ಬಳಕೆದಾರರ ಸುರಕ್ಷತೆಗಾಗಿ ಹೊಸ ಕ್ರಮಕ್ಕೆ ಮುಂದಾದ ಫೇಸ್‌ಬುಕ್!
ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿರುವ ಪೇಸ್‌ಬುಕ್ ಈಗ ಹೊಸ ಹೆಜ್ಜೆ ಇಟ್ಟಿದೆ. ಸದ್ಯ ಇದೀಗ ಫೇಸ್‌ಬುಕ್ ಪ್ರೊಟೆಕ್ಟ್ ಅನ್ನು ಭಾರತ ಸೇರಿದಂತೆ ಇನ್ನು ಹೆಚ್ಚಿನ ದೇಶಗಳಲ್ಲಿ ಪರಿಚಯಿಸಲು ಮುಂದಾಗಿದೆ. ಫೇಸ್‌ಬುಕ್ ಪ್ರೊಟೆಕ್ಟ್ ಫೀಚರ್ಸ್, ಹೆಚ್ಚಿನ ಅಪಾಯದ ಬಳಕೆದಾರರ ಖಾತೆಗಳಿಗೆ ಹೆಚ್ಚುವರಿ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುವ ಪ್ರೋಗ್ರಾಂ ಆಗಿದೆ.

ಹೌದು, ಫೇಸ್‌ಬುಕ್ ಹೆಚ್ಚಿನ ಅಪಾಯ ಹೊಂದಿರುವ ಖಾತೆಗಳ ರಕ್ಷಣೆಗಾಗಿ ಫೇಸ್‌ಬುಕ್ ಪ್ರೊಟೆಕ್ಟ್ ಪ್ರೋಗ್ರಾಂ ಪರಿಚಯಿಸಿದೆ. ಈ ಪ್ರೋಗ್ರಾಂ ಅನ್ನು ಮೊದಲಿಗೆ US ನಲ್ಲಿ 2018 ರಲ್ಲಿ ಪರೀಕ್ಷಿಸಲಾಗಿತ್ತು. ಅಲ್ಲದೆ US 2020 ರ ಚುನಾವಣೆಯ ಸಮಯದಲ್ಲಿ ಇದನ್ನು ವ್ಯಾಪಕವಾಗಿ ವಿಸ್ತರಿಸಮಾಡಲಾಗಿತ್ತು. ಇದೀಗ ಮೆಟಾ ಕಂಪನಿಯು ವರ್ಷಾಂತ್ಯದ ವೇಳೆಗೆ ಸುಮಾರು 50 ದೇಶಗಳಲ್ಲಿಈ ಪ್ರೋಗ್ರಾಂ ಅನ್ನು ಲಾಂಚ್ ಮಾಡಲು ಪ್ಲಾನ್ ರೂಪಿಸಿದೆ. ಹಾಗಾದ್ರೆ ಫೇಸ್‌ಬುಕ್ ಪ್ರೊಟೆಕ್ಟ್ ಪ್ರೋಗ್ರಾಂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೇಸ್‌ಬುಕ್ ಪ್ರೊಟೆಕ್ಟ್ ಪ್ರೋಗ್ರಾಂ ಎನ್ನುವುದು ಬಳಕೆದಾರರ ಖಾತೆಗಳನ್ನು ರಕ್ಷಿಸುವ ಪ್ರೋಗ್ರಾಂ ಆಗಿದೆ. ಹೆಚ್ಚಿನ ಅಪಾಯ ಹೊಂದಿರುವ ಖಾತೆಗಳನ್ನು ರಕ್ಷಣೆ ಮಾಡುವ ಕಾರ್ಯವನ್ನು ಈ ಪ್ರೋಗ್ರಾಂ ಮಾಡಲಿದೆ. ಇದರಿಂದ ದುರುದ್ದೇಶಪೂರಿತ ಹ್ಯಾಕರ್‌ಗಳು ಅಥವಾ ಇತರ ವಿರೋಧಿ ಬೆದರಿಕೆಗಳಿಂದ ಹೆಚ್ಚು ಗುರಿಯಾಗುವ ಸಾಧ್ಯತೆಯಿರುವ ಜನರಿಗೆ ಭದ್ರತಾ ನೀಡಬಹುದಾಗಿದೆ. ಇವುಗಳಲ್ಲಿ ಮಾನವ ಹಕ್ಕುಗಳ ರಕ್ಷಕರು, ಪತ್ರಕರ್ತರು ಮತ್ತು ಕಾರ್ಯಕರ್ತರ ಖಾತೆಗಳು ಸೇರಿವೆ ಎನ್ನಲಾಗಿದೆ.

ಇನ್ನು ಈ ಕಾರ್ಯಕ್ರಮದ ಭಾಗವಾಗಿ, ಈ ಗುಂಪುಗಳಿಗೆ ಒಳಪಡುವ ಬಳಕೆದಾರರು ಶೀಘ್ರದಲ್ಲೇ ಫೇಸ್‌ಬುಕ್‌ನಿಂದ 'ಫೇಸ್‌ಬುಕ್ ಪ್ರೊಟೆಕ್ಟ್' ಆಯ್ಕೆಯನ್ನು ಆನ್ ಮಾಡಲು ಕೇಳುವ ಪ್ರಾಂಪ್ಟ್ ಅನ್ನು ಕಾಣಲಿದ್ದಾರೆ. ಇದರಿಂದ ತಮ್ಮ ಖಾತೆಗಳನ್ನು ಸೈಬರ್‌ಟಾಕ್‌ಗಳ ವಿರುದ್ಧ ರಕ್ಷಿಸಲು ಈ ಪ್ರೋಗ್ರಾಂ ಅನ್ನು ಬಳಸಬಹುದಾಗಿದೆ. ಸೈಬರ್ ಟಾಕ್‌ಗಳ ವಿರುದ್ದ ರಕ್ಷಣೆ ಮಾಡುವುದಕ್ಕಾಗಿಯೇ ಈ ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ಪ್ರೋಗ್ರಾಂನಲ್ಲಿ ಬಳಕೆದಾರರು ತಮ್ಮ ಖಾತೆಗಳಿಗೆ ಎರಡು ಅಂಶದ ದೃಢೀಕರಣವನ್ನು (2FA) ಆನ್ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ. ಇದರಿಂದ ಫೇಸ್‌ಬುಕ್ ಅಕೌಂಟ್ ಅನ್ನು ಪ್ರವೇಶಿಸಲು SMS ಅಥವಾ OTP ಯ ಮೂಲಕ ದರಡೀಕರಣ ಮಾಡುವ ಅಗತ್ಯವಿದೆ. ಇದಲ್ಲದೆ ಫೇಸ್‌ಬುಕ್ ಪ್ರೊಟೆಕ್ಟ್ ಫ್ರೋಗ್ರಾಂ ಬಳಕೆದಾರರ ಖಾತೆಗಳ ಭದ್ರತೆಗಾಗಿ ಅವರ ಖಾತೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ. ಈ ಪ್ರೋಗ್ರಾಂನಲ್ಲಿನ ಖಾತೆಗಳನ್ನು ನಮ್ಮ ಸಿಸ್ಟಮ್‌ಗಳಲ್ಲಿ ಫ್ಲ್ಯಾಗ್ ಮಾಡಲಾಗಿದೆ ಎಂದು ಫೇಸ್‌ಬುಕ್‌ನ ಭದ್ರತಾ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ವಿವರಿಸಿದ್ದಾರೆ.

ಇನ್ನು ಇಲ್ಲಿಯವರೆಗೆ 1.5 ಮಿಲಿಯನ್‌ಗಿಂತಲೂ ಹೆಚ್ಚು ಅಪಾಯದ ಖಾತೆಗಳು ಈ ಫ್ರೋಗ್ರಾಂ ಅನ್ನು ಸಕ್ರಿಯಗೊಳಿಸವೆ ಎಂದು ಹೇಳಲಾಗಿದೆ. ಇವುಗಳಲ್ಲಿ, ಸುಮಾರು 950,000 ಖಾತೆಗಳು ಮೊದಲ ಬಾರಿಗೆ ಫೇಸ್‌ಬುಕ್ ಪ್ರೊಟೆಕ್ಟ್ ಪ್ರೋಗ್ರಾಂ ಅನ್ನು ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ಫೇಸ್‌ಬುಕ್ ತನ್ನ ಕಲಿಕೆಯಿಂದ ಪ್ರೋಗ್ರಾಂ ಅನ್ನು ಪರಿಷ್ಕರಿಸಿದೆ ಎಂದು ಹೇಳಲಾಗಿದೆ.ಅದರಲ್ಲೂ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು ಮತ್ತು ಕಾರ್ಯಕರ್ತರಿಗೆ ಅಪಾಯದಲ್ಲಿರುವ ಖಾತೆಗಳಿಗಾಗಿ Facebook Protect 2FA ಅನ್ನು ಕಡ್ಡಾಯಗೊಳಿಸುತ್ತದೆ ಎಂಬುದನ್ನು ಗಮನಿಸಬೇಕು.

ಪ್ರಮುಖವಾಗಿ ಫೇಸ್‌ಬುಕ್ 2FA ಬಳಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿರುವುದರ ಹಿಂದಿನ ಉದ್ದೇಶ ಬಳಕೆದಾರರ ಖಾತೆಗಳ ರಕ್ಷಣೆ ಮಾಡುವುದೇ ಆಗಿದೆ. ಆದರೆ ನವೆಂಬರ್ 2021 ರವರೆಗೆ ಜಾಗತಿಕ ಫೇಸ್‌ಬುಕ್ ಮಾಸಿಕ ಸಕ್ರಿಯ ಬಳಕೆದಾರರಲ್ಲಿ ಕೇವಲ 4% ರಷ್ಟು ಮಾತ್ರ 2FA ಅನ್ನು ಅಳವಡಿಸಿಕೊಂಡಿದ್ದಾರೆ. ‘ಪ್ರೊಟೆಕ್ಟ್' ವೈಶಿಷ್ಟ್ಯದೊಂದಿಗೆ ಕನಿಷ್ಠ ಅಪಾಯದಲ್ಲಿರುವ ಪತ್ರಕರ್ತರು ಅಥವಾ ಕಾರ್ಯಕರ್ತರಂತಹ ಖಾತೆಗಳಿಗಾದರೂ ಅವರ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಪಡೆಯಬೇಕೆಂಬುದು ಫೇಸ್‌ಬುಕ್‌ನ ನಿಲುವಾಗಿದೆ.

ಇನ್ನು ಫೇಸ್‌ಬುಕ್ ನೀಡಿರುವ ಗಡುವಿನೊಳಗೆ ಅವರು 2FA ಅನ್ನು ಆನ್ ಮಾಡದಿದ್ದರೆ ಅವರು ತಮ್ಮ ಖಾತೆಯಿಂದ ಲಾಕ್ ಆಗುತ್ತಾರೆ. ಖಾತೆಯ ಪ್ರವೇಶವನ್ನು ಮರಳಿ ಪಡೆಯಬೇಕಾದರೆ ಅವರು 2FA ಅನ್ನು ಆನ್ ಮಾಡಬೇಕಾಗುತ್ತದೆ. ಅಲ್ಲದೆ ಬಳಕೆದಾರರಿಗೆ ಅಧಿಸೂಚನೆ ಕಾಣಿಸಿಕೊಂಡ ನಂತರ ಫೇಸ್‌ಬುಕ್ ಪ್ರೊಟೆಕ್ಟ್ ಅನ್ನು ರಿಸಿವ್ ಮಾಡಬೇಕಾಗುತ್ತದೆ. ಪತ್ರಕರ್ತರು ಅಥವಾ ಕಾರ್ಯಕರ್ತರು, ಪ್ರಾಂಪ್ಟ್ ಅನ್ನು ಪಡೆಯದ ಬಳಕೆದಾರರಿಗೆ, ಫೇಸ್‌ಬುಕ್ ಅವರನ್ನು ನೋಂದಾಯಿಸಲು ಅನುಮತಿಸುವ ಪ್ರಕ್ರಿಯೆಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಇದಲ್ಲದೆ ಫೇಸ್‌ಬುಕ್ ಬಳಕೆದಾರರು ಕೆಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಫೇಸ್‌ಬುಕ್ ಖಾತೆಯನ್ನು ಸುರಕ್ಷಿತವಾಗಿ ಇಡಬಹುದಾಗಿದೆ. ಇದಕ್ಕಾಗಿ ನಿಮ್ಮಫೇಸ್‌ಬುಕ್‌ನಲ್ಲಿ ಥರ್ಡ್ ಪಾರ್ಟಿ ಆಪ್ಸ್ ಲಾಗಿನ್ ಅನ್ನು ನಿಯಂತ್ರಿಸಬೇಕಾಗುತ್ತದೆ. ಅಂದರೆ ಅನೇಕ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಮೊದಲಿನಿಂದ ಹೊಸ ಖಾತೆಯನ್ನು ರಚಿಸುವ ಬದಲು ನಿಮ್ಮ ಫೇಸ್‌ಬುಕ್ ಖಾತೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡುವ ಆಯ್ಕೆಯನ್ನು ನೀಡುತ್ತವೆ. ಇದು ಆ ಆಪ್ ಬಳಕೆ/ಲಾಗ್‌ಇನ್ ಸುಲಭವಾಗಿಸುತ್ತದೆ ಆದರೂ, ಬಳಿಕ ಥರ್ಡ್ ಪಾರ್ಟಿ ಆಪ್ಸ್ ಮತ್ತು ವೆಬ್‌ಸೈಟ್ ಗಳನ್ನು ಬಳಸುವುದನ್ನು ನಿಲ್ಲಿಸಿದಾಗ ಅವುಗಳ ಫೇಸ್‌ಬುಕ್ ಎಂಟ್ರಿ ಕ್ಲೋಸ್ ಮಾಡಲು ಕೆಲವೊಮ್ಮೆ ಮರೆತು ಬಿಟ್ಟಿರುತ್ತಾರೆ. ಅದಕ್ಕಾಗಿ ಫೇಸ್‌ಬುಕ್ ಸೆಟ್ಟಿಂಗ್‌ಗಳು > ಅಪ್ಲಿಕೇಶನ್ ಗಳು ಮತ್ತು ವೆಬ್‌ಸೈಟ್‌ಗಳಿಗೆ ಹೋಗಿ. ನಿಮ್ಮ ಫೇಸ್‌ಬುಕ್ ಖಾತೆಗೆ ಪ್ರವೇಶವನ್ನು ಹೊಂದಿರುವ ಎಲ್ಲಾ ಸಕ್ರಿಯ ಅಪ್ಲಿಕೇಶನ್ ಗಳು ಮತ್ತು ವೆಬ್‌ಸೈಟ್‌ಗಳ ಪಟ್ಟಿಯನ್ನು ನೀವು ನೋಡುತ್ತೀರಿ. ನೀವು ಬಳಸುವ ಅಪ್ಲಿಕೇಶನ್ ಗಳನ್ನು ನೀವು ಆಯ್ಕೆ ಮಾಡಬಹುದು.

Facebook ಪ್ರೊಫೈಲ್ ಲಾಕ್ ಮಾಡಿ
* ಫೇಸ್‌ಬುಕ್ ಆಪ್‌ಗೆ ಲಾಗ್ ಇನ್ ಮಾಡಿ.
* ನಿಮ್ಮ ಪ್ರೊಫೈಲ್ ಚಿತ್ರ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ತೆರೆಯಿರಿ.
* ನಿಮ್ಮ ಪ್ರೊಫೈಲ್ ಚಿತ್ರದ ಕೆಳಗಿನ ಮೂರು ಚುಕ್ಕೆ ಗಳ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಿ ಮೇಲೆ ಕ್ಲಿಕ್ ಮಾಡಿ.


Click it and Unblock the Notifications








