ಹೊಸ ಅಪ್ಲಿಕೇಶನ್ ಲಾಕ್ ಪರಿಚಯಿಸಿದ ಫೇಸ್‌ಬುಕ್ ಮೆಸೆಂಜರ್..!
ಜನಪ್ರಿಯ ಸೊಶೀಯಲ್ ಮೀಡಿಯಾ ಆಗಿರುವ ಫೇಸ್‌ಬುಕ್ ತನ್ನ ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಹೊಸ ಆಪ್ ಲಾಕ್ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಮೆಸೆಂಜರ್‌ನಲ್ಲಿ ಬಳಕೆದಾರರ ಮಾಹಿತಿಯನ್ನು ಹೆಚ್ಚುವರಿ ಭದ್ರತೆ ನೀಡುವುದಕ್ಕಾಗಿ ಪರಿಚಯಿಸಲಾಗಿದೆ. ಇನ್ನು ಈ ಫೀಚರ್ಸ್ ಮೂಲಭೂತವಾಗಿ ಮೆಸೆಂಜರ್ ಅಪ್ಲಿಕೇಶನ್ ಅನ್ನು ಲಾಕ್ ಮಾಡುತ್ತದೆ, ಮತ್ತು ಬಳಕೆದಾರರು ತಮ್ಮ ಬಯೋಮೆಟ್ರಿಕ್‌ಗಳಾದ ಟಚ್ ಐಡಿ ಅಥವಾ ಫೇಸ್ ಐಡಿ ಬಳಸಿ ಇದನ್ನು ಅನ್ಲಾಕ್ ಮಾಡಬಹುದಾಗಿದೆ.

ಹೌದು, ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್ ಅಲ್ಲಿ ಹೊಸ ಆಪ್‌ಲಾಕ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಇದು ಪ್ರಸ್ತುತ ಐಒಎಸ್ ಮತ್ತು ಐಪ್ಯಾಡ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ. ಆದರೆ ಫೇಸ್‌ಬುಕ್ ಮೆಸೆಂಜರ್‌ನ ಆಂಡ್ರಾಯ್ಡ್ ಬಳಕೆದಾರರು ಮುಂದಿನ ಕೆಲವು ತಿಂಗಳುಗಳಲ್ಲಿ ಆಪ್ಡೇಟ್ ಆವೃತ್ತಿಯನ್ನು ಸ್ವೀಕರಿಸಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಮೆಸೆಂಜರ್ ಪ್ಲಾಟ್‌ಫಾರ್ಮ್‌ಗಾಗಿ ಫೇಸ್‌ಬುಕ್ ಹೊಸ ಮಾದರಿಯ ಗೌಪ್ಯತೆ ಫೀಚರ್ಸ್‌ಗಳನ್ನು ಸಹ ಘೋಷಿಸಿದೆ. ಹಾಗಾದ್ರೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಬಗ್ಗೆ ತಿಳಿಸಿಕೊಡ್ತಿವಿ ಈ ಲೇಖನವನ್ನ ಓದಿರಿ.

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಹೊಸ ಮಾದರಿಯ ಆಪ್‌ಲಾಕ್ ಅನ್ನು ಪರಿಚಯಿಸಿರುವುದರಿಂದ ಬಳಕೆದಾರರ ಬಯೋಮೆಟ್ರಿಕ್ಸ್ ಅನ್ನು ಕಾಪಾಡಬಹುದಾಗಿದೆ. ಅಲ್ಲದೆ ಮೆಸೆಂಜರ್ ಅಪ್ಲಿಕೇಶನ್‌ನಲ್ಲಿನ ಅಪ್ಲಿಕೇಶನ್ ಲಾಕ್ ಫೀಚರ್ಸ್ ಅನ್ನು ಸೆಟ್ಟಿಂಗ್‌ಗಳ ಪುಟದಲ್ಲಿನ ಗೌಪ್ಯತೆ ವಿಭಾಗದ ಅಡಿಯಲ್ಲಿ ಕಾಣಬಹುದಾಗಿದೆ. ಜೊತೆಗೆ ಈ ಹೊಸ ಗೌಪ್ಯತೆ ಫೀಚರ್ಸ್ ಯಾವುದೇ ಅಧಿಸೂಚನೆಗಳನ್ನು ನಿರ್ಬಂಧಿಸುವುದಿಲ್ಲ, ಮತ್ತು ಬಳಕೆದಾರರು ಅಪ್ಲಿಕೇಶನ್‌ನಲ್ಲಿನ ಅಧಿಸೂಚನೆಗಳು ಮತ್ತು ಶಬ್ದಗಳು ವಿಭಾಗದ ಅಡಿಯಲ್ಲಿ ಈ ಸೆಟ್ಟಿಂಗ್ ಅನ್ನು ಕಸ್ಟಮೈಸ್ ಮಾಡಬೇಕಾಗುತ್ತದೆ.

ಇದಲ್ಲದೆ ಸೊಶೀಯಲ್ ಮೀಡಿಯಾ ದೈತ್ಯ ಮೆಸೆಂಜರ್ ಪ್ಲಾಟ್‌ಫಾರ್ಮ್‌ಗಾಗಿ ಮತ್ತೊಂದು ಗೌಪ್ಯತೆ ಫೀಚರ್ಸ್ ಅನ್ನು ಪರಿಚಯಿಸಿದ್ದು, ಈ ಹೊಸ ಫೀಚರ್ಸ್ ಜೊತೆಗೆ, ಬಳಕೆದಾರರು ಅಪ್ಲಿಕೇಶನ್‌ನಲ್ಲಿರುವ ಇತರ ಬಳಕೆದಾರರಿಂದ ಸಂದೇಶಗಳು ಅಥವಾ ಕರೆಗಳನ್ನು ನೇರವಾಗಿ ನಿಯಂತ್ರಿಸಲು ಸಾದ್ಯವಾಗುವ ಫೀಚರ್ಸ್ ಅನ್ನು ಪರಿಚಯಿಸಿದೆ. ಇದ್ದರಿಂದ ನಿಮ್ಮ ಅನುಮತಿ ಇಲ್ಲದೆ ನಿಮಗೆ ನೇರವಾಗಿ ಸಂದೇಶ ಕಳುಹಿಸುವುದಾಗಲಿ ಅಥವಾ ಕರೆ ಮಾಡುವುದಾಗಲಿ ಸಾಧ್ಯವಾಗುವುದಿಲ್ಲ.

ಸದ್ಯ ಹೆಚ್ಚುವರಿಯಾಗಿ, ಅಪರಿಚಿತ ಬಳಕೆದಾರರಿಂದ ಸ್ವೀಕರಿಸಿದ ಚಿತ್ರಗಳನ್ನು ವಾಟ್ಸಾಪ್ ಹೇಗೆ ಮಸುಕುಗೊಳಿಸುತ್ತದೆ ಹಾಗೇಯೇ ಸಂದೇಶ ವಿನಂತಿಗಳ ಫೋಲ್ಡರ್‌ನಲ್ಲಿ ಇಳಿಯುವ ಫೋಟೋಗಳನ್ನು ಮಸುಕಾಗಿಸಲು ಫೇಸ್‌ಬುಕ್ ಕೂಡ ಪ್ಲ್ಯಾನ್ ರೂಪಿಸಿಕೊಂಡಿದೆ. ಈ ರೀತಿಯಾಗಿ, ಸಂದೇಶಕ್ಕೆ ಪ್ರತ್ಯುತ್ತರ ನೀಡುವ ಮೊದಲು ಅಥವಾ ಖಾತೆಯನ್ನು ನಿರ್ಬಂಧಿಸುವ ಅಥವಾ ವರದಿ ಮಾಡುವ ಮೊದಲು ನಿಮಗೆ ತಿಳಿದಿಲ್ಲದ ವ್ಯಕ್ತಿಯ ಚಿತ್ರವನ್ನು ನೋಡುವ ಆಯ್ಕೆ ನಿಮಗೆ ಇದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಫೇಸ್‌ಬುಕ್ ತಿಳಿಸಿದೆ.

ಸದ್ಯ ಈ ಫೀಚರ್ಸ್‌ಗಳೆಲ್ಲಾ ಮೆಸೆಂಜರ್‌ಗೆ "ಶೀಘ್ರದಲ್ಲೇ" ಬರಲಿವೆ ಎನ್ನಲಾಗ್ತಿದೆ. ಈಗಾಗಲೇ ಫೇಸ್‌ಬುಕ್ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಮೆಸೆಂಜರ್ ಅಪ್ಲಿಕೇಶನ್ ಬಳಕೆದಾರರಿಗಾಗಿ ಸ್ಕ್ರೀನ್ ಹಂಚಿಕೆ ಫೀಚರ್ಸ್ ಅನ್ನು ಪರಿಚಯಿಸಿದೆ. ಇದಲ್ಲದೆ ವೆಬ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ಮೆಸೆಂಜರ್ ರೂಮ್‌ಗಳ ಮೂಲಕವೂ ಇದನ್ನು ಪ್ರವೇಶಿಸಬಹುದಾಗಿದೆ.


Click it and Unblock the Notifications