ಭಾರತದಲ್ಲಿ ಸ್ವದೇಶಿ ನಿರ್ಮಿತ FAU-G ಗೇಮಿಂಗ್ ಅಪ್ಲಿಕೇಶನ್ ಬಿಡುಗಡೆ!
ಜನಪ್ರಿಯ ಪಬ್-ಜಿ ಗೇಮ್‌ಗೆ ಬದಲಿ ಅಪ್ಲಿಕೇಶನ್ ಸ್ವದೇಶಿ ನಿರ್ಮಿತ ಮೇಡ್ ಇನ್ ಇಂಡಿಯಾ FAU-G ಅಪ್ಲಿಕೇಶನ್ ಬಿಡುಗಡೆ ಆಗಿದೆ. ಫೌಜಿ_(FAU-G) ಅಕಾ ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್, ಈಗ Google Play ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಈ ಆಟವನ್ನು nCore ಗೇಮ್ಸ್ ಅಭಿವೃದ್ಧಿಪಡಿಸಿದ್ದು, ಕಳೆದ ವರ್ಷವೇ ಇದನ್ನು ಪ್ರಕಟಿಸಿತ್ತು. ಅದಿಕೃತವಾಗಿ ಇಂದು ಬಿಡುಗಡೆ ಆಗಿದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್‌ನಲ್ಲಿ ಡೌನ್‌ಲೋಡ್‌ಗೆ ಲಭಯವಿದೆ.

ಹೌದು, ಪಬ್-ಜಿ ಗೆ ಪರ್ಯಾಯವಾಗಿರುವ ಸ್ವದೇಶಿ ನಿರ್ಮಿತ FAU-G ಅಪ್ಲಿಕೇಶನ್ ಭಾರತದಲ್ಲಿ ಬಿಡುಗಡೆ ಆಗಿದೆ. ಈಗಾಗಲೇ ಈ ಗೇಮ್‌ನ ಪ್ರಿ-ರಿಜಿಸ್ಟರ್ ಡಿಸೆಂಬರ್ 2020 ರಿಂದ ಲೈವ್ ಆಗಿತ್ತು.ಅಲ್ಲದೆ ಕೆಲವೇ ದಿನಗಳಲ್ಲಿ ನಾಲ್ಕು ಮಿಲಿಯನ್‌ಗಳನ್ನು ಮೀರಿತ್ತು. ರಿಪಬ್ಲಿಕ್ ಡೇ ಪ್ರಯುಕ್ತ ಇಂದೇ ಈ ಗೇಮ್ ಬಿಡುಗಡೆ ಆಗಿದೆ. ಸದ್ಯ ಈ ಗೇಮ್ ಆಕ್ಷನ್ ಗೇಮ್ ಸ್ಟೋರಿ ಮೋಡ್‌ನಲ್ಲಿ ಮಾತ್ರ ಮೂಲಭೂತ ಆಯ್ಕೆಗಳು ಲಭ್ಯವಿದೆ. ಇನ್ನುಳಿದಂತೆ ಈ ಗೇಮ್ ಅಪ್ಲಿಕೇಶನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹೊಸ FAU-G, ಅಕಾ ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್, ಗೇಮ್ ಈಗ ಗೂಗಲ್ ಪ್ಲೇನಲ್ಲಿ ಉಚಿತ ಡೌನ್‌ಲೋಡ್ ಆಗಿ ಲಭ್ಯವಿದೆ. ಬಳಕೆದಾರರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿನ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ‘ಇನ್‌ಸ್ಟಾಲ್' ಬಟನ್ ಕ್ಲಿಕ್ ಮಾಡುವ ಮೂಲಕ FAU-G ಡೌನ್‌ಲೋಡ್ ಮಾಡಿಕೊಳ್ಳಬಹುದು. ಡೆವಲಪರ್‌ಗಳ ಪ್ರಕಾರ, ಈ ಗೇಮ್ ಆಂಡ್ರಾಯ್ಡ್ 8 ಮತ್ತು ಅದಕ್ಕಿಂತ ಹೆಚ್ಚಿನದನ್ನು ಚಾಲನೆ ಮಾಡುವ ಹ್ಯಾಂಡ್‌ಸೆಟ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇನ್ನು ಈ ಗೇಮ್‌ನ ಡೆವಲಪರ್ ಬೆಂಗಳೂರು ಮೂಲದ ಎನ್‌ಕೋರ್ ಗೇಮ್ಸ್ ಎಂಬ ಕಂಪನಿಯಾಗಿದೆ.

ಇನ್ನು ಈ ಗೇಮ್ ಅನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಥೆಯು ಅಭಿವೃದ್ಧಿಪಡಿಸಿದೆ. FAUG-ಫಿಯರ್ಲೆಸ್ ಮತ್ತು ಯುನೈಟೆಡ್: ಗಾರ್ಡ್ಸ್ ಈ ಗೇಮ್ ನಲ್ಲಿ ಚೀನಾ ಗಡಿ ಭಾಗ ಗಲ್ವಾನ್ ಕಣಿವೆಯ ಗ್ರಾಫಿಕ್ ಡಿಸೈನ್ಗಳನ್ನು ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಇದು ಪಿಎಂ ಮೋದಿ ಅವರು ಪ್ರಾರಂಭಿಸಿದ ಆತ್ಮನಿರ್ಭರ್ ಆಂದೋಲನವನ್ನು ಬೆಂಬಲಿಸುತ್ತದೆ. ಇನ್ನು FAU-G ಎಂದರೇ ಸೈನಿಕ ಎಂದರ್ಥ. ಹಾಗೆಯೇ ಈ ಗೇಮ್ ಸೈನಿಕರ ತ್ಯಾಗ, ಬಲಿದಾನದ ಅರಿವನ್ನು ಸಾರಲಿದೆ. ಇದಲ್ಲದೆ FAU-G ಗೇಮ್‌ನಿಂದ ಬರುವ ಆದಾಯದ 20% ಭಾರತ್ ಕೆ ವೀರ್ ಟ್ರಸ್ಟ್‌ಗೆ ನೀಡಲಾಗುವುದು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಪ್ರಸ್ತುತ, ಆಕ್ಷನ್ ಗೇಮ್ ಸ್ಟೋರಿ ಮೋಡ್‌ನಲ್ಲಿ ಮಾತ್ರ ಮೂಲಭೂತ ಆಯ್ಕೆಗಳು ಲಭ್ಯವಿದೆ. ಬ್ಯಾಟಲ್ ರಾಯಲ್ ಮೋಡ್ ಮತ್ತು ಪಿವಿಪಿ [ಪ್ಲೇಯರ್ ವರ್ಸಸ್ ಪ್ಲೇಯರ್] ಮೋಡ್‌ಗಳನ್ನು ‘ಶೀಘ್ರದಲ್ಲೇ ಬರಲಿದೆ' ಎಂದು ಲೇಬಲ್ ಮಾಡಲಾಗಿದೆ. n ಕೋರ್ ಆರಂಭದಲ್ಲಿ FAU-G ಅನ್ನು ಸ್ಟೋರಿ ಮೋಡ್‌ನಲ್ಲಿ ಪ್ರಾರಂಭಿಸಲು ಯೋಜಿಸಿದೆ ಮತ್ತು ಅಂತಿಮವಾಗಿ ಭವಿಷ್ಯದಲ್ಲಿ ಅಪ್ಡೇಟ್‌ಗಳೊಂದಿಗೆ ಹೆಚ್ಚಿನ ಶಸ್ತ್ರಾಸ್ತ್ರಗಳು ಮತ್ತು ಮೋಡ್‌ಗಳನ್ನು ಸೇರಿಸುತ್ತದೆ. ಸಹ-ಸಂಸ್ಥಾಪಕ ಮತ್ತು ಸಿಒಒ ಗಣೇಶ್ ಹ್ಯಾಂಡೆ ಕೂಡ FAU-G ಜಾಹೀರಾತುಗಳನ್ನು ಹೊಂದಿರುತ್ತದೆ ಎಂದು ದೃಡಪಡಿಸಿದ್ದಾರೆ.

FAU-G ಎಂದರೇ ಸೈನಿಕ ಎಂದರ್ಥ. ಈ ಗೇಮ್‌ನ ಮೊದಲ ಕಂತು ಮಾತ್ರ ಬಿಡುಗಡೆಯಾಗಿದೆ, ಇದು ಕಳೆದ ವರ್ಷ ಸಂಭವಿಸಿದ ಭಾರತೀಯ ಮತ್ತು ಚೀನಾದ ಸೈನ್ಯದ ನಡುವಿನ ಗಾಲ್ವಾನ್ ವ್ಯಾಲಿ ಪ್ರಸಂಗವನ್ನು ಕೇಂದ್ರೀಕರಿಸಿದೆ. FAU-G ಆಟವು ಮುಖ್ಯವಾಗಿ ನೀವು ಚೀನಾದ ಸೈನ್ಯ ಅಥವಾ ವಿರೋಧಿಗಳ ವಿರುದ್ಧ ಹೋರಾಡಲು ಮತ್ತು ಇನ್ನೊಂದು ಬದಿಯಲ್ಲಿ ಸಿಲುಕಿರುವ ಭಾರತೀಯ ಸೇನಾ ಪುರುಷರನ್ನು ರಕ್ಷಿಸಲು ಅಗತ್ಯವಾಗಿರುತ್ತದೆ.ಹಾಗೆಯೇ ಈ ಗೇಮ್ ಸೈನಿಕರ ತ್ಯಾಗ, ಬಲಿದಾನದ ಅರಿವನ್ನು ಸಾರಲಿದೆ. ಈ ಗೇಮ್‌ನಿಂದ ಬರುವ ಒಟ್ಟು ಆದಾಯದಲ್ಲಿ ಶೇ.20 ಪ್ರತಿಶತವನ್ನು ರಾಜ್ಯ ಬೆಂಬಲಿತ ಟ್ರಸ್ಟ್‌ಗೆ ನೀಡಲಾಗುವುದು ಎಂದು ಸಂಸ್ಥೆಯು ಹೇಳಿದೆ. ಈ ವರ್ಷದ ಅಂತ್ಯದ ವೇಳಗೆ ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದುವ ಗುರಿಯನ್ನು ಸಂಸ್ಥೆ ಹೊಂದಿದೆ. ಇನ್ನು FAUG ಗೇಮಿಂಗ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಪ್ಲೇ ಸ್ಟೋರ್ ಎರಡರಲ್ಲೂ ಲಭ್ಯವಿರಲಿದೆ.


Click it and Unblock the Notifications








