Home
ಸುದ್ದಿಜಾಲ

ಫೇಸ್‌ಬುಕ್‌ನ ಮಾರ್ಕೆಟ್‌ ಪ್ಲೇಸ್‌ಗೆ ಬಂತು ಎಐ ಫೀಚರ್‌..! ವ್ಯಾಪಾರಿಗಳಿಗೆ ಸಹಕಾರಿ

ಫೇಸ್ ಬುಕ್ ತನ್ನ ಮಾರ್ಕೆಟ್ ಪ್ಲೇಸ್ ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸಂದರ್ಬದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ಕೃತಕ ಬುದ್ಧಿಮತ್ತೆಯನ್ನು ಬಳಸುವ ವೈಶಿಷ್ಟ್ಯತೆಯನ್ನು ಪರಿಚಯಿಸಿದ್ದು ಇದು ಖರೀದಿದಾರರಿಗೆ ಮತ್ತು ಮಾರಾಟಗಾರರಿಗೆ ತಮ್ಮ ವ್ಯವಹಾರವನ್ನು ಇನ್ನಷ್ಟು ವೇಗವಾಗಿ ಮಾಡಲು ಅನುಕೂಲ ಮಾಡಿಕೊಡಲಿದೆ.

2016 ರಲ್ಲಿ ಮಾರ್ಕೆಟ್ ಪ್ಲೇಸ್ ನ್ನು ಪರಿಚಯಿಸಲಾಗಿತ್ತು ಮತ್ತು ಇದು ತಮ್ಮ ಸ್ಥಳೀಯ ಕಮ್ಯುನಿಟಿಯೊಂದಿಗೆ ಬಳಕೆದಾರರು ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳನ್ನು ನಡೆಸಲು ಅವಕಾಶ ನೀಡುತ್ತಿತ್ತು. ಫೇಸ್ ಬುಕ್ ಹೇಳುವ ಪ್ರಕಾರ ವಿಶ್ವದಾದ್ಯಂತ ಇರುವ ಜನರು ಈ ವೈಶಿಷ್ಟ್ಯತೆಯನ್ನು ಹೆಚ್ಚು ನೆಚ್ಚಿಕೊಂಡರು ಮತ್ತು ಸ್ಥಳೀಯವಾಗಿ ಜನರ ಜೊತೆಗೆ ಸಂಪರ್ಕ ಹೊಂದಲು, ಹೊಸ ಬ್ಯುಸಿನೆಸ್ ನ್ನು ಆರಂಭವಿಸಲು ಮತ್ತು ಆ ಮೂಲಕ ಸಂಪಾದನೆ ಮಾಡಲು ಫೇಸ್ ಬುಕ್ ಸಹಾಯ ಮಾಡಿದೆ.

ಫೇಸ್‌ಬುಕ್‌ನ ಮಾರ್ಕೆಟ್‌ ಪ್ಲೇಸ್‌ಗೆ ಬಂತು ಎಐ ಫೀಚರ್‌..! ವ್ಯಾಪಾರಿಗಳಿಗೆ ಸಹಕಾರಿ

ಈಗಾಗಲೇ ಎಐ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ) ಯನ್ನು ಮಾರ್ಕೆಟ್ ಪ್ಲೇಸ್ ನಲ್ಲಿ ಬಳಸಲಾಗಿದೆ. ಆ ಮೂಲಕ ಮಾರಾಟಗಾರರು ಉತ್ತಮ ಖರೀದಿದಾರರ ಜೊತೆಗೆ ಬೇರೆಬೇರೆ ಟಾಸ್ಕ್ ಗಳನ್ನು ಮಾಡಲು ಹೆಚ್ಚು ಅನುಕೂಲಕರವಾಗಿತ್ತು. ಉದಾಹರಣೆಗೆ ಸ್ವಯಂಚಾಲಿತವಾಗಿ ಫೋಟೋಗಳ ಕ್ವಾಲಿಟಿಯನ್ನು ಹೆಚ್ಚಿಸುವುದು ಮತ್ತು ಮಸೆಂಜರ್ ಸಂಭಾಷಣೆಯ ಟ್ರಾನ್ಸ್ ಲೇಷನ್ ಇತ್ಯಾದಿ.

ಹೊಸ ವೈಶಿಷ್ಟ್ಯತೆಯ ಪರಿಚಯ ಯಾವಾಗ?

ಹೊಸ ವೈಶಿಷ್ಟ್ಯತೆಯ ಪರಿಚಯ ಯಾವಾಗ?

ಈ ಹೊಸ ವೈಶಿಷ್ಟ್ಯತೆಯನ್ನು ಈ ವಾರದಲ್ಲಿ ಪರಿಚಯಿಸಲಾಗುತ್ತಿದ್ದು, ಎಐ ಬೆಲೆಯ ಮಟ್ಟದ ಬಗ್ಗೆ ಸಲಹೆಗಳು ಮತ್ತು ಆಟೋ-ಕೆಟಗರಿ ಮಾಡುವುದಕ್ಕೆ ಸಹಾಯ ಮಾಡಲಿದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

ಹೇಗೆ ಕಾರ್ಯ ನಿರ್ವಹಿಸುತ್ತದೆ?

ಉದಾಹರಣೆಗೆ ನೀವೊಂದು ನಿಮ್ಮ ಮನೆಯಲ್ಲಿರುವ ಆಫೀಸ್ ಚೇರ್ ವೊಂದನ್ನು ಮಾರ್ಕೆಟ್ ಪ್ಲೇಸ್ ನಲ್ಲಿ ಮಾರಾಟ ಮಾಡಲು ಇಚ್ಛಿಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಅದಕ್ಕೆ ಅದೇ ರೀತಿಯ ಚೇರ್ ಇತ್ತೀಚೆಗೆ ಎಷ್ಟು ರುಪಾಯಿಗೆ ಮಾರಾಟವಾಗಿ ಎಂಬುದನ್ನು ಆಧರಿಸಿ ಬೆಲೆ ನಿಗದಿ ಮಾಡಲು ನಿಮಗೆ ಮಾರ್ಗದರ್ಶನ ನೀಡಲಾಗುತ್ತದೆ. ಅಂದಾಜು 500 ರಿಂದ 1000 ರುಪಾಯಿ ನಿಗದಿ ಮಾಡಬಹುದು ಎಂಬುದಾಗಿ ನಿಮಗೆ ಎಐ ಮೂಲಕ ಸಲಹೆ ಸಿಗುತ್ತದೆ.

ಇದು ಸ್ವಯಂಚಾಲಿತವಾಗಿ ಕೆಟಗರಿಗೆ ಮಾಡುತ್ತದೆ ಮತ್ತು ಫೋಟೋ ಮತ್ತು ವಿವರಣೆಯನ್ನು ಆಧರಸಿ ಪೀಠೋಪಕರಣಗಳ ಕೆಟಗರಿಗೆ ಸೇರಿಸಲಾಗುತ್ತದೆ. ಇದನ್ನು ನೀವು ಮಾಡಬೇಕಾಗಿಲ್ಲ. ತನ್ನಷ್ಟಕ್ಕೇ ಸೇರಿಸಲಾಗುತ್ತದೆ.

ಭವಿಷ್ಯದ ಮಾರ್ಕೆಟ್ ಪ್ಲೇಸ್ ಹೇಗಿರಲಿದೆ?

ಭವಿಷ್ಯದ ಮಾರ್ಕೆಟ್ ಪ್ಲೇಸ್ ಹೇಗಿರಲಿದೆ?

ಅಷ್ಟೇ ಅಲ್ಲ ಕ್ಯಾಮರಾ ವೈಶಿಷ್ಟ್ಯತೆಯನ್ನು ಕೂಡ ಎಐ ಅಧೀನದಲ್ಲಿ ತರಲು ಪ್ರಯತ್ನಿಸಲಾಗುತ್ತಿದ್ದು ಅದಕ್ಕಾಗಿ ಟೆಸ್ಟಿಂಗ್ ಕಾರ್ಯ ನಡೆಯುತ್ತಿದೆಯಂತೆ. ಉದಾಹರಣೆಗೆ ನೀವು ನಿಮ್ಮ ಸ್ನೇಹಿತನ ಬಳಿ ಇರುವ ಹೆಡ್ ಫೋನ್ ನ್ನು ಇಷ್ಟಪಟ್ಟರೆ ಮತ್ತು ಅದನ್ನು ಖರೀದಿಸಬೇಕು ಎಂದುಕೊಂಡರೆ, ನೀವು ಅದರ ಚಿತ್ರವನ್ನು ತೆಗೆದುಕೊಂಡು ಮಾರ್ಕೆಟ್ ಪ್ಲೇಸ್ ನಲ್ಲಿ ಹಾಕಿದರೆ ಅದೇ ರೀತಿಯ ಹೆಡ್ ಫೋನ್ ಹತ್ತಿರದಲ್ಲಿ ಮಾರಾಟಕ್ಕಿದ್ದರೆ ಅದರ ಪಟ್ಟಿಯನ್ನು ಮಾರ್ಕೆಟ್ ಪ್ಲೇಸ್ ನಿಮಗೆ ಒದಗಿಸುತ್ತದೆ.

ಜೊತೆಗೆ ಭವಿಷ್ಯದಲ್ಲಿ ಟಾಸ್ಕ್ ಗಳನ್ನು ಇನ್ನಷ್ಟು ಸಿಂಪ್ಲಿಫೈ ಮಾಡಲು ಪ್ರಯತ್ನಿಸಲಾಗುತ್ತಿದ್ದು ಔಟ್ ಫಿಟ್ ಮತ್ತು ಹೋಮ್ ಡಿಸೈನ್ ಪ್ರೊಜೆಕ್ಟ್ ಗಳ ಮೇಲೆ ಎಐ ತಂತ್ರಗಾರಿಕೆಯನ್ನು ತರಲು ಪ್ಲಾನ್ ರೂಪಿಸಲಾಗುತ್ತಿದೆ. ಉದಾಹರಣೆಗೆ ನೀವು ನಿಮ್ಮ ಲಿವಿಂಗ್ ರೂಮಿನ ಫೋಟೋ ಹಾಕಿದರೆ ಯಾವ ರೀತಿಯ ಪೀಠೋಪಕರಣಗಳನ್ನು ಖರೀದಿಸಬಹುದೆಂಬ ಸಲಹೆಗಳು ಅದರ ಸೈಜ್ ಮತ್ತು ಲೇಔಟ್ ಆಧರಿಸಿ ಲಭ್ಯವಾಗಲಿದೆ.

ಫೇಕ್ ಅಕೌಂಟ್ ಗಳ ಡಿಲೀಟಿಂಗ್ ಕಾರ್ಯ:

ಫೇಕ್ ಅಕೌಂಟ್ ಗಳ ಡಿಲೀಟಿಂಗ್ ಕಾರ್ಯ:

ಫೇಸ್ ಬುಕ್ ಸುಳ್ಳು ಖಾತೆಗಳನ್ನು ಫೇಸ್ ಬುಕ್ ನಿಂದ ಡಿಲೀಟ್ ಮಾಡಲು ಮತ್ತು ರಿಮೂವ್ ಮಾಡಲು ಸಾಕಷ್ಟು ಹಣವನ್ನು ತೊಡಗಿಸಿದೆಯಂತೆ. ಅಷ್ಟೇ ಅಲ್ಲ ಫೋಟೋಗಳನ್ನು,ಕಟೆಂಟ್ ಗಳನ್ನು , ಲಿಸ್ಟಿಂಗ್ ನಲ್ಲಿರುವ ಮಾಹಿತಿಗಳನ್ನು ಆಧರಿಸಿ ಒಂದು ವೇಳೆ ಅದು ಫೇಸ್ ಬುಕ್ ನ ನೀತಿನಿಯಮಗಳಿಗೆ ವಿರುದ್ಧವಾಗಿದ್ದರೆ ಅಂತಹ ಅಕೌಂಟ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಕೂಡ ಎಐ ತಂತ್ರಜ್ಞಾನವು ಸಹಾಯ ಮಾಡುತ್ತದೆ. ಒಟ್ಟಾರೆ ಭವಿಷ್ಯದ ಫೇಸ್ ಬುಕ್ ಇನ್ನಷ್ಟು ಸುಭದ್ರವಾಗಿರುತ್ತದೆ ಮತ್ತು ಅದಕ್ಕೆ ಕಾರಣ ಕೃತಕ ಬುದ್ಧಿಮತ್ತೆಯಾಗಿರಲಿದೆ ಎಂಬುದು ವಿಶೇಷ.

Best Mobiles in India

English summary
Facebook rolls out new AI features to help 'Marketplace' shoppers, sellers. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+