ಫೇಸ್‌ಬುಕ್‌ನಿಂದ ಭಾರೀ ಮೋಸ?..ಬಳಕೆದಾರರ ಖಾಸಗಿ ಮಾಹಿತಿ ಸೇಲ್!!
ಜಾಹಿರಾತು ಮಾತ್ರವಲ್ಲದೆ ಬಳಕೆದಾರರ ಖಾಸಗಿ ಮಾಹಿತಿಯನ್ನು ಸಹ ಮಾರಿಕೊಂಡು ಫೇಸ್‌ಬುಕ್ ಹಣ ಮಾಡುತ್ತಿದೆ ಎನ್ನಲಾದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಬಳಕೆದಾರರ ಬಹುತೇಕ ಖಾಸಗಿ ಮಾಹಿತಿಯನ್ನು ಇತರೆ ತಂತ್ರಜ್ಞಾನ ಕಂಪನಿಗಳು ಪಡೆಯಲು ಅವಕಾಶ ನೀಡಿರುವುದು ಮತ್ತೊಮ್ಮೆ ಬಹಿರಂಗವಾಗಿದೆ.
ಹೌದು, ಮಾಹಿತಿ ಕನ್ನಕ್ಕೆ ಸಂಬಂಧಿಸಿದಂತೆ ಈಗಾಗಲೇ 8.7 ಕೋಟಿ ಫೇಸ್‌ಬುಕ್ ಬಳಕೆದಾರರ ದತ್ತಾಂಶವನ್ನು ಕೇಂಬ್ರಿಜ್ ಅನಲಿಟಿಕಾ ಜೊತೆ ಹಂಚಿಕೊಂಡಿರುವ ಆರೋಪಕ್ಕೆ ತುತ್ತಾಗಿರುವ ಫೇಸ್‌ಬುಕ್, ಈಗ ನೆಟ್‌ಫ್ಲಿಕ್ಸ್' ಮತ್ತು ಸ್ಪೊಟಿಫೈ ಕಂಪೆನಿಗಳಿಗೆ ತನ್ನ ಬಳಕೆದಾರರ ಖಾಸಗಿ ಮಾಹಿತಿ ಓದಲು ಫೇಸ್‌ಬುಕ್ ಅವಕಾಶ ಕಲ್ಪಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಪಡೆಯಲು ಆನ್‌ಲೈನ್ ಉದ್ಯಮಗಳು, ಮನರಂಜನಾ ತಾಣಗಳು, ವಾಹನ ತಯಾರಕರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ 150ಕ್ಕೂ ಹೆಚ್ಚು ಕಂಪನಿಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ. ತಂತ್ರಜ್ಞಾನ ಕಂಪನಿಗಳು ಸಹ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಫೇಸ್‌ಬುಕ್ ಹಿಂದೆ ಬಿದ್ದಿವೆ ಎಂದು ತಿಳಿದುಬಂದಿದೆ.
ಗ್ರಾಹಕರ ರಕ್ಷಣೆಗೆ ಸಂಬಂಧಿಸಿದಂತೆ 'ಫೆಡರಲ್ ಟ್ರೇಡ್ ಕಮಿಷನ್' (ಎಫ್‌ಟಿಸಿ) ಜತೆ 2011ರಲ್ಲಿ ಮಾಡಿ ಕೊಂಡ ಒಪ್ಪಂದದಂತೆ ಬಳಕೆದಾರರ ಮಾಹಿತಿಯನ್ನು ಪರವಾನಗಿ ಇಲ್ಲದೆ ನೀಡುವುದಿಲ್ಲ ಎಂದು ಫೇಸ್‌ಬುಕ್ ತಿಳಿಸಿತ್ತು. ಆದರೆ, ಈಗ ಫೇಸ್‌ಬುಕ್ ತನ್ನ ಬಳಕೆದಾರರ ಖಾಸಗಿ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಂಡು ಕಾನೂನನ್ನು ಮುರಿದಿದೆ ಎಂದು ಹೇಳಲಾಗುತ್ತಿದೆ.

ಇಷ್ಟು ಮಾತ್ರವಲ್ಲದೇ, ಮೈಕ್ರೊಸಾಫ್ಟ್ ಸರ್ಚ್ ಎಂಜಿನ್ 'ಬಿಂಗ್' ಪರವಾನಗಿ ಇಲ್ಲದೆಯೂ ಫೇಸ್‌ಬುಕ್ ಬಳಕೆದಾರರ ಸ್ನೇಹಿತರ ಹೆಸರುಗಳನ್ನು ನಾವು ನೋಡಬಹುದಾಗಿದೆ. ಇದೇ ರೀತಿಯಲ್ಲಿ ಇ- ಕಾಮರ್ಸ್ ಸಂಸ್ಥೆ ಅಮೆಜಾನ್ ಬಳಕೆದಾರರ ಹೆಸರು ಮತ್ತು ಸಂಪರ್ಕ ಕುರಿತ ಮಾಹಿತಿಯನ್ನು ಸಹ ಫೇಸ್‌ಬುಕ್ ಪತ್ತೆ ಮಾಡುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.


Click it and Unblock the Notifications








