Home
ಸುದ್ದಿಜಾಲ

ಶಿಯೋಮಿ ನೀಡಿದೆ ರೆಡ್ ಮಿ ನೋಟ್ 5 ಪ್ರೋ ಗೆಲ್ಲುವ ಅವಕಾಶ... ಫುಟ್ಬಾಲ್ ಪ್ರಿಯರಿಗೆ ಬಂಪರ್..!

By Avinash

ಜೂನ್ 14 ರಿಂದ ರಷ್ಯಾದಲ್ಲಿ ಪ್ರಾರಂಭವಾಗಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಗೆ ಹೀಗಾಗಲೇ ಹಲವು ಕಂಪನಿಗಳು ತರಹೇವಾರಿ ಆಫರ್ ನೀಡಿವೆ. ಆ ಪಟ್ಟಿಗೆ ಮತ್ತೊಂದು ಸೇರ್ಪಡೆಯೆಂದರೆ ಚೈನಾ ಸ್ಮಾರ್ಟ್ ಪೋನ್ ಕಂಪನಿ ಶಿಯೋಮಿ.

ಹೌದು, ಶಿಯೋಮಿ ಭಾರತದ ತನ್ನ ಬಳಕೆದಾರರಿಗೆ ಫಿಫಾ ವಿಶ್ವಕಪ್ ಪ್ರಯುಕ್ತ ಸ್ಪರ್ಧೆ ಆಯೋಜಿಸಿದ್ದು, ಒಂದು ರೆಡ್ ಮಿ ನೋಟ್ 5 ಪ್ರೋ ಗೆಲ್ಲುವ ಅವಕಾಶವನ್ನು ತನ್ನ ಬಳಕೆದಾರರಿಗೆ ನೀಡಿದೆ. ಶಿಯೋಮಿ ಕಂಪನಿ Mi Football Carnival 2018ನ್ನು ಪರಿಚಯಿಸಿ ಭಾರತದಲ್ಲಿ ಫುಟ್ಬಾಲ್ ಜ್ವರವನ್ನು ಮತ್ತಷ್ಟು ಹೆಚ್ಚಿಸಿದೆ.

ಶಿಯೋಮಿ ನೀಡಿದೆ ರೆಡ್ ಮಿ ನೋಟ್ 5 ಪ್ರೋ ಗೆಲ್ಲುವ ಅವಕಾಶ..!

ಶಿಯೋಮಿ Mi ಫುಟ್ಬಾಲ್ ಕಾರ್ನಿವಾಲ್ 2018 ಶಿಯೋಮಿ ಬಳಕೆದಾರರಿಗೆ ಮಾತ್ರ ಇದ್ದು, ಕಾರ್ನಿವಾಲ್ ನಲ್ಲಿ ಆಟ ಆಡಿ ಬಹುಮಾನ ಗೆಲ್ಲುವ ಅವಕಾಶ ನೀಡಿದೆ. ಸ್ಪರ್ಧೆಯಲ್ಲಿ ಒಂದು ರೆಡ್ ಮಿ ನೋಟ್ 5 ಪ್ರೋ, ಮೂರು ರೆಡ್ ಮಿ ನೋಟ್ 5, ಹದಿನೈದು Mi ಬ್ಯಾಂಡ್ 2, ಹತ್ತು 10,000 mAh Mi ಪವರ್ ಬ್ಯಾಂಕ್ 2i ಮತ್ತು ಹತ್ತು Mi ಇಯರ್ ಪೋನ್ಸ್ ಸಿಲ್ವರ್ ಗೆಲ್ಲುವ ಅವಕಾಶವನ್ನು ಶಿಯೋಮಿ ತನ್ನ ಬಳಕೆದಾರರಿಗೆ ನೀಡಿದೆ.
ಈ ಫುಟ್ಬಾಲ್ ಕಾರ್ನಿವಾಲ್ ಜುಲೈ 20ರವರೆಗೆ ಮುಂದುವರೆಯಲಿದ್ದು, ವಿಜಯಶಾಲಿಗಳನ್ನು ಲಕ್ಕಿ ಡ್ರಾ ಮೂಲಕ ಯ್ಕೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಟ್ವಿಸ್ಟ್ ಇಟ್ಟಿರುವ ಶಿಯೋಮಿ ಮೊದಲ ಹಂತದಲ್ಲಿ 5 ಬಹುಮಾನಗಳಲ್ಲಿ ಕೇವಲ ಮೊದಲ ಎರಡು ಸ್ಲಾಟ್ ಗಳನ್ನು ತೆರೆದಿರುತ್ತದೆ. ಈ ಎರಡು ಸುತ್ತುಗಳನ್ನು 3 ದಿನದಲ್ಲಿ ಆಡಿದ ನಂತರ 3ನೇ ಸ್ಲಾಟ್ ದಾರಿ ತೆರೆಯುತ್ತದೆ. ನಂತರ 5 ದಿನ ಆಟ ಮುಂದುವರೆಸಿದರೆ 4 ಹಂತಕ್ಕೆ ದಾರಿ ಸಿಗುತ್ತದೆ. ನಂತರ 7 ದಿನಗಳು ಆಟ ಮುಂದುವರೆಸಿದ ಮೇಲೆ 5ನೇ ಸ್ಲಾಟ್ ಒಪನ್ ಆಗುತ್ತದೆ.

ಶಿಯೋಮಿ ನೀಡಿದೆ ರೆಡ್ ಮಿ ನೋಟ್ 5 ಪ್ರೋ ಗೆಲ್ಲುವ ಅವಕಾಶ..!


Mi Carnival 2018ನ್ನು ಆಡುವುದು ಹೇಗೆ?

  • Mi ಕಾರ್ನಿವಾಲ್ 2018 ಆಡಲು ಶಿಯೋಮಿ ಸ್ಮಾರ್ಟ್ ಪೋನ್, ಶಿಯೋಮಿ ಬ್ರೌಸರ್ ಮತ್ತು Mi ಅಕೌಂಟ್ ಇರಲೇಬೇಕು. ಆಗಿದ್ದಾಗ ಮಾತ್ರ ಈ ಸ್ಪರ್ಧೆಯ ಳ ಹೋಗಲು ಅವಕಾಶ ಸಿಗುತ್ತದೆ.
  • Mi Football Carnival 2018ರಲ್ಲಿ ದೈನಂದಿನ ಟಾಸ್ಕ್ ಗಳನ್ನು ಪೂರ್ಣಗೊಳಿಸಿದರೆ ಬಹುಮಾನ ಗೆಲ್ಲುವ ಅವಕಾಶ ನಿಮ್ಮದಾಗುತ್ತದೆ.
  • ಫಿಫಾ ವಿಶ್ವಕಪ್ ನಲ್ಲಿ ನಡೆಯುವ ಪಂದ್ಯಗಳ ಫಲಿತಾಂಶವನ್ನು ಪ್ರೇಡಿಕ್ಟ್ ಮಾಡಬೇಕಾಗಿರುತ್ತದೆ. ಪಂದ್ಯದ ಜಯ, ಸೋಲ, ಡ್ರಾ ಫಲಿತಾಂಶವನ್ನು ಪ್ರೇಡಿಕ್ಟ್ ಮಾಡಬೇಕಾಗಿರುತ್ತದೆ.
  • ಒಂದು ಬಾರಿ ಆಯ್ಕೆ ಮಾಡಿದ ಉತ್ತರವನ್ನು ಬದಲಾಯಿಸಲು ಸಾಧ್ಯವಿಲ್ಲ.
  • ಒಂದು ಪ್ರೇಡಿಕ್ಷನ್ ಗೆ ಬಳಕೆದಾರರು 9 ಅಂಕಗಳನ್ನು ಪಡೆಯುತ್ತಾರೆ, ಉತ್ತರ ಸರಿಯಿದ್ದರೆ ಇನ್ನು ಹೆಚ್ಚಿನ ಅಂಕ ಪಡೆಯುತ್ತಾರೆ.
  • ಈ ಅಂಕಗಳು ಲಕ್ಕಿಡ್ರಾ ಮೂಲಕ ವಿಜಯಶಾಲಿಗಳನ್ನು ಆಯ್ಕೆ ಮಾಡುವಾಗ ಸಹಾಯಕ್ಕೆ ಬರುತ್ತವೆ.
ಶಿಯೋಮಿ ನೀಡಿದೆ ರೆಡ್ ಮಿ ನೋಟ್ 5 ಪ್ರೋ ಗೆಲ್ಲುವ ಅವಕಾಶ..!
  • ಶಿಯೋಮಿ ಕಾಯಿನ್ ಪೂಲ್ ಅನ್ನು 2 ವಿಧಗಳಾಗಿ ವಿಂಗಡಿಸಿದ್ದು, ಒಂದು ಬಳಕೆದಾರರು ಪಂದ್ಯಗಳಲ್ಲಿನ ಆಟಗಾರರಿಗೆ ವಿನಿಯೋಗಿಸುವುದು, ಇನ್ನೊಂದು ಬಳಕೆದಾರರು ಗೆದ್ದಿದ್ದು. ಈ ಕಾಯಿನ್ ಗಳೆಲ್ಲ ಲೆಕ್ಕ ಹಾಕಿ ಸಿಂಗಲ್ ಟೋಟಲ್ ಮಾಡಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
Best Mobiles in India

English summary
FIFA 2018: Football fans in India, here's what Xiaomi has for you. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+