ನೂರಕ್ಕೂ ಪೇಜ್ ಮತ್ತು ಖಾತೆಗಳಿಗೆ ನಿಷೇಧ ಹೇರಿತು ಫೇಸ್‌ಬುಕ್!..ಏಕೆ ಗೊತ್ತಾ?
ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅನ್ನು ದುಷ್ಕೃತ್ಯ, ದುರುದ್ದೇಶಕ್ಕಾಗಿ ಫೇಸ್‌ಬುಕ್ ಪೇಜ್‌ಗಳನ್ನು ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ಇಂಡೊನೇಷ್ಯಾ, ಯುಎಇ, ಈಜಿಪ್ಟ್ ಮತ್ತು ನೈಜೀರಿಯಾದಲ್ಲಿ ನೂರಕ್ಕೂ ಅಧಿಕ ಪೇಜ್, ಗ್ರೂಪ್ ಹಾಗೂ ಖಾತೆಗಳನ್ನು ರದ್ದುಗೊಳಿಸಿರುವುದಾಗಿ ಫೇಸ್‌ಬುಕ್ ಸಂಸ್ಥೆ ತಿಳಿಸಿದೆ. ಫೇಸ್‌ಬುಕ್ ಪೇಜ್‌ಗಳು ಮತ್ತು ಗ್ರೂಪ್‌ಗಳು ಒಂದೇ ಸಮಯದಲ್ಲಿ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸುವಂತಹ ಫ್ಲಾಟ್‌ಫಾರ್ಮ್‌ಗಳಾಗಿದ್ದು, ಇವುಗಳನ್ನು ದುರುದ್ದೇಶಕ್ಕಾಗಿ ಬಳಸಲು ಅವಕಾಶ ಇಲ್ಲ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಹೌದು, ಇಂಡೊನೇಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಗಮನವಿರಿಸಲಾಗುತ್ತಿದ್ದು, ನಕಲಿ ಖಾತೆಗಳು ಜಾಹೀರಾತಿನ ಮೂಲಕ ಜನರನ್ನು ಸೆಳೆಯುತ್ತಿವೆ. ಆಗಸ್ಟ್‌ನಿಂದ ಪಪುವಾದಲ್ಲಿ ಪ್ರತಿಭಟನೆ, ಘರ್ಷಣೆ ತೀವ್ರವಾಗಿದ್ದು, ಸೆಪ್ಟೆಂಬರ್‌ನಲ್ಲಿ ನಡೆದ ಘರ್ಷಣೆಯಲ್ಲಿ 33 ಜನ ಮೃತಪಟ್ಟು ಸಾವಿರಾರು ಜನ ಗಾಯಗೊಂಡಿದ್ದರು. ನಕಲಿ ಫೇಸ್‌ಬುಕ್ ಹಾಗೂ ಟ್ವಿಟರ್‌ಖಾತೆಗಳು ಹೆಚ್ಚುತ್ತಿರುವ ಬಗ್ಗೆ ಸಂಶೋಧಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆರುವುದಾಗಿ ಫೇಸ್‌ಬುಕ್ ತಿಳಿಸಿದೆ.

ಇಂಡೊನೇಷ್ಯಾದಲ್ಲಿ ಪಶ್ಚಿಮ ಪಪುವಾ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿ ಅಥವಾ ಆ ಬಗ್ಗೆ ಟೀಕಿಸಿ 100ಕ್ಕೂ ಅಧಿಕ ನಕಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಇಂಗ್ಲಿಷ್ ಮತ್ತು ಇಂಡೋನೇಷ್ಯನ್ ಭಾಷೆಯಲ್ಲಿ ವಿಷಯಗಳನ್ನು ಪ್ರಕಟಿಸಲಾಗುತ್ತಿತ್ತು. ಈ ಖಾತೆಗಳನ್ನು ಸ್ಥಳೀಯ ಮಾಧ್ಯಮ ಸಂಸ್ಥೆಗಳಂತೆ ಗೋಚರಿಸುವಂತೆ ವಿನ್ಯಾಸಗೊಳಿಸಲಾಗಿತ್ತುಎಂದು ಫೇಸ್‌ಬುಕ್‌ನ ಥ್ರೆಟ್ ಡಿಸ್‌ರಪ್ಷನ್ ಕಾರ್ಯಪಡೆಯ ಡೇವಿಡ್ ಅಗ್ರನೋವಿಚ್ ತಿಳಿಸಿದ್ದಾರೆ. ಹಾಗಾಗಿ, ಇಂತಹ ಖಾತೆಗಳನ್ನು ರದ್ದುಗೊಳಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಇಂಡೊನೇಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಗಮನವಿರಿಸಲಾಗುತ್ತಿದ್ದು, ನಕಲಿ ಖಾತೆಗಳು ಜಾಹೀರಾತಿನ ಮೂಲಕ ಜನರನ್ನು ಸೆಳೆಯುತ್ತಿವೆ ಎಂದು ಡೇವಿಡ್ ಅಗ್ರನೋವಿಚ್ ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ದುಷ್ಕೃತ್ಯ, ದುರುದ್ದೇಶಕ್ಕಾಗಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ಇಂತಹ ಕಾರ್ಯದಲ್ಲಿರುವ ಯಾವುದೇ ತನ್ನ ಫ್ಲಾಟ್‌ಫಾರ್ಮ್ ಮೇಲೆ ಪರಿಣಾಮಕಾರಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಭಾರತದ ಸಾರ್ವತ್ರಿಕ ಚುನಾವಣೆಗೆ ಮುನ್ನ 1,126 ಪುಟಗಳು, ಗುಂಪುಗಳು ಮತ್ತು ಖಾತೆಗಳನ್ನು ತೆಗೆದುಹಾಕಿದ್ದ ಫೇಸ್‌ಬುಕ್ ಇದೇ ಕ್ರಮವನ್ನು ಇಂಡೊನೇಷ್ಯಾದಲ್ಲೂ ತೆಗೆದುಕೊಂಡಿದೆ. ಸ್ಪ್ಯಾಮ್ ವಿರುದ್ಧ ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದಲ್ಲಿ 321 ಫೇಸ್‌ಬುಕ್ ಪುಟಗಳು ಮತ್ತು ಖಾತೆಗಳನ್ನು ತೆಗೆದುಹಾಕಿದ್ದನ್ನು ನಾವು ನೋಡಬಹುದು. ಈ ಮೂಲಕ ಸಮಾಜದಲ್ಲಿ ದ್ವೇಷ ಹರಡುವವರನ್ನು ತಡೆಗಟ್ಟಲು ಫೇಸ್‌ಬುಕ್ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದರೆ ತಪ್ಪಾಗುವುದಿಲ್ಲ.


Click it and Unblock the Notifications








