ಫೇಸ್‌ಬುಕ್‌ನ ಈ ಫೀಚರ್ಸ್ ಇದೀಗ 150ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯ!
ಮೆಟಾ ಒಡೆತನದ ಫೇಸ್‌ಬುಕ್ ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಶಾರ್ಟ್ ವೀಡಿಯೋ ಫೀಚರ್ಸ್ ರೀಲ್ಸ್ ಅನ್ನು 150ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಾರಂಭಿಸಿದೆ. ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆದ ನಂತರ ರೀಲ್ಸ್ ಫೀಚರ್ಸ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಹೌದು, ಫೇಸ್‌ಬುಕ್ ತನ್ನ ಶಾರ್ಟ್ ವೀಡಿಯೋ ಫೀಚರ್ಸ್ ರೀಲ್ಸ್ ಅನ್ನು ಜಾಗತಿಕವಾಗಿ 150ಕ್ಕೂ ದೇಶಗಳಲ್ಲಿ ಪರಿಚಯಿಸಿದೆ. ರೀಲ್ಸ್ ಫೀಚರ್ಸ್ 2020 ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತು 2021 ರಲ್ಲಿ ಫೇಸ್‌ಬುಕ್‌ನಲ್ಲಿ ಪ್ರಾರಂಭಿಸಲಾಗಿತ್ತು. ಇದೀಗ ಟಿಕ್‌ಟಾಕ್‌ಗಿಂತ ಹೆಚ್ಚಿನ ಜನಪ್ರಿಯತೆಯನ್ನು ರೀಲ್ಸ್ ಫೀಚರ್ಸ್ ಸಾಧಿಸುತ್ತದೆ ಎನ್ನಲಾಗಿದೆ. ರೀಲ್ಸ್ ಈಗಾಗಲೇ ವೇಗವಾಗಿ ಬೆಳೆಯುತ್ತಿರುವ ಕಂಟೆಂಟ್ ಫಾರ್ಮ್ಯಾಟ್ ಆಗಿದೆ. ಆದರಿಂದ ಇದನ್ನು ಜಾಗತಿಕವಾಗಿ ಫೇಸ್‌ಬುಕ್‌ನಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತಿದ್ದೇವೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿಕೊ೦ಡಿದ್ದಾರೆ. ಹಾಗಾದ್ರೆ ರೀಲ್ಸ್ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್ ತನ್ನ ರೀಲ್ಸ್ ಫೀಚರ್ಸ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ವಿಸ್ತರಣೆ ಮಾಡಲು ಮುಂದಾಗಿದೆ. ಇದಕ್ಕಾಗಿ 150ಕ್ಕೂ ಹೆಚ್ಚಿನ ದೇಶಗಳಲ್ಲಿ ಇಂದಿನಿಂದ ಲಭ್ಯವಾಗಲಿದೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿಕೊ೦ಡಿದ್ದಾರೆ. ಹೆಚ್ಚಿನ ಜನರು ಫೇಸ್‌ಬುಕ್‌ನಲ್ಲಿ ಕಳೆಯುವ ಸಮಯದಲ್ಲಿ ಅರ್ಧದಷ್ಟು ಸಮಯವನ್ನು ರೀಲ್ಸ್ ವೀಡಿಯೊದಲ್ಲಿ ಕಳೆಯುತ್ತಿದ್ದಾರೆ ಎಂದು ಮೆಟಾ ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಇನ್ನು ಹೆಚ್ಚಿನ ಜನರನ್ನು ರೀಲ್ಸ್ ಕಡೆಗೆ ಆಕರ್ಷಿಸುವುದಕ್ಕಾಗಿ ರೀಲ್ಸ್ ಫೀಚರ್ಸ್ ಮೂಲಕ ಕಂಟೆಂಟ್ ಕ್ರಿಯೆಟರ್ಸ್ ಹಣಗಳಿಸುವುದಕ್ಕೂ ಕೂಡ ಹೊಸ ಮಾರ್ಗಗಳನ್ನು ಸಹ ಘೋಷಿಸಿದೆ.

ಇನ್ನು ರೀಲ್ಸ್‌ನಲ್ಲಿ ಕಂಟೆಂಟ್ ಕ್ರಿಯೆಟರ್ಸ್ ಹಣಗಳಿಸುವುದಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಇದಕ್ಕಾಗಿ ಬೋನಸ್‌ಗಳನ್ನು ಹೆಚ್ಚಿನ ದೇಶಗಳಿಗೆ ಪಾವತಿಸಲು ತನ್ನ ಕಾರ್ಯಕ್ರಮವನ್ನು ವಿಸ್ತರಿಸುತ್ತಿದೆ. ಕ್ರಿಯೆಟರ್ಸ್ ಜಾಹೀರಾತು ಆದಾಯವನ್ನು ಗಳಿಸಲು ರಚನೆಕಾರರಿಗೆ ಬ್ಯಾನರ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ಓವರ್‌ಲೇ ಜಾಹೀರಾತುಗಳನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದೆ. ಇದು ಶೀಘ್ರದಲ್ಲೇ ರೀಲ್‌ಗಳ ನಡುವೆ ಫುಲ್-ಸ್ಕ್ರೀನ್ ಜಾಹೀರಾತುಗಳನ್ನು ಹೊರತರಲಿದೆ. ಇದರಿಂದ ಕಂಟೆಂಟ್ ಕ್ರಿಯೆಟರ್ಸ್ ಹಣ ಗಳಿಸುವುದು ಸುಲಭವಾಗಿದೆ.

ಇದಲ್ಲದೆ ಮೆಟಾ ಕಂಪೆನಿ ತನ್ನ ಫೇಸ್‌ಬುಕ್ ಮೆಸೆಂಜರ್ ಶೀಘ್ರದಲ್ಲೇ ಬಳಕೆದಾರರಿಗೆ ವಾಯ್ಸ್ ಮೆಸೇಜ್ ಕಳುಹಿಸುವುದಕ್ಕೆ ಅವಕಾಶ ನೀಡಲಿದೆ. ಮೆಸೇಜ್ ಅನ್ನು ಕಳುಹಿಸುವ ಮೊದಲು ವಾಯ್ಸ್ ಮೆಸೇಜ್ ಪಾಸ್‌ಗೊಳಿಸುವ, ಪ್ರಿವ್ಯೂ ಮಾಡುವ, ಡಿಲೀಟ್ ಅಥವಾ ರೆಕಾರ್ಡ್ ಮಾಡುವುದನ್ನು ಮುಂದುವರಿಸುವುದಕ್ಕೆ ಕೂಡ ಅವಕಾಶ ನೀಡಲು ಮುಂದಾಗಿದೆ. ಇದಲ್ಲದೆ ಮೆಸೆಂಜರ್ ವಾಯ್ಸ್ ಮೆಸೇಜ್‌ನ ಅವಧಿಯನ್ನು ಒಂದು ನಿಮಿಷದಿಂದ 30 ನಿಮಿಷಗಳಿಗೆ ಹೆಚ್ಚಿಸಿದೆ. ಅಂದರೆ ನೀವು ಒಂದು ಹಾಡನ್ನು ವಾಯ್ಸ್ ಮೆಸೇಜ್‌ನಲ್ಲಿ ರೆಕಾರ್ಡ್ ಮಾಡಬಹುದು.

ಇದರೊಂದಿಗೆ ಫೇಸ್‌ಬುಕ್ ಮೆಸೆಂಜರ್ ಕೂಡ ವಾಟ್ಸಾಪ್ ಮಾದರಿಯ ವಾಯ್ಸ್ ನೋಟ್‌ಗಳನ್ನು ಪಡದುಕೊಳ್ಳಲಿದೆ. ಇವುಗಳನ್ನು ಡಿಸ್‌ಅಪಿಯರಿಂಗ್ ಫಿಚರ್ಸ್ ವಿಥ್ ವ್ಯಾನಿಶ್ ಮೋಡ್ ನಲ್ಲಿ ಬಳಸಬಹುದು. ಅಂದರೆ ಈ ಸಂದೇಶಗಳು ವ್ಯಾನಿಶ್ ಮೋಡ್‌ನಲ್ಲಿ ನೋಡಿದ ತಕ್ಷಣ ಕಣ್ಮರೆಯಾಗುವಂತೆ ಮಾಡಲಾಗಿದೆ. ಇದರಿಂದ ಬಳಕೆದಾರರು ಕಣ್ಮರೆಯಾಗುತ್ತಿರುವ ಮೇಮ್‌ಗಳು, GIF ಗಳು, ಸ್ಟಿಕ್ಕರ್‌ಗಳು ಅಥವಾ ಪ್ರತಿಕ್ರಿಯೆಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇನ್ನು ಮೆಸೆಂಜರ್‌ನಲ್ಲಿ ವ್ಯಾನಿಶ್ ಮೋಡ್ ಅನ್ನು ಆನ್ ಮಾಡಲು, ಚಾಟ್ ಥ್ರೆಡ್ ಅನ್ನು ತೆರೆಯಬೇಕಾಗುತ್ತದೆ. ಇದರಲ್ಲಿ ಮೇಲಕ್ಕೆ ಸ್ವೈಪ್ ಮಾಡುವ ಮೂಲಕ ವ್ಯಾನಿಶ್ ಮೋಡ್ ಅನ್ನು ಬಳಸಬಹುದು.


Click it and Unblock the Notifications








