Home
ಸುದ್ದಿಜಾಲ

ಇನ್ಮುಂದೆ ನಿಗದಿತ ಸಮಯಕ್ಕೆ ಮೆಸೆಂಜರ್‌ ಸಂವಹನ ಡಿಲೀಟ್!..ಹೊಸ 4 ಅಪ್‌ಡೇಟ್ಸ್!!

ಜನಪ್ರಿಯ ಜಾಲತಾಣ ಫೇಸ್‌ಬುಕ್ ತನ್ನ ಬಳಕೆದಾರರ ಗೌಪ್ಯತೆ ಉಳಿಸಿಕೊಳ್ಳುವಲ್ಲಿ ಸೋತ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಖಾಸಗಿತನ ಕಾಪಾಡುವುದಕ್ಕೆ ಮುಂದಾಗಿದೆ. ವೈಯಕ್ತಿಕ ವಿವರ ಕಾಪಾಡುವ ಹಾಗೂ ಖಾಸಗಿತನಕ್ಕೆ ಹೆಚ್ಚು ಒತ್ತು ನೀಡುವಲ್ಲಿ ಫೇಸ್‌ಬುಕ್‌ ಇನ್ನು ಮುಂದೆ ಗಮನಹರಿಸಲಿದೆ' ಎಂದು ಫೇಸ್‌ಬುಕ್ ಮಾಲಿಕ ಮಾರ್ಕ್‌ ಜುಕರ್‌ಬರ್ಗ್ ಹೇಳಿದ್ದಾರೆ.

ಫೇಸ್‌ಬುಕ್‌ ಆಗಲಿ ಅಥವಾ ಹೊರಗಿನವರಾಗಲಿ ಯಾವುದೇ ಫೇಸ್‌ಬುಕ್ ಬಳಕೆದಾರರ ಖಾಸಗಿ ಸಂದೇಶಗಳನ್ನು ಹ್ಯಾಕ್ ಮಾಡಿ ನೋಡಲು ಸಾಧ್ಯವಾಗದಂತೆ ಗೌಪ್ಯತೆ ಕಾಪಾಡುವ ಇಂಗಿತವನ್ನು ಮಾರ್ಕ ವ್ಯಕ್ತಪಡಿಸಿದ್ದಾರೆ.‌ ಹಾಗಾಗಿ, ಮೆಸೆಂಜರ್‌ ಸಂದೇಶ ರವಾನೆಯಲ್ಲೂ ಕೂಡ ಎನ್‌ಕ್ರಿಪ್ಟಡ್ ಸೇವೆಯನ್ನು ತರುವತ್ತ ಫೇಸ್‌ಬುಕ್‌ ಗಮನಹರಿಸಿದೆ ಎಂದು ತಿಳಿದುಬಂದಿದೆ.

ಇನ್ಮುಂದೆ ನಿಗದಿತ ಸಮಯಕ್ಕೆ ಮೆಸೆಂಜರ್‌ ಸಂವಹನ ಡಿಲೀಟ್!..ಹೊಸ 4 ಅಪ್‌ಡೇಟ್ಸ್!!

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ ನೆಟ್‌ವರ್ಕ್‌ ಆಗಿದ್ದರೂ ಖಾಸಗಿತನ ಕಾಪಾಡುವ ಹಾಗೂ ಸುರಕ್ಷಿತ ಮೆಸೆಂಜರ್‌ ಅಪ್ಲಿಕೇಷನ್‌ ಇದಲ್ಲ ಎಂಬ ಆರೋಪಕ್ಕೆ ಫೇಸ್‌ಬುಕ್ ಹಲವು ಕ್ರಮಗಳನ್ನು ಕೈಗೊಳ್ಳಲು ತಯಾರಾಗಿದೆ. ಹಾಗಾದರೆ, ಖಾಸಗಿತನಕ್ಕೆ ಹೆಚ್ಚು ಒತ್ತು ನೀಡುವಲ್ಲಿ ಪೇಸ್‌ಬುಕ್ ತರುತ್ತಿರುವ ಭಾರೀ ಬದಲಾವಣೆಗಳು ಯಾವುವು ಎಂಬುದನ್ನು ಓದಿ ತಿಳಿಯಿರಿ.

ಮೆಸೆಂಜರ್‌ನಲ್ಲಿ ಆಟೊ ಡಿಲೀಟ್!

ಮೆಸೆಂಜರ್‌ನಲ್ಲಿ ಆಟೊ ಡಿಲೀಟ್!

ಮೆಸೆಂಜರ್‌ ಬಳಕೆದಾರರು ತಮ್ಮ ಸಂವಹನ ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಬೇಕು ಎಂದು ಬಯಸುತ್ತಾರೆ ಹೊರತು ಹೆಚ್ಚು ಸಮಯ ಸಂವಹನ ಉಳಿಸಿಕೊಳ್ಳಲು ಬಯಸುವುದಿಲ್ಲ ಎಂಬ ಅಭಿಪ್ರಾಯವನ್ನೂ ಸಹ ಮಾರ್ಕ್ ವ್ಯಕ್ತಪಡಿಸಿದ್ದು, ಇನ್ನುಂದೆ ಮೆಸೆಂಜರ್‌ನಲ್ಲಿನ ಸಂದೇಶಗಳು ನಿಗದಿತ ಸಮಯವಾದ ನಂತರ ಡಿಲೀಟ್‌ ಆಗುತ್ತವೆ ಎಂದು ಹೇಳಲಾಗಿದೆ.

ಎನ್‌ಕ್ರಿಪ್ಟಡ್ ಸಂದೇಶ ರವಾನೆ

ಎನ್‌ಕ್ರಿಪ್ಟಡ್ ಸಂದೇಶ ರವಾನೆ

ತಾನಾಗೆ ಸಂದೇಶಗಳು ಡಿಲೀಟ್‌ ಆಗುವಂಥ ವಿಶೇಷ ಮಾದರಿ ಫೀಚರ್ ಜೊತೆಗೆ ಸಂದೇಶ ರವಾನೆಯಲ್ಲಿ (ಮೆಸೆಂಜರ್‌ ಬಳಕೆ) ಗೌಪ್ಯತೆ ಕಾಪಾಡುವುದರ ಬಗ್ಗೆ ಫೇಸ್‌ಬುಕ್ ಹೆಚ್ಚು ಆದ್ಯತೆ ನೀಡಿದೆ. ಹಾಗಾಗಿ, ಮೆಸೇಂಜರ್‌ನಲ್ಲಿ ಎನ್‌ಕ್ರಿಪ್ಟಡ್ ಸಂದೇಶ ರವಾನೆ ಸೇವೆಯತ್ತ ಗಮನಹರಿಸಲಿದೆ. ಇದರಿಂದ ಖಾಸಗಿ ಸಂದೇಶಗಳು ಹ್ಯಾಕ್‌ ಆಗುವುದನ್ನು ತಡೆಯಬಹುದಾಗಿದೆ.

ವಾಟ್ಸ್ಆಪ್ ಜೊತೆಗೆ ಸಂವಹನ!

ವಾಟ್ಸ್ಆಪ್ ಜೊತೆಗೆ ಸಂವಹನ!

ಫೇಸ್‌ಬುಕ್‌ನ ಹೊಸ ಯೋಜನೆಯಿಂದ ಮೆಸೆಂಜರ್ ಖಾತೆ ಇರುವರು ವಾಟ್ಸ್‌ಆಪ್‌ ಬಳಕೆದಾರರೊಂದಿಗೆ ಹಾಗೂ ವಾಟ್ಸ್‌ಪ್‌ ಬಳಕೆದಾರರು ಮೆಸೆಂಜರ್ ಬಳಕೆದಾರರೊಂದಿಗೆ ಸಂವಹನ ನಡೆಸಬಹುದು ಎಂದು ತಿಳಿದುಬಂದಿದೆ. ಜೊತೆಗೆ ಬಳಕೆದಾರರು ತಮ್ಮ ಸಂವಹನವನ್ನು ಎಷ್ಟು ಸಮಯ ಉಳಿಸಿಕೊಳ್ಳಬೇಕೆಂಬ ಬಗ್ಗೆಯೂ ನಿರ್ಧರಿಸಬಹುದು ಎಂದು ಹೇಳಲಾಗಿದೆ.

‘ವೀಚಾಟ್’ನಂಥಹ ಆಪ್ ತಯಾರಿಕೆ!

‘ವೀಚಾಟ್’ನಂಥಹ ಆಪ್ ತಯಾರಿಕೆ!

ಏಷ್ಯಾದಲ್ಲಿ ಜನಪ್ರಿಯವಾಗಿರುವ ‘ವೀಚಾಟ್' ನಂಥ ಆಪ್‌ ಅನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನೂ ಮಾರ್ಕ್‌ ಜುಕರ್‌ಬರ್ಗ್ ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೆಸೇಂಜರ್ ಜನಪ್ರಿಯ ನೆಟ್‌ವರ್ಕ್‌ ಆಗಿದ್ದರೂ ಖಾಸಗಿತನ ಕಾಪಾಡುವ ಹಾಗೂ ಸುರಕ್ಷಿತ ಮೆಸೆಂಜರ್‌ ಅಪ್ಲಿಕೇಷನ್ ಇದಲ್ಲ ಎಂಬ ಆರೋಪಕ್ಕೆ ಹೊಸ ಮೆಸೇಜಿಂಗ್‌ ಆಪ್‌ ಬದಲಾಯಿಸಲಾಗುತ್ತಿದೆ.

ಸೇವೆಗಳು ಸ್ಥಗಿತವಾಗುವುದಿಲ್ಲ

ಸೇವೆಗಳು ಸ್ಥಗಿತವಾಗುವುದಿಲ್ಲ

ಸಂವಹನ ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಬೇಕು ಎಂದು ಮೆಸೇಂಜರ್‌ನಲ್ಲಿ ಬದಲಾವಣೆ ತರುತ್ತಿರುವ ಫೇಸ್‌ಬುಕ್‌ ನ್ಯೂಸ್ ಫೀಡ್ ಮತ್ತು ಗ್ರೂಪ್ ಸೇವೆಗಳ ಬಗ್ಗೆ ಅಥವಾ ಇನ್‌ಸ್ಟಾಗ್ರಾಂ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ, ಯಾವುದೇ ಸಾರ್ವಜನಿಕ ಸೇವೆಗಳು ಸ್ಥಗಿತವಾಗುವುದಿಲ್ಲ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾರ್ಕ್ ಹೇಳಿದ್ದಾರೆ.

Best Mobiles in India

English summary
Early this year, reports came out that Facebook's CEO Mark Zuckerberg planned to unify the messaging infrastructure of WhatsApp, Instagram. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+