Home
ಸುದ್ದಿಜಾಲ

Facebook ನಿಮ್ಮನ್ನ ಟ್ರ್ಯಾಕ್ ಮಾಡುವುದನ್ನು ನಿಲ್ಲಿಸುವುದು ಹೇಗೆ?

By Gizbot Bureau

ಕಳೆದ ವರ್ಷ ಫೇಸ್ ಬುಕ್ ತನ್ನ ಬಳಕೆದಾರರಿಗಾಗಿ ಹೊಸ ಟೂಲ್ ಗಳನ್ನು ಬಿಡುಗಡೆಗೊಳಿಸಿತ್ತು. ಮೂರನೇ ವ್ಯಕ್ತಿಯ ಆಪ್ ಗಳು ಅಥವಾ ವೆಬ್ ಸೈಟ್ ಗಳು ನಿಮ್ಮ ಯಾವೆಲ್ಲಾ ಡಾಟಾವನ್ನು ಆಕ್ಸಿಸ್ ಮಾಡುತ್ತದೆ. ಆಫ್ ಫೇಸ್ ಬುಕ್ ಆಕ್ಟಿವಿಟಿ ಅನ್ನೋ ಹೆಸರಿನ ಟೂಲ್ ನಿಮಗೆ ಈ ಡಾಟಾ ಶೇರಿಂಗ್ ಸೆಟ್ಟಿಂಗ್ ನ್ನು ಕಂಟ್ರೋ ಮಾಡುವುದಕ್ಕೆ ಅವಕಾಶ ನೀಡುತ್ತದೆ.

Facebook ನಿಮ್ಮನ್ನ ಟ್ರ್ಯಾಕ್ ಮಾಡುವುದನ್ನು ನಿಲ್ಲಿಸುವುದು ಹೇಗೆ?

ಈ ಟೂಲ್ ನ್ನು ಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾಗಿರುವ ಮಾಹಿತಿ ಇಲ್ಲಿದೆ ನೋಡಿ.

ಆಫ್ ಫೇಸ್ ಬುಕ್ ಆಕ್ಟಿವಿಟಿಯನ್ನು ಆಕ್ಸಿಸ್ ಮಾಡುವುದು ಹೇಗೆ?

1. ಫೇಸ್ ಬುಕ್ ನ್ನು ತೆರೆಯಿರಿ ಮತ್ತು ಲಾಗಿನ್ ಆಗಿ

2. ಇದೀಗ ಡ್ರಾಪ್ ಡೌನ್ ಐಕಾನ್ ನ್ನು ಕ್ಲಿಕ್ಕಿಸಿ ಮತ್ತು ಸೆಕ್ಯುರಿಟಿ ಮತ್ತು ಪ್ರೈವೆಸಿಯನ್ನು ಆಯ್ಕೆ ಮಾಡಿ.

3. ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಫೇಸ್ ಬುಕ್ ಇನ್ಫರ್ಮೇಷನ್ ನ್ನು ಆಯ್ಕೆ ಮಾಡಿ

4. ನಂತರ ಆಫ್ ಫೇಸ್ ಬುಕ್ ಆಕ್ಟಿವಿಟಿ ಆಯ್ಕೆಯನ್ನು ಕ್ಲಿಕ್ಕಿಸಿ.

ಆಫ್ ಫೇಸ್ ಬುಕ್ ಆಕ್ಟಿವಿಟಿಯಿಂದ ಯಾವೆಲ್ಲಾ ಆಪ್ಸ್ ಮತ್ತು ವೆಬ್ ಸೈಟ್ ಗಳು ನಿಮ್ಮ ಮಾಹಿತಿಯನ್ನು ಕಲೆ ಹಾಕಿವೆ ಅನ್ನುವುದನ್ನು ನೋಡುವುದು ಹೇಗೆ?

. ಆಫ್ ಫೇಸ್ ಬುಕ್ ಆಕ್ಟಿವಿಟಿ ಪೇಜ್ ನಲ್ಲಿ ನಿಮ್ಮ ಆಫ್ ಫೇಸ್ ಬುಕ್ ಆಕ್ಟಿವಿಟಿಯನ್ನು ಮ್ಯಾನೇಜ್ ಮಾಡಿ ಅನ್ನುವ ಆಯ್ಕೆಯನ್ನು ಕ್ಲಿಕ್ಕಿಸಿ. ವೆರಿಫಿಕೇಷನ್ ಗಾಗಿ ಪಾಸ್ ವರ್ಡ್ ನ್ನು ಟೈಪ್ ಮಾಡಿ.ಇಲ್ಲಿ ನೀವು ನಿಮ್ಮ ಫೇಸ್ ಬುಕ್ ಖಾತೆಗೆ ಲಿಂಕ್ ಆಗಿರುವ ಎಲ್ಲಾ ಆಪ್ಸ್ ಮತ್ತು ವೆಬ್ ಸೈಟ್ ಗಳನ್ನು ಕಾಣಬಹುದು.

ಆಪ್ಸ್ ಮತ್ತು ವೆಬ್ ಸೈಟ್ ಗಳಿಗೆ ಆಫ್ ಫೇಸ್ ಬುಕ್ ಆಕ್ಟಿವಿಟಿಯನ್ನು ಡಿಸೇಬಲ್ ಮಾಡುವುದು ಹೇಗೆ?

. ಮೇಲೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಮತ್ತು ನೀವು ಯಾವ ಆಪ್ ಅಥವಾ ವೆಬ್ ಸೈಟ್ ಗೆ ನಿಮ್ಮ ಮಾಹಿತಿ ಸೋರಿಕೆಯಾಗುವುದನ್ನು ತಡೆಯಲು ಇಚ್ಛಿಸುತ್ತೀರಿ ಎಂಬುದನ್ನು ಅಲ್ಲಿ ಆಯ್ಕೆ ಮಾಡಿ.

. ಅದನ್ನು ಕ್ಲಿಕ್ಕಿಸಿ ಮತ್ತು ಟ್ರೂಕಾಲರ್ ಐಡಿ ಮತ್ತು ಸ್ಪ್ಯಾಮ್ ಬ್ಲಾಕ್ ನಿಂದ ಫ್ಯೂಚರ್ ಆಕ್ಟಿವಿಟಿ ಟರ್ನ್ ಆಫ್ ಆಯ್ಕೆಯನ್ನು ಹುಡುಕಿ.ಅದನ್ನು ಕ್ಲಿಕ್ಕಿಸಿ ಮತ್ತು ನಿರ್ಧಿಷ್ಟ ಆಪ್ ಗೆ ಆಫ್ ಫೇಸ್ ಬುಕ್ ಆಕ್ಟಿವಿಟಿಯನ್ನು ಡಿಸೇಬಲ್ ಮಾಡಿ.

ಎಲ್ಲಾ ಆಪ್ ಗಳಿಗೆ ಮತ್ತು ವೆಬ್ ಸೈಟ್ ಗಳಿಗೆ ಒಮ್ಮೆಲೆ ಆಫ್ ಫೇಸ್ ಬುಕ್ ಆಕ್ಟಿವಿಟಿ ಡಿಸೇಬಲ್ ಮಾಡುವುದು ಹೇಗೆ?

1. ಆಫ್ ಫೇಸ್ ಬುಕ್ ಆಕ್ಟಿವಿಟಿ ಪೇಜ್ ನಲ್ಲಿ ಮ್ಯಾನೇಜ್ ಫ್ಯೂಚರ್ ಆಕ್ಟಿವಿಟಿಯನ್ನು ಕ್ಲಿಕ್ಕಿಸಿ

2. ಪಾಪ್ ನಲ್ಲಿ ಮ್ಯಾನೇಜ್ ಫೇಸ್ ಬುಕ್ ಆಕ್ಟಿವಿಟಿಯನ್ನು ಪುನಃ ಕ್ಲಿಕ್ಕಿಸಿ

3. ಮುಂದಿನ ಪೇಜ್ ನಲ್ಲಿ ಫ್ಯೂಚರ್ ಆಫ್ ಫೇಸ್ ಬುಕ್ ಆಕ್ಟಿವಿಟಿ ಟಾಗಲ್ ನಲ್ಲಿ ಫ್ಯೂಚರ್ ಆಫ್ ಫೇಸ್ ಬುಕ್ ಆಕ್ಟಿವಿಟಿ ಪೇಜ್ ನ್ನು ಡಿಸೇಬಲ್ ಮಾಡಿ.

ಆಫ್ ಫೇಸ್ ಬುಕ್ ಆಕ್ಟಿವಿಟಿ ಹಿಸ್ಟರಿಯನ್ನು ಕ್ಲಿಯರ್ ಮಾಡುವುದು ಹೇಗೆ?

ಆಫ್ ಫೇಸ್ ಬುಕ್ ಆಕ್ಟಿವಿಟಿ ಪೇಜ್ ನಲ್ಲಿ ಸರಳವಾಗಿ ಕ್ಲಿಯರ್ ಹಿಸ್ಟರಿ ಬಟನ್ ನ್ನು ಒತ್ತಿ.ಪಾಪ್ ಅಪ್ ನಲ್ಲಿ ಪುನಃ ಕ್ಲಿಯರ್ ಹಿಸ್ಟರಿಯನ್ನು ಒತ್ತಿ.

Best Mobiles in India

English summary
Facebook Tracking: Steps To Stop Facebook From Tracking You
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+