Home
ಸುದ್ದಿಜಾಲ

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್‌ ಶೈಲಿಯ ಫೇಸ್‌ಬುಕ್‌ ರೀಲ್ಸ್‌ ಬಿಡುಗಡೆ!

ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆಗಿ ಸಾಕಷ್ಟು ದಿನಗಳೇ ಆಗಿವೆ. ಆದರೂ ಟಿಕ್‌ಟಾಕ್‌ ಮೇಲೇ ಜನರಿಗಿದ್ದ ವ್ಯಾಮೋಹ ಇನ್ನು ಕಡಿಮೆ ಆಗಿಲ್ಲ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ಶಾರ್ಟ್‌ ವೀಡಿಯೊ ಆಪ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ಇದಕ್ಕೆ ಫೇಸ್‌ಬುಕ್‌ ಕೂಡ ಹೊರತಾಗಿಲ್ಲ. ಈಗಾಗಲೇ ಫೇಸ್‌ಬುಕ್‌ ತನ್ನ ಒಡೆತನದ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಇದೀಗ ಇನ್‌ಸ್ಟಾಗ್ರಾಮ್‌ ಮಾದರಿಯಲ್ಲೇ ಫೇಸ್‌ಬುಕ್‌ ರೀಲ್ಸ್‌ ಅನ್ನು ಪರಿಚಯಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಟಿಕ್‌ಟಾಕ್‌ಗೆ ಪರ್ಯಾಯವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ಶಾರ್ಟ್‌ ವೀಡಿಯೊಗಳನ್ನು ರಚಿಸಲು ಮತ್ತು ಪೋಸ್ಟ್ ಮಾಡಲು ಫೇಸ್‌ಬುಕ್ ರೀಲ್ಸ್ ಅನ್ನು ಪರಿಚಯಿಸಿದೆ. ಸದ್ಯ ಫೇಸ್‌ಬುಕ್ ಈಗ ಭಾರತದ ಬಳಕೆದಾರರಿಗೆ ಶಾರ್ಟ್‌ ವೀಡಿಯೊಗಳನ್ನು ಕ್ರಿಯೆಟ್‌ ಮಾಡಲು ಮತ್ತು ಇವುಗಳನ್ನು ರೀಲ್ಸ್ ಎಂದು ಪೋಸ್ಟ್ ಮಾಡಲು ಅನುಮತಿಸುತ್ತದೆ. ಇನ್ನುಳಿದಂತೆ ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಾರ್ಟ್‌ ವೀಡಿಯೊ

ಭಾರತದಲ್ಲಿ ಶಾರ್ಟ್‌ ವೀಡಿಯೊ ಪ್ರಿಯರಿಗೆ ಫೇಸ್‌ಬುಕ್ ತನ್ನ ವೇದಿಕೆಯಲ್ಲಿ ಹೊಸ ಆಯ್ಕೆಯನ್ನು ನೀಡಿದೆ. ಇದು ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾದರಿಯಲ್ಲಿದ್ದು, ಫೇಸ್‌ಬುಕ್‌ ರೀಲ್ಸ್‌ ಎಂದು ಹೆಸರಿಸಲಾಗಿದೆ. ಈ ಹೊಸ ಫೇಸ್‌ಬುಕ್ ಫೀಚರ್ಸ್‌ ಮೂಲಕ ಜನರು ತಮ್ಮ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಶಿಫಾರಸು ಮಾಡಲು ಮತ್ತು ಹೆಚ್ಚಿನ ಪ್ರೇಕ್ಷಕರ ಸಂಖ್ಯೆಯನ್ನು ತಲುಪಲು ಸಾಧ್ಯವಾಗುತ್ತದೆ. ಸದ್ಯ ಈ ಫೀಚರ್ಸ್‌ ಅನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ.

ಫೇಸ್‌ಬುಕ್

ಫೇಸ್‌ಬುಕ್ "ಭಾರತದಲ್ಲಿ, ಇನ್‌ಸ್ಟಾಗ್ರಾಮ್ ರೀಲ್‌ ಕ್ರಿಯೆಟರ್ಸ್‌ ತನ್ಮ ರೀಲ್ಸ್‌ಗಳನ್ನು ಫೇಸ್‌ಬುಕ್‌ನಲ್ಲಿ ಶಿಫಾರಸು ಮಾಡಬಹದಾಗಿದೆ. ಇದರಿಂದಾಗಿ ಕ್ರಿಯೆಟರ್ಸ್‌ ಹೊಸ ಪ್ರೇಕ್ಷಕರನ್ನು ತಲುಪಬಹುದು. ಅಲ್ಲದೆ ಜನರು ಹೆಚ್ಚು ಮನರಂಜನೆಯ ವಿಷಯವನ್ನು ರಚಿಸಬಹುದು ಮತ್ತು ಕಂಡುಹಿಡಿಯಬಹುದು ಎಂದು ಹೇಳಿದೆ. ಪ್ರಸ್ತುತ, ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಯಾವುದೇ ಮೀಸಲಾದ ರೀಲ್ಸ್ ವಿಭಾಗವಿಲ್ಲ, ಕೆಳಗೆ ಸ್ಕ್ರಾಲ್ ಮಾಡಿದ ನಂತರ, ನೀವು ಹಲವಾರು ಸಣ್ಣ ವೀಡಿಯೊಗಳನ್ನು ದಾಖಲಿಸುವ ‘ಶಾರ್ಟ್‌ ವೀಡಿಯೊಗಳು' ವಿಭಾಗವನ್ನು ಪಡೆಯುತ್ತೀರಿ. ಇದು ನಿಮಗಾಗಿ ಒಂದ ಶಾರ್ಟ್‌ ವಿಡಿಯೊಗಳನ್ನು ರಚಿಸಲು ನಿಮಗೆ ಅನುಮತಿಸುತ್ತದೆ.

ರೀಲ್ಸ್ ಅನ್ನು ವಾಟ್ಸಾಪ್‌ನಲ್ಲಿ ಶೇರ್‌ ಮಾಡಬಹುದಾ?

ರೀಲ್ಸ್ ಅನ್ನು ವಾಟ್ಸಾಪ್‌ನಲ್ಲಿ ಶೇರ್‌ ಮಾಡಬಹುದಾ?

ಕೆಲವು ತಿಂಗಳ ಹಿಂದೆ ಫೇಸ್‌ಬುಕ್, ಭಾರತದಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಪ್ರಾರಂಭಿಸಿತು. ಇದು ಚಿಂಗಾರಿ, ಬೊಲೊ ಇಂಡಿಯಾ, ರೊಪೊಸ್ಸೊ, ಮೊಜ್ ಮತ್ತು ಇತರ ಅನೇಕ ಸ್ವದೇಶಿ ಅಪ್ಲಿಕೇಶನ್‌ಗಳ ಜೊತೆಗೆ ಸ್ಪರ್ಧಿಸುತ್ತಿದೆ. ಪ್ರಸ್ತುತ, ಇನ್ಸ್ಟಾಗ್ರಾಮ್ ರೀಲ್ಸ್ ಸಾಕಷ್ಟು ಜನಪ್ರಿಯವಾಗಿದೆ ಮತ್ತು ದೇಶದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಫೇಸ್‌ಬುಕ್ ತನ್ನ ಅಪ್ಲಿಕೇಶನ್‌ಗಳನ್ನು ಒಂದೇ ರೀತಿಯ ಫೀಚರ್ಸ್‌ಗಳೊಂದಿಗೆ ಏಕೀಕರಿಸಲು ಪ್ರಯತ್ನಿಸುವುದರಿಂದ ವಾಟ್ಸಾಪ್ ರೀಲ್‌ಗಳನ್ನು ಕ್ರಿಯೆಟ್‌ ಮಾಡುವ ಸಾಮರ್ಥ್ಯವನ್ನು ಪರಿಚಯಿಸುವ ಸಾಧ್ಯತೆ ಕೂಡ ಇದೆ.

Best Mobiles in India

English summary
Facebook Reels Launched In India As A Short Video Platform.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+