Subscribe to Gizbot

ಇನ್ಮುಂದೆ ನಮ್ಮ ಮೆಟ್ರೊದಲ್ಲಿ ಬರಲಿದೆ 'ಮೊಬೈಲ್ ವಾಲೆಟ್' ಸೌಲಭ್ಯ!..ಹೇಗಿರಲಿದೆ ಹೊಸ ಸೇವೆ!?

Written By:

ಬೆಂಗಳೂರಿನ ನರನಾಡಿಯಾಗಿರುವ ನಮ್ಮ ಮೆಟ್ರೊವನ್ನು ಡಿಜಿಟಲ್ ಮೆಟ್ರೊವಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಮೆಟ್ರೊ ಟಿಕೆಟ್ ಕೌಂಟರ್‌ಗಳಲ್ಲಿ ನಗದು ರಹಿತ ಪಾವತಿಗೆ ಅವಕಾಶ ಕಲ್ಪಿಸಲು ಪ್ರಿಪೇಯ್ಡ್ ಪಾವತಿ ಉಪಕರಣ (ಪಿಪಿಐ) ಒದಗಿಸುವ ಅರ್ಹ ಕಂಪನಿಗಳು ಮತ್ತು ಬ್ಯಾಂಕ್‌ಗಳಿಗೆ ನಮ್ಮ ಮೆಟ್ರೊ ಆಹ್ವಾನಿಸಿದೆ.!!

ಇನ್ಮುಂದೆ ನಮ್ಮ ಮೆಟ್ರೊದಲ್ಲಿ ಬರಲಿದೆ 'ಮೊಬೈಲ್ ವಾಲೆಟ್' ಸೌಲಭ್ಯ!!

ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಮಾನ್ಯತೆ ಪಡೆದ ಕಂಪನಿ ಅಥವಾ ಬ್ಯಾಂಕ್‌ಗಳು ಮಾತ್ರ ಮೆಟ್ರೊದಲ್ಲಿ ಪ್ರಸ್ತಾವನೆ ಸಲ್ಲಿಸುವ ಅವಕಾಶವಿದ್ದು, ನಗದು ರಹಿತ ಪಾವತಿ ವ್ಯವಸ್ಥೆಯನ್ನು ನೀಡುವ ಕಂಪೆನಿಗಳಿಗೆ ಮೆಟ್ರೊ ಆಡಳಿತ ಹಲವು ಷರತ್ತುಗಳನ್ನು ವಿಧಿಸಿದೆ.! ಎಲ್ಲಾ ಷರತ್ತುಗಳು ಗ್ರಾಹಕ ಸ್ನೇಹಿಯಾಗಿದ್ದು, ಭವಿಷ್ಯದಲ ಮೆಟ್ರೊದಲ್ಲಿ ಪೇಮೆಂಟ್ ಸೇವೆ ಹೇಗಿರಲಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ ವಾಲೆಟ್ ಜಾರಿಗೆ.!!

ಮೊಬೈಲ್‌ ವಾಲೆಟ್ ಜಾರಿಗೆ.!!

ಏಕ ಪ್ರಯಾಣದ ಟೋಕನ್‌ ವಿತರಣೆಗೆ ಸದ್ಯಕ್ಕೆ ನಗದು ಮಾತ್ರ ಸಸ್ವೀಕರಿಸಲಾಗುತ್ತಿದ್ದು, ಸ್ಮಾರ್ಟ್‌ಕಾರ್ಡ್‌ಗಳ ಮಾರಾಟಕ್ಕೆ ಹಾಗೂ ರೀಚಾರ್ಜ್‌ ಮಾಡಲು ನಗದು, ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಬಹುದಾಗಿದೆ. ಆದರೆ, ಮೊಬೈಲ್‌ ವಾಲೆಟ್ ಅಥವಾ ಯುಪಿಐ ಬಳಸಿ ಪಾವತಿ ಮಾಡುವುದಕ್ಕೆ ಅವಕಾಶ ನೀಡಲಾಗುತ್ತಿದೆ.!!

ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ!!

ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ!!

ಒಂದು ಟಿಕೆಟ್ ಖರೀದಿಗೆ ಪ್ರಯಾಣಿಕರ ಖಾತೆಯಿಂದ ಒಂದಕ್ಕಿಂತ ಹೆಚ್ಚು ಬಾರಿ ಹಣ ಕಡಿತವಾದರೆ ಮೂರು ದಿನಗಳ ಒಳಗೆ ಅದನ್ನು ಮರುಪಾವತಿ ಮಾಡಬೇಕು ಮತ್ತು ಪಾವತಿ ಸಲುವಾಗಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂದು ಮೊಬೈಲ್‌ ವಾಲೆಟ್ ಅಥವಾ ಯೂನಿಫೈಡ್‌ ಪೇಮೆಂಟ್‌ಗೆ ಪ್ರಸ್ತಾವನೆ ಸಲ್ಲಿಸುವ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಪ್ರತಿ ನಿಲ್ದಾಣದಲ್ಲಿ ಮೊಬೈಲ್‌ ವಾಲೆಟ್!!

ಪ್ರತಿ ನಿಲ್ದಾಣದಲ್ಲಿ ಮೊಬೈಲ್‌ ವಾಲೆಟ್!!

ಪ್ರತಿ ನಿಲ್ದಾಣದಲ್ಲಿ ಮೊಬೈಲ್‌ ವಾಲೆಟ್‌ ಅಥವಾ ಯುಪಿಐ ಮೂಲಕ ಪಾವತಿಗೆ ಅವಕಾಶ ಕಲ್ಪಿಸುವ ಕನಿಷ್ಠ ಪಕ್ಷ ಒಂದು ಟಿಕೆಟ್ ವಿತರಣಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶವನ್ನು ಮೆಟ್ರೊ ನಿಗಮ ಹೊಂದಿದೆ. ಮೊಬೈಲ್‌ ವಾಲೆಟ್‌ ಅಥವಾ ಯೂನಿಫೈಡ್‌ ಪೇಮೆಂಟ್‌ಗೆ ಪ್ರಸ್ತಾವನೆ ಸಲ್ಲಿಸುವ ಸಂಸ್ಥೆಗಳು ನಿತ್ಯ ಕನಿಷ್ಠ ಪಕ್ಷ 1,000 ವಹಿವಾಟುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು ಎಂಬ ಷರತ್ತು ವಿಧಿಸಿದೆ.!!

ಸಹಾಯಕೇಂದ್ರ ಸ್ಥಾಪಿಸಬೇಕು

ಸಹಾಯಕೇಂದ್ರ ಸ್ಥಾಪಿಸಬೇಕು

ಮೊಬೈಲ್‌ ವಾಲೆಟ್‌ ಅಥವಾ ಯೂನಿಫೈಡ್‌ ಪೇಮೆಂಟ್‌ಗೆ ಪ್ರಸ್ತಾವನೆ ಸಲ್ಲಿಸುವ ಸಂಸ್ಥೆಗಳು ಪಾವತಿ ಕುರಿತು ದೂರು ನೀಡಲು ಸಂಪರ್ಕ ಕೇಂದ್ರಗಳನ್ನು ಹೊಂದಿರಬೇಕು. ಬ್ಯಾಂಕ್‌ ಪಾವತಿಗೆ ಸಂಬಂಧಿಸಿದ ತಕರಾರುಗಳಿಗೆ ‍ಹಾಗೂ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯಕೇಂದ್ರವನ್ನು ಆರಂಭಿಸಬೇಕು ಎಂದು ಸೂಚಿಸಲಾಗಿದೆ.

How to save WhatsApp Status other than taking screenshots!! Kannada
ಕ್ಯೂಆರ್ ಕೋಡ್!!

ಕ್ಯೂಆರ್ ಕೋಡ್!!

ಪ್ರತಿಯೊಂದು ಟಿಕೆಟ್ ವಿತರಣಾ ಕೇಂದ್ರಕ್ಕೆ ಕ್ಯುಆರ್ ಕೋಡ್‌ ನೀಡಬೇಕು ಹಾಗೂ ಪ್ರತಿ ಟಿಕೆಟ್ ಕೌಂಟರ್‌ಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಬೇಕು. ಹಣ ಪಾವತಿಸುವಾಗ ನಗದು ಪಾವತಿಗೆ ತಗಲುವುದಕ್ಕಿಂತ ಹೆಚ್ಚು ಸಮಯ ತಗಲಬಾರದು ಎಂಬೆಲ್ಲಾ ಷರತ್ತುಗಳನ್ನು ಮೆಟ್ರೊ ನಿಗಮ ಮಂಡಳಿ ತರುತ್ತಿದೆ.!!

ಓದಿರಿ:ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
ou can recharge your smart card. Quick Top Up. Transactions History. Transaction History contain details of all the transactions done for mobile wallet.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot