Home
ಸುದ್ದಿಜಾಲ

4.5 ಕೋಟಿ ರೂ.ದಂಡ ಪಾವತಿಸಲು ಫೇಸ್‌ಬುಕ್‌ ಒಪ್ಪಿಗೆ!..ಏಕೆ ಗೊತ್ತಾ?

ಕೇಂಬ್ರಿಜ್ ಅನಲಿಟಿಕಾ ಕಂಪನಿಗೆ ದತ್ತಾಂಶ ನೀಡುವ ಮೂಲಕ ದತ್ತಾಂಶ ಭದ್ರತೆಯ ಕಾನೂನು ಉಲ್ಲಂಘಿಸಿರುವ ಪ್ರಕರಣದಲ್ಲಿ 6.44 ಲಕ್ಷ ಡಾಲರ್‌ (4.5 ಕೋಟಿ ರೂಪಾಯಿಗಳು) ದಂಡ ನೀಡಲು ಫೇಸ್‌ಬುಕ್‌ ಸಂಸ್ಥೆ ಒಪ್ಪಿಕೊಂಡಿದೆ. ಬಳಕೆದಾರರ ಮಾಹಿತಿ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದ ಕೇಂಬ್ರಿಜ್ ಅನಲಿಟಿಕಾ ಪ್ರಕರಣದ ಮೇಲ್ಮನವಿಯನ್ನು ಕೈಬಿಟ್ಟು ದಂಡ ನೀಡಲು ಫೇಸ್‌ಬುಕ್ ಒಪ್ಪಿಕೊಂಡಿದ್ದು, ಇತರ ಯಾವುದೇ ಹೊಣೆಗಾರಿಕೆಯನ್ನು ಸಂಸ್ಥೆ ಒಪ್ಪಿಕೊಂಡಿಲ್ಲ ಎಂದು ಐಸಿಒ ಬುಧವಾರ ಹೇಳಿದೆ.

ಕೇಂಬ್ರಿಜ್ ಅನಲಿಟಿಕಾ

ಕೇಂಬ್ರಿಜ್ ಅನಲಿಟಿಕಾ ಕಂಪನಿಯು 8.7 ಕೋಟಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಹಂಚಿಕೊಂಡಿದೆ ಎಂದು ಕಳೆದ ವರ್ಷ ಫೇಸ್‌ಬುಕ್‌ ಒಪ್ಪಿಕೊಂಡಿತ್ತು. ವಿಶ್ವದಾದ್ಯಂತ ಕೋಟ್ಯಂತರ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದ್ದ ಈ ಪ್ರಕರಣದಲ್ಲಿ ಹಲವು ದೇಶಗಳು ತನಿಖೆ ನಡೆಸಿದ್ದವು. ಇದೀಗ ಬ್ರಿಟನ್ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಅಪಾಯಕ್ಕೀಡುಮಾಡಿದ ಆರೋಪದ ಮೇಲೆ ಅಲ್ಲಿನ ಮಾಹಿತಿ ಆಯುಕ್ತರ ಕಚೇರಿ(ಐಸಿಒ) ದಂಡ ವಿಧಿಸಿದೆ.

 ಬ್ರಿಟಿಷ್‌

ಹತ್ತು ಲಕ್ಷ ಬ್ರಿಟಿಷ್‌ ಬಳಕೆದಾರರ ಮಾಹಿತಿಯನ್ನು ಕೇಂಬ್ರಿಜ್ ಅನಲಿಟಿಕಾ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿದೆ ಎಂಬುದು ಗೊತ್ತಾಗಿದ್ದರಿಂದ ಕಳೆದ ವರ್ಷವೇ ಮಾಹಿತಿ ಆಯುಕ್ತರ ಕಚೇರಿ(ಐಸಿಒ) ಫೇಸ್‌ಬುಕ್‌ಗೆ ಸಾಂಕೇತಿಕ ದಂಡ ವಿಧಿಸಿತ್ತು. ಇದೀಗ ವಿಚಚಾರಣೆ ನಡೆಸಿ 6.44 ಲಕ್ಷ ಡಾಲರ್‌ (4.5 ಕೋಟಿ ರೂಪಾಯಿಗಳು) ದಂಡ ವಿಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಪ್ಪಂದವೊಂದಕ್ಕೆ ಬಂದಿರುವ ಬಗ್ಗೆ ಫೇಸ್‌ಬುಕ್‌ ಕೂಡ ಸಂತಸ ವ್ಯಕ್ತಪಡಿಸಿದೆ.

ಮಹತ್ವದ ಬದಲಾವಣೆ

ಈ ಪ್ರಕರಣದ ಬಳಿಕ ನಮ್ಮಲ್ಲಿ ಮಹತ್ವದ ಬದಲಾವಣೆಗಳು ನಡೆದಿವೆ. ಅದರಲ್ಲಿಯೂ ಆಪ್‌ ಅಭಿವೃದ್ಧಿಪಡಿಸುವವರು ಮಾಹಿತಿ ಪಡೆಯುವುದಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಲಾಗಿದೆ ಎಂದು ಫೇಸ್‌ಬುಕ್‌ನ ಅಸೋಸಿಯೇಟ್‌ ಜನರಲ್‌ ಕೌನ್ಸೆಲ್‌ ಹ್ಯಾರಿ ಕಿನ್‌ಮೌತ್ ಅವರು ಹೇಳಿದ್ದಾರೆ. ಜನರ ಮಾಹಿತಿ ಮತ್ತು ಖಾಸಗಿತನವನ್ನು ಸಂರಕ್ಷಿಸಲು ಫೇಸ್‌ಬುಕ್‌ ಆದ್ಯತೆ ನೀಡುತ್ತದೆ. ಸುರಕ್ಷತೆಯ ಮೂಲ ತತ್ವಗಳಿಗೆ ಬದ್ಧವಾಗಿರಲು ಒಪ್ಪಿಕೊಂಡಿರುವುದಾಗಿ ಫೇಸ್‌ಬುಕ್ ವಕ್ತಾರರು ಹೇಳಿದ್ದಾರೆ.

ಕಾನೂನು

ಈ ಪ್ರಕರಣದಲ್ಲಿ, ಕೇಂಬ್ರಿಜ್ ಅನಲಿಟಿಕಾಗೆ ಫೇಸ್‌ಬುಕ್‌ನ 8.7 ಕೋಟಿ ಬಳಕೆದಾರರ ಮಾಹಿತಿ ಹೇಗೆ ದೊರೆಯಿತು ಎಂಬ ಬಗ್ಗೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಕಾನೂನು ನಿರೂಪಕರು ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್ ಅವರನ್ನು ಪ್ರಶ್ನಿಸಿದ್ದಾರೆ. ಬ್ರಿಟನ್ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಗಂಭೀರವಾಗಿ ಅಪಾಯಕ್ಕೊಡ್ಡಿರುವ ಬಗ್ಗೆ ಐಸಿಒ ಆತಂಕಗೊಂಡಿದೆ. ವೈಯಕ್ತಿಕ ಮಾಹಿತಿ ಮತ್ತು ಖಾಸಗಿತನವನ್ನು ರಕ್ಷಿಸುವುದು ಮೂಲಭೂತ ಆದ್ಯತೆಯಾಗಿರುತ್ತದೆ ಎಂದು ಐಸಿಒನ ಅಧಿಕಾರಿಯೋರ್ವರು ಹೇಳಿದ್ದಾರೆ.

Best Mobiles in India

English summary
Facebook has agreed to pay 4.5 crore fine to the U.K.'s Information Commissioner's Office for its role in the Cambridge Analytica scandal. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+