Home
ಸುದ್ದಿಜಾಲ

ಫೇಸ್‌ಬುಕ್‌ ಪೇಜ್‌ನಲ್ಲಿ ಭಾರಿ ಬದಲಾವಣೆ!..ಏನೆಲ್ಲಾ ಬದಲಾಗಿದೆ ಅಂತೀರಾ?

ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್ ತನ್ನ ಪೇಜ್‌ನಲ್ಲಿ ಹೊಸ ಬದಲಾವಣೆಯನ್ನು ಮಾಡಿದೆ. ಈ ಮೂಲಕ ಬಳಕೆದಾರರಿಗೆ ಹೊಸ ಮಾದರಿಯ ಅನುಭವವನ್ನು ನೀಡಲು ಮುಂದಾಗಿದೆ. ಇನ್ನು ಈ ಹೊಸ ಬದಲಾವಣೆಗಳಲ್ಲಿ ಮರುವಿನ್ಯಾಸಗೊಳಿಸಲಾದ ಫೇಜ್‌, ಮೀಸಲಾದ ನ್ಯೂಸ್ ಫೀಡ್ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ತನ್ನ ಎಲ್ಲಾ ಪೇಜ್‌ಗಳ ಮೂಲಕ ಬಳಕೆದಾರರಿಗೆ ಹೊಸ ಪೇಜ್‌ ಅನುಭವವನ್ನು ನೀಡಲಿದ್ದೇವೆ ಎಂದು ಫೇಸ್‌ಬುಕ್ ಹೇಳಿದೆ.

ಜನಪ್ರಿಯ

ಹೌದು, ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ತನ್ನ ಇಡೀ ಪೇಜ್‌ ವಿಭಾಗವನ್ನು ಮರುವಿನ್ಯಾಸಗೊಳಿಸಿದೆ. ಬಳಕೆದಾರರು ಬಯೋಸ್, ಪೋಸ್ಟ್‌ಗಳು ಮತ್ತು ಇತರ ಪ್ರಮುಖ ವಿವರಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಪುಟಗಳ ಅನುಭವವನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಫೇಸ್‌ಬುಕ್‌ ತನ್ನ ನ್ಯೂಸ್ ಫೀಡ್ ಅನ್ನು ಪೇಜ್‌ಗಳಿಗೆ ತಂದಿದೆ. ಹಾಗಾದ್ರೆ ಫೇಸ್‌ಬುಕ್‌ ಮರುವಿನ್ಯಾಸಗೊಳಿಸಲಾದ ಪೇಜ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೇಸ್‌ಬುಕ್

ಪೇಸ್‌ಬುಕ್ ತನ್ನ ಪೇಜ್‌ಗಳಲ್ಲಿ ಬದಲಾವಣೆ ತರುವ ಮೂಲಕ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ. ಈ ಹೊಸ ಪೇಜ್‌ಗಳು ಸಂಭಾಷಣೆಗಳನ್ನು ಕಂಡುಹಿಡಿಯಲು ಮತ್ತು ಸೇರಲು, ಟ್ರೆಂಡ್‌ಗಳನ್ನು ಅನುಸರಿಸಲು, ಗೆಳೆಯರೊಂದಿಗೆ ಸಂವಹನ ನಡೆಸಲು ಮತ್ತು ಪುಟಗಳನ್ನು ಬಳಸುವ ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡಲಿದೆ. ಜೊತೆಗೆ ಮೀಸಲಾದ ನ್ಯೂಸ್ ಫೀಡ್ ಸಾರ್ವಜನಿಕ ವ್ಯಕ್ತಿಗಳು, ಪೇಜ್‌ಗಳು, ಗ್ರೂಪ್ಸ್‌ ಮತ್ತು ಸಿಂಗಲ್‌ಪೇಜ್‌, ಟ್ರೆಂಡಿಂಗ್ ವಿಷಯದಂತಹ ಹೊಸ ಸಂಪರ್ಕಗಳನ್ನು ಸಹ ಸೂಚಿಸುತ್ತದೆ.

ಸಾರ್ವಜನಿಕ

ಇದಲ್ಲದೆ ಸಾರ್ವಜನಿಕ ವ್ಯಕ್ತಿಗಳಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಕಾಮೆಂಟ್‌ಗಳಿಗೆ ಪೇಜ್‌ ಸಂಭಾಷಣೆಗಳನ್ನು ಹೆಚ್ಚು ಗೋಚರಿಸುವಂತೆ ಮಾಡಲಿದೆ. ಇದಕ್ಕಾಗಿ ಕಾಮೆಂಟ್‌ಗಳ ವಿಭಾಗದ ಮೇಲ್ಭಾಗಕ್ಕೆ ಬಂಪ್ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. ಈ ಬದಲಾವಣೆಗಳ ಜೊತೆಗೆ ಪ್ರಶ್ನೋತ್ತರ ಸ್ವರೂಪವನ್ನು ಸಹ ಪರಿಚಯಿಸಿದೆ. ಇದು ನಿರ್ದಿಷ್ಟ ಕಾರ್ಯಗಳ ಆಧಾರದ ಮೇಲೆ ನಿರ್ವಾಹಕ ಪ್ರವೇಶ ಅನುಮತಿಗಳನ್ನು ನಿಯೋಜಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ಫೇಸ್‌ಬುಕ್

ಇನ್ನು ಫೇಸ್‌ಬುಕ್ ಪೇಜ್‌ನಲ್ಲಿ ಬರುವ ದೊಡ್ಡ ಮತ್ತು ಪ್ರಮುಖ ಬದಲಾವಣೆಯೆಂದರೆ ಲೈಕ್ಸ್ ಬಟನ್ ತೆಗೆಯುವುದು. ಜನರು ತಮ್ಮ ನೆಚ್ಚಿನ ಪುಟಗಳೊಂದಿಗೆ ಸಂಪರ್ಕ ಸಾಧಿಸುವ ವಿಧಾನವನ್ನು ಸರಳೀಕರಿಸಲು ಇದನ್ನು ಮಾಡಲಾಗುತ್ತಿದೆ. ಲೈಕ್‌ಗಳಿಗಿಂತ ಭಿನ್ನವಾಗಿ, ಪುಟದ ಅನುಯಾಯಿಗಳು ಪುಟಗಳಿಂದ ನವೀಕರಣಗಳನ್ನು ಪಡೆಯಬಹುದಾದ ಜನರನ್ನು ಪ್ರತಿನಿಧಿಸುತ್ತಾರೆ. ಇದು ಸಾರ್ವಜನಿಕ ವ್ಯಕ್ತಿಗಳಿಗೆ ಅವರ ಅಭಿಮಾನಿ ಬಳಗದ ಬಲವಾದ ಸೂಚನೆಯನ್ನು ನೀಡಲು ಸಹಾಯ ಮಾಡುತ್ತದೆ ಎಂದು ಕಂಪನಿ ವಿವರಿಸಿದೆ.

Best Mobiles in India

English summary
Facebook said that it will roll out the new Pages experience to all Pages in the upcoming months.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+