ಬಳಕೆದಾರರಿಗೆ ವ್ಯಾನಿಶ್ ಮೋಡ್ ಫೀಚರ್ಸ್ ಪರಿಚಯಿಸಿದ ಫೇಸ್‌ಬುಕ್!
ಫೇಸ್‌ಬುಕ್ ತನ್ನ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರಿಗಾಗಿ ಹೊಸ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಫೀಚರ್ಸ್ ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಎರಡೂ ಫೋನ್ ಅಪ್ಲಿಕೇಶನ್‌ಗಳಿಂದ ನಿರ್ಗಮಿಸಿದ ಕೂಡಲೇ ಚಾಟ್‌ನಿಂದ ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸಿಹಾಕಲಿದೆ. ಈಗಾಗಲೇ ಫೇಸ್‌ಬುಕ್ ತನ್ನ ಒಡೆತನದ ವಾಟ್ಸಾಪ್ ಡಿಸ್‌ಅಪಿಯರ್ ಮೆಸೇಜ್ ಫೀಚರ್ಸ್ ಅನ್ನು ಪರಿಚಯಿಸಿತ್ತು. ಇದೀಗ ಇದೇ ಮಾದರಿಯ ಫೀಚರ್ಸ್ ವ್ಯಾನಿಶ್ ಮೋಡ್ ಅನ್ನು ಫೇಸ್‌ಬುಕ್ ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಿದೆ.

ಹೌದು, ಫೇಸ್‌ಬುಕ್ ವ್ಯಾನಿಶ್ ಮೋಡ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಸ್ನ್ಯಾಪ್‌ಚಾಟ್‌ನ ವ್ಯಾನಿಶ್ ಮೋಡ್ ಮಾದರಿಗೆ ಹೋಲುತ್ತದೆ. ಇನ್ನು ಹೆಸರೇ ಸೂಚಿಸುವಂತೆ, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿನ ವ್ಯಾನಿಶ್ ಮೋಡ್ ಸಂದೇಶಗಳನ್ನ ವ್ಯಾನಿಶ್ ಮಾಡಲಿದೆ. ಈ ಫೀಚರ್ಸ್ ಬಳಕೆದಾರರಿಗೆ ಪಠ್ಯ, ಫೋಟೋಗಳು ಮತ್ತು ವಾಯ್ಸ್ ಮೆಸೇಜ್ ಕಳುಹಿಸಲು ಅನುವು ಮಾಡಿಕೊಡುತ್ತದೆ, ಹಾಗೇಯೇ ನಿವು ನಿರ್ಗಮಿಸಿದ ತಕ್ಷಣ ನಿಮ್ಮ ಸಂದೇಶಗಳು ಸ್ವಯಂಚಾಲಿತವಾಗಿ ಒಮ್ಮೆ ಕಣ್ಮರೆಯಾಗುತ್ತದೆ. ಇನ್ನು ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್ ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಿಲಾಗಿರುವ ವ್ಯಾನಿಶ್ ಮೋಡ್ ನಿಮ್ಮ ಚಾಟ್‌ಗಳನ್ನ ಒಮ್ಮೆ ಕಣ್ಮರೆಯಾಗುವಂತೆ ಮಾಡುತ್ತದೆ. ಸದ್ಯ ಇದೀಗ, ಈ ಫೀಚರ್ಸ್ ವೈಯಕ್ತಿಕ ಚಾಟ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಗ್ರೂಪ್ ಚಾಟ್‌ಗಳಲ್ಲಿ ಈ ಫೀಚರ್ಸ್ ಇನ್ನ ಲಭ್ಯವಾಗಿಲ್ಲ. ಇನ್ನು ಈ ಅಪ್ಲಿಕೇಶನ್‌ಗಳಲ್ಲಿ ವ್ಯಾನಿಶ್ ಮೋಡ್ ಅನ್ನು ಸಕ್ರಿಯಗೊಳಿಸಲು, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರು ಸೆಟ್ಟಿಂಗ್ಸ್ ಮೆನುಗೆ ಹೋಗಬಹುದು ಮತ್ತು ಅಲ್ಲಿ ಆಯ್ಕೆಯನ್ನು ಸಕ್ರಿಯಗೊಳಿಸಬಹುದು. ಅಗತ್ಯವಿದ್ದಾಗ ವ್ಯಾನಿಸ್ ಮೋಡ್ ಆಯ್ಕೆಯನ್ನು ಬಳಕೆದಾರರು ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತದೆ.

ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್‌ನಲ್ಲಿನ ವ್ಯಾನಿಶ್ ಮೋಡ್ ಅನ್ನು ಸ್ಕ್ರೀನ್ ಅನ್ನು ಸ್ವೈಪ್ ಮಾಡುವ ಮೂಲಕ ಸಕ್ರಿಯಗೊಳಿಸಬಹುದು. ಸಾಮಾನ್ಯ ಚಾಟ್ ಇಂಟರ್ಫೇಸ್ ಅನ್ನು ಮರಳಿ ಪಡೆಯಲು ಅದೇ ವಿಧಾನವನ್ನು ಬಳಸಬಹುದು ಎಂದು ಫೇಸ್‌ಬುಕ್ ಹೇಳಿಕೊಂಡಿದೆ. ಪೇಸ್‌ಬುಕ್ ಬ್ಲಾಗ್ ಪೋಸ್ಟ್‌ನಲ್ಲಿ ಲಭ್ಯವಿರುವ ಫೋಟೋಗಳ ಪ್ರಕಾರ, ಸ್ಕ್ರೀನ್ ಮೇಲ್ಭಾಗದಲ್ಲಿ ಸಣ್ಣ ಬಬಲ್ ಕಾಣಿಸುತ್ತದೆ ಅದು ಮೋಡ್ ಆನ್ ಅಥವಾ ಆಫ್ ಆಗಿದೆಯೆ ಎಂದು ಹೈಲೈಟ್ ಮಾಡುತ್ತದೆ. ಸದ್ಯ ಈ ಫೀಚರ್ಸ್ ಅನ್ನು ಭಾರತದಲ್ಲಿ ಪರಿಚಯಿಸಲಾಗಿಲ್ಲ, ಆದರೆ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಇನ್ನು ಫೇಸ್‌ಬುಕ್ ಮೆಸೆಂಜರ್ ಈಗಾಗಲೇ ರಹಸ್ಯ ಸಂಭಾಷಣೆ ಮೋಡ್ ಎಂಬ ಸಂಬಂಧಿತ ಫೀಚರ್ಸ್ ಅನ್ನು ನೀಡುತ್ತದೆ. ಇದು ದು ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್ ನಡೆಸಲು ಅನುವು ಮಾಡಿಕೊಡುತ್ತದೆ. ಇದರರ್ಥ "ರಹಸ್ಯ" ಚಾಟ್‌ನಲ್ಲಿ ಹಂಚಲಾದ ಸಂದೇಶಗಳು ಮತ್ತು ಫೈಲ್‌ಗಳು ಬಳಕೆದಾರರ ಫೋನ್‌ಗಳಲ್ಲಿ ಸೇವ್ ಆಗಲಿದೆಯೆ ಹೊರತು ಫೇಸ್‌ಬುಕ್‌ನ ಸರ್ವರ್‌ಗಳಲ್ಲಿ ಸೇವ್ ಆಗುವುದಿಲ್ಲ. ಅಲ್ಲದೆ ವ್ಯಾನಿಶ್ ಮೋಡ್ ನಲ್ಲಿ ಚಾಟ್ ಬಾಕ್ಸ್ ಮುಚ್ಚಿದಾಗ ಅಥವಾ ಸಂದೇಶಗಳನ್ನು ಓದಿದಾಗ ಸಂದೇಶಗಳು ಅಥವಾ ಚಾಟ್‌ಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ. Secret conversationನಲ್ಲಿ ಚಾಟ್‌ಗಳು ಮತ್ತು ಎಲ್ಲಾ ಸಂದೇಶಗಳು ಉಳಿಯುತ್ತವೆ.


Click it and Unblock the Notifications








