ಬೆಂಗಳೂರು ಮತ್ತು ಚೆನೈನಲ್ಲಿ 33.3 ಲಕ್ಷದ ನಕಲಿ ಶಿಯೋಮಿ ಉತ್ಪನ್ನಗಳು ಸೀಜ್‌!

|

ಶಿಯೋಮಿ ಸಂಸ್ಥೆ ಭಾರತದಲ್ಲಿ ಅತಿದೊಡ್ಡ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ಟಿವಿ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಈಗಾಗಲೇ ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಶಿಯೋಮಿ ಕಂಪನಿಯು ಇತ್ತೀಚಿಗೆ ಹಲವು ಹೊಸ ಉತ್ಪನ್ನಗಳನ್ನು ಪರಿಚಯಸಿದೆ. ಹಲವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಶಿಯೋಮಿ, ವಾಟರ್ ಫ್ಯೂರಿಫೈರ್, ಸ್ಮಾರ್ಟ್‌ ಬಲ್ಬ್, ಮಿ ಸೈಕಲ್, ಮಿ ಟಿ-ಶರ್ಟ್ ನಂತಹ ಇತರೆ ಉತ್ಪನ್ನಗಳಿಂದಲೂ ಗ್ರಾಹಕರನ್ನು ಆಕರ್ಷಿಸಿದೆ. ಆದರೆ ಶಿಯೋಮಿ ಕಂಪೆನಿಗೆ ನಕಲಿ ಪ್ರಾಡಕ್ಟ್‌ಗಳ ಹಾವಳಿ ಹೆಚ್ಚುತ್ತಲೇ ಇದೆ.

ಶಿಯೋಮಿ ಬ್ರ್ಯಾಂಡ್‌

ಹೌದು, ಶಿಯೋಮಿಯ ಬ್ರ್ಯಾಂಡ್‌ ಹೆಸರನಲ್ಲಿ ನಕಲಿ ಪ್ರಾಡಕ್ಟ್‌ಗಳು ಮಾರುಕಟ್ಟೆಯಲ್ಲಿ ಆಗಾಗ ಮಾರಾಟವಾಗೋದನ್ನ ಕೇಳಿದ್ದೇವೆ. ಸದ್ಯ ಇದೀಗ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಚೆನ್ನೈ ಮತ್ತು ಬೆಂಗಳೂರು ಮಾರುಕಟ್ಟೆಯಲ್ಲಿ ಸುಮಾರು 33.3 ಲಕ್ಷ ರೂಪಾಯಿ ಮೌಲ್ಯದ ಶಿಯೋಮಿಯ ನಕಲಿ ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪನಿಯ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಶಿಯೋಮಿ ಕಂಪ್ಲೈಂಟ್ ನೀಡಿರುವ ಹಿನ್ನಲೆಯಲ್ಲಿ ಈ ರೇಡ್‌ ನಡೆದಿದೆ. ರೇಡ್‌ ವೇಳೆ ಪೊಲೀಸರ ಜೊತೆ ಕಂಪನಿಯ ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ಶಿಯೋಮಿ ಹೇಳಿದೆ.

ಹೆಡ್‌ಫೋನ್

ರೇಡ್ ನಡೆಸಿದ ವೇಳೆ ಸುಮಾರು 3000ಕ್ಕೂ ಅಧಿಕ ಶಿಯೋಮಿಯ ನಕಲಿ ಉತ್ಪನ್ನಗಳನ್ನು ಕೆಲವು ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಕಂಪನಿಯ ಹೆಸರಿನ ನಕಲಿ ಪವರ್‌ಬ್ಯಾಂಕ್, ಹೆಡ್‌ಫೋನ್, ಚಾರ್ಜರ್‌ಗಳು ಮತ್ತು ಇಯರ್‌ಫೋನ್, ಚಾರ್ಜರ್ ಕೇಬಲ್ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ಗಳನ್ನ ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. ಈ ಎರಡು ನಗರಗಳಲ್ಲಿ ನಡೆದ ಈ ದಾಳಿಯಿಂದ ಕ್ರಮವಾಗಿ 24.9 ಲಕ್ಷ ಮತ್ತು 8.4 ಲಕ್ಷ ಮೌಲ್ಯದ ನಕಲಿ ಮಿ ಇಂಡಿಯಾ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಎರಡೂ ನಗರಗಳ ಅಂಗಡಿ ಮಾಲೀಕರನ್ನು ಬಂಧಿಸಲಾಗಿದೆ.

ಉತ್ಪನ್ನಗಳು

ಜನಪ್ರಿಯ ಕಂಪನಿಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಜನಪ್ರಿಯ ಸೋನಿ, ಸ್ಯಾಮ್‌ಸಂಗ್, ನೋಕಿಯಾ ಕಂಪನಿಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಕಾಣಿಸಿಕೊಂಡಿದ್ದ ಘಟನೆಗಳು ಈ ಹಿಂದೆ ನಡೆದಿವೆ. ಹೀಗಾಗಿ ಗ್ರಾಹಕರಿಗೆ ಉತ್ಪನ್ನಗಳುನ್ನು ಖರೀದಿಸುವಾಗ ನೈಜತೆಯ ಬಗ್ಗೆ ಪರಿಶೀಲಿಸಿ ಖರೀದಿಸಲು ಉತ್ತಮ.

ನಕಲಿ ಶಿಯೋಮಿ ಪ್ರಾಡಕ್ಟ್‌ಗಳನ್ನು ಗುರುತಿಸುವುದು ಹೇಗೆ?

ನಕಲಿ ಶಿಯೋಮಿ ಪ್ರಾಡಕ್ಟ್‌ಗಳನ್ನು ಗುರುತಿಸುವುದು ಹೇಗೆ?

ಶಿಯೋಮಿ ಉತ್ಪನ್ನಗಳನ್ನು ಖರೀದಿಸುವಾಗ ಅವುಗಳು ಅಸಲಿ ಆಗಿವೆ ಎನ್ನುವುದನ್ನು ಪರಿಶೀಲಿಸುವುದು ಹೇಗೆ ಅಂತೀರಾ?..ಅದಕ್ಕೆ ಈ ಕೆಳಗಿನ ಕೆಲವು ಕ್ರಮಗಳನ್ನು ಅನುಸರಿಸಿರಿ.
1. ಪ್ಯಾಕಿಂಗ್ ಡಿಸೈನ್ ಮತ್ತು ಪ್ಯಾಕಿಂಗ್ ಗುಣಮಟ್ಟ ಚೆಕ್ ಮಾಡಿ. ಓರಿಜಿನಲ್ ಪ್ಯಾಕಿಂಗಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಸಮೀಪದ ಶಿಯೋಮಿ ಅಧಿಕೃತ ತಾಣದಲ್ಲಿ ಖರೀದಿಸುವುದು ಉತ್ತಮ.
2. ಗ್ರಾಹಕರು ಶಿಯೋಮಿ ಉತ್ಪನ್ನಗಳನ್ನು ಖರೀದಿಸುವಾಗ ಕಂಪನಿಯ Mi ಲೊಗೊವನ್ನು ಚೆಕ್ ಮಾಡಿರಿ. ಅಧಿಕೃತ ಲೊಗೊ ಹೇಗಿದೆ ಎಂಬುದನ್ನು Mi.com ವೆಬ್‌ಸೈಟ್‌ನಲ್ಲಿ ತಿಳಿಯಬಹುದು.
3. ಅಧಿಕೃತ ಶಿಯೋಮಿ ಫಿಟ್ನೆಸ್‌ ಉತ್ಪನ್ನಗಳು ಮಿ ಆಪ್‌ ಬೆಂಬಲ ಪಡೆದಿರುತ್ತವೆ. ಆ ಕುರಿತು ಪರಿಶೀಲಿಸಿ ಖರೀದಿಸುವುದು ಉತ್ತಮ.
4. ಮಿ ಬ್ಯಾಂಡ್ ನಂತಹ ಎಲ್ಲಾ ಅಧಿಕೃತ ಫಿಟ್‌ನೆಸ್ ಉತ್ಪನ್ನಗಳು ಮಿ ಫಿಟ್ ಅಪ್ಲಿಕೇಶನ್ ಹೊಂದಾಣಿಕೆಯನ್ನು ಹೊಂದಿರುತ್ತವೆ.
5. ನಕಲಿ ಕೇಬಲ್ ಉತ್ಪನ್ನಗಳು ಬಾಳಿಕೆ ಹೆಚ್ಚಿರುವುದಿಲ್ಲ ಮತ್ತು ಬೇಗನೆ ಮುರಿದು ಹೋಗುತ್ತವೆ.

Best Mobiles in India

English summary
Over 3,000 products consisting of mobile back cases, headphones, power banks, chargers, and earphones were found, Xiaomi India said.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X