ಮುಂದಿನ ಫೀಚರ್ ಫೋನ್‌ಗಳಲ್ಲಿ ಭಾರತದ ಎಲ್ಲಾ ಸ್ಥಳೀಯ ಭಾಷೆಗಳು

By Suneel
|

ನನ್ನತ್ರಾನೂ ದುಡ್ಡಿದೆ. ಒಳ್ಳೆ ಮೊಬೈಲ್‌ ತಕಳೋ ತಾಕತ್ತು ನನಗೂ ಇದೆ. ಆದ್ರೆ ಏನ್‌ ಮಾಡಿ ಮೊಬೈಲಲೆಲ್ಲಾ ಬರೀ ಇಂಗ್ಲೀಷ್‌ ಇರ್ತದೆ ಅಂತ ಸುಮ್ನೆ ಆಗಿದೀನಿ. ಮೊಬೈಲಲಿ ಏನಾದ್ರು ನಮ್‌ ಭಾಷೆ ಬರ್ಲಿ ನಿನಗಿಂತ ಒಳ್ಳೆ ಫೋನ್‌ ತಕತೀನಿ. ಅಂತ ಕೆಲವು ಜನ್ರು ಹಳ್ಳಿ ಕಡೆ ಹೆಚ್ಚು ಓದಿಲ್ದೆ ಇರೋರು ಮಾತಾಡ್‌ತಿರ್‌ತಾರೆ. ಹೌದು, ಅವರು ಹೇಳುವ ಹಾಗೆ ಇಂಗ್ಲೀಷ್‌ ಬರದ ಕಾರಣ, ಸ್ಮಾರ್ಟ್‌ಫೋನ್‌ ತಕಳೋ ಆಸೆ ಇದ್ರು ಹಳ್ಳಿಗಾಡಿನ ಜನರಲ್ಲಿ ಕೆಲವರು ಹಣ ಇದ್ರು ಸಹ ಸ್ಮಾರ್ಟ್‌ಫೋನ್‌ ತಕಳಲ್ಲಾ.

ಓದಿರಿ:ಡೇಟಾ ಸುರಕ್ಷತೆಗೆ ಪೆನ್‌ಡ್ರೈವ್‌ ಲಾಕ್‌ ಮಾಡುವುದು ಹೇಗೆ ?

ಹಾಗೆ ಹೇಳುವವರಿಗೆಲ್ಲಾ ಈಗ ಫೀಚರ್‌ ಫೋನ್‌ ಖರೀದಿಸಲು ಒಳ್ಳೆ ಸಮಯ ಕೂಡಿ ಬಂದಿದೆ. ಅದು ಏನಂತಿರಾ ? ಮುಂದಿನ ಫೀಚರ್‌ ಫೋನ್‌ಗಳಲ್ಲಿ ಎಲ್ಲಾ ಸ್ಥಳೀಯ ಭಾಷೆಗಳು ಇರಲಿವೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಇತ್ತೀಚೆಗೆ ರೂಢಮಾದರಿಯ ಅಧಿಸೂಚನೆಯನ್ನು 'ಭಾರತೀಯ ಗುಣಮಟ್ಟ ಕಛೇರಿಗೆ (ಬ್ಯುರೋ ಆಫ್‌ ಇಂಡಿಯಾ ಸ್ಟ್ಯಾಂಡರ್ಡ್‌)' ಗೆ ತಿದ್ದುಪಡಿಗಾಗಿ ಕಳುಹಿಸಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದಲ್ಲಿ ಓದಿ ತಿಳಿಯಿರಿ.

ಭಾರತೀಯ ಸ್ಥಳಿಯ ಭಾಷೆಗಳು

ಭಾರತೀಯ ಸ್ಥಳಿಯ ಭಾಷೆಗಳು

"ಡಿಜಿಟಲ್‌ ಇಂಡಿಯಾ" ಯಶಸ್ವಿಗಾಗಿ ಡಿಜಿಟಲ್‌ ಮಾಹಿತಿಯಾದ ಭಾರತದ ಸ್ಥಳೀಯ ಭಾಷೆಗಳನ್ನು ಮೊಬೈಲ್‌ ಡಿವೈಸ್‌ಗಳಿಗೆ ಹೊಂದಿಸುವುದು ಕ್ಲಿಷ್ಟಕರವಾದ ವಿಷಯ. ಆದರೂ ಸಹ ಯಾವುದಾದರೂ ಒಂದು ಸ್ಥಳೀಯ ಭಾಷೆಯನ್ನಾದರು ಹೊಂದಿಸಲೇ ಬೇಕಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಬ್ಯುರೋ ಆಫ್‌ ಇಂಡಿಯಾ ಸ್ಟ್ಯಾಂಡರ್ಡ್‌

ಬ್ಯುರೋ ಆಫ್‌ ಇಂಡಿಯಾ ಸ್ಟ್ಯಾಂಡರ್ಡ್‌

ಭಾರತ ಗುಣಮಟ್ಟ ಕಛೇರಿಯು ಸ್ಥಳೀಯ ಭಾಷೆಗಳನ್ನು ಫೀಚರ್‌ ಫೋನ್‌ಗಳಿಗೆ ಹೊಂದಿಸುವ ಬಗ್ಗೆ ಅನುಮೋದನೆ ನೀಡಲು ಮಾರ್ಚ್‌ ವರೆಗೆ ನಿರೀಕ್ಷಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇಲಾಖೆ ಸ್ಮಾರ್ಟ್‌ಫೋನ್‌ಗಳಿಗೆ ಈ ಅಧಿಸೂಚನೆಯನ್ನು ಯಾವಾಗ ನೀಡುವುದು ಎಂಬುದರ ಬಗ್ಗೆ ಇನ್ನು ತೀರ್ಮಾನ ಕೈಗೊಂಡಿಲ್ಲ.

 ಸ್ಥಳೀಯ ಭಾಷೆಗಳು

ಸ್ಥಳೀಯ ಭಾಷೆಗಳು

ಭಾರತದಲ್ಲಿ ಹಲವು ಹ್ಯಾಂಡ್‌ಸೆಟ್‌ಗಳು ಈಗಾಗಲೇ ಕೆಲವು ಸ್ಥಳೀಯ ಭಾಷೆಗಳನ್ನು ಸಪೋರ್ಟ್‌ ಮಾಡುತ್ತಿವೆ. ಆದರೆ ಡಿಜಿಟಲ್‌ ಇಂಡಿಯಾ ಯಶಸ್ಸಿನ ದೃಷ್ಟಿಯಲ್ಲಿ ಇದು ಅತ್ಯಾವಶ್ಯಕವಾಗಿದೆ.

 ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ

ಇಲಾಖೆಯು ಸ್ಥಳೀಯ ಭಾಷೆಯ ಆಧಾರದಲ್ಲಿ ಭಾಷಾಂತರವನ್ನು ಅಭಿವೃದ್ದಿಪಡಿಸುವ ನಿಯಮವನ್ನು ಜಾರಿ ಮಾಡುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರದ 100 ವೆಬ್‌ಸೈಟ್‌ಗಳು ಸಹ ಸ್ಥಳೀಯ ಭಾಷೆಗಳಲ್ಲಿ, ಮಷಿನ್‌ ಭಾಷಾಂತರದ ಮೂಲಕ ದೊರೆಯಲಿವೆ.

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ

ಈ ಒಂದು ಡಿಜಿಟಲ್‌ ಇಂಡಿಯಾ ಯೋಜನೆಯು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಂಚಾಲನೆಯಾಗಿದ್ದು, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸಹ ಸರ್ಕಾರಿ ಸೇವೆಗಳನ್ನು ಇಲೆಕ್ಟ್ರಾನಿಕ್‌ ವಿಧಾನದಲ್ಲಿ ತಲುಪಿಸುವ ಉದ್ದೇಶ ಹೊಂದಿದೆ.

 ಇ- ಸರ್ಕಾರ ಸೇವೆ

ಇ- ಸರ್ಕಾರ ಸೇವೆ

ಮೊಬೈಲ್‌ಗಳಲ್ಲಿ ಇ-ಸರ್ಕಾರ ಸೇವೆಗಳು ಸಿಗುವಂತೆ ಸೆಪ್ಟೆಂಬರ್‌ ಒಳಗೆ ವ್ಯವಸ್ಥೆಗೊಳಿಸಲಾಗುವುದು ಎಂದು ಹೇಳಲಾಗಿದೆ. ಮೊಬೈಲ್‌ಗಳಿಗೆ ನೀಡಲಾಗುವ ಅಪ್ಲಕೇಶನ್‌ನಲ್ಲಿ 25 ಕ್ಕೂ ಹೆಚ್ಚು ಕೀ ಫೀಚರ್‌ಗಳು ದೊರೆಯಲಿದ್ದು, ಪಾಸ್‌ಪೋರ್ಟ್, ವೀಸಾ, ಜಾತಿ ಪ್ರಮಾಣ ಪತ್ರ ಇನ್ನಿತರ ಸೇವೆಗಳು ಸಿಗಲಿವೆ.

 ಕೇಂದ್ರ ಮತ್ತು ರಾಜ್ಯ ಸರ್ಕಾರ

ಕೇಂದ್ರ ಮತ್ತು ರಾಜ್ಯ ಸರ್ಕಾರ

ಮೊಬೈಲ್‌ ವೇದಿಕೆಯ ಸೇವೆಗಳನ್ನು ವದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಕಾರ್ಯ ನಿರ್ವಹಿಸಲಿವೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಪಂಚದ ಮೊದಲ ಸ್ಮೊಕೆಬಲ್‌ ಸ್ಮಾರ್ಟ್‌ಫೋನ್‌ : ಜುಪಿಟರ್ ಐಓ 3ಪ್ರಪಂಚದ ಮೊದಲ ಸ್ಮೊಕೆಬಲ್‌ ಸ್ಮಾರ್ಟ್‌ಫೋನ್‌ : ಜುಪಿಟರ್ ಐಓ 3

ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಡಾಕುಮೆಂಟ್ಸ್‌ ರಿಕವರಿ ಹೇಗೆಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಡಾಕುಮೆಂಟ್ಸ್‌ ರಿಕವರಿ ಹೇಗೆ

90% ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಫ್ಯಾಂಟಮ್‌ ರೋಗ90% ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಫ್ಯಾಂಟಮ್‌ ರೋಗ

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Feature phones to be compatible with local languages. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X