ಫಾಸ್‌ಟ್ರ್ಯಾಕ್‌ನಿಂದ ಹೊಸ ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌!

|

ಪ್ರಸ್ತುತ ಟೆಕ್‌ ಮಾರುಕಟ್ಟೆಯಲ್ಲಿ ಫಾಸ್‌ಟ್ರ್ಯಾಕ್‌ ಕಂಪೆನಿಯ ಸ್ಮಾಟ್‌ಬ್ಯಾಂಡ್‌ಗಳು ಈಗಾಗಲೇ ಲಭ್ಯವಿದೆ. ಅಷ್ಟೇ ಅಲ್ಲ ಯುವಜನತೆಯ ನೆಚ್ಚಿನ ಸ್ಮಾರ್ಟ್‌ಬ್ಯಾಂಡ್‌ ಕಂಪೆನಿ ಆಗಿರೋ ಫಾಸ್‌ಟ್ರ್ಯಾಕ್‌ ಇದೀಗ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ ಬ್ಯಾಂಡ್‌ ಅನ್ನ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ ಭಾರತೀಯ ರಾಷ್ಟ್ರೀಯ ಆರೋಗ್ಯ ಅಕಾಡೆಮಿಯಿಂದ ಸರ್ಟಿಫೀಕೆಟ್‌ ಪಡೆದುಕೊಂಡಿರುವ ಮೊದಲ ಸ್ಮಾರ್ಟ್‌ ಬ್ಯಾಂಡ್‌ ಅನ್ನು ಖ್ಯಾತಿ ಕೂಡ ಪಡೆದುಕೊಂಡಿದೆ.

ಹೌದು,

ಹೌದು, ಯುವ ಜನತೆಯ ಪ್ಯಾಶನ್‌ಗೆ ತಕ್ಂತೆ ವಿನ್ಯಾಸಗೊಂಡಿರುವ ಫ್ಯಾಶನ್‌ ಬ್ರಾಂಡ್‌ ಅಂತಾನೆ ಕರೆಸಿಕೊಳ್ಳುವ ಫಾಸ್‌ಟ್ರ್ಯಾಕ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್‌ ಬ್ಯಾಂಡ್‌ ಸ್ಮಾರ್ಟ್ ಫಾಸ್‌ಟ್ರ್ಯಾಕ್‌ ರಿಫ್ಲೆಕ್ಸ್ ಬೀಟ್ ಅನ್ನ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ರಾಷ್ಟ್ರೀಯ ಆರೋಗ್ಯ ಅಕಾಡೆಮಿಯಿಂದ ಪ್ರಮಾಣಿಕೃತಗೊಂಡಿದ್ದು ಹೃದಯ ಬಡಿತದ ಮಾನಿಟರ್‌ ಟ್ರ್ಯಾಕ್‌ ಮಾಡುವ ಫೀಚರ್ಸ್ ಅನ್ನ ಒಳಗೊಂಡಿದೆ.

ಫಾಸ್‌ಟ್ರ್ಯಾಕ್‌

ಫಾಸ್‌ಟ್ರ್ಯಾಕ್‌ ನ ಈ ಹೊಸ ಸ್ಮಾರ್ಟ್‌ ಬ್ಯಾಂಡ್‌ ಫಿಟ್ನೆಸ್‌ ಬ್ಯಾಂಡ್‌ ಆಗಿದ್ದು ಪ್ರತಿ 5 ನಿಮಿಷಕ್ಕೆ ಬಳಕೆದಾರರ ಹೃದಯ ಬಡಿತವನ್ನು ದಾಖಲಿಸುತ್ತದೆ,. ಇದನ್ನ ದಾಖಲಿಸುವುದಕ್ಕಾಗಿಯೇ ಸ್ಮಾರ್ಟ್‌ ಬ್ಯಾಂಡ್‌ನಲ್ಲಿ ರಿಫ್ಲೆಕ್ಸ್ ಬೀಟ್ ಪ್ರೋಗ್ರಾಮ್ ಅನ್ನು ಅಳವಡಿಸಲಾಗಿದೆ. ಅಲ್ಲದೆ ಬಳಕೆದಾರರು ಹಾರ್ಟ್‌ಬೀಟ್‌ ಮಾಹಿತಿಯನ್ನ ರೆಕಾರ್ಡ್ ಮಾಡಿಕೊಳ್ಳಬಹುದಾಗಿದ್ದು ಈ ಮಾಹಿತಿಯನ್ನು ನಂತರದ ಸಮಯದಲ್ಲಿ ಪರಿಶೀಲಿಸಬಹುದಾಗಿದೆ.

ಇನ್ನು

ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಹಾರ್ಟ್‌ಬೀಟ್‌ ಕೌಟಿಂಗ್‌ ವಿಶೇಷ ಫೀಚರ್ಸ್‌ ಅನ್ನ ಒಳಗೊಂಡಿರುವುದರಿಂದ ಹಾಟ್‌ಬೀಟ್ ಅಧ್ಯಯನಕ್ಕೂ ಕೂಡ ಬಳಸಬಹುದಾಗಿದೆ. ಅಷ್ಟೇ ಅಲ್ಲ ಇದರಲ್ಲಿ 24-ಗಂಟೆಗಳ ಸಕ್ರಿಯ ನಿದ್ರೆ ಟ್ರ್ಯಾಕಿಂಗ್, ಕ್ಯಾಲೆಂಡರ್ ಬದಲಾವಣೆಗಳು, ಅಧಿಸೂಚನೆಗಳು ನೀಡುವ ಫೀಚರ್ಸ್‌ಗಳನ್ನ ಒಳಗೊಂಡಿದೆ. ಇನ್ನು ಫಿಟ್ನೆಸ್ ಟ್ರ್ಯಾಕರ್ ಬಾಳಿಕೆಗಾಗಿ ಐಪಿಎಕ್ಸ್ 6 ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನ ಸಹ ಹೊಂದಿದೆ. ಅಲ್ಲದೆ ಕ್ಯಾಮೆರಾ ನಿಯಂತ್ರಣ ಮತ್ತು ಅಲಾರಂ ಅಲಾರ್ಟ್‌ ಅನ್ನ ಒಳಗೊಂಡಿದೆ.

ಇದಲ್ಲದೆ

ಇದಲ್ಲದೆ ಫಾಸ್ಟ್‌ಟ್ರ್ಯಾಕ್‌ ಮಾರ್ಕೆಟಿಂಗ್ ಮುಖ್ಯಸ್ಥ ಆಯುಷ್ಮಾನ್ ಚಿರನೇವಾಲಾ ಹೇಳುವಂತೆ ಫಾಸ್ಟ್ರಾಕ್ ರಿಫ್ಲೆಕ್ಸ್ ಸ್ಮಾರ್ಟ್ ಬ್ಯಾಂಡ್ ಮೂಲಕ ನಾವು ಉತ್ತಮ ಕಾರ್ಯ ಸಾಧ್ಯತೆಯನ್ನು ತರಲು ಪ್ರಯತ್ನಿಸಿದ್ದೇವೆ. ಸದ್ಯ ಫಾಸ್ಟ್ರಾಕ್ ರಿಫ್ಲೆಕ್ಸ್ ಬೀಟ್ ಬೆಲೆ 2,195 ರೂ.ಆಗಿದ್ದು ಫಾಸ್ಟ್ರಾಕ್ ರಿಫ್ಲೆಕ್ಸ್ ಬೀಟ್ ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನ ಹೊಂದಿದೆ.

Most Read Articles
Best Mobiles in India

Read more about:
English summary
Fastrack Reflex Beat is the first fitness band in the Indian market to come with the National Health Academy certification. The company also noted that the Fastrack Reflex Beat comes with an always-on heart rate monitor.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more