Home
ಸುದ್ದಿಜಾಲ

ಬಹಿರಂಗವಾಯ್ತು ಅತಿದೊಡ್ಡ ಸ್ಕ್ಯಾಮ್‌! ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ಎಚ್ಚರ!

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಸ್ಕ್ಯಾಮರ್‌ಗಳ ಹಾವಳಿ ಜಾಸ್ತಿಯಾಗಿದೆ. ಪ್ರತಿನಿತ್ಯವೂ ದೇಶದ ಒಂದಲ್ಲ ಒಂದು ಪ್ರದೇಶದಲ್ಲಿ ಸ್ಕ್ಯಾಮರ್‌ಗಳಿಂದ ಮೋಸ ಹೋಗಿರುವ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೂಲಕ ಅಮಾಯಕರನ್ನು ಯಾಮಾರಿಸುವ ಪ್ರಕರಣಗಳು ಸಾಕಷ್ಟು ವರದಿಯಾಗಿವೆ.

ಇದೀಗ ಫೇಸ್‌ಬುಕ್‌ನಲ್ಲಿ (Facebook) ಅಮಾಯಕರನ್ನು ಯಾಮಾರಿಸಲು ಸ್ಕ್ಯಾಮರ್‌ಗಳು ಅನುಸುತ್ತಿರುವ ಬಹುದೊಡ್ಡ ಸ್ಕ್ಯಾಮ್‌ ಒಂದು ಬಹಿರಂಗವಾಗಿದೆ. ಅದರಲ್ಲೂ ಸ್ವಲ್ಪವೂ ಅನುಮಾನದ ರೀತಿಯಲ್ಲಿ ವಂಚಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಸ್ಕ್ಯಾಮ್‌ನಲ್ಲಿ ನಿಮ್ಮ ಫೇಸ್‌ಬುಕ್‌ ಫ್ರೆಂಡ್‌ ಸತ್ತು ಹೋಗಿದ್ದಾರೆ ಎಂದು ಹೇಳಿಕೊಂಡು ವಂಚಿಸುತ್ತಿದ್ದಾರೆ. ಹಾಗಾದ್ರೆ ಸತ್ತವರ ಹೆಸರಿನಲ್ಲಿ ಹೇಗೆಲ್ಲಾ ವಂಚನೆ ನಡೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಹಿರಂಗವಾಯ್ತು ಅತಿದೊಡ್ಡ ಸ್ಕ್ಯಾಮ್‌! ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ಎಚ್ಚರ!

ಫೇಸ್‌ಬುಕ್‌ನಲ್ಲಿ ಅಮಾಯಕರನ್ನು ವಂಚಿಸಿ ಹಣ ಎಗರಿಸುವ ಪ್ರಕರಣಗಳು ಹೊಸದೇನಲ್ಲ. ಪ್ರತಿಭಾರಿಯೂ ಹೊಸ ರೀತಿಯಲ್ಲಿ ವಂಚಿಸುವ ವಂಚಕರು ಇದೀಗ "look who just died" ಎಂಬ ಸಂದೇಶದ ಮೂಲಕ ವಂಚಿಸುತ್ತಿದ್ದಾರೆ. ಮೊದಲಿಗೆ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಹ್ಯಾಕರ್‌ ನಿಮ್ಮ ಸ್ನೇಹಿತನಂತೆ ಸಂದೇಶವನ್ನು ಕಳುಹಿಸುತ್ತಾನೆ. ಈ ಸಂದೇಶದಲ್ಲಿ ಫೇಸ್‌ಬುಕ್‌ನಲ್ಲಿ ನಿಮಗೆ ಫ್ರೆಂಡ್‌ ಆಗಿರುವವರು ಸತ್ತು ಹೋಗಿದ್ದಾರೆ ಅವರು ಯಾರು ಅಂತಾ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ ಎನ್ನುವ ಲಿಂಕ್‌ ಬರಲಿದೆ.

ನೀವು ಯಾರು ಸತ್ತು ಹೋಗಿರುವುದು ಅಂತಾ ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿದರೆ ಮುಗಿತು, ನಿಮ್ಮ ಖಾತೆ ಹ್ಯಾಕ್‌ ಆಗಿ ಬಿಡುತ್ತದೆ. ಈ ಲಿಂಕ್‌ ಮೂಲಕ ನಿಮ್ಮ ಖಾತೆಯ ಲಾಗಿನ್‌ ಪಾಸ್‌ವರ್ಡ್‌, ಸೇರಿದಂತೆ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಹ್ಯಾಕರ್‌ ಕದಿಯುತ್ತಾನೆ. ಅಷ್ಟೇ ಅಲ್ಲ ನಿಮ್ಮ ಖಾತೆಗೆ ಪ್ರವೇಶಿಸಿ ನಿಮ್ಮ ಸ್ನೇಹಿತರಿಗೆ ನಿಮ್ಮ ಖಾತೆಯ ಮೂಲಕ ಇದೇ ಮಾದರಿಯ ಸಂದೇಶ ಕಳುಹಿಸಿ ಅವರ ಖಾತೆಯನ್ನು ಕೂಡ ಹ್ಯಾಕ್‌ ಮಾಡುತ್ತಾರೆ. ನಂತರ ನಿಮ್ಮ ಬ್ಯಾಂಕ್‌ ಮಾಹಿತಿ ಸೇರಿದಂಯತೆ ಸೂಕ್ಷ್ಮ ಮಾಹಿತಿ ಕದಿಯುವ ಮೂಲಕನ ಹಣ ಎಗರಿಸುತ್ತಾರೆ.

ಬಹಿರಂಗವಾಯ್ತು ಅತಿದೊಡ್ಡ ಸ್ಕ್ಯಾಮ್‌! ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ಎಚ್ಚರ!

ಇದಲ್ಲದೆ ಫೇಸ್‌ಬುಕ್‌ನಲ್ಲಿ ನಿಮ್ಮ ಇಮೇಲ್ ವಿಳಾಸಗಳು, ಫೋನ್ ಸಂಖ್ಯೆಗಳು ಮತ್ತು ಜನ್ಮ ದಿನಾಂಕ ಮಾಹಿತಿಯನ್ನು ಕದಿಯುತ್ತಾರೆ. ಇವುಗಳ ಮೂಲಕ ನಿಮ್ಮ ಇತರ ಆನ್‌ಲೈನ್ ಖಾತೆಗಳಿಗೆ ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಒಂದು ವೇಳೆ ನಿಮ್ಮ ಖಾತೆಗೆ ಬ್ಯಾಂಕ್ ವಿವರಗಳು ಅಥವಾ ಹಣಕಾಸಿನ ಮಾಹಿತಿಯನ್ನು ಲಿಂಕ್ ಮಾಡಿದ್ದರೆ, ಅವರು ನಿಮ್ಮ ಹಣವನ್ನು ಕದಿಯುವ ಸಾಧ್ಯತೆಯಿದೆ.

ಇನ್ನು ಈ ಹೊಸ ಸ್ಕ್ಯಾಮ್‌ ಫೇಸ್‌ಬುಕ್‌ನಲ್ಲಿ ಮಾತ್ರವಲ್ಲದೆ ಇಮೇಲ್‌ಗಳು, ಟೆಕ್ಸ್ಟ್‌ ಮೆಸೇಜ್‌ ರೂಪದಲ್ಲಿಯೂ ಕೂಡ ಎಲ್ಲೆಡೆ ಹರಡುತ್ತಿದೆ ಎನ್ನುವ ಆತಂಕಕಾರಿ ವಿಚಾರ ಕೂಡ ಬಹಿರಂಗವಾಗಿದೆ. ಆದರಿಂದ ನಿಮ್ಮ ಮೊಬೈಲ್‌ಗೆ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಆದರೂ ಕಂಡುಬರುವ ಅನುಮಾನಾಸ್ಪದ ಸಂದೇಶಗಳಲ್ಲಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಎಚ್ಚರವಹಿಸುವುದು ಸೂಕ್ತ.

ಬಹಿರಂಗವಾಯ್ತು ಅತಿದೊಡ್ಡ ಸ್ಕ್ಯಾಮ್‌! ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ಎಚ್ಚರ!

ಫೇಸ್‌ಬುಕ್‌ನಲ್ಲಿ "look who just died" ಸ್ಕ್ಯಾಮ್‌ನಿಂದ ಪಾರಾಗುವುದು ಹೇಗೆ?
* ಸ್ಟ್ರಾಂಗ್‌ ಪಾಸ್‌ವರ್ಡ್‌ ಬಳಸಿ
* ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿ
* ಆನ್‌ಲೈನ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ
* ಸಂಶಯಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ
* ನಿಮ್ಮ ಡಿವೈಸ್‌ಗಳನ್ನು ಅಪ್ಡೇಟ್‌ ಮಾಡುತ್ತಿರಿ
* ಆನ್‌ಲೈನ್‌ನಲ್ಲಿ ಬ್ಯಾಂಕ್‌ ಮಾಹಿತಿಯನ್ನು ಶೇರ್‌ ಮಾಡಬೇಡಿ
* ಯಾವುದೇ ಬ್ಯಾಂಕ್‌ ಸಿಬ್ಬಂದಿ ಕೂಡ ನಿಮಗೆ ಕರೆ ಮಾಡಿ ಒಟಿಪಿ ಕೇಳುವುದಿಲ್ಲ
* ನಿಮ್ಮ ಅಕೌಂಟ್‌ ಮಾಹಿತಿಗಾಗಿ ಅಧಿಕೃತ ಬ್ಯಾಂಕ್‌ನ ವೆಬ್‌ಸೈಟ್‌ಗೆ ಮಾತ್ರ ಬೇಟಿ ನೀಡಿ
* ನಿಮ್ಮನ್ನು ರಕ್ಷಿಸಿಕೊಳ್ಳಲು ಆನ್‌ಲೈನ್ ಬೆದರಿಕೆಗಳು ಮತ್ತು ವಂಚನೆಗಳ ಬಗ್ಗೆ ಎಚ್ಚರದಿಂದಿರಿ.

Best Mobiles in India

English summary
Facebook new scam called “Look who died” targeting victims with a fake news link about a friends death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+