರು ಬಹು ಮುಖ್ಯ ಪಾತ್ರವಹಿಸಿದ್ದಾರೆ ಎಂದು ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
As many as 200 million accounts on Facebook are either fake or duplicate as on end December 2017 and India is among the countries which have a high number of such accounts, the social networking site said. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+