Home
ಸುದ್ದಿಜಾಲ

ಕೋಟಿ ಕೋಟಿ ಬಾಚಿಕೊಳ್ಳಲಿದ್ದಾರೆ ಫ್ಲಿಪ್‌ಕಾರ್ಟ್ ಉದ್ಯೋಗಿಗಳು!..ಹೊಡೆಯಿತು ಲಾಟರಿ!!

ವಾಲ್‌ಮಾರ್ಟ್ ಮತ್ತು ಫ್ಲಿಪ್‌ಕಾರ್ಟ್ ನಡುವಿನ ಮೇಗಾಡೀಲ್ ನಂತರ ಫ್ಲಿಪ್‌ಕಾರ್ಟ್ ಕಂಪೆನಿಯ ಹಲವು ಉದ್ಯೋಗಿಗಳು ಕೋಟ್ಯಾದೀಶರಾಗುತ್ತಾರೆ ಎಂಬ ಸುದ್ದಿ ನಿಮಗೆಲ್ಲಾ ಈಗಾಗಲೇ ತಿಳಿದಿದೆ ಎನ್ನಬಹುದು. ಅದಕ್ಕೆ ಪೂರಕವಾಗಿ ನೌಕರರ ಬಳಿ ಇರುವ ಉದ್ಯೋಗಿಗಳ ಷೇರು ಮಾಲೀಕತ್ವ ಯೋಜನೆಗಳನ್ನು ಫ್ಲಿಪ್‌ಕಾರ್ಟ್ ನೀಡಿದ್ದು, ನಮ್ಮ ಸಿಬ್ಬಂದಿಯ ಸೇವೆಗೆ ಸಿಕ್ಕ ಪ್ರತಿಫಲ ಹಾಗೂ ಬಹುಮಾನ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯ ಹಾಲಿ ಮತ್ತು ಮಾಜಿ ನೌಕರರು ತಮ್ಮ 'ಇಎಸ್‌ಒಪಿ'ಗಳನ್ನು ಈಗಲೇ ನಗದುಗೊಳಿಸಲು ಫ್ಲಿಪ್‌ಕಾರ್ಟ್ ಸಂಸ್ಥೆ ಅವಕಾಶ ಒದಗಿಸಿದೆ. ಈ ಕುರಿತು ಮಾಹಿತಿ ನೀಡಿರುವ ಫ್ಲಿಪ್‌ಕಾರ್ಟ್‌ನ ವಕ್ತಾರ, ಈಗಿನ ಸಿಬ್ಬಂದಿಯ ಶೇ. 50 ರಷ್ಟು ಷೇರುಗಳ ಮೌಲ್ಯವನ್ನು ಸದ್ಯ ನಗದೀಕರಣಗೊಳಿಸಲಿದ್ದು, ಉಳಿದ ಶೇ. 25ರಷ್ಟು ಹಣವನ್ನು ಒಂದು ವರ್ಷದ ಬಳಿಕ ಹಾಗೂ ನಂತರದ ಶೇ. 25ರಷ್ಟು ಷೇರುಗಳ ಮೌಲ್ಯದ ಹಣವನ್ನು 2 ವರ್ಷಗಳ ಬಳಿಕ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೋಟಿ ಕೋಟಿ ಬಾಚಿಕೊಳ್ಳಲಿದ್ದಾರೆ ಫ್ಲಿಪ್‌ಕಾರ್ಟ್ ಉದ್ಯೋಗಿಗಳು!..ಹೊಡೆಯಿತು ಲಾಟರಿ!

ಒಂದು ಯೂನಿಟ್‌ಗೆ 126 ಡಾಲರ್‌ನಿಂದ 128 ಡಾಲರ್‌ವರೆಗೆ ಹಣ ಪಾವತಿಸಿರುವ ಫ್ಲಿಪ್‌ಕಾರ್ಟ್ ಸಂಸ್ಥೆಯು ತನ್ನ ಉದ್ಯೋಗಿಗಳ ಸಂಪತ್ತು ವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತ ಬಂದಿದೆ. ಈಗಲೂ ಅದಕ್ಕೆ ಬದ್ಧವಾಗಿರುವುದಾಗಿ ಫ್ಲಿಪ್‌ಕಾರ್ಟ್ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಹಾಗಾದರೆ, ಏನಿದು ಇಎಸ್‌ಒಪಿ ? ಫ್ಲಿಪ್‌ಕಾರ್ಟ್ ಮರು ಖರೀದಿಸುತ್ತಿರುವ ಷೇರುಗಳ ಬೆಲೆ ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯಿರಿ. ‌

ಅಂದಾಜು 5,600 ಕೋಟಿ!

ಅಂದಾಜು 5,600 ಕೋಟಿ!

ಫ್ಲಿಪ್‌ಕಾರ್ಟ್‌ನ 1 ಕೋಟಿ 19 ಲಕ್ಷ 47 ಸಾವಿರದ 26 ಷೇರುಗಳ ಇಎಸ್‌ಓಪಿಗಳ ಪೈಕಿ 62 ಲಕ್ಷ 42 ಸಾವಿರದ 271 ಷೇರುಗಳನ್ನು ವಾಲ್‌ಮಾರ್ಟ್ ಖರೀದಿಸಿದೆ. ಹೀಗಾಗಿ, ಅಂದಾಜು 5,500 ಕೋಟಿ ರೂ. ಮೌಲ್ಯದ ಉದ್ಯೋಗಿಯ ಷೇರು ಮಾಲೀಕತ್ವ ಯೋಜನೆಗಳನ್ನು ಫ್ಲಿಪ್‌ಕಾರ್ಟ್ ಸಿಬ್ಬಂದಿಯಿಂದ ಕೊಂಡುಕೊಳ್ಳಲಿದೆ.

ಏನಿದು ‘ಇಎಸ್‌ಒಪಿ’?

ಏನಿದು ‘ಇಎಸ್‌ಒಪಿ’?

ಇಎಸ್‌ಒಪಿಯ ವಿಸ್ತೃತ ರೂಪ 'ಉದ್ಯೋಗಿಗಳ ಷೇರು ಮಾಲೀಕತ್ವ ಯೋಜನೆಯಾಗಿದೆ'. ಯಾವುದೇ ಸಂಸ್ಥೆಯೊಂದು ತನ್ನ ನೌಕರರ ಕಾರ್ಯದಕ್ಷತೆಗೆ ಪ್ರತಿಯಾಗಿ ಅವರಿಗೆ ಷೇರುಗಳ ರೂಪದಲ್ಲಿ ನೀಡುವ ಪ್ರತಿಫಲವಾಗಿರುತ್ತದೆ. ಈ ಮೂಲಕ ನೌಕರರು ಸಂಸ್ಥೆಯ ಮಾಲೀಕತ್ವದಲ್ಲಿ ಭಾಗಿಯಾಗಿರುತ್ತಾರೆ.

ಮಾರಾಟ ಮಾಡಿ ನಗದು ಪಡೆಯಬಹುದು.

ಮಾರಾಟ ಮಾಡಿ ನಗದು ಪಡೆಯಬಹುದು.

ಯಾವುದೇ ಸಂಸ್ಥೆಯ ನೌಕರರಿಗೆ ಕೊಡಮಾಡುವ ಷೇರುಗಳು ಉದ್ಯೋಗಿ ನಿವೃತ್ತರಾಗುವವರೆಗೆ ಅಥವಾ ಸಂಸ್ಥೆ ತೊರೆಯುವವರೆಗೆ ‘ಇಎಸ್‌ಒಪಿ' ಟ್ರಸ್ಟ್‌ನಲ್ಲಿ ಇರುತ್ತವೆ. ಇವುಗಳನ್ನು ಸಂಸ್ಥೆಗೆ ಮಾರಾಟ ಮಾಡಿ ನಗದು ಪಡೆಯಬಹುದಾಗಿದೆ. ನೌಕರರು ಹೊಂದಿರುವ ಪ್ರತಿ ಷೇರಿನ ಬೆಲೆ ಪ್ರಸ್ತುತ ಕಂಪೆನಿ ಹೊಂದಿರುವ ಷೇರಿನ ಬೆಲೆಗೆ ಬಹುತೇಕ ಸಮವಾಗಿರುತ್ತದೆ.

ಶೇ 50ರಷ್ಟನ್ನು ಮಾರಾಟ ಮಾಡಬಹುದು!!

ಶೇ 50ರಷ್ಟನ್ನು ಮಾರಾಟ ಮಾಡಬಹುದು!!

ಯಾವುದೇ ಸಂಸ್ಥೆಯ ಹಾಲಿ ನೌಕರರು ತಮ್ಮ ಷೇರು ಆಯ್ಕೆಯಲ್ಲಿನ ಶೇ 50ರಷ್ಟನ್ನು ಮಾರಾಟ ಮಾಡಬಹುದು. ನಂತರದ ವರ್ಷಗಳಲ್ಲಿ 2 ಕಂತಿನಲ್ಲಿ ಶೇ 25ರಂತೆ ನಗದಿಗೆ ಪರಿವರ್ತಿಸಿಕೊಳ್ಳಬಹುದು. ಮಾಜಿ ನೌಕರರು ಶೇ 30ರಷ್ಟು ಷೇರುಗಳನ್ನು ಮಾರಾಟ ಮಾಡಬಹುದು.

ಪ್ರತಿ ಷೇರಿಗೆ ₹ 8,375!!

ಪ್ರತಿ ಷೇರಿಗೆ ₹ 8,375!!

ಇದೀಗ ಉದ್ಯೋಗಿಗಳ ಷೇರು ಮಾಲೀಕತ್ವ ಯೋಜನೆಗಳನ್ನು ಫ್ಲಿಪ್‌ಕಾರ್ಟ್ ಕಂಪೆನಿ ಮುಂದಾಗಿದ್ದು, (ಇಎಸ್‌ಒಪಿ) ಪ್ರತಿ ಷೇರಿಗೆ ₹ 8,375 ರಿಂದ ₹ 8,643 ದರದಲ್ಲಿ ಮರು ಖರೀದಿಸಲು ಫ್ಲಿಪ್‌ಕಾರ್ಟ್ ಸಿದ್ದವಾಗಿದೆ. ಸಂಸ್ಥೆಯು ಕಳೆದ ವರ್ಷ ತನ್ನ ಮೂರು ಸಾವಿರ ಉದ್ಯೋಗಿಗಳ ಷೇರುಗಳನ್ನು ₹ 670 ಕೋಟಿಗಳಿಗೆ ಮರು ಖರೀದಿಸಿತ್ತು.

13,400 ಕೋಟಿ ಹೊಸ ಬಂಡವಾಳ!!

13,400 ಕೋಟಿ ಹೊಸ ಬಂಡವಾಳ!!

ಫ್ಲಿಪ್‌ಕಾರ್ಟ್‌ನ ಬಹುಪಾಲು ಬಂಡವಾಳವನ್ನು ಸ್ವಾಧೀನಪಡಿರುವ ವಾಲ್‌ಮಾರ್ಟ್ ಇದೀಗ ಹೊಸದಾಗಿ 13,400 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಲಿದೆ. ಇದು ಅಮೆಜಾನ್‌ನ ಪೈಪೋಟಿ ಎದುರಿಸಲು ಫ್ಲಿಪ್‌ಕಾರ್ಟ್‌ಗೆ ನೆರವಾಗಲಿದೆ. ಮತ್ತು ಅಮೆಜಾನ್‌ಗೆ ಫ್ಲಿಪ್‌ಕಾರ್ಟ್‌ನಿಂದ ಮತ್ತಷ್ಟು ಪೈಪೋಟಿ ಹೆಚ್ಚಾಗಲಿದೆ.

Best Mobiles in India

English summary
Flipkart employees are in for a rich harvest from their stock options weeks after Walmart completed its $16-billion investment in the ecommerce company. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+