ಜಿಯೋ ಅಧಿಕೃತ ಹೆಸರಲ್ಲಿ ಮೋಸ ಮಾಡಲು ಶುರು ಮಾಡಿದ್ದಾರೆ...! ಎಚ್ಚರ

Written By:

ದೇಶದಲ್ಲಿ ಜಿಯೋ ಸೇವೆಯನ್ನು ಆರಂಭಿಸಿದ ಮೇಲೆ ರಿಲಯನ್ಸ್ ಮಾಲೀಕತ್ವದ ಜಿಯೋ ಮೇಲೆ ಗ್ರಾಹಕರು ಹೆಚ್ಚಿನ ನಂಬಿಕೆಯನ್ನು ಇಟ್ಟರು. ಇದೇ ಸಮಯದಲ್ಲಿ ಜಿಯೋ ಸೇವೆಗಳ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚಿನ ಸುದ್ದಿ ಪ್ರಸಾರವಾಗಲು ಶುರುವಾಯಿತು. ಅಲ್ಲದೇ ಜಿಯೋ ಮುಂದಿನ ಪ್ಲಾನ್‌ಗಳ ಕುರಿತು ಹೆಚ್ಚಿನ ಹೈಪ್ ನೀಡಲು ಕೆಲವು ಮುಂದಾರು. ಆದರೆ ಕೆಲವರು ಇದನ್ನೇ ವಂಚನೆಯ ಜಾಲಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಜಿಯೋ ಅಧಿಕೃತ ಹೆಸರಲ್ಲಿ ಮೋಸ ಮಾಡಲು ಶುರು ಮಾಡಿದ್ದಾರೆ...! ಎಚ್ಚರ

ಓದಿರಿ: ಭಾರತದ ಮೊದಲ ಸ್ಯಾಟಿಲೈಟ್ ಸೋಲರ್ ಟಿವಿ ಮುಂದೆ ಜಿಯೋ DHT ಏನೇನು ಇಲ್ಲ..!!!! 

ಸದ್ಯ ಹಾಟ್ ಟಾಪಿಕ್ ಆಗಿರುವುದು ಜಿಯೋ ಶೀಘ್ರವೇ ಆರಂಭಿಸಲಿರುವ 'ಜಿಯೋ DTH'. ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ DTH ಕುರಿತಂತೆ ರೂಮರ್ ಗಳು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಕೆಲವರು ಗ್ರಾಹಕರಿಗೆ ಮೊಸ ಮಾಡುವ ಸಲುವಾಗಿ ಆನ್‌ಲೈನಿನಲ್ಲಿ ಕಾದು ಕುಳಿದ್ದಾರೆ. ವಂಚನೆಯ ಜಾಲಕ್ಕೆ ಸಿಲುಕಿದರೆ ನೀವು ಮೊಸ ಹೋಗುವುದು ಗ್ಯಾರೆಂಟಿ ಈ ಹಿನ್ನಲೆಯಲ್ಲಿ ನಿಮ್ಮ ಎಚ್ಚರಿಸುವ ಕಾರ್ಯ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್ ನಲ್ಲಿ:

ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್ ನಲ್ಲಿ:

ಜಿಯೋ DTH ಸೇವೆಯನ್ನು ಆರಂಭಿಸಲಿದೆ ಮತ್ತು ಅದರ ಸೆಟಪ್ ಬ್ಯಾಕ್ಸ್ ಹೀಗೆ ಎನ್ನವ ಸುದ್ದಿಯನ್ನು ಬಂಡವಾಳ ಮಾಡಿಕೊಂಡಿರುವ ಹಲವು ವಂಚಕರು ಸಾಮಾಜಿಕ ಜಾಲತಾಣದಲ್ಲಿ ಜಿಯೋ DHT ಗಾಗಿ ಲಾಗ್ ಇನ್ ಆಗಿ, ಆರು ತಿಂಗಳು ಉಚಿತ ಸೇವೆಯನ್ನು ಪಡೆಯಿರಿ ಎನ್ನುವ ಜಾಹೀರಾತನ್ನು ನೀಡುತ್ತಿದ್ದಾರೆ.

ಅಧಿಕೃತವಾಗಿಯೇ ಕಾಣಲಿದೆ:

ಅಧಿಕೃತವಾಗಿಯೇ ಕಾಣಲಿದೆ:

ಈ ಮೋಸಗಾರರು ಜಿಯೊ ಅಧಿಕೃತವಾಗಿಯೇ ಈ ಸೇವೆಯನ್ನು ನೀಡುತ್ತಿದೆಯೇ ಎಂಬಂತೇ ಭಾಸವಾಗುವಂತೆ ಮೋಸದ ಜಾಲವನ್ನು ಬಿಸುತ್ತಿದ್ದಾರೆ. http://www.jiodthonline.com/ ಎಂಬ ತಾಣದ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಈ ಬಗ್ಗೆ ಯಾವುದಾರು ಅಪ್‌ಡೇಟ್ ಬಂದರೆ ನಿರ್ಲಕ್ಷಿಸುವುದು ಉತ್ತಮ.

ಜಿಯೋ DTH ಅಧಿಕೃತವಾಗಿ ಲಾಂಚ್ ಆಗಿಲ್ಲ:

ಜಿಯೋ DTH ಅಧಿಕೃತವಾಗಿ ಲಾಂಚ್ ಆಗಿಲ್ಲ:

ರಿಲಯನ್ಸ್ ಮಾಲಿಕತ್ವದ ಜಿಯೋ ಇದುವರೆಗೂ ಜಿಯೋ DTH ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಮತ್ತು ಜಿಯೋ DTH ಲಾಂಚ್ ಬಗ್ಗೆಯೂ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಈ ಹಿನ್ನಲೆಯಲ್ಲಿ ಜಿಯೋ ತನ್ನ ಸೇವೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದ ಸಂದರ್ಭದಲ್ಲಿ ನಾವೇ ಆ ಕುರಿತು ಮಾಹಿತಿಯನ್ನು ನೀಡುತ್ತೇವೆ.

ಎಚ್ಚರವಹಿಸಿ...!:

ಎಚ್ಚರವಹಿಸಿ...!:

ಉಚಿತ ಸೇವೆ ಮತ್ತು ಕಡಿಮೆ ದರ ಎಂಬ ಕಾರಣಕ್ಕೆ ಮೊಸದ ಜಾಲಕ್ಕೆ ಸಿಲುಕದಿರಿ. ಎಚ್ಚರಿಕೆಯಿಂದ ಪರೀಕ್ಷಿಸಿ. ಜಿಯೋ ಎಂದಿಗೂ ತನ್ನ ಗ್ರಾಹಕರಿಗೆ ರಿಜಿಸ್ಟರ್ ಆಗುವಂತೆ ಮನವಿಯನ್ನು ಮಾಡುವುದಿಲ್ಲ ಎಂಬುದು ತಿಳಿದಿರಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Like everything else, the fake messages are flowing online regarding the Jio DTH registration. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot