Home
ಸುದ್ದಿಜಾಲ

ಫಾಸ್ಟ್ರ್ಯಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! ಟ್ರೆಂಡಿ ಲುಕ್‌, ಸಖತ್‌ ಫ್ಯಾಶನ್‌!

ಫ್ಯಾಶನ್‌ ಪ್ರಿಯರ ನೆಚ್ಚಿನ ಸ್ಮಾರ್ಟ್‌ವಾಚ್‌ ಬ್ರ್ಯಾಂಡ್‌ಗಳಲ್ಲಿ ಫಾಸ್ಟ್ರ್ಯಾಕ್ ಉತ್ತಮ ಆಯ್ಕೆ ಎನಿಸಿಕೊಂಡಿದೆ. ಇದಕ್ಕೆ ತಕ್ಕಂತೆ ಹಲವು ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಇದೀಗ ಫಾಸ್ಟ್ರ್ಯಾಕ್ ಕಂಪೆನಿ ಮತ್ತೊಂದು ಹೊಸ ಫಾಸ್ಟ್ರ್ಯಾಕ್ ರಿವಾಲ್ಟ್ ಎಫ್‌ಎಸ್ 1 ಪ್ರೊ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ.

ಹೌದು, ಫಾಸ್ಟ್ರ್ಯಾಕ್‌ ಕಂಪೆನಿ ಭಾರತದಲ್ಲಿ ಹೊಸ ಫಾಸ್ಟ್ರ್ಯಾಕ್ ರಿವಾಲ್ಟ್ ಎಫ್‌ಎಸ್ 1 ಪ್ರೊ ವಾಚ್‌ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಫ್ಯಾಶನ್‌ ಪ್ರಿಯರನ್ನು ಗುರಿಯಾಗಿಸಿಕೊಂಡಿದ್ದು, ಟ್ರೆಂಡಿ ವಿನ್ಯಾಶ ಹಾಗೂ ಅಪ್ಡೇಟ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಒಳಗೊಂಡಿರುವ ಫೀಚರ್ಸ್‌ಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಾಸ್ಟ್ರ್ಯಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! ಟ್ರೆಂಡಿ ಲುಕ್‌!

ಫಾಸ್ಟ್ರ್ಯಾಕ್ ರಿವಾಲ್ಟ್ ಎಫ್‌ಎಸ್ 1 ಪ್ರೊ ವಾಚ್‌ ಡಿಸೈನ್‌ ಹೇಗಿದೆ?

ಫಾಸ್ಟ್ರ್ಯಾಕ್ ರಿವಾಲ್ಟ್ ಎಫ್‌ಎಸ್ 1 ಪ್ರೊ ವಾಚ್‌ ಸಖತ್‌ ಟ್ರೆಂಡಿ ಸ್ಟೈಲಿಶ್‌ ಡಿಸೈನ್‌ ಪಡೆದುಕೊಂಡಿದೆ. ಈ ವಾಚ್‌ 1.96 ಇಂಚಿನ ಸೂಪರ್ AMOLED ಆರ್ಚ್ಡ್ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇ ಆಲ್‌ವೇಸ್‌ ಆನ್‌-ಡಿಸ್‌ಪ್ಲೇ ಆಗಿದೆ. ಇನ್ನು ಡಿಸ್‌ಪ್ಲೇ 410×502 ಗರಿಷ್ಠ ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದು 110+ ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಇನ್ನು ಜನರಿಗೆ ಅನುಕೂಲವಾಗುವಂತಹ ಹೆಲ್ತ್‌ ಟ್ರ್ಯಾಕಿಂಗ್‌ ಫೀಚರ್ಸ್‌ಗಳನ್ನು ನೀಡುತ್ತದೆ. ಈ ಸ್ಮಾರ್ಟ್‌ವಾಚ್‌ ಸುಧಾರಿತ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಇದರಲ್ಲಿ ಒತ್ತಡದ ಮೇಲ್ವಿಚಾರಣೆ, ಸ್ವಯಂ ನಿದ್ರೆ ಟ್ರ್ಯಾಕಿಂಗ್ ಮತ್ತು 24x7 ಹೃದಯ ಬಡಿತ ಮಾನಿಟರಿಂಗ್‌ನಂತಹ ಹೆಲ್ತ್‌ ಫೀಚರ್ಸ್‌ಗಳು ಸೇರಿವೆ. ಇನ್ನು ಸ್ಮಾರ್ಟ್‌ವಾಚ್‌ 200 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸಲಿದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಗಡಿಯಾರವನ್ನು ಕಸ್ಟಮೈಸ್ ಮಾಡಬಹುದು. ಇದಲ್ಲದೆ ವಾಚ್‌ ಸ್ಮಾರ್ಟ್ ಅಧಿಸೂಚನೆಗಳು ಮತ್ತು AI ಧ್ವನಿ ಸಹಾಯಕವನ್ನು ಹೊಂದಿದೆ. ಇದರಿಂದ ಬಳಕೆದಾರರು ಸದಾ ಸಂಪರ್ಕದಲ್ಲಿರಲು ಅವಕಾಶ ನೀಡಲಿದೆ.

ಫಾಸ್ಟ್ರ್ಯಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! ಟ್ರೆಂಡಿ ಲುಕ್‌!

ಫಾಸ್ಟ್ರ್ಯಾಕ್ ರಿವಾಲ್ಟ್ ಎಫ್‌ಎಸ್ 1 ಪ್ರೊ ವಾಚ್‌ SingleSync ಬ್ಲೂಟೂತ್ ಕಾಲ್‌ ಅನ್ನು ಬೆಂಬಲಿಸಲಿದೆ. ಇದರಿಂದ ಬಳಕೆದಾರರು ಸ್ಮಾರ್ಟ್‌ವಾಚ್‌ ಮೂಲಕವೇ ಕರೆಗಳನ್ನು ಮಾಡುವುದಕ್ಕೆ ಅವಕಾಶ ಸಿಗಲಿದೆ. ಅಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ಡೈರೆಕ್ಟ್‌ ಆಗಿ ಕರೆ ಸ್ವಿಕರಿಸುವ ಮತ್ತು ತಿರಸ್ಕರಿಸುವ ಅವಕಾಶವನ್ನು ನೀಡಲಿದೆ. ಇದಕ್ಕಾಗಿಯೇ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಮೈಕ್ ಮತ್ತು ಸ್ಪೀಕರ್‌ ಅನ್ನು ಒಳಗೊಂಡಿದೆ. ಇದರಿಂದ ಬ್ಲೂಟೂತ್‌ ಕರೆ ಅನುಭವ ಹೊಸತನವನ್ನು ನೀಡಲಿದೆ ಎಂದು ಫಾಸ್ಟ್ರ್ಯಾಕ್‌ ಕಂಪೆನಿ ಹೇಳಿಕೊಂಡಿದೆ.

ಫಾಸ್ಟ್ರ್ಯಾಕ್ ರಿವಾಲ್ಟ್ ಎಫ್‌ಎಸ್ 1 ಪ್ರೊ ವಾಚ್‌ ನಿಟ್ರೊಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದು ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ ಪೂರ್ಣ ದಿನದ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಸಂಪೂರ್ಣ ಚಾರ್ಜಿಂಗ್‌ನಲ್ಲಿ 7 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಫಾಸ್ಟ್ರ್ಯಾಕ್ ರಿಫ್ಲೆಕ್ಸ್ ವರ್ಲ್ಡ್ ಅಪ್ಲಿಕೇಶನ್ ಅನ್ನು ಬೆಂಬಲಿಸಲಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಜೊತೆಗೆ ಗ್ರಾಹಕರಿಗೆ ಹೆಚ್ಚುವರಿ ಕಸ್ಟಮೈಸ್ಡ್‌ ಆಯ್ಕೆಗಳನ್ನು ನೀಡಲಿದೆ.

ಫಾಸ್ಟ್ರ್ಯಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! ಟ್ರೆಂಡಿ ಲುಕ್‌!

ಫಾಸ್ಟ್ರ್ಯಾಕ್‌ ರಿವಾಲ್ಟ್‌ FS1 ಪ್ರೊ ಸ್ಮಾರ್ಟ್‌ವಾಚ್‌ ಏಪ್ರಿಲ್ 27 ರಂದು ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಇದು ಫ್ಲಿಪ್‌ಕಾರ್ಟ್‌.ಕಾಮ್‌ ಮತ್ತು ಫಾಸ್ಟ್ರ್ಯಾಕ್‌ ವೆಬ್‌ಸೈಟ್‌ನಲ್ಲಿ 3,995ರೂ ಬೆಲೆಯಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ ಮತ್ತು ಟೀಲ್ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ. ಸಖತ್‌ ಟ್ರೆಂಡಿ ಹಾಗೂ ಸ್ಟೈಲಿಶ್‌ ಲುಕ್‌ನ ಸ್ಮಾರ್ಟ್‌ವಾಚ್‌ ಬಯಸೋರಿಗೆ ಇದು ಸೂಕ್ತವಾದ ಆಯ್ಕೆಯಾಗಲಿದೆ.

Best Mobiles in India

English summary
Fastrack Revoltt FS1 Pro Smartwatch Launched in India: Price, Features details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+